AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ವ್ಯಕ್ತಿಯ ಸಾಲಕ್ಕೆ ಕುಟುಂಬಸ್ಥರು ಹೊಣೆಗಾರರಾ? ಕಾನೂನು ಏನು ಹೇಳುತ್ತೆ? ಇಲ್ಲಿದೆ ಡೀಟೇಲ್ಸ್

Personal finance, loan matter: ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ ಶೂರಿಟಿ ಹಾಕಿದವರನ್ನು ಹೊಣೆ ಮಾಡಬಹುದು. ಇನ್ಷೂರೆನ್ಸ್ ಇದ್ದರೆ ಇನ್ಷೂರೆನ್ಸ್ ಕಂಪನಿಯಿಂದ ಬಾಕಿ ಹಣ ವಸೂಲಿ ಮಾಡಬಹುದು. ಯಾವುದೂ ಆಗದಿದ್ದರೆ ಗಿರವಿ ಇಟ್ಟ ಆಸ್ತಿಯನ್ನು ಹರಾಜಿಗೆ ಹಾಕಿ ಸಾಲ ವಸೂಲಾತಿ ಮಾಡಬಹುದು. ಪರ್ಸನಲ್ ಲೋನ್ ಆಗಿದ್ದರೆ ಬೇರೆ ಯಾರೂ ಬಾಧ್ಯಸ್ಥರಾಗಿರುವುದಿಲ್ಲ. ಕಾನೂನಾತ್ಮಕವಾಗಿ ಏನೂ ಮಾಡಲಾಗುವುದಿಲ್ಲ.

ಮೃತ ವ್ಯಕ್ತಿಯ ಸಾಲಕ್ಕೆ ಕುಟುಂಬಸ್ಥರು ಹೊಣೆಗಾರರಾ? ಕಾನೂನು ಏನು ಹೇಳುತ್ತೆ? ಇಲ್ಲಿದೆ ಡೀಟೇಲ್ಸ್
ಸಾಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 23, 2024 | 8:30 PM

Share

ಸಾಲ ಬಹಳ ಮುಖ್ಯವಾದ ಹಣಕಾಸು ಯೋಜನೆ. ಸಾಲ ಪಡೆದವರು ಸಾಲ ವಾಪಸ್ ನೀಡದೇ ಇದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಒಂದು ವೇಳೆ ಸಾಲ ಪಡೆದ ವ್ಯಕ್ತಿಯೇ ಸಾವನ್ನಪ್ಪಿಬಿಟ್ಟರೆ? ಸಾಲ ವಾಪಸ್ ಪಡೆಯಲು ಕೆಲ ಕಾನೂನು ಕ್ರಮಗಳಿವೆ. ಮೃತಪಟ್ಟ ವ್ಯಕ್ತಿಯ ಸಾಲಕ್ಕೆ ಅವರ ಕುಟುಂಬಸ್ಥರು ಬಾಧ್ಯಸ್ಥರಾಗಿರುತ್ತಾರಾ? ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಾ? ಇಲ್ಲಿ ವಾಹನ ಸಾಲ, ಗೃಹ ಸಾಲ ಮತ್ತು ವೈಯಕ್ತಿಕ ಸಾಲಗಳಲ್ಲಿ ಸಾಲ ವಸೂಲಾತಿ ಸಾಧ್ಯತೆ ಬೇರೆ ಬೇರೆ ಇರಬಹುದು.

ಗೃಹಸಾಲ ಮತ್ತು ವಾಹನ ಸಾಲಗಳು ಅಡಮಾನ ಸಾಲ ಅಥವಾ ಸುರಕ್ಷಿತ ವಿಭಾಗಕ್ಕೆ ಸೇರಿವೆ. ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲಗಳು ಅಸುರಕ್ಷಿತ ಸಾಲದ ಕೆಟಗರಿಯದ್ದಾಗಿದೆ.

ಇಲ್ಲಿ ಅಡಮಾನ ಸಾಲದಲ್ಲಿ ಯಾವುದಾದರೂ ಬೆಲೆಯುತ ವಸ್ತುವನ್ನು ಗಿರವಿಯಾಗಿ ಇಟ್ಟುಕೊಂಡಿರಲಾಗುತ್ತದೆ. ಗೃಹಸಾಲದಲ್ಲಿ ಮನೆಯ ಮೂಲಪತ್ರವು ಬ್ಯಾಂಕ್ ಬಳಿ ಇರುತ್ತದೆ. ವೆಹಿಕಲ್ ಲೋನ್​ನಲ್ಲಿ ವಾಹನದ ಪತ್ರವನ್ನು ಇಟ್ಟುಕೊಂಡಿರಲಾಗುತ್ತದೆ.

ಇದನ್ನೂ ಓದಿ: ಇಟಿಎಫ್​ನಲ್ಲಿ ಹೂಡಿಕೆ ಮಾಡಿದರೆ ಏನು ಲಾಭ? ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು…

ಈ ರೀತಿಯ ಸುರಕ್ಷಿತ ಸಾಲವನ್ನು ಪಡೆದ ವ್ಯಕ್ತಿ ಅಕಸ್ಮಾತ್ ಆಗಿ ಮೃತಪಟ್ಟರೆ ಆಗ, ಆ ಸಾಲವನ್ನು ಜಂಟಿಯಾಗಿ ಯಾರಾದರೂ ಪಡೆದವರಿದ್ದರೆ ಅವರನ್ನು ಬಾಧ್ಯಸ್ಥರನ್ನಾಗಿ ಪರಿಗಣಿಸಲಾಗುತ್ತದೆ. ಅವರಿಲ್ಲದಿದ್ದರೆ ಸಾಲಕ್ಕೆ ಶೂರಿಟಿ ಕೊಟ್ಟವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಅವರೂ ಇಲ್ಲದಿದ್ದರೆ ಆಗ ಸಾಲ ಪಡೆದ ವ್ಯಕ್ತಿಯ ಅಧಿಕೃತ ವಾರಸುದಾರರ ಬಳಿ ವಸೂಲಾತಿ ಮಾಡಲು ಬ್ಯಾಂಕ್​ನವರು ಯತ್ನಿಸಬಹುದು.

ಒಂದು ವೇಳೆ ಸಾಲಕ್ಕೆ ಇನ್ಷೂರೆನ್ಸ್ ಪಡೆದಿದ್ದರೆ ಆಗ ಇನ್ಷೂರೆನ್ಸ್ ಕಂಪನಿ ಬಳಿ ಬ್ಯಾಂಕ್​ನವರು ಬಾಕಿ ಹಣಕ್ಕೆ ಕ್ಲೇಮ್ ಮಾಡಬಹುದು. ಜಂಟಿ-ಸಾಲಗಾರರು, ಗ್ಯಾರಂಟರ್, ವಾರಸುದಾರರು ಇವರಾರೂ ಇಲ್ಲ ಎಂದಲ್ಲಿ ಆಗ ಅದನ್ನು ಎನ್​ಪಿಎ ಆಗಿ ಪರಿಗಣಿಸಲಾಗುತ್ತದೆ.

ಗಿರವಿ ಇಟ್ಟ ಆಸ್ತಿಪತ್ರವನ್ನು ಬಳಸಿ ಆಸ್ತಿಯನ್ನು ಹರಾಜು ಮಾಡಿ ಅದರಿಂದ ಬಂದ ಹಣದಲ್ಲಿ ಸಾಲದ ಮೊತ್ತವನ್ನು ಮುರಿದುಕೊಳ್ಳಲಾಗುತ್ತದೆ. ಇದು ಗೃಹಸಾಲ, ವಾಹನ ಸಾಲ, ಒಡವೆ ಸಾಲ ಇತ್ಯಾದಿ ಸುರಕ್ಷಿತ ಸಾಲಗಳಿಗೆ ಇರುವ ಕ್ರಮಾವಳಿಯಾಗಿರುತ್ತದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ದಿಮೆಗಳ ನಿವ್ವಳ ಲಾಭ, ಡಿವಿಡೆಂಡ್, ಮಾರ್ಕೆಟ್ ಕ್ಯಾಪ್​ಗಳಲ್ಲಿ ಸಖತ್ ಹೆಚ್ಚಳ

ಅಸುರಕ್ಷಿತ ಸಾಲಗಳ ವಿಚಾರದಲ್ಲಿ ರಿಸ್ಕ್ ಹೆಚ್ಚು…

ಬ್ಯಾಂಕುಗಳಿಗೆ ವೈಯಕ್ತಿಕ ಸಾಲದಂತಹ ಅಸುರಕ್ಷಿತ ಸಾಲ ಬಹಳ ರಿಸ್ಕ್ ಇರುವ ಯೋಜನೆ. ವ್ಯಕ್ತಿಯ ಆದಾಯವನ್ನು ನಂಬಿಕೊಂಡು ಸಾಲ ನೀಡಿರಲಾಗುತ್ತದೆ. ಯಾವುದೇ ಅಡಮಾನ ಪಡೆದಿರುವುದಿಲ್ಲ. ಸಾಲ ಪಡೆದ ವ್ಯಕ್ತಿ ಅಕಸ್ಮಾತ್ ಸತ್ತರೆ ಬ್ಯಾಂಕುಗಳಿಗೆ ಸಾಲ ವಸೂಲಾತಿ ಮಾರ್ಗ ಕಠಿಣವಾಗಿರುತ್ತದೆ. ಮೃತ ವ್ಯಕ್ತಿಯ ಕುಟುಂಬದವರನ್ನು ಆ ಸಾಲಕ್ಕೆ ಬಾಧ್ಯಸ್ಥರನ್ನಾಗಿ ಮಾಡಲು ಆಗುವುದಿಲ್ಲ. ಸಾಲ ಮರುಪಾವತಿಸುವಂತೆ ಬಲವಂತಪಡಿಸಲು ಆಗುವುದಿಲ್ಲ. ವಾರಸುದಾರರನ್ನು ಸಾಲ ಮರುಪಾವತಿಸುವಂತೆ ಕೇಳಿಕೊಳ್ಳಬಹುದು ಅಷ್ಟೇ. ಅವರು ನಿರಾಕರಿಸಿದರೆ ಕಾನೂನಾತ್ಮಕವಾಗಿ ಏನೂ ಮಾಡಲು ಆಗುವುದಿಲ್ಲ.

ಈ ಕಾರಣಕ್ಕೆ ಬ್ಯಾಂಕುಗಳು ವೈಯಕ್ತಿಕ ಸಾಲ ನೀಡುವಾಗ ಸಾಲಕ್ಕೆ ಇನ್ಷೂರೆನ್ಸ್ ಅನ್ನೂ ಖರೀದಿದಾರರಿಂದಲೇ ಮಾಡಿಸುವುದುಂಟು. ಹಾಗೆಯೇ, ವೈಯಕ್ತಿಕ ಸಾಲವನ್ನು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿರದಂತೆ ನಿಗದಿ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ