ಯುಪಿಐ ಅಥವಾ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI- Unified Payments Interface) ಎಂಬುದು ಹಣ ಪಾವತಿಸುವ ಹಲವು ವಿಧಾನಗಳಲ್ಲಿ ಒಂದು. ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಮತ್ತು ಯುಪಿಐ ಅನ್ನು ಜೋಡಿಸುವುದು, ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಪೇ, ಫೋನ್ಪೇ, ಪೇಟಿಎಂ ಇತ್ಯಾದಿ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿ ಅವಕ್ಕೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದರೆ ಸಾಕು ಸುಲಭವಾಗಿ ಪೇಮೆಂಟ್ ಮಾಡಬಹುದು. ಇವತ್ತು ಯುಪಿಐ ಮೂಲಕ ದೇಶಾದ್ಯಂತ ಒಂದು ದಿನದಲ್ಲಿ ಕೋಟ್ಯಂತರ ವಹಿವಾಟುಗಳು ನಡೆಯುತ್ತವೆ. ಸಾವಿರಾರು ಕೋಟಿ ರೂ ಮೊತ್ತದ ಹಣ ವರ್ಗಾವಣೆಗಳು ಆಗುತ್ತವೆ. ಈ ವರ್ಷ ಯುಪಿಐ ಪಾವತಿ ವಿಚಾರದಲ್ಲಿ ಕೆಲವಿಷ್ಟು ಗಮನಾರ್ಹ ಬದಲಾವಣೆಗಳಾಗಿವೆ. ಅವುಗಳೇನು ಎಂಬ ವಿವರ ಇಲ್ಲಿದೆ…
ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ರೀತಿ ಸಾಲ ಸೌಲಭ್ಯ ಕೊಡಲಾಗುತ್ತದೆ. ಇದಕ್ಕೆ ಪ್ರೀ ಸ್ಯಾಂಕ್ಷನ್ಡ್ ಕ್ರೆಡಿಟ್ ಲೈನ್ ಎನ್ನುತ್ತಾರೆ. ಬ್ಯಾಂಕ್ ಖಾತೆಯಲ್ಲಿ ಹಣದ ಬ್ಯಾಲನ್ಸ್ ಇಲ್ಲದಿದ್ದರೂ ನಿರ್ದಿಷ್ಟ ಮಿತಿಯವರೆಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.
ಯುಪಿಐನಲ್ಲಿ ದಿನವೊಂದಕ್ಕೆ 1 ಲಕ್ಷ ರೂವರೆಗೆ ವಹಿವಾಟು ನಡೆಸಲು ಅವಕಾಶ ಇದೆ. ಆದರೆ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹಣ ಪಾವತಿಸುವುದಿದ್ದರೆ ಈ ಮಿತಿಯನ್ನು 5 ಲಕ್ಷ ರೂಗೆ ಏರಿಸಲಾಗಿದೆ.
ಇದನ್ನೂ ಓದಿ: 40% EMI Rule: ನಿಮ್ಮ ಆದಾಯದಲ್ಲಿ ಸಾಲಕ್ಕೆ ಮಿತಿ ಎಷ್ಟಿರಬೇಕು? ನೆನಪಿರಲಿ 40 ಪರ್ಸೆಂಟ್ ರೂಲ್; ಈ ಗಡಿ ದಾಟದಿರಿ ಜೋಕೆ..!
ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ‘ಯುಪಿಐ ಫಾರ್ ಸೆಕಂಡರಿ ಮಾರ್ಕೆಟ್’ ಎಂಬ ಫೀಚರ್ ಹೊರತಂದಿದೆ. ಸೆಕಂಡರಿ ಮಾರ್ಕೆಟ್ ಎಂದರೆ ಷೇರು, ಬಾಂಡ್ ಇತ್ಯಾದಿ ವಹಿವಾಟುಗಳು ನಡೆಯುವ ಷೇರು ವಿನಿಮಯ ಕೇಂದ್ರ. ಇಲ್ಲಿ ವಹಿವಾಟಿನ ತರುವಾಯ ಹಣ ಪಾವತಿಗೆ ಯುಪಿಐ ಬಳಸಲು ಅವಕಾಶ ಕೊಡಲಾಗುತ್ತಿದೆ. ಇನ್ನೂ ಇದು ಬೀಟಾ ಹಂತದಲ್ಲಿದೆ.
ಎಟಿಎಂಗಳಲ್ಲಿ ನಗದು ಹಣ ಪಡೆಯಲು ಕಾರ್ಡ್ ಬೇಕು. ಆದರೆ, ಯುಪಿಐ ಎಟಿಎಂಗಳಲ್ಲಿ ಕಾರ್ಡ್ ಇಲ್ಲದೇ ಕ್ಯಾಷ್ ಪಡೆಯಬಹುದು. ಇಂಥ ಎಟಿಎಂಗಳಲ್ಲಿ ಕ್ಯುಆರ್ ಕೋಡ್ ಇರುತ್ತದೆ. ಪೇಟಿಎಂ, ಫೋನ್ ಪೆ ಇತ್ಯಾದಿ ಆ್ಯಪ್ನಿಂದ ಈ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ನಿರ್ದಿಷ್ಟ ಮೊತ್ತದವರೆಗಿನ ಹಣವನ್ನು ವಿತ್ಡ್ರಾ ಮಾಡಬಹುದು.
ಆಕಸ್ಮಿಕವಾಗಿ ತಪ್ಪಾಗಿ ಹಣ ವರ್ಗಾವಣೆ ಆಗುವ ಸಂಭವ ಇರುತ್ತದೆ. ಇದನ್ನು ತಪ್ಪಿಸಲು 4 ಗಂಟೆಯ ಕೂಲಿಂಗ್ ಪೀರಿಯಡ್ ಫೀಚರ್ ಅನ್ನು ಆರ್ಬಿಐ ಪ್ರಸ್ತಾಪಿಸಿದೆ. ಮೊದಲ ಬಾರಿಗೆ ಯಾರಿಗಾದರೂ ಯುಪಿಐ ಮೂಲಕ ಹಣ ಕಳುಹಿಸಿದಾಗ ಆ ಹಣ 4 ಗಂಟೆಯವರೆಗೆ ಸ್ಟ್ಯಾಂಡ್ಬೈನಲ್ಲಿ ಇರುತ್ತದೆ. ನೀವು ಈ ಅವಧಿಯೊಳಗೆ ಹಣವನ್ನು ಹಿಂಪಡೆಯುವ ಅವಕಾಶ ಇರುತ್ತದೆ.
ಇದನ್ನೂ ಓದಿ: Tax: ದೇಶದ ಅರ್ಧದಷ್ಟು ಜನ ಟ್ಯಾಕ್ಸ್ ಕಟ್ಟಲ್ಲ! ತೆರಿಗೆ ಕಟ್ಟಲು ಬಯಸುವವರ ಸಂಖ್ಯೆ ತೀರಾ ಕಡಿಮೆ
ಯುಪಿಐ ಆ್ಯಪ್ನಲ್ಲಿ ನೀವು ಕ್ರೆಡಿಟ್ ಲೈನ್ ಪಡೆಯಬಯಸಿದರೆ ಬ್ಯಾಂಕ್ನಲ್ಲಿ ಅರ್ಜಿ ಸಲ್ಲಿಸಬೇಕು. ಅಂದರೆ ನಿಮ್ಮ ಯುಪಿಐ ಆ್ಯಪ್ನಲ್ಲಿ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಇರುವ ಬ್ಯಾಂಕ್ ಕಚೇರಿಗೆ ಹೋಗಿ ಕ್ರೆಡಿಟ್ ಲೈನ್ಗಾಗಿ ಅರ್ಜಿ ಸಲ್ಲಿಸಬೇಕು. ಕ್ರೆಡಿಟ್ ಕಾರ್ಡ್ಗೆ ಇರುವಂತೆ ನಿಮ್ಮ ಯುಪಿಐ ಕ್ರೆಡಿಟ್ ಲೈನ್ಗೆ ಬ್ಯಾಂಕು ನಿರ್ದಿಷ್ಟ ಹಣದ ಮಿತಿ ನಿರ್ಧರಿಸುತ್ತದೆ.
ಇದು ನಿಮ್ಮ ಹಣಕಾಸು ಪರಿಸ್ಥಿತಿ, ಕ್ರೆಡಿಟ್ ಸ್ಕೋರ್ ಇತ್ಯಾದಿ ಮೇಲೆ ಅವಲಂಬಿತವಾಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ