Car Insurance: ಮಳೆ ನೀರು ತುಂಬಿದಾಗ ಕಾರು ಸ್ಟಾರ್ಟ್ ಮಾಡದಿರಿ; ಎಂಜಿನ್ ಕೆಡುತ್ತೆ, ಇನ್ಷೂರೆನ್ಸ್ ಕ್ಲೈಮ್ ಕೂಡ ಅಸಾಧ್ಯ

What To Do When Water Floods Car: ನೀವು ಸಮಗ್ರ ಕಾರು ವಿಮಾ ಪಾಲಿಸಿ ಪಡೆದಿದ್ದರೂ ನೀರು ನುಗ್ಗಿ ಕಾರಿನ ಎಂಜಿನ್ ವಿಫಲವಾದರೆ ಕ್ಲೈಮ್ ಮಾಡಲು ಸಾಧ್ಯವಾಗದೇ ಹೋಗಬಹುದು. ಕಾರಿಗೆ ನೀರು ತುಂಬಿದಾಗ ನೀವು ತೆಗೆದುಕೊಳ್ಳಬಹುದಾದ ಕೆಲ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ...

Car Insurance: ಮಳೆ ನೀರು ತುಂಬಿದಾಗ ಕಾರು ಸ್ಟಾರ್ಟ್ ಮಾಡದಿರಿ; ಎಂಜಿನ್ ಕೆಡುತ್ತೆ, ಇನ್ಷೂರೆನ್ಸ್ ಕ್ಲೈಮ್ ಕೂಡ ಅಸಾಧ್ಯ
ಪ್ರವಾಹ ನೀರಿನಲ್ಲಿ ಕಾರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 19, 2023 | 12:59 PM

ಮಳೆ ಬಂದು ರಸ್ತೆಯಲ್ಲೆಲ್ಲಾ ನೀರು ತುಂಬಿದ್ದಾಗ ಅಥವಾ ಅಪಾರ್ಟ್ಮೆಂಟ್​ನ ಬೇಸ್ಮೆಂಟ್​ನಲ್ಲಿ ನಿಲ್ಲಿಸಿದ್ದ ಕಾರಿಗೆ ನೀರು ತುಂಬಿದಾಗ ಬಹಳ ಹುಷಾರಾಗಿರಿ. ಯಾವುದೇ ಕಾರಣಕ್ಕೂ ಕಾರಿನ ಎಂಜಿನ್ ಸ್ಟಾರ್ಟ್ ಮಾಡದಿರಿ. ಇದರಿಂದ ಎಂಜಿನ್ ಹಾಳಾಗುತ್ತದೆ. ಇನ್ಷೂರೆನ್ಸ್ ಮಾಡಿಸಿದ್ದರೂ (Car Insurance) ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ. ನೀವು ವಾಹನಕ್ಕೆ ಸಮಗ್ರ ವಿಮೆ ಪಾಲಿಸಿ ಮಾಡಿಸಿದ್ದರೂ ಏನೂ ಪ್ರಯೋಜನವಾಗುವುದಿಲ್ಲ. ಇನ್ಷೂರೆನ್ಸ್​ನ ಆನ್​ಲೈನ್ ಮಾರುಕಟ್ಟೆ ಪೋರ್ಟಲ್ ಎನಿಸಿದ ಪಾಲಿಸಿಬಜಾರ್ ಡಾಟ್ ಕಾಮ್​ನ (Policy Bazaar) ಮೋಟಾರ್ ಇನ್ಷೂರೆನ್ಸ್ ಮುಖ್ಯಸ್ಥ ನಿತಿನ್ ಕುಮಾರ್ ಈ ಬಗ್ಗೆ ಒಂದಷ್ಟು ಅಮೂಲ್ಯ ಮಾಹಿತಿ ಹಂಚಿಕೊಂಡಿದ್ದಾರೆ.

‘ನೀವು ಬೇಸ್ಮೆಂಟ್​ನಲ್ಲಿ ಕಾರನ್ನು ಪಾರ್ಕ್ ಮಾಡಿರುತ್ತೀರಿ. ನೀರು ನುಗ್ಗಿ ಅದು ಮುಳುಗಿಹೋಗಿರುತ್ತದೆ. ಆಗ ನೀವು ಇನ್ಷೂರೆನ್ಸ್ ಕಂಪನಿಗೆ ನೇರವಾಗಿ ಮಾಹಿತಿ ಕೊಡಬೇಕು. ಹಾಗು ಸಮೀಪದ ಸರ್ವಿಸ್ ಸೆಂಟರ್ ಅಥವಾ ಗ್ಯಾರೇಜ್​ಗೆ ನಿಮ್ಮ ಕಾರನ್ನು ಟೋವ್ ಮಾಡಬೇಕು. ಒಂದು ವೇಳೆ ನೀವು ಕಾರು ನೀರಿನಲ್ಲಿ ಮುಳುಗಿದ್ದಾಗ ಎಂಜಿನ್ ಸ್ಟಾರ್ಟ್ ಮಾಡಲು ಯತ್ನಿಸಿದರೆ ಆಗ ಎಂಜಿನ್ ಹೈಡ್ರೋಸ್ಟಾಟಿಕ್ ಲಾಕ್ ಆಗಿಹೋಗುತ್ತದೆ. ಇಂಥ ಸಂದರ್ಭದಿಂದ ಎಂಜಿನ್ ಫೈಲ್ಯೂರ್ ಆದರೆ ಅದಕ್ಕೆ ಇನ್ಷೂರೆನ್ಸ್ ಕಂಪನಿ ಕವರ್ ಮಾಡುವುದಿಲ್ಲ. ಯಾಕೆಂದರೆ, ನೀರು ತುಂಬಿದಾಗ ನೀವು ಎಂಜಿನ್ ಸ್ಟಾರ್ಟ್ ಮಾಡಿದರೆ ಅದನ್ನು ಉದ್ದೇಶಪೂರ್ವಕ ಕೃತ್ಯದಿಂದಾಗಿ ಆದ ಹಾನಿ ಎಂದು ಪರಿಗಣಿಸಲಾಗುತ್ತದೆ’ ಎಂದು ನಿತಿನ್ ಕುಮಾರ್ ಹೇಳುತ್ತಾರೆ.

ಇದನ್ನೂ ಓದಿಬೆಂಗಳೂರಿನಲ್ಲಿ ಮರ ಬಿದ್ದು ಸಂಭವಿಸುವ ಹಾನಿಗಳು ವಿಮೆ ವ್ಯಾಪ್ತಿಗೆ ಒಳಪಡುತ್ತವೆಯೇ?

ರನ್ ಆಗುತ್ತಿರುವ ಕಾರಿನ ಎಂಜಿನ್​ಗೆ ನೀರು ನುಗ್ಗಿದಾಗ ಎಂಜಿನ್ ಹಾನಿಯಾಗುತ್ತದೆ. ಅಂಥ ಸಮಯದಲ್ಲಿ ಹೈಡ್ರೋಸ್ಟಾಟಿಕ್ ಲಾಕ್ ಸಂಭವಿಸುತ್ತದೆ. ಒಂದು ವೇಳೆ ಎಂಜಿನ್ ಆಫ್​ನಲ್ಲಿದ್ದಾಗ ನೀರು ನುಗ್ಗಿದರೆ ಆಗ ಹಾನಿಯಾಗುವ ಸಾಧ್ಯತೆ ಇಲ್ಲದೇ ಇರಬಹುದು. ಆದರೂ ಕೂಡ ಎಂಜಿನ್ ಸ್ಟಾರ್ಟ್ ಮಾಡುವ ಮುನ್ನ ವೃತ್ತಿಪರರ ಸಹಾಯ ಪಡೆಯುವುದು ಒಳ್ಳೆಯದು.

ಇನ್ಷೂರೆನ್ಸ್ ಪಡೆಯುವುದರ ಜೊತೆ ಎಚ್ಚರ ವಹಿಸವೇಕಾದ್ದು ಅಗತ್ಯ

ಕಾರಿಗೆ ಸಣ್ಣ ಡ್ಯಾಮೇಜ್ ಆದರೂ ಅದನ್ನು ದುರಸ್ತಿ ಮಾಡಲು ಬಹಳ ಖರ್ಚಾಗುತ್ತದೆ. ಅಪಘಾತವಷ್ಟೇ ಅಲ್ಲ, ಪ್ರವಾಹ ಇತ್ಯಾದಿ ಕಾರಣಕ್ಕೆ ಕಾರಿಗೆ ಬಹಳ ಹಾನಿಯಾಗುವುದಿದೆ. ಈ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಕಾರಿಗೆ ಇನ್ಷೂರೆನ್ಸ್ ಕವರೇಜ್ ಇದ್ದರೆ ಹಾನಿವೆಚ್ಚವನ್ನು ಸರಿದೂಗಿಸಲು ಸಾಧ್ಯ. ಸಮಗ್ರ ಇನ್ಷೂರೆನ್ಸ್ ಪಾಲಿಸಿ ಪಡೆದರೆ ಪ್ರವಾಹ, ಬೆಂಕಿ ಮತ್ತು ಕಳ್ಳತನ ಇತ್ಯಾದಿ ಅವಘಡಗಳನ್ನು ಕವರ್ ಮಾಡಬಹುದು. ಹೊಸ ಕಾರಾದರೆ ಬಹುತೇಕ ಎಲ್ಲಾ ರೀತಿಯ ಹಾನಿಗಳನ್ನು ಕವರ್ ಮಾಡಲಾಗುತ್ತದೆ. ಕಾರು ಹಳೆಯದಾದಷ್ಟೂ ಕವರೇಜ್ ಕಡಿಮೆ ಆಗುತ್ತಾ ಹೋಗುತ್ತದೆ. ಪ್ಲಾಸ್ಟಿಕ್ ಮತ್ತು ರಬ್ಬರ್​ನ ಬಿಡಿಭಾಗಗಳು ಹಾನಿಯಾದರೆ ಅರ್ಧದಷ್ಟು ಮಾತ್ರ ಕ್ಲೈಮ್ ಸಾಧ್ಯ.

ಇದನ್ನೂ ಓದಿತಡವಾಗಿ ಕ್ಲೇಮ್ ಎಂದು ಅಪಘಾತ ವಿಮೆ ತಿರಸ್ಕಾರ: ಪರಿಹಾರ ಕೊಡಲು ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ ಆದೇಶ

ಒಂದು ಸಾಧಾರಣವಾದ ಸಮಗ್ರ ಕಾರ್ ಇನ್ಷೂರೆನ್ಸ್ ಪಾಲಿಸಿ ಇದ್ದರೆ ಎಲ್ಲವೂ ಕವರ್ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಎಂಜಿನ್ ರಕ್ಷಣೆ, ಝೀರೋ ಡೆಪ್ರಿಶಿಯೇಶನ್, ಕನ್ಸೂಮಬಲ್ಸ್ ಕವರ್, ರೋಡ್​ಸೈಡ್ ಅಸಿಸ್ಟೆನ್ಸ್, ಕೀ ಮತ್ತು ಲಾಕ್ಕವರ್, ವೈಯಕ್ತಿಕ ವಸ್ತುಗಳಿಗೆ ಹಾನಿ ಇತ್ಯಾದಿಗಳಿಗೆ ಪ್ರತ್ಯೇಕವಾಗಿ ಇನ್ಷೂರೆನ್ಸ್ ಆ್ಯಡ್ ಆನ್ ಪಡೆಯುವುದು ಉತ್ತಮ ಎನ್ನುತ್ತಾರೆ ಪಾಲಿಸಿ ಬಜಾರ್​ನ ಇನ್ಷೂರೆನ್ಸ್ ತಜ್ಞರು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ