ಪಿಎಂಜೆಡಿವೈ ಅಡಿಯ ಬ್ಯಾಂಕ್ ಖಾತೆಗಳು; ಯಾತಕ್ಕಾಗಿ ಈ ಯೋಜನೆ? ಪ್ರಯೋಜನಗಳೇನು?
PM Jan Dhan Yojana: ಆರ್ಥಿಕವಾಗಿ ಹಿಂದುಳಿದವರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸುವುದು ಮತ್ತು ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ಅವರಿಗೆ ಸಿಗುವಂತೆ ಮಾಡುವುದು ಪಿಎಂ ಜನ್ ಧನ್ ಯೋಜನೆಯ ಪ್ರಮುಖ ಉದ್ದೇಶ. ಹಾಗಂತ ಪಿಎಂ ಜನ್ ಧನ್ ಯೋಜನೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಸೀಮಿತವಾಗಿಲ್ಲ. ಯಾರು ಬೇಕಾದರೂ ಕೂಡ ಈ ಖಾತೆ ತೆರೆಯಬಹುದು.
ಕೇಂದ್ರ ಸರ್ಕಾರದ ಹಲವು ಹಣಕಾಸು ಯೋಜನೆಗಳಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆಯೂ (PM Jan Dhan Yojana) ಒಂದು. ದೇಶದ ಬ್ಯಾಂಕಿಂಗ್ ವ್ಯವಸ್ಥೆಯಿಂದ ವಂಚಿತರಾದವರನ್ನು ಒಳಗೊಳ್ಳಲು ರೂಪಿಸಿದ ಈ ಯೋಜನೆ 2014ರ ಆಗಸ್ಟ್ 28ರಂದು ಚಾಲನೆಗೊಂಡಿತು. ಒಂಬತ್ತು ವರ್ಷದಲ್ಲಿ ಈ ಪಿಎಂಜೆಡಿವೈ ಯೋಜನೆ ಅಡಿಯಲ್ಲಿ 50 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಅದೇ ಮೊದಲ ಬಾರಿಗೆ ಬ್ಯಾಂಕ್ ಖಾತೆ ತೆರೆದವರ ಸಂಖ್ಯೆಯೂ ಬಹಳ ಹೆಚ್ಚು. 2023ರ ಆಗಸ್ಟ್ 28ರಂದು ಯೋಜನೆಗೆ 9 ವರ್ಷವಾಗಿದ್ದು, 50 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ 2.03 ಲಕ್ಷ ಕೋಟಿ ರೂ ಠೇವಣಿಗಳಾಗಿವೆ.
ಯಾರಿಗೆ ಇದೆ ಈ ಪಿಎಂ ಜನ್ ಧನ್ ಯೋಜನೆ?
ಆರ್ಥಿಕವಾಗಿ ಹಿಂದುಳಿದವರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸುವುದು ಮತ್ತು ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ಅವರಿಗೆ ಸಿಗುವಂತೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಹಾಗಂತ ಪಿಎಂ ಜನ್ ಧನ್ ಯೋಜನೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಸೀಮಿತವಾಗಿಲ್ಲ. ಯಾರು ಬೇಕಾದರೂ ಕೂಡ ಈ ಖಾತೆ ತೆರೆಯಬಹುದು.
ಇದನ್ನೂ ಓದಿ: ಹಬ್ಬಕ್ಕೆ ಎಷ್ಟು ಖರ್ಚು ಮಾಡಬೇಕು? ಇನ್ನೂ ದೀಪಾವಳಿ ಇದೆ… ನಿಮ್ಮ ಬಜೆಟ್ ನಿಗದಿ ಮಾಡಲು ಇಲ್ಲಿದೆ ಟಿಪ್ಸ್
ಬೇರೆ ಕಮರ್ಷಿಯಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕನಿಷ್ಠ ಬ್ಯಾಲನ್ಸ್ ಇತ್ಯಾದಿ ಇರುತ್ತವೆ. ಆದರೆ, ಪಿಎಂಜೆಡಿವೈ ಅಡಿಯಲ್ಲಿ ತೆರೆಯಲಾಗುವ ಬ್ಯಾಂಕ್ ಖಾತೆ ಝೀರೋ ಬ್ಯಾಲನ್ಸ್ ಅಕೌಂಟ್ ಆಗಿರುತ್ತದೆ. ಗ್ರಾಮೀಣ ಭಾಗದ ಮತ್ತು ಬಡವರಿಗೆ ಇದರಿಂದ ಖಾತೆ ತೆರೆಯುವುದು ಸುಲಭವಾಗುತ್ತದೆ.
ಪಿಎಂ ಜನ್ ಧನ್ ಯೋಜನೆಯಿಂದ ಲಾಭಗಳೇನು?
ಝೀರೋ ಬ್ಯಾಲನ್ಸ್ ಸೌಲಭ್ಯ ಇರುವುದರಿಂದ ಗ್ರಾಮೀಣ ಭಾಗದ ಜನರು ಮತ್ತು ಬಡವರು ಈ ಯೋಜನೆ ಅಡಿ ಬ್ಯಾಂಕ್ ಖಾತೆ ತೆರೆಯಬಹುದು. ಸರ್ಕಾರಿ ಯೋಜನೆಗಳಿಂದ ಬರುವ ಹಣವನ್ನು ನೇರವಾಗಿ ಈ ಬ್ಯಾಂಕ್ ಖಾತೆಗಳಿಗೆ ಸರ್ಕಾರ ವರ್ಗಾವಣೆ ಮಾಡುತ್ತದೆ. ಇದರಿಂದ ಮಧ್ಯವರ್ತಿಗಳಿಗೆ ಹಣ ಸೋರಿಹೋಗುವುದು ತಪ್ಪುತ್ತದೆ.
ಇದನ್ನೂ ಓದಿ: Bank FD Rates: 15 ಬ್ಯಾಂಕುಗಳಲ್ಲಿ ಠೇವಣಿ ದರಗಳೆಷ್ಟು? ಯಾವ ಬ್ಯಾಂಕಲ್ಲಿ ಗರಿಷ್ಠ ಆಫರ್?
ಪಿಎಂ ಜನ್ ಧನ್ ಯೋಜನೆ ಅಡಿಯ ಬ್ಯಾಂಕ್ ಖಾತೆಗಳಿಗೆ ಜೀವ ವಿಮಾ ಕವರೇಜ್ ಇರುತ್ತದೆ. ಜೊತೆಗೆ ತುರ್ತು ಸಂದರ್ಭದಲ್ಲಿ ಓವರ್ಡ್ರಾಫ್ಟ್ ಸೌಲಭ್ಯಗಳನ್ನೂ ನೀಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ