ರೆಕರಿಂಗ್ ಡೆಪಾಸಿಟ್ ಸ್ಕೀಮ್; ಪೋಸ್ಟ್ ಆಫೀಸ್ ಉತ್ತಮವೋ, ಎಸ್​ಬಿಐ ಇತ್ಯಾದಿ ಬ್ಯಾಂಕುಗಳ ಆರ್​ಡಿ ಉತ್ತಮವೋ? ಇಲ್ಲಿದೆ ಹೋಲಿಕೆ

|

Updated on: Sep 13, 2023 | 12:26 PM

Comparision of RD Plans of Banks and Post Office: ಆವರ್ತಿತ ಠೇವಣಿ ಸ್ಕೀಮ್​ನಲ್ಲಿ ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು ಖಾತೆಗೆ ಸೇರಿಸಬಹುದು. ಇದರಿಂದ ಹಣ ಉಳಿತಾಯದ ಜೊತೆಗೆ ಉತ್ತಮ ದರದಲ್ಲಿ ಬಡ್ಡಿ ಹಣವನ್ನೂ ಪಡೆಯಬಹುದು. ಆರ್​ಡಿಯನ್ನು ಎಲ್ಲಾ ಬ್ಯಾಂಕುಗಳಲ್ಲಿ ತೆರೆಯಬಹುದು. ಪೋಸ್ಟ್ ಆಫೀಸ್​ನಲ್ಲೂ ಆರ್​ಡಿ ಸ್ಕೀಮ್ ಇದೆ. ಆರ್​ಡಿ ಖಾತೆಯಲ್ಲಿರುವ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತದೆ? ತೆರಿಗೆ ಕಡಿತ ಎಷ್ಟಿರುತ್ತದೆ ಇತ್ಯಾದಿ ಮಾಹಿತಿ ಇಲ್ಲಿದೆ...

ರೆಕರಿಂಗ್ ಡೆಪಾಸಿಟ್ ಸ್ಕೀಮ್; ಪೋಸ್ಟ್ ಆಫೀಸ್ ಉತ್ತಮವೋ, ಎಸ್​ಬಿಐ ಇತ್ಯಾದಿ ಬ್ಯಾಂಕುಗಳ ಆರ್​ಡಿ ಉತ್ತಮವೋ? ಇಲ್ಲಿದೆ ಹೋಲಿಕೆ
ಉಳಿತಾಯ ಯೋಜನೆ
Follow us on

ರೆಕರಿಂಗ್ ಡೆಪಾಸಿಟ್ ಬಹಳ ಸರಳ ಹಾಗೂ ಉಪಯುಕ್ತ ಸೇವಿಂಗ್ ಸ್ಕೀಮ್. ನೀವು ಪ್ರತೀ ತಿಂಗಳು ಹಣ ಉಳಿಸಿ ನಿರ್ದಿಷ್ಟ ಮೊತ್ತವನ್ನು ಆರ್​ಡಿಗೆ ಹಾಕುವ ಮೂಲಕ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು. ಬಹುತೇಕ ಎಫ್​ಡಿಗೆ ಸಿಗುವಷ್ಟೇ ಬಡ್ಡಿ ಆರ್​ಡಿಗೂ ಸಿಗುತ್ತದೆ. ಜನರಲ್ಲಿ ಉಳಿತಾಯ ಪ್ರವೃತ್ತಿ ಹೆಚ್ಚಿಸುವ ಆರ್​ಡಿಯನ್ನು (RD- Recurring Deposit) ನಿರ್ವಹಿಸುವುದೂ ಬಹಳ ಸುಲಭ. ಬಹುತೇಕ ಎಲ್ಲಾ ಬ್ಯಾಂಕುಗಳು ರೆಕರಿಂಗ್ ಡೆಪಾಸಿಟ್ ಸ್ಕೀಮ್ ಹೊಂದಿರುತ್ತವೆ. ತಿಂಗಳಿಗೆ ಕನಿಷ್ಠ 100 ರೂನಿಂದ ಆರಂಭಿಸಿ ನೀವು ಎಷ್ಟು ಬೇಕಾದರೂ ಹಣವನ್ನು ಇದರಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕುಗಳಷ್ಟೇ ಅಲ್ಲ, ಅಂಚೆ ಕಚೇರಿಯಲ್ಲೂ ಕೂಡ ಆರ್​ಡಿ ಖಾತೆ ತೆರೆಯಬಹುದು. ಇಲ್ಲಿಯೂ ತಿಂಗಳಿಗೆ ಕನಿಷ್ಠ 100 ರೂ ಹೂಡಿಕೆ ಮಾಡುವ ಅವಕಾಶ ಇದೆ.

ರೆಕರಿಂಗ್ ಡೆಪಾಸಿಟ್ ಹೇಗೆ?

  • ರೆಕರಿಂಗ್ ಡೆಪಾಸಿಟ್ ಎಂದರೆ ಆವರ್ತಿತ ಠೇವಣಿ. ಒಮ್ಮೆಗೇ ಹಣವನ್ನು ಠೇವಣಿ ಇಡುವುದು ನಿಶ್ಚಿತ ಠೇವಣಿ. ಆರ್​ಡಿಯಲ್ಲಿ ನೀವು ಪ್ರತೀ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡಬಹುದು.
  • ನೀವು ತಿಂಗಳಲ್ಲಿ ಉಳಿಸಿದ ಹಣವನ್ನು ಹೂಡಿಕೆಗೆ ಬಳಸಲು ಆರ್​ಡಿ ಹೇಳಿಮಾಡಿಸಿದ ಸ್ಕೀಮ್.
  • ಇದು ಆರು ತಿಂಗಳಿಂದ ಹಿಡಿದು 10 ವರ್ಷದ ಅವಧಿಯವರೆಗೆ ಪ್ರತೀ ತಿಂಗಳು ಆರ್​ಡಿ ಖಾತೆಗೆ ನೀವು ಹಣ ಹಾಕಬಹುದು.
  • ಇದಕ್ಕೆ ಲಾಕಿನ್ ಪೀರಿಯಡ್ ಒಂದರಿಂದ ಮೂರು ತಿಂಗಳವರೆಗೆ ಇರುತ್ತದೆ. ಅಂದರೆ ನೀವು ಆರ್​ಡಿ ಖಾತೆ ತೆರೆದ ಬಳಿಕ ಅದನ್ನು ಲಾಕಿನ್ ಅವಧಿಯವರೆಗೂ ರದ್ದು ಮಾಡಲು ಸಾಧ್ಯ ಇಲ್ಲ.
  • ಬ್ಯಾಂಕುಗಳಲ್ಲಿ ನಿಮ್ಮ ಖಾತೆಯಿಂದ ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು ಸ್ವಯಂಚಾಲಿತವಾಗಿ ಆರ್​ಡಿ ಖಾತೆಗೆ ವರ್ಗಾವಣೆ ಮಾಡುವ ಅವಕಾಶ ಇರುತ್ತದೆ.

ಇದನ್ನೂ ಓದಿ: ಎಸ್​ಬಿಐನಿಂದ ಕೆನರಾ ಬ್ಯಾಂಕ್​ವರೆಗೆ, ಪ್ರಮುಖ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗೆ ಎಷ್ಟು ಬಡ್ಡಿ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

ಎಸ್​ಬಿಐನಲ್ಲಿರುವ ಆರ್​ಡಿಗೆ ಬಡ್ಡಿ ಎಷ್ಟು ಸಿಗುತ್ತದೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರಿಕರಿಂಗ್ ಡೆಪಾಸಿಟ್​ಗೆ ವರ್ಷಕ್ಕೆ ಶೇ. 6.5ರಿಂದ ಶೇ. 7ರವರೆಗೂ ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಅರ್ಧಪ್ರತಿಶತದಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಎರಡರಿಂದ ಮೂರು ವರ್ಷದ ಆರ್​ಡಿ ಸ್ಕೀಮ್​ಗೆ ಗರಿಷ್ಠ ಬಡ್ಡಿಯನ್ನು ಎಸ್​ಬಿಐ ನೀಡುತ್ತದೆ. ಬೇರೆ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲೂ ಬಹುತೇಕ ಇಷ್ಟೇ ಆರ್​ಡಿ ದರಗಳಿವೆ.

ಅಂಚೆ ಕಚೇರಿಯಲ್ಲಿ ಆರ್​ಡಿಗೆ ಬಡ್ಡಿ ಎಷ್ಟು?

ಅಂಚೆ ಕಚೇರಿಯಲ್ಲಿ ಆರ್​ಡಿ ಸ್ಕೀಮ್ 5 ವರ್ಷದ ಅವಧಿಯದ್ದಿದೆ. ತಿಂಗಳಿಗೆ ಕನಿಷ್ಠ 100 ರೂ ಹೂಡಿಕೆ ಮಾಡಬೇಕು. ಈ ಐದು ವರ್ಷದ ಆರ್​ಡಿ ಸ್ಕೀಮ್​ಗೆ ವರ್ಷಕ್ಕೆ ಶೇ. 6.5ರ ಬಡ್ಡಿದರ ಸಿಗುತ್ತದೆ.

ಇದನ್ನೂ ಓದಿ: ಸೂಪರ್ ಹಿಟ್ ಆಗಿರುವ ನ್ಯಾಷನಲ್ ಪೆನ್ಷನ್ ಸ್ಕೀಮ್ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರವಾ? ಬೇರೆಯವರೂ ಈ ಯೋಜನೆ ಹೇಗೆ ಪಡೆಯುವುದು?

ಆರ್​ಡಿಗೆ ತೆರಿಗೆ ಹೇರಿಕೆ ಇದೆಯಾ?

ನಿಶ್ಚಿತ ಠೇವಣಿಯಂತೆ ಆವರ್ತಿತ ಠೇವಣಿಗಳ ಬಡ್ಡಿ ಆದಾಯಕ್ಕೆ ತೆರಿಗೆ ಇರುತ್ತದೆ. ಆರ್​ಡಿಯಿಂದ ಒಂದು ವರ್ಷದಲ್ಲಿ ಸಿಗುವ ಬಡ್ಡಿ ಹಣ 10,000 ರೂ ಮೀರಿದರೆ ಆ ಆದಾಯಕ್ಕೆ ಶೇ. 10ರಷ್ಟು ಟಿಡಿಎಸ್ ಕಡಿತವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ