Saving Schemes: ಪಿಪಿಎಫ್, ಎನ್ಎಸ್ಸಿ ಖಾತೆಗಳು ಮೆಚ್ಯೂರಿಟಿ ಅವಧಿ ಬಳಿಕ ನಿಷ್ಕ್ರಿಯಗೊಂಡಿದ್ದರೆ ಏನು ಮಾಡಬೇಕು?
ಇನೋಪ್ ಸಂಕೇತದೊಂದಿಗೆ ಸ್ಥಗಿತಗೊಂಡ ಖಾತೆಗಳ ನಿರ್ವಹಣೆಗೆ ಕೆಲ ವಿಧಾನಗಳನ್ನು ಸೂಚಿಸಲಾಗಿದೆ. ಆ ಖಾತೆದಾರರು ಅಂಚೆ ಕಚೇರಿಗೆ ಹೋಗಿ ಪಿಒ ಪಾಸ್ ಬುಕ್, ಯೋಜನೆಯ ಸರ್ಟಿಫಿಕೇಟ್ ಅನ್ನು ನೀಡಬೇಕು. ನಂತರ ಏನು ಮಾಡಬೇಕು? ಇಲ್ಲಿದೆ ವಿವರ.
ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸೇರಿದಂತೆ ಹಲವು ಸಣ್ಣ ಉಳಿತಾಯ ಯೋಜನೆಗಳು ನಮ್ಮಲ್ಲಿವೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ ಅದರ ಮೆಚ್ಯೂರಿಟಿ ಅವಧಿ ಇತ್ಯಾದಿ ಕ್ರಮಗಳ ಬಗ್ಗೆ ಎಚ್ಚರದಿಂದರಬೇಕು. ಹಲವು ಬಾರಿ ನಾವು ಈ ಯೋಜನೆ ಅವಧಿ ಮುಗಿದ ಬಳಿಕವೂ ಏನೂ ಕ್ರಮ ಕೈಗೊಳ್ಳದೇ ಉಳಿದುಬಿಡುವುದುಂಟು. ಹೀಗೆ ನಿಷ್ಕ್ರಿಯಗೊಂಡ ಖಾತೆಗಳು INOP ಎಂಬ ಕೊಡ್ ಅಡಿಯಲ್ಲಿ ಫ್ರೀಜ್ ಆಗುತ್ತವೆ. ಮೆಚ್ಯೂರ್ ಆದರೂ ಯಾವುದೇ ವಿಸ್ತರಣೆ ಕಾಣದೇ ನಿಷ್ಕ್ರಿಯಗೊಂಡಿರುವ ಖಾತೆಗಳಿಗೆ ಇದು ಅನ್ವಯ ಆಗುತ್ತದೆ. ಇಲ್ಲಿ ಐನೋಪ್ ಎಂದರೆ 3ಕ್ಕೂ ಹೆಚ್ಚು ವರ್ಷ ಕಾಲ ತಟಸ್ಥಗೊಂಡಿರುವ ಖಾತೆಗಳೆಂದು ತಿಳಿಯಬಹುದು. ಈ ಮುಂಚೆ ಉಳಿತಾಯ ಯೋಜನೆಗಳ ಖಾತೆಗಳು ಮೆಚ್ಯೂರ್ ಆಗಿ 3 ವರ್ಷವಾದ ಬಳಿಕ ಪರಿಸಮಾಪ್ತಿಗೊಳಿಸಲಾಗುತ್ತಿತ್ತು. ಆದರೆ ಈಗ ಅಂಚೆ ಇಲಾಖೆ ಹೊಸ ಆದೇಶ ಹೊರಡಿಸಿದ್ದು ಇಂಥ ಖಾತೆಗಳನ್ನು ಮುಚ್ಚದೇ ಫ್ರೀಜ್ ಮಾಡಬೇಕೆಂದಿದೆ.
ಇನೋಪ್ ಸಂಕೇತದೊಂದಿಗೆ ಸ್ಥಗಿತಗೊಂಡ ಖಾತೆಗಳ ನಿರ್ವಹಣೆಗೆ ಕೆಲ ವಿಧಾನಗಳನ್ನು ಸೂಚಿಸಲಾಗಿದೆ. ಆ ಖಾತೆದಾರರು ಅಂಚೆ ಕಚೇರಿಗೆ ಹೋಗಿ ಪಿಒ ಪಾಸ್ ಬುಕ್, ಯೋಜನೆಯ ಸರ್ಟಿಫಿಕೇಟ್ ಅನ್ನು ನೀಡಬೇಕು. ಆಧಾರ್, ಪಾನ್, ಮೊಬೈಲ್ ನಂಬರ್ ಇತ್ಯಾದಿ ಅಗತ್ಯ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು. ಇದರ ಜೊತೆಗೆ ಅಕೌಂಟ್ ಕ್ಲೋಷರ್ ಫಾರ್ಮ್ (ಖಾತೆ ಮುಚ್ಚಲು ಅರ್ಜಿ) ಭರ್ತಿ ಮಾಡಿಕೊಡಬೇಕು. ಪೋಸ್ಟ್ ಆಫೀಸ್ ಉಳಿತಾಯ ಖಾತೆ ಸಂಖ್ಯೆ ಮತ್ತು ಪಾಸ್ ಬುಕ್ ನಕಲುಪ್ರತಿಯನ್ನು ನೀಡಬೇಕು. ಅಥವಾ ಬ್ಯಾಂಕ್ ಖಾತೆ ಮತ್ತು ಕ್ಯಾನ್ಸಲ್ ಚೆಕ್ ಅನ್ನು ಕೊಡಬೇಕು. ಖಾತೆದಾರರ ಪರವಾಗಿ ಬೇರೆಯವರೂ ಹೋಗಿ ಈ ದಾಖಲೆಗಳನ್ನು ಸಲ್ಲಿಸಬಹುದು.
ಹೆಡ್ ಪೋಸ್ಟ್ ಆಫೀಸ್ನಲ್ಲಿನ ಕ್ರಮಗಳು
- ಹೆಡ್ ಪೋಸ್ಟ್ ಆಫೀಸ್ನಲ್ಲಿರುವ ಖಾತೆಯನ್ನು ಪರಿಸಮಾಪ್ತಿಗೊಳಿಸಲು ಈ ಮೇಲೆ ಉಲ್ಲೇಖಿಸಿದ ದಾಖಲೆಗಳ ಸಮೇತ ಅಕೌಂಟ್ ಕ್ಲೋಷರ್ ಫಾರ್ಮ್ ಕೊಡಬೇಕು. ಈ ದಾಖಲೆಗಳನ್ನು ಪರಿಶೀಸಲು ಪೋಸ್ಟಲ್ ಅಸಿಸ್ಟೆಂಟ್ (ಪಿಎ) ಮತ್ತು ಸಹಾಯಕ ಪೋಸ್ಟ್ ಮ್ಯಾನ್ (ಎಪಿಎಂ) ಅನ್ನು ನಿಯೋಜಿಸಲಾಗುತ್ತದೆ. ಖಾತೆದಾರ ನೈಜ ಎನಿಸಿದರೆ ನಿಷ್ಕ್ರಿಯಗೊಂಡ ಖಾತೆ ಅನ್ ಫ್ರೀಜ್ ಆಗುತ್ತದೆ.
- ಹೆಡ್ ಪೋಸ್ಟ್ ಆಫೀಸ್ನಲ್ಲಿ ಇನಾಪ್ ಸಂಕೇತದೊಂದಿಗೆ ಗುರುತಾದ ಖಾತೆಯನ್ನು ಪರಿಸಮಾಪ್ತಿಗೊಳಿಸಲು ಪ್ರತ್ಯೇಕ ರಿಜಿಸ್ಟರ್ ಇಟ್ಟಿರಲಾಗುತ್ತದೆ. ಈ ರಿಜಿಸ್ಟರ್ನಲ್ಲಿ ಕ್ಲೋಷರ್ ವಿವರವನ್ನು ನಮೂದಿಸಲಾಗುತ್ತದೆ. ಬಳಿಕ ಇದನ್ನು ಹೆಡ್ ಪೋಸ್ಟ್ ಮಾಸ್ಟರ್ ಗಮನಿಸುತ್ತಾರೆ.
- ಇದಾದ ಬಳಿಕ ಪಿಒ ಪಾಸ್ ಬುಕ್, ಅಕೌಂಟ್ ಕ್ಲೋಷರ್ ಫಾರ್ಮ್, ಕೆವೈಸಿ ದಾಖಲೆ, ಕ್ಯಾನ್ಸಲ್ ಚೆಕ್ ಇತ್ಯಾದಿ ದಾಖಲೆಗಳನ್ನು ನಿಗದಿತ ಎಸ್ ಬಿಸಿಒ (ಸೇವಿಂಗ್ ಬ್ಯಾಂಕ್ ಕಂಟ್ರೋಲ್ ಆರ್ಬನೈಸೇಶನ್) ಅವರಿಗೆ ಕಳುಹಿಸಲಾಗುತ್ತದೆ. ಅಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ.
- ಇದರ ಜೊತೆಗೆ ಹೆಡ್ ಪೋಸ್ಟ್ ಆಫೀಸ್ನಲ್ಲಿ ಇರಿಸಲಾಗಿರುವ ಆ ರಿಜಿಸ್ಟರ್ ಅನ್ನು ಪರಿಶೀಲನಾ ಅಧಿಕಾರಿಗಳೂ ಗಮನಿಸಿ ಎಲ್ಲವೂ ಕಾನೂನುಸಮ್ಮತ ವಿಧಾನದಲ್ಲಿದೆಯಾ ಎಂದು ಪರಿಶೀಲಿಸುತ್ತಾರೆ. ಇದಾದ ನಂತರ ಖಾತೆಗಳನ್ನು ಮುಚ್ಚುವ ಬಗ್ಗೆ ಸಿಪಿಸಿಗೆ ವರದಿ ಹೋಗುತ್ತದೆ. ಇದರ ಆಧಾರದ ಮೇಲೆ ಪಿಪಿಎಫ್, ಎನ್ ಎಫ್ ಸಿ ಮತ್ತಿತರ ಯೋಜನೆಗಳನ್ನು ಮುಗಿಸಲು ಅನುಮತಿ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Thu, 19 January 23