IT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!

Beware of Misreporting Income in ITR: ತೆರಿಗೆ ಉಳಿಸುವ ಸಲುವಾಗಿ ಆದಾಯ ಮರೆಮಾಚುವುದು, ಅಥವಾ ತಪ್ಪಾಗಿ ಡಿಡಕ್ಷನ್ ಕ್ಲೈಮ್ ಮಾಡುವುದು ಇತ್ಯಾದಿ ವಂಚನೆ ಎಸಗಿದರೆ ದೊಡ್ಡ ಮೊತ್ತದ ದಂಡ, ಜೈಲುಶಿಕ್ಷೆ ಇತ್ಯಾದಿ ಕ್ರಮ ಎದುರಿಸಬೇಕಾಗಬಹುದು.

IT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!
ಆದಾಯ ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 10, 2023 | 10:46 AM

ಐಟಿ ರಿಟರ್ನ್ ಫೈಲ್ (ITR Filing) ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಜುಲೈ 31ಕ್ಕೆ ಡೆಡ್​ಲೈನ್ ಇದೆ. ಐಟಿಆರ್​ನಲ್ಲಿ ನಾವು ನಮ್ಮೆಲ್ಲಾ ಆದಾಯವನ್ನೂ ಸರಿಯಾಗಿ ತೋರಿಸಬೇಕು ಎಂಬ ನಿಯಮ ಇದೆ. ಐಟಿ ರಿಟರ್ನ್ ಸಲ್ಲಿಸುವ ಉದ್ದೇಶವೇ ಅದು. ನಮ್ಮ ಆದಾಯಮೂಲಗಳು ಹಾಗೂ ಆ ವರ್ಷದ ಪ್ರಮುಖ ಆದಾಯಗಳನ್ನು ತೋರಿಸಬೇಕು. ಅದರಲ್ಲೂ ದೊಡ್ಡ ಆದಾಯ ಮುಚ್ಚಿಡುವಂತಿಲ್ಲ. ಆದರೆ, ಆದಾಯ ತೋರಿಸಿದರೆ ತೆರಿಗೆ ಬೀಳಬಹುದು ಎಂಬ ಕಾರಣಕ್ಕೆ ಹಲವರು ತಮ್ಮ ಆದಾಯವನ್ನು ಮುಚ್ಚಿಡುವ ಪ್ರಯತ್ನ ಮಾಡುವುದಿದೆ. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಆದಾಯ ಮುಚ್ಚಿಡುವುದಾಗಲೀ ಅಥವಾ ತಪ್ಪಾಗಿ ಡಿಡಕ್ಷನ್ ಕ್ಲೈಮ್ ಮಾಡುವುದಾಗಲೀ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

1961ರ ಆದಾಯ ತೆರಿಗೆ ಕಾಯ್ದೆ ಅಡಿ ಆದಾಯವನ್ನು ಮರೆಮಾಚಿದರೆ ಹಾಗೂ ತಪ್ಪಾಗಿ ಡಿಡಕ್ಷನ್ ಕ್ಲೈಮ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾದೀತು. ವರ್ಷಕ್ಕೆ ಶೇ 12ರ ದರದಲ್ಲಿ ಬಡ್ಡಿ, ತೆರಿಗೆ ಮೊತ್ತದ 200 ಪ್ರತಿಶತದಷ್ಟು ದಂಡ, ಹಾಗೂ ಜೈಲುಶಿಕ್ಷೆ ವಿಧಿಸುವ ಸಾಧ್ಯತೆಯೂ ಇರುತ್ತದೆ’ ಎಂದು ಆಂಧ್ರ ಮತ್ತು ತೆಲಂಗಾಣದ ಆದಾಯ ತೆರಿಗೆ ಇಲಾಖೆಯ ಪ್ರಿನ್ಸಿಪಾಲ್ ಚೀಫ್ ಕಮಿಷನರ್ ಮಿಥಾಲಿ ಮಧುಸ್ಮಿತಾ ಸರಣಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿRefund Status: ಐಟಿ ರಿಟರ್ನ್ಸ್ ಸಲ್ಲಿಸಿದ್ದೀರಾ? ರೀಫಂಡ್ ಬಂದಿದೆಯಾ ಎಂದು ಪರಿಶೀಲಿಸುವುದು ಹೇಗೆ?

ಹಾಗೊಂದು ವೇಳೆ ನೀವು ಮೇಲೆ ತಿಳಿಸಿದ ರೀತಿ ಐಟಿಆರ್ ಫಾರ್ಮ್​ನಲ್ಲಿ ಆದಾಯ ಮರೆಮಾಚಿ, ತಪ್ಪಾಗಿ ಡಿಡಕ್ಷನ್ ಕ್ಲೈಮ್ ಮಾಡಿದ್ದರೆ ಅದನ್ನು ಸರಿಪಡಿಸಲು ಮಾರ್ಗೋಪಾಯವನ್ನೂ ಐಟಿ ಅಧಿಕಾರಿ ಸೂಚಿಸಿದ್ದಾರೆ.

ನೀವು ಈಗಾಗಲೇ ಐಟಿ ರಿಟರ್ನ್ ಫೈಲ್ ಮಾಡಿದ್ದರೂ ಸೆಕ್ಷನ್ 140ಬಿ ಅಡಿಯಲ್ಲಿ ಮತ್ತೊಮ್ಮೆ ಪರಿಷ್ಕೃತ ಅರ್ಜಿ ಸಲ್ಲಿಸಿ ಹಿಂದಿನ ತೆರಿಗೆ ಬಾಕಿ ಪಾವತಿಸಬಹುದು. ಇದು 2021-22 ಹಾಗೂ 2022-23ರ ಅಸೆಸ್ಮೆಂಟ್ ವರ್ಷಕ್ಕೆ ಅನ್ವಯ ಆಗುತ್ತದೆ. ಈ ಬಾರಿ ಫೈಲ್ ಮಾಡಲಾಗುತ್ತಿರುವ 2023-24ರ ಅಸೆಸ್ಮೆಂಟ್ ವರ್ಷಕ್ಕೆ ಸೆಕ್ಷನ್ 139(5) ಅಡಿಯಲ್ಲಿ ಪರಿಷ್ಕೃತ ಐಟಿಆರ್ ಫೈಲ್ ಮಾಡಬಹುದು.

ಭಾರತದಲ್ಲಿ ಒಂದು ಅಂದಾಜು ಪ್ರಕಾರ 5 ಕೋಟಿಗೂ ಹೆಚ್ಚು ತೆರಿಗೆ ಪಾವತಿದಾರರಿದ್ದಾರೆ. ಇವರ ಪೈಕಿ 3 ಕೋಟಿ ಅಸುಪಾಸಿನ ಸಂಖ್ಯೆಯಷ್ಟು ಜನರು ತೆರಿಗೆ ಪಾವತಿಸುತ್ತಾರೆ.

ಇದನ್ನೂ ಓದಿPMLA: ಜಿಎಸ್​ಟಿ ವಂಚನೆ ಎಸಗುವವರಿಗೆ ಕಾದಿದೆ ಇಡಿ ಕುಣಿಕೆ; ಪಿಎಂಎಲ್​ಎ ವ್ಯಾಪ್ತಿಗೆ ಜಿಎಸ್​ಟಿಎನ್ ಸೇರಿಸಿದ ಸರ್ಕಾರ

ಈಗ ಐಟಿ ರಿಟರ್ನ್ ಸಲ್ಲಿಸುವ ಪ್ರಕ್ರಿಯೆ ತುಸು ಸರಳಗೊಳಿಸಲಾಗಿದೆ. ಏಳು ಐಟಿಆರ್ ಫಾರ್ಮ್​ಗಳ ಆಯ್ಕೆ ಇದ್ದು, ನಮ್ಮ ಆದಾಯಮೂಲಕ್ಕೆ ಅನುಸಾರವಾಗಿ ಫಾರ್ಮ್ ಆಯ್ದುಕೊಳ್ಳಬೇಕು. ಸಂಬಳವೇ ಪ್ರಮುಖ ಆದಾಯಮೂಲವಾಗಿದ್ದರೆ ಐಟಿಆರ್1 ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬಹುದು.

ನಿಮ್ಮ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಫಾರ್ಮ್16, ಫಾರ್ಮ್ 16, 16ಬಿ, 16ಸಿ, ಫಾರ್ಮ್ 26ಎಎಸ್, ಬಾಡಿಗೆ ಕರಾರು, ಕ್ರಯ ಪತ್ರ, ಡಿವಿಡೆಂಡ್ ವಾರಂಟ್, ಹೂಡಿಕೆ ದಾಖಲೆ ಇತ್ಯಾದಿ ಅಗತ್ಯ ದಾಖಲೆಗಳನ್ನು ಐಟಿಆರ್ ಜೊತೆ ಸಲ್ಲಿಸಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ