ಡಿಸೆಂಬರ್​ನಲ್ಲಿ ಬಡ್ಡಿ ಇಳಿಕೆ ಸಾಧ್ಯತೆ; ಈಗಲೇ ಎಫ್​ಡಿ ಇಡಲು ತ್ವರೆ ಮಾಡಿ

Investment in Fixed deposits: ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್​ನಲ್ಲಿ ಬಡ್ಡಿದರಗಳನ್ನು ಇಳಿಸುವ ಸಾಧ್ಯತೆ ದಟ್ಟವಾಗಿದೆ. ಶೇ. 6.5 ಇರುವ ರಿಪೋ ದರ ಮುಂಬರುವ ದಿನಗಳಲ್ಲಿ ಕ್ರಮೇಣವಾಗಿ ಇಳಿಕೆಯಾಗಬಹುದು. ಸದ್ಯ ಅಧಿಕ ಮಟ್ಟದಲ್ಲಿರುವ ಎಫ್​ಡಿ ದರಗಳು ಕಡಿಮೆಗೊಳ್ಳಬಹುದು. ಡಿಸೆಂಬರ್​ನೊಳಗಾಗಿ ನಿಮ್ಮ ಹಣವನ್ನು ಫಿಕ್ಸೆಡ್ ಇಡುವುದು ಸಮಯೋಚಿತ ಕ್ರಮ ಆಗಬಹುದು.

ಡಿಸೆಂಬರ್​ನಲ್ಲಿ ಬಡ್ಡಿ ಇಳಿಕೆ ಸಾಧ್ಯತೆ; ಈಗಲೇ ಎಫ್​ಡಿ ಇಡಲು ತ್ವರೆ ಮಾಡಿ
ಡೆಪಾಸಿಟ್

Updated on: Oct 09, 2024 | 4:33 PM

ನವದೆಹಲಿ, ಅಕ್ಟೋಬರ್ 9: ಆರ್​ಬಿಐನ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಲಾಗಿರುವುದು ಬಡ್ಡಿದರ ಇಳಿಕೆಯ ಸುಳಿವು ನೀಡುತ್ತಿದೆ. ಡಿಸೆಂಬರ್​ನಲ್ಲಿ ಆರ್​ಬಿಐ ಬಡ್ಡಿದರಗಳನ್ನು ಇಳಿಸುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಫಿಕ್ಸೆಡ್ ಡೆಪಾಸಿಟ್ ದರ ಅಧಿಕ ಮಟ್ಟದಲ್ಲಿದೆ. ಈ ಎರಡು ತಿಂಗಳ ಒಳಗೆ ಫಿಕ್ಸೆಡ್ ಇಡುವುದು ಜಾಣತನ ಎನ್ನುತ್ತಾರೆ ತಜ್ಞರು.

ಹೆಚ್ಚೂಕಡಿಮೆ ಎರಡು ವರ್ಷದಿಂದ ಆರ್​ಬಿಐ ಬಡ್ಡಿದರ ಪರಿಷ್ಕರಣೆ ಮಾಡಿಲ್ಲ. ಶೇ. 6.5ರಷ್ಟು ರಿಪೋ ದರ ಇದೆ. ಹಣದುಬ್ಬರ ನಿಯಂತ್ರಣಕ್ಕೆ ತರಲು ಆರ್​ಬಿಐ ಶೇ. 4ರಷ್ಟಿದ್ದ ಬಡ್ಡಿದರವನ್ನು ಕ್ರಮೇಣವಾಗಿ ಹೆಚ್ಚಿಸುತ್ತಾ ಹೋಗಿ ಶೇ. 6.5ಕ್ಕೆ ತಂದಿದೆ. ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಹಣದುಬ್ಬರದ ಕಾರಣಕ್ಕೆ ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸಿದ್ದವು. ಈಗ ಪ್ರಮುಖ ದೇಶಗಳಲ್ಲಿ ಬಡ್ಡಿಕಡಿತದ ಟ್ರೆಂಡ್ ಶುರುವಾಗಿದೆ.

ಇದನ್ನೂ ಓದಿ: ಆದಾಯ ತೆರಿಗೆ ಕಾಯ್ದೆಯಲ್ಲಿ ಅಮೂಲಾಗ್ರ ಪರಿಷ್ಕರಣೆಗೆ ಸರ್ಕಾರ ನಿರ್ಧಾರ; ಪೋರ್ಟಲ್​ನಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕೂ ಅವಕಾಶ

ಅಮೆರಿಕದ ಫೆಡರಲ್ ರಿಸರ್ವ್ ಸೆಪ್ಟೆಂಬರ್​ನಲ್ಲಿ 50 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆಗೊಳಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಕಡಿತಗೊಳಿಸುವುದಾಗಿ ಅಲ್ಲಿನ ಸೆಂಟ್ರಲ್ ಬ್ಯಾಂಕ್ ಸುಳಿವು ನೀಡಿದೆ. ಭಾರತದ ಮೇಲೆ ದಟ್ಟವಾಗಿ ಪ್ರಭಾವ ಬೀರಬಲ್ಲ ಅಮೆರಿಕದಲ್ಲಿ ಬಡ್ಡಿದರ ವ್ಯತ್ಯಯವಾದರೆ ಭಾರತವೂ ಸ್ಪಂದಿಸುವುದು ಅನಿವಾರ್ಯ. ಈ ಕಾರಣಕ್ಕೆ ಆರ್​ಬಿಐ ರಿಪೋ ದರ ಇಳಿಕೆಯನ್ನು ತಡೆದಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಡಿಸೆಂಬರ್​ನಲ್ಲಿ ದರ ಕಡಿತ ಅನಿವಾರ್ಯವಾಗಬಹುದು. ಹೀಗಾಗಿ, ಅಕ್ಟೋಬರ್ ತಿಂಗಳ ಎಂಪಿಸಿ ಸಭೆಯಲ್ಲಿ ಆರ್​ಬಿಐನ ಹಣಕಾಸು ನೀತಿಯನ್ನು ನ್ಯೂಟ್ರಲ್​ಗೆ ಬದಲಾಯಿಸಲಾಗಿದೆ.

ಅಧಿಕ ಮಟ್ಟದಲ್ಲಿದೆ ಎಫ್​ಡಿ ದರಗಳು…

ಸದ್ಯ ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಠೇವಣಿ ದರಗಳು ಶೇ. 8ರವರೆಗೂ ಇದೆ. ಸಹಕಾರಿ ಬ್ಯಾಂಕುಗಳಲ್ಲಿ ಇದು ಶೇ. 9.5ರವರೆಗೂ ಇದೆ. ಎಸ್​ಬಿಐ, ಎಚ್​ಡಿಎಫ್​ಸಿ, ಎಕ್ಸಿಸ್ ಇತ್ಯಾದಿ ಬ್ಯಾಂಕುಗಳು ಶೇ. 7.5ರ ಆಸುಪಾಸಿನ ದರದಲ್ಲಿ ಬಡ್ಡಿಯನ್ನು ನೀಡುತ್ತವೆ.

ಇದನ್ನೂ ಓದಿ: ಬಳಕೆಯಲ್ಲಿ ಇಲ್ಲದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸುವ ಕ್ರಮ

ಡಿಸೆಂಬರ್​ನಲ್ಲಿ ಒಮ್ಮೆ ಮಾತ್ರವೇ ದರ ಕಡಿತ ಆಗಬಹುದು ಎಂದಿಲ್ಲ. ಅಲ್ಲಿಂದ ಬಡ್ಡಿ ಇಳಿಕೆಯ ಪರ್ವ ಶುರುವಾಗಬಹುದು. ಹೀಗಾಗಿ, ಸದ್ಯ ಅಧಿಕ ಬಡ್ಡಿ ನೀಡುತ್ತಿರುವ ಫಿಕ್ಸೆಡ್ ಡೆಪಾಸಿಟ್​ಗೆ ನಿಮ್ಮ ಹಣ ಲಾಕ್ ಮಾಡುವುದು ಉತ್ತಮ ಕ್ರಮ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us