AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದಿದ್ದರೆ ಏನಾಗುತ್ತೆ? ಈ ಪರಿಣಾಮಗಳನ್ನು ತಿಳಿದಿರಿ

ITR filing updates: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ಜುಲೈ 31ರವರೆಗೆ ಗಡುವು ಇದೆ. ದಂಡ ಇಲ್ಲದೇ ನೀವು ಆ ದಿನದೊಳಗೆ ಐಟಿಆರ್ ಸಲ್ಲಿಸಬಹುದು. ಆ ವಾಯಿದೆ ಮೀರಿದರೆ ಸಮಸ್ಯೆಗಳು ಎದುರಾಗಬಹುದು. ದಂಡ ವಿಧಿಸಬಹುದು, ಟ್ಯಾಕ್ಸ್ ರೆಜಿಮೆಯೇ ಬದಲಾಗಬಹುದು. ಐಟಿಆರ್ ಅನ್ನು ಜುಲೈ 31ರೊಳಗೆ ಸಲ್ಲಿಸದಿದ್ದರೆ ಏನಾಗುತ್ತದೆ ಎಂಬ ವಿವರ ಇಲ್ಲಿದೆ...

ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದಿದ್ದರೆ ಏನಾಗುತ್ತೆ? ಈ ಪರಿಣಾಮಗಳನ್ನು ತಿಳಿದಿರಿ
ಐಟಿಆರ್ ಸಲ್ಲಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 21, 2024 | 3:47 PM

Share

ನವದೆಹಲಿ, ಜೂನ್ 21: ಆದಾಯ ತೆರಿಗೆ ರಿಟರ್ನ್ (IT Returns filing) ಸಲ್ಲಿಸುವ ಪ್ರಕ್ರಿಯೆ ಕೆಲ ದಿನಗಳ ಹಿಂದೆ ಆರಂಭವಾಗಿದೆ. ಜುಲೈ 31ರವರೆಗೂ ಕಾಲಾವಕಾಶ ಕೊಡಲಾಗಿದೆ. ಐಟಿಆರ್ ಫೈಲ್ ಮಾಡುವುದರಿಂದ ಒಂದಷ್ಟು ಪ್ರಯೋಜನಗಳಿವೆ. ಐಟಿಆರ್ ಫೈಲ್ ಮಾಡದೇ ಇದ್ದರೆ ತೊಂದರೆಗಳು ಎದುರಾಗಬಹುದು. ಹೀಗಾಗಿ, ನೀವು ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಬಹಳ ಮುಖ್ಯ. ಜುಲೈ 31ಕ್ಕೆ ಡೆಡ್​ಲೈನ್ ಇದೆಯಾದರೂ ನಂತರದ ದಿನಗಳಲ್ಲಿ ಒಂದಷ್ಟು ದಂಡ ಪಾವತಿಸಿಯಾದರೂ ಐಟಿಆರ್ ಫೈಲ್ ಮಾಡುವುದನ್ನು ಮರೆಯಬೇಡಿ. ಹಣಕಾಸು ವರ್ಷದಲ್ಲಿ ಟ್ಯಾಕ್ಸ್ ಕಟ್ಟುವಷ್ಟು ಆದಾಯ ಇಲ್ಲವಾದ್ದರಿಂದ ಐಟಿ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ ಎನ್ನುವ ಭಾವನೆ ಇದೆ. ಇದು ತಪ್ಪು. ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸದೇ ಇದ್ದರೆ ಅದರ ಪರಿಣಾಮ ಏನಾಗಬಹುದು ಎನ್ನುವ ವಿವರ ಇಲ್ಲಿದೆ…

ಪೀನಲ್ ಇಂಟರೆಸ್ಟ್

ಸೆಕ್ಷನ್ 234ಎ ಅಡಿಯಲ್ಲಿ ನಿಗದಿತ ವಾಯಿದೆಯೊಳಗೆ ತೆರಿಗೆ ಪಾವತಿಸದಿದ್ದಲ್ಲಿ, ನೀವು ಕಟ್ಟಬೇಕಾದ ತೆರಿಗೆಯ ಮೊತ್ತಕ್ಕೆ ಮಾಸಿಕವಾಗಿ ಶೇ. 1ರಂತೆ ಬಡ್ಡಿಯನ್ನು ದಂಡವಾಗಿ ವಿಧಿಸಲಾಗುತ್ತದೆ.

ಪೆನಾಲ್ಟಿ ಕಟ್ಟಬೇಕು

ಸೆಕ್ಷನ್ 234ಎಫ್ ಅಡಿಯಲ್ಲಿ, ನಿಗದಿತ ದಿನದೊಳಗೆ ಐಟಿಆರ್ ಸಲ್ಲಿಸದೇ ಇದ್ದರೆ 5,000 ರೂ ದಂಡ ವಿಧಿಸಲಾಗುತ್ತದೆ. ವಾರ್ಷಿಕ ಆದಾಯ ಐದು ಲಕ್ಷ ರೂಗಿಂತ ಕಡಿಮೆ ಇದ್ದಲ್ಲಿ ಲೇಟ್ ಫೀ ಒಂದು ಸಾವಿರ ರೂ ಮಾತ್ರ ಇರುತ್ತದೆ. ಮೂಲ ತೆರಿಗೆ ವಿನಾಯಿತಿ ಮಿತಿಗಿಂತ ಕಡಿಮೆ ಆದಾಯ ನಿಮ್ಮದಾಗಿದ್ದರೆ ತಡವಾಗಿ ಐಟಿಆರ್ ಸಲ್ಲಿಸಿದರೆ ದಂಡ ಇರುವುದಿಲ್ಲ.

ಇದನ್ನೂ ಓದಿ: ನಿಮ್ಮದು ವರ್ಷಕ್ಕೆ 12 ಲಕ್ಷ ರೂ ಆದಾಯ ಇದ್ದರೆ ಎಷ್ಟು ತೆರಿಗೆ ಕಟ್ಟಬೇಕು? ಟ್ಯಾಕ್ಸ್ ಸ್ಲ್ಯಾಬ್ ಹೇಗೆ ಅನ್ವಯ ಆಗುತ್ತೆ ನೋಡಿ

ನಷ್ಟವನ್ನು ವರ್ಗಾಯಿಸಲು ಆಗುವುದಿಲ್ಲ…

ತಡವಾಗಿ ನೀವು ಐಟಿಆರ್ ಸಲ್ಲಿಸಿದರೆ ಷೇರು ವಹಿವಾಟುಗಳಿಂದ ಆದ ನಷ್ಟ ಹಾಗೂ ಎಫ್ ಅಂಡ್ ಒ ಟ್ರೇಡಿಂಗ್​ನಿಂದ ಆದ ನಷ್ಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಅಂದರೆ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್​ಗೆ ಈ ನಷ್ಟದ ಹಣವನ್ನು ಜಮೆ ಮಾಡಲು ಆಗುವುದಿಲ್ಲ.

ಆದರೆ, ಮನೆ ಆಸ್ತಿ ಮಾರಾಟದಿಂದ ಆದ ನಷ್ಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಅವಕಾಶ ಇರುತ್ತದೆ.

ಟ್ಯಾಕ್ಸ್ ರೀಫಂಡ್ ವಿಚಾರ…

ನೀವು ಹೆಚ್ಚುವರಿಯಾಗಿ ತೆರಿಗೆ ಕಟ್ಟಿದ್ದರೆ ಐಟಿಆರ್ ಫೈಲ್ ಮಾಡಿ ಅದರ ರೀಫಂಡ್ ಪಡೆಯಬಹುದು. ಬಡ್ಡಿಸಮೇತವಾಗಿ ರೀಫಂಡ್ ಹಣ ಸಿಗುತ್ತದೆ. ತಡವಾಗಿ ಐಟಿಆರ್ ಸಲ್ಲಿಸಲಾಗಿದ್ದರೆ ರೀಫಂಡ್ ಆಗಬೇಕಾದ ಟ್ಯಾಕ್ಸ್ ಮೊತ್ತಕ್ಕೆ ಬಡ್ಡಿ ಸೇರಿಸಲಾಗುವುದಿಲ್ಲ.

ಇದನ್ನೂ ಓದಿ: ITR filing: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ

ಅಸೆಸ್ಮೆಂಟ್ ಆಫೀಸರ್ ಮರ್ಜಿ…

ನೀವು ಐಟಿ ರಿಟರ್ನ್ಸ್ ಫೈಲ್ ಮಾಡದೇ ಇದ್ದಲ್ಲಿ ತೆರಿಗೆ ಇಲಾಖೆಗೆ ಲಭ್ಯ ಇರುವ ನಿಮ್ಮ ಮಾಹಿತಿಯ ಪ್ರಕಾರ ಅಸೆಸ್ಮೆಂಟ್ ಮಾಡಲಾಗುತ್ತದೆ. ಹೆಚ್ಚಿನ ತೆರಿಗೆಯ ಹೊರೆ ನಿಮಗೆ ಬೀಳುವ ಸಾಧ್ಯತೆ ಇರುತ್ತದೆ.

ಹಳೆಯ ಟ್ಯಾಕ್ಸ್ ರೆಜಿಮೆ ತಪ್ಪಿಹೋಗಬಹುದು

ನೀವು ಓಲ್ಡ್ ಟ್ಯಾಕ್ಸ್ ರೆಜಿಮೆಯನ್ನು ಈವರೆಗೆ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದು ಈ ವರ್ಷ ನೀವು ಐಟಿಆರ್ ಸಲ್ಲಿಕೆಯನ್ನೇ ಮಾಡದಿದ್ದರೆ, ಆಗ ಡೀಫಾಲ್ಟ್ ಆಗಿ ನಿಮ್ಮದು ಹೊಸ ಟ್ಯಾಕ್ಸ್ ರೆಜಿಮೆಯೇ ಆಯ್ಕೆಯಾಗಿರುತ್ತದೆ. ಮುಂದಿನ ಬಾರಿ ನೀವು ಐಟಿಆರ್ ಫೈಲ್ ಮಾಡಲು ಹೋದಾಗ ಓಲ್ಡ್ ಟ್ಯಾಕ್ಸ್ ರೆಜಿಮೆ ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ