AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆಕ್ ಲೀಫ್, ಪಾಸ್​ಬುಕ್ ಫೋಟೋ ಲಗತ್ತಿಸುವ ಅಗತ್ಯವಿಲ್ಲ; ಸರಳವಾಗಲಿದೆ ಪಿಎಫ್ ಹಣಕ್ಕೆ ಕ್ಲೇಮ್ ಪ್ರಕ್ರಿಯೆ

New EPFO Measures: ಎಂಪ್ಲಾಯೀ ಪ್ರಾವಿಡೆಂಟ್ ಫಂಡ್​ನ ನಿಮ್ಮ ಖಾತೆಯಿಂದ ಹಣ ಹಿಂಪಡೆಯುವಾಗ ಅಥವಾ ಮುಂಗಡ ಹಣಕ್ಕೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆಯ ವಿವರದ ಜೊತೆಗೆ ಚೆಕ್ ಲೀಫ್​ನ ಫೋಟೋ ಅಥವಾ ಬ್ಯಾಂಕ್ ಪಾಸ್​ಬುಕ್​ನ ಫೋಟೋವನ್ನು ಲಗತ್ತಿಸಬೇಕಾಗುತ್ತದೆ. ಈಗ ಇಪಿಎಫ್​ಒ ಹೊಸ ಕ್ರಮ ಅನುಸರಿಸಲಿದ್ದು, ಅದು ನೇರವಾಗಿ ಬ್ಯಾಂಕ್ ಸಂಪರ್ಕಿಸಿ ನಿಮ್ಮ ಕೆವೈಸಿ ಪಡೆಯಬಹುದು. ಅಥವಾ ನೀವು ಕೆಲಸ ಮಾಡುವ ಸಂಸ್ಥೆ ಮೂಲಕವೇ ಬ್ಯಾಂಕ್ ಖಾತೆ ವೆರಿಫೈ ಮಾಡಬಹುದು. ಇದರಿಂದ ಬಹಳಷ್ಟು ಇಪಿಎಫ್ ಖಾತೆದಾರರಿಗೆ ಅನುಕೂಲವಾಗಲಿದೆ.

ಚೆಕ್ ಲೀಫ್, ಪಾಸ್​ಬುಕ್ ಫೋಟೋ ಲಗತ್ತಿಸುವ ಅಗತ್ಯವಿಲ್ಲ; ಸರಳವಾಗಲಿದೆ ಪಿಎಫ್ ಹಣಕ್ಕೆ ಕ್ಲೇಮ್ ಪ್ರಕ್ರಿಯೆ
ಪಿಎಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 31, 2024 | 3:39 PM

Share

ಇಪಿಎಫ್​ಒದಲ್ಲಿ ನಿಮ್ಮ ಪಿಎಫ್ ಖಾತೆಯಿಂದ ಹಣ ಹಿಂಪಡೆಯುವ ಪ್ರಕ್ರಿಯೆ (EPF claims) ಸರಳಗೊಂಡಿದೆ. ಕ್ಲೇಮ್ ಸಲ್ಲಿಸುವಾಗ ಕ್ಯಾನ್ಸಲ್ಡ್ ಚೆಕ್ (canceled cheque leaf) ಅಥವಾ ಬ್ಯಾಂಕ್ ಪಾಸ್​ಬುಕ್​ನ ಇಮೇಜ್ ಅನ್ನು ಅಪ್​ಲೋಡ್ ಮಾಡಬೇಕಾಗುತ್ತದೆ. ಹೊಸ ಇಪಿಎಫ್​ಒ ನಿಯಮ ಪ್ರಕಾರ, ಹೆಚ್ಚಿನ ಸಂದರ್ಭದಲ್ಲಿ ನೀವು ಈ ಇಮೇಜ್ ಅಪ್​ಲೋಡ್ ಮಾಡುವ ಅವಶ್ಯಕತೆ ಬರುವುದಿಲ್ಲ. ಚೆಕ್ ಲೀಫ್ ಪರಿಶೀಲನೆ ಅಥವಾ ಬ್ಯಾಂಕ್ ಪಾಸ್​ಬುಕ್​ನ ಪರಿಶೀಲನೆ ಬದಲು ಬೇರೆ ಮಾರ್ಗಗಳ ಮೂಲಕ ಇಪಿಎಫ್​ಒ ಅರ್ಜಿದಾರರ ದಾಖಲೆಗಳನ್ನು ವೆರಿಫೈ ಮಾಡುತ್ತದೆ.

ದಾಖಲೆಗಳನ್ನು ಹೇಗೆ ಪರಿಶೀಲಿಸುತ್ತದೆ ಇಪಿಎಫ್​ಒ?

  1. ಆನ್​ಲೈನ್ ಬ್ಯಾಂಕ್ ಕೆವೈಸಿ ದಾಖಲೆ
  2. ಸದಸ್ಯ ಕೆಲಸ ಮಾಡುವ ಸಂಸ್ಥೆ ವತಿಯಿಂದ
  3. ಯುಐಡಿಎಐ ಮೂಲಕ ಆಧಾರ್ ದಾಖಲೆ

ಇದನ್ನೂ ಓದಿ: ಇಪಿಎಫ್​ಒ ಅಪ್​ಡೇಟ್; ಸದಸ್ಯ ಸತ್ತಾಗ ಕ್ಲೇಮ್ ಮಾಡುವ ಪ್ರಕ್ರಿಯೆ ಈಗ ಸರಳ

ನೀವು ಹೇಗೂ ಬ್ಯಾಂಕಿನಲ್ಲಿ ಖಾತೆ ಮಾಡಿಸುವಾಗ ಕೆವೈಸಿ ದಾಖಲೆ ಕೊಟ್ಟಿರುತ್ತೀರಿ. ಇಲ್ಲಿ ಇಪಿಎಫ್​ಒ ಸಂಸ್ಥೆ ನೀವು ನಮೂದಿಸುವ ಖಾತೆಯ ಬ್ಯಾಂಕ್​ನಿಂದಲೇ ನೇರವಾಗಿ ಕೆವೈಸಿ ದಾಖಲೆಗಳನ್ನು ಪರಿಶೀಲಿಸಲಿದೆ.

ಅಥವಾ ನೀವು ಕೆಲಸ ಮಾಡುವ ಸಂಸ್ಥೆಯ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ವಿವರ ಸರಿ ಇದೆಯಾ ಎಂದು ಪರಿಶೀಲಿಸಬಹುದು.

ನಿಮ್ಮ ಬ್ಯಾಂಕ್ ಖಾತೆಗೆ ಜೋಡಿಸಿರುವ ಆಧಾರ್ ನಂಬರ್ ಅನ್ನು ಯುಐಡಿಎಐ ಮೂಲಕ ಪರಿಶೀಲನೆ ಮಾಡಬಹುದು.

ಇದನ್ನೂ ಓದಿ: ಪಿಪಿಎಫ್​ನಿಂದ ಟ್ರಿಪಲ್ ಲಾಭ; ಉಳಿತಾಯ, ದೀರ್ಘಾವಧಿ ಹೂಡಿಕೆ, ತೆರಿಗೆ ಲಾಭ

ಈ ಮೇಲಿನ ಕ್ರಮಗಳ ಮೂಲಕ ಪಿಎಫ್ ಖಾತೆದಾರರ ದಾಖಲೆಯನ್ನು ಹೆಚ್ಚು ನಿಖರವಾಗಿ ಮತ್ತು ವೇಗವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಬಹಳ ಜನರು ಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಿಸುವಾಗ ಚೆಕ್ ಲೀಫ್ ಫೋಟೋ ಹಾಕಲು ಅಥವಾ ಪಾಸ್​ಬುಕ್ ಫೋಟೋ ಹಾಕಲು ಮರೆತುಹೋಗುವುದುಂಟು. ಆ ಕಾರಣಕ್ಕೆ ಕ್ಲೇಮ್ ರಿಜೆಕ್ಟ್ ಆಗುತ್ತದೆ. ಹೆಚ್ಚಿನ ರಿಜೆಕ್ಟ್ ಪ್ರಕರಣಗಳು ಇಂಥವೇ ಆಗಿರುತ್ತವೆ. ಬೇರೆ ಮೂಲಗಳ ಮೂಲಕ ಈ ದಾಖಲೆಗಳನ್ನು ಇಪಿಎಫ್​ಒ ಸಂಸ್ಥೆಯೇ ಪಡೆದುಕೊಂಡು ಪರಿಶೀಲನೆ ನಡೆಸುವುದರಿಂದ ರಿಜೆಕ್ಟ್ ಆಗುವ ಸಾಧ್ಯತೆ ಕಡಿಮೆ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ