Sign In

By signing in or creating an account, you agree with Associated Broadcasting Company's Terms & Conditions and Privacy Policy.

Tax Savings: ಇನ್ಕಮ್ ಟ್ಯಾಕ್ಸ್ ಜಾಸ್ತಿ ಕಟ್ಟುತ್ತಿದ್ದೀರಾ? ಇಲ್ಲಿವೆ ಹೊರೆ ಇಳಿಸುವ ಮಾರ್ಗಗಳು

Income tax matter: ಇವತ್ತು ಮಧ್ಯಮ ವರ್ಗದ ಜನರಿಗೆ ಆದಾಯ ತೆರಿಗೆ ಹೊರೆ ಹೆಚ್ಚಿದೆ. ಬೆಲೆ ಏರಿಕೆ ಬಿಸಿಯಲ್ಲಿ ಇದು ಗಾಯದ ಮೇಲೆ ಬರೆ ಎಳೆದಂತೆ. ತೆರಿಗೆ ಉಳಿಸಲು ಸರ್ಕಾರವೇ ಒಂದಷ್ಟು ಅವಕಾಶಗಳನ್ನು ಕೊಟ್ಟಿದ್ದು ಅದನ್ನು ಬಳಸಬಹುದು. ತೆರಿಗೆ ಉಳಿಸುವ ಮಾರ್ಗಗಳಲ್ಲಿ ಎನ್​ಪಿಎಸ್, ಗೃಹಸಾಲ, ಡೆಟ್ ಫಂಡ್ ಇತ್ಯಾದಿಗಳು ಇರುತ್ತವೆ.

Tax Savings: ಇನ್ಕಮ್ ಟ್ಯಾಕ್ಸ್ ಜಾಸ್ತಿ ಕಟ್ಟುತ್ತಿದ್ದೀರಾ? ಇಲ್ಲಿವೆ ಹೊರೆ ಇಳಿಸುವ ಮಾರ್ಗಗಳು
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 02, 2024 | 6:14 PM

ಒಬ್ಬ ಸಾಮಾನ್ಯ ವ್ಯಕ್ತಿ ಇವತ್ತು ಸಾಕಷ್ಟು ತೆರಿಗೆಗಳನ್ನು ಕಟ್ಟುತ್ತಾನೆ. ಖರೀದಿಸುವ ಸರಕುಗಳಿಂದ ಹಿಡಿದು ತನ್ನ ಸಂಬಳದವರೆಗೆ ತೆರಿಗೆಗಳ ಮಹಾಪೂರವೇ ಸರ್ಕಾರಕ್ಕೆ ಹೋಗುತ್ತದೆ. ದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ತೆರಿಗೆ ಪಾವತಿಸುವುದು ಪ್ರಜಾ ಧರ್ಮ. ಆದರೆ, ಆದಾಯದಲ್ಲಿ ತೆರಿಗೆಯ ಹೊರೆಯನ್ನು ತಗ್ಗಿಸಲು ಕಾನೂನಿನಲ್ಲಿ ಅವಕಾಶ ಇದೆ. ತೆರಿಗೆ ವಿನಾಯಿತಿ ನೀಡಬಲ್ಲಂತಹ ಹೂಡಿಕೆಯಂತ್ರಗಳು (tax saving investments) ನಿಮಗೆ ನೆರವಾಗಬಲ್ಲುವು. ಇವತ್ತಿನ ಮಧ್ಯಮ ವರ್ಗದವರಲ್ಲಿ ಬಹಳ ಜನರ ವಾರ್ಷಿಕ ಆದಾಯ ವರ್ಷಕ್ಕೆ 10 ಲಕ್ಷಕ್ಕೂ ಹೆಚ್ಚಿದೆ. ಹೀಗಾಗಿ, ಸಾಕಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಕೊಟ್ಟಿರುವ ತೆರಿಗೆ ಉಳಿತಾಯದ ಅವಕಾಶಗಳನ್ನು ಬಳಸಿಕೊಳ್ಳುವುದು ಜಾಣತನ.

ತೆರಿಗೆ ಉಳಿಸುವಂತಹ ಹೂಡಿಕೆಗಳು ಹಲವಿವೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಆ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ಎನ್​ಪಿಎಸ್, ಗೃಹಸಾಲ ಇತ್ಯಾದಿಯನ್ನು ಬಳಕೆ ಮಾಡಿದಲ್ಲಿ ವರ್ಷಕ್ಕೆ 50 ಸಾವಿರ ರೂನಷ್ಟು ತೆರಿಗೆ ಹಣವನ್ನು ಉಳಿಸಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್​ನ ಲಾಭ ತಿಳಿಯಿರಿ

ತೆರಿಗೆ ಉಳಿಸುವ ದಾರಿಗಳು

ಎನ್​ಪಿಎಸ್: ಉದ್ಯೋಗಿಯು ಸೆಕ್ಷನ್ 80ಸಿಸಿಡಿ(2) ಅಡಿಯಲ್ಲಿ ನ್ಯಾಷನಲ್ ಪೆನ್ಷನ್ ಸಿಸ್ಟಂ ಯೋಜನೆಯನ್ನು ಬಳಸಬಹುದು. ಎನ್​ಪಿಎಸ್ ಅಕೌಂಟ್​​ಗೆ ಉದ್ಯೋಗಿಯ ಸಂಬಳದಿಂದ ಕಡಿತವಾಗುವ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಈ ರೀತಿ ಶೇ. 10ರಷ್ಟು ಸಂಬಳಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ವರ್ಷಕ್ಕೆ ಗರಿಷ್ಠ ಒಂದೂವರೆ ಲಕ್ಷ ರೂವರೆಗಿನ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.

ಗೃಹಸಾಲ: ನಿಮಗೆ ಸಾಲದ ಅವಶ್ಯಕತೆ ಇದ್ದರೆ ಗೃಹಸಾಲ ಪಡೆಯಬಹುದು. ಇದರಿಂದ ನಿಮ್ಮ ಸ್ವಂತ ಮನೆಯ ಕನಸು ಈಡೇರುತ್ತದೆ. ಜೊತೆಗೆ ಒಂದಷ್ಟು ತೆರಿಗೆ ಹಣವನ್ನೂ ಉಳಿಸಬಹುದು. ಗೃಹಸಾಲಕ್ಕೆ ನೀವು ಕಟ್ಟುವ ಬಡ್ಡಿ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಈ ರೀತಿ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಬಡ್ಡಿಹಣಕ್ಕೆ ತೆರಿಗೆ ವಿನಾಯಿತಿಗಳುಂಟು.

ಡೆಟ್ ಫಂಡ್: ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಇತ್ಯಾದಿ ಬ್ಯಾಂಕ್ ಠೇವಣಿ ಯೋಜನೆಗಳಲ್ಲಿ ಆದಾಯಕ್ಕೆ ತೆರಿಗೆ ಕಡಿತ ಆಗುತ್ತದೆ. ಅದರ ಬದಲು ಪಿಪಿಎಫ್​ನಲ್ಲಿ ಹೂಡಿಕೆ ಮಾಡಬಹುದು. ಅಥವಾ ಡೆಟ್ ಫಂಡ್​ಗಳಲ್ಲಿ ಹಣ ತೊಡಗಿಸಬಹುದು.

ಇದನ್ನೂ ಓದಿ: ಸ್ಟೆಪಪ್ ಮ್ಯಾಜಿಕ್ ತಿಳಿಯಿರಿ; ಕೇವಲ 5 ವರ್ಷದಲ್ಲಿ 1 ಕೋಟಿ ಗಳಿಸಲು ಎಷ್ಟು ಹೂಡಿಕೆ ಬೇಕು?

ಎನ್​ಪಿಎಸ್ ಮತ್ತು ಗೃಹ ಸಾಲಗಳಿಂದ ನೀವು ಸುಮಾರು ವರ್ಷಕ್ಕೆ 40ರಿಂದ 45 ಸಾವಿರ ರೂನಷ್ಟು ತೆರಿಗೆ ಹಣವನ್ನು ಉಳಿಸಬಹುದು. ಡೆಟ್ ಫಂಡ್ ಅನ್ನೂ ಸೇರಿಸಿ ವರ್ಷಕ್ಕೆ 50,000 ರೂನಷ್ಟು ತೆರಿಗೆ ಉಳಿಸುವ ಅವಕಾಶ ಇದೆ.

ಆದರೆ, ಇದು ಹೊಸ ಟ್ಯಾಕ್ಸ್ ರಿಜಿಮ್​ನಲ್ಲಿ ಸಾಧ್ಯವಾಗುವುದಿಲ್ಲ. ಹಳೆಯ ಟ್ಯಾಕ್ಸ್ ರಿಜಿಮ್​ನಲ್ಲಿ ನೀವು ರಿಟರ್ನ್ಸ್ ಫೈಲ್ ಮಾಡುತ್ತಿದ್ದರೆ ಇವೆಲ್ಲಾ ಟ್ಯಾಕ್ಸ್ ಡಿಡಕ್ಷನ್​ಗಳಿಗೆ ಅವಕಾಶ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ