AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

E Rupee to Cash: ನಿಮಗಿದು ತಿಳಿದಿರಲಿ; ಇ-ರೂಪಾಯಿಯನ್ನು ನೇರವಾಗಿ ನಗದಾಗಿ ಪರಿವರ್ತಿಸಲು ಸದ್ಯಕ್ಕೆ ಸಾಧ್ಯವಿಲ್ಲ

ಸದ್ಯ ಬ್ಯಾಂಕ್​ ಗ್ರಾಹಕರಿಗೆ ಮಾತ್ರ ಡಿಜಿಟಲ್ ವಾಲೆಟ್ ಇನ್​ಸ್ಟಾಲ್ ಮಾಡಿಕೊಳ್ಳಲು ಸಾಧ್ಯವಿದೆ. ಬ್ಯಾಂಕ್​ನಲ್ಲಿ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಮಾತ್ರ ಇನ್​ಸ್ಟಾಲ್ ಅನುವು ಮಾಡಿಕೊಡಲಾಗಿದೆ. ಒಂದು ಬಾರಿ ವಾಲೆಟ್​ ಇನ್​ಸ್ಟಾಲ್ ಮಾಡಿಕೊಂಡರೆ ಅಂಥ ಗ್ರಾಹಕರು ಯಾವ ಬ್ಯಾಂಕ್​ನಿಂದ ಬೇಕಿದ್ದರೂ ವಾಲೆಟ್​ಗೆ ಇ-ರೂಪಾಯಿಯನ್ನು ಆ್ಯಡ್ ಮಾಡಿಕೊಳ್ಳಬಹುದು.

E Rupee to Cash: ನಿಮಗಿದು ತಿಳಿದಿರಲಿ; ಇ-ರೂಪಾಯಿಯನ್ನು ನೇರವಾಗಿ ನಗದಾಗಿ ಪರಿವರ್ತಿಸಲು ಸದ್ಯಕ್ಕೆ ಸಾಧ್ಯವಿಲ್ಲ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 19, 2023 | 12:17 PM

Share

ಮುಂಬೈ: ಕೇಂದ್ರೀಯ ಬ್ಯಾಂಕ್​​ ಡಿಜಿಟಲ್ ಕರೆನ್ಸಿ (CBDC) ಅಥವಾ ಇ-ರೂಪಾಯಿಯನ್ನು (eRupee) ಸದ್ಯದ ಮಟ್ಟಿಗೆ ನೇರವಾಗಿ ನಗದಾಗಿ ಪರಿವರ್ತಿಸಲು ಸಾಧ್ಯವಾಗದು. ಆರ್​ಬಿಐ (RBI) ಬ್ಯಾಂಕ್​ ಠೇವಣಿಗಳ ಮೇಲೆ ಮಾತ್ರ ಇ-ರೂಪಾಯಿಯನ್ನು ನೀಡುತ್ತಿದ್ದು, ಈ ರೀತಿಯ ಡಿಜಿಟಲ್ ಕರೆನ್ಸಿಯನ್ನು ನಗದಾಗಿ ಪರಿವರ್ತಿಸಲು ಅವಕಾಶ ನೀಡುತ್ತಿದೆ. ಇ-ರೂಪಾಯಿಯ ಪ್ರಾಯೋಗಿಕ ಯೋಜನೆ ತೃಪ್ತಿಕರವಾಗಿ ಸಾಗುತ್ತಿದೆ. ನಿರ್ದಿಷ್ಟ ಗ್ರಾಹಕ ತಂಡಗಳ ನಡುವೆ ವಹಿವಾಟು ನಡೆಸಲಾಗುತ್ತಿದೆ. ಬಳಕೆದಾರರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ ಎಂದು ಆರ್​ಬಿಐ ತಿಳಿಸಿದೆ. ಸಾಮಾನ್ಯ ಕರೆನ್ಸಿಗಳಂತೆಯೇ ಇ-ರೂಪಾಯಿ ಕೂಡ ಆಗಿರುವುದರಿಂದ ಅದರ ನಿರ್ವಹಣೆಗೆ ಸಂಬಂಧಿಸಿದ ವೆಚ್ಚವನ್ನು ಆರ್​ಬಿಐಯೇ ಭರಿಸಲಿದೆ. ಸಾರ್ವಜನಿಕ ಹಿತಕ್ಕಾಗಿ ಆರ್​ಬಿಐ ಇದರ ನಿರ್ವಹಣೆ ಮಾಡಲಿದೆ ಎಂದು ಕೇಂದ್ರೀಯ ಬ್ಯಾಂಕ್​ನ ಫಿನ್​ಟೆಕ್ ಡಿಪಾರ್ಟ್​​ಮೆಂಟ್​​ನ ಚೀಫ್ ಜನರಲ್ ಮ್ಯಾನೇಜರ್ ಅನುಜ್ ರಂಜನ್ ‘ಇಂಡಿಯನ್ ಮರ್ಚೆಂಟ್ಸ್ ಚೇಂಬರ್​’ನ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ಬ್ಯಾಂಕ್​ಗಳು ಈಗಾಗಲೇ ಗೂಗಲ್ ಪ್ಲೇ ಸ್ಟೋರ್​ ಮತ್ತು ಆ್ಯಪಲ್ ಆ್ಯಪ್ ಸ್ಟೋರ್​ಗಳಲ್ಲಿ ಡಿಜಿಟಲ್ ವಾಲೆಟ್​ ಲಭ್ಯವಾಗುವಂತೆ ಮಾಡಿವೆ ಎಂದು ಯೆಸ್​​ ಬ್ಯಾಂಕ್​​ನ ಟ್ರಾನ್ಸಾಕ್ಷನ್ ಬ್ಯಾಕಿಂಗ್ ಮುಖ್ಯಸ್ಥ ಅಜಯ್ ರಾಜನ್ ತಿಳಿಸಿದ್ದಾರೆ. ಸದ್ಯ ಬ್ಯಾಂಕ್​ ಗ್ರಾಹಕರಿಗೆ ಮಾತ್ರ ಡಿಜಿಟಲ್ ವಾಲೆಟ್ ಇನ್​ಸ್ಟಾಲ್ ಮಾಡಿಕೊಳ್ಳಲು ಸಾಧ್ಯವಿದೆ. ಬ್ಯಾಂಕ್​ನಲ್ಲಿ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಮಾತ್ರ ಇನ್​ಸ್ಟಾಲ್ ಅನುವು ಮಾಡಿಕೊಡಲಾಗಿದೆ. ಒಂದು ಬಾರಿ ವಾಲೆಟ್​ ಇನ್​ಸ್ಟಾಲ್ ಮಾಡಿಕೊಂಡರೆ ಅಂಥ ಗ್ರಾಹಕರು ಯಾವ ಬ್ಯಾಂಕ್​ನಿಂದ ಬೇಕಿದ್ದರೂ ವಾಲೆಟ್​ಗೆ ಇ-ರೂಪಾಯಿಯನ್ನು ಆ್ಯಡ್ ಮಾಡಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Digital Rupee: ಆರ್​ಬಿಐ ಡಿಜಿಟಲ್ ಕರೆನ್ಸಿ ಪ್ರಯೋಗಕ್ಕೆ ಮುಂಬೈ ಹಣ್ಣಿನ ವ್ಯಾಪಾರಿ; ಇ-ರೂಪಾಯಿ ಬಗ್ಗೆ ಏನಂತಾರೆ ಇವರು?

ನಗದು ನಿರ್ವಹಣೆ ಉಚಿತವಾದರೂ ವ್ಯಾಪಾರಿಗಳು ನಗದು ನಿರ್ವಹಣೆ ಕಂಪನಿಗಳಿಗೆ ಶುಲ್ಕ ನೀಡಬೇಕಾಗುತ್ತದೆ. ಇ-ರೂಪಾಯಿ ಮೂಲಕ ಪಾವತಿ ಸ್ವೀಕರಿಸುವ ಬಗ್ಗೆ ಅನೇಕ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಇವುಗಳಲ್ಲಿ ರಿಲಯನ್ಸ್ ರಿಟೇಲ್ ಮತ್ತು ನ್ಯಾಚುರಲ್ ಐಸ್​ಕ್ರೀಮ್​ ಕೂಡ ಸೇರಿವೆ ಎಂದು ಅವರು ಹೇಳಿದ್ದಾರೆ.

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಇ-ರೂಪಾ ಬಳಕೆಯ ಪ್ರಯೋಗವನ್ನು ಬೆಂಗಳೂರು, ಮುಂಬೈ, ದೆಹಲಿ ನಗರಗಳಲ್ಲಿ ಆರ್​ಬಿಐ ಇತ್ತೀಚೆಗೆ ಆರಂಭಿಸಿತ್ತು. ಇದು ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಣೆಯಾಗಲಿದೆ. ಪ್ರಯೋಗದ ಫಲಿತಾಂಶದ ಆಧಾರದಲ್ಲಿ ಇ-ರೂಪಾಯಿ ವಹಿವಾಟನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಗುವುದು ಎಂದು ಆರ್​ಬಿಐ ತಿಳಿಸಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು