ನೀವು ಮತ್ತು ನಿಮ್ಮ ಸಂಗಾತಿ ಕೈ ತುಂಬ ಸಂಪಾದನೆ ಮಾಡುತ್ತಿರಬಹುದು. ಬಹುಭಾಗ ಹಣವನ್ನು ಉಳಿಸುತ್ತಿರಬಹುದು. ಮನೆ ಖರೀದಿಸಿ ಅದರ ಇಎಂಇ ಕಟ್ಟುತ್ತಲೇ ಪ್ರತ್ಯೇಕವಾಗಿ ಹಣ ಕೂಡಿಡುತ್ತಾ ಹೋಗುತ್ತಿರಬಹುದು. ಇದು ಹೆಚ್ಚಿನ ಮಧ್ಯಮ ವರ್ಗ ಮತ್ತು ಮೇಲಿನ ಮಧ್ಯಮ ವರ್ಗದವರಲ್ಲಿ ಕಂಡು ಬರುವ ಪ್ರವೃತ್ತಿ. ಆದರೆ, ಹೆಚ್ಚಿನವರು ತಮ್ಮ ಉಳಿತಾಯ ಹಣವನ್ನು ಎಫ್ಡಿಗಳಲ್ಲಿ ಇಡುತ್ತಾರೆ. ತುರ್ತು ಸ್ಥಿತಿಗೆ (emergency situation) ಹಣ ಪಡೆಯಬಹುದು ಎಂಬ ಕಾರಣಕ್ಕೆ ಬಹುಪಾಲು ಉಳಿತಾಯ ಹಣ (savings) ಬ್ಯಾಂಕುಗಳಲ್ಲಿ ಉಳಿದಿರುತ್ತದೆ. ಆದರೆ, ಹಣಕಾಸು ತಜ್ಞರು ಇಂಥ ಪ್ರವೃತ್ತಿ ತಪ್ಪು ಎಂದು ಹೇಳುತ್ತಾರೆ. ಅಂದರೆ ಹಣ ಉಳಿಸುವುದು ತಪ್ಪಲ್ಲ, ಆ ಹಣವನ್ನು ಹೂಡಿಕೆ ಮಾಡದಿರುವುದು ತಪ್ಪು ಎನ್ನುತ್ತಾರೆ.
ಎಫ್ಡಿಗಳಲ್ಲಿ ಶೇ. 7-8ರಷ್ಟು ಬಡ್ಡಿ ಸಿಗುತ್ತದೆ. ಆದರೆ, ಇದನ್ನು ಹೂಡಿಕೆ ಎನ್ನುವುದಕ್ಕಿಂತ ಉಳಿತಾಯ ಸಾಧನ ಮಾತ್ರವೇ. ಹೆಚ್ಚಿನ ಆದಾಯ ತರಬಲ್ಲಂತಹ ಸಾಧನಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುವುದು ತಜ್ಞರ ಅನಿಸಿಕೆ.
ಇದನ್ನೂ ಓದಿ: ಹೊಸ ಎಲ್ಐಸಿ ಅಮೃತ್ಬಾಲ್ ಪಾಲಿಸಿ; ಮಕ್ಕಳಿಗೆಂದು ರೂಪಿಸಿರುವ ಲೈಫ್ ಇನ್ಷೂರೆನ್ಸ್ ಸ್ಕೀಮ್
ಕಿರು ಅವಧಿಯ ಅಗತ್ಯಗಳಿಗೆ ಮತ್ತು ತುರ್ತು ಸ್ಥಿತಿಗೆಂದು ನಿರ್ದಿಷ್ಟ ಹಣವನ್ನು ಎಫ್ಡಿಗಳಲ್ಲಿ ಇರಿಸಬಹುದು. ಇನ್ನುಳಿದ ಹಣವನ್ನು ದೀರ್ಘಾವಧಿ ಹೂಡಿಕೆಯಾಗಿ ವಿನಿಯೋಗಿಸಬೇಕು. ಷೇರು ಮಾರುಕಟ್ಟೆ ಹೆಚ್ಚು ರಿಸ್ಕಿಯಾದರೂ ಸಾಕಷ್ಟು ಆದಾಯ ತರಬಲ್ಲ ಸಾಧ್ಯತೆ ಹೊಂದಿರುತ್ತದೆ. ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹಿಂಜರಿದರೆ, ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಮಾಡಬಹುದು. ನಿಯಮಿತವಾಗಿ ಫಂಡ್ಗಳಲ್ಲಿ ಹೂಡಿಕೆ ಮಾಡಲು ಎಸ್ಐಪಿ ಪ್ಲಾನ್ಗಳಿವೆ. ಅದನ್ನು ಉಪಯೋಗಿಸಬಹುದು.
ಬಹಳ ಕಡಿಮೆ ರಿಸ್ಕ್ ಮತ್ತು ಹೆಚ್ಚು ಆದಾಯ ಕೊಡಬಲ್ಲ ಸಾವರನ್ ಗೋಲ್ಡ್ ಬಾಂಡ್ ಸ್ಕೀಮ್ನ ಅವಕಾಶ ಇದೆ. ಇದು ವರ್ಷಕ್ಕೆ ಶೇ. 12ರಷ್ಟು ಲಾಭ ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಎಸ್ಜಿಬಿ ಮ್ಯಾಜಿಕ್; ತಿಂಗಳಿಗೆ 10,000 ರೂನಂತೆ ಎಂಟೇ ವರ್ಷ ಹೂಡಿಕೆ; 40 ವರ್ಷದಲ್ಲಿ ಆಗುತ್ತೆ 48 ಕೋಟಿ ರೂ
ಇಂಥ ಹೂಡಿಕೆ ಅವಕಾಶಗಳನ್ನು ನಿಯಮಿತವಾಗಿ ಅವಲೋಕಿಸುತ್ತಿರಬೇಕು. ಹೆಚ್ಚಿನ ಉಳಿತಾಯ ಹಣ ಈ ರೀತಿ ವಿವಿಧ ಹೂಡಿಕೆಗಳಿಗೆ ಹಂಚಿಕೆ ಮಾಡಲು ಯತ್ನಿಸಿ. ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹೂಡಿಕೆ ಲಾರ್ಜ್ ಕ್ಯಾಪ್, ಮಿಡ್ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರು ಅಥವಾ ಫಂಡ್ಗಳಲ್ಲಿ ಹರಡಿರಲಿ. ಇದರಿಂದ ರಿಸ್ಕ್ ಸಾಧ್ಯತೆ ಕಡಿಮೆ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ