RD Account: ಆರ್​ಡಿ ಉಳಿತಾಯ ಖಾತೆ ತೆರೆಯುವ ಮುನ್ನ ಈ ವಿಷಯಗಳನ್ನು ತಿಳಿದಿರಿ

| Updated By: ಗಣಪತಿ ಶರ್ಮ

Updated on: Nov 11, 2022 | 12:53 PM

ಈ ಮಾದರಿಯ ಹೂಡಿಕೆ ಅಥವಾ ಠೇವಣಿ ಯೋಜನೆಯಲ್ಲಿ ಕನಿಷ್ಠ ಮೊತ್ತ ಬ್ಯಾಂಕ್​ನಿಂದ ಬ್ಯಾಂಕ್​ಗೆ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ಕನಿಷ್ಠ 1,000 ರೂ.ನಿಂದ ಹೂಡಿಕೆ ಮಾಡಬಹುದಾಗಿದೆ. ಆರ್​ಡಿ ಯೋಜನೆಯ ಇತರ ಪ್ರಮುಖ ಲಕ್ಷಣಗಳು ಇಲ್ಲಿವೆ.

RD Account: ಆರ್​ಡಿ ಉಳಿತಾಯ ಖಾತೆ ತೆರೆಯುವ ಮುನ್ನ ಈ ವಿಷಯಗಳನ್ನು ತಿಳಿದಿರಿ
ಸಾಂದರ್ಭಿಕ ಚಿತ್ರ
Follow us on

ಆರ್​ಡಿ ಎಂದೇ ಪ್ರಸಿದ್ಧವಾಗಿರುವ ರಿಕರಿಂಗ್ ಡೆಪಾಸಿಟ್ (Recurring Deposit) ಸಮಂಜಸ ಗಳಿಕೆಯ ನಿರೀಕ್ಷೆಯೊಂದಿಗೆ ನಿರ್ದಿಷ್ಟ ಅವಧಿಗೆ ಮಾಡುವ ಹೂಡಿಕೆಯಾಗಿದೆ. ಈ ವಿಧಾನದಲ್ಲಿ ಮೆಚ್ಯೂರಿಟಿ ಅವಧಿಯ ವರೆಗೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ (investment) ಮಾಡುತ್ತಿದ್ದು, ನಂತರ ಬಡ್ಡಿ ಸಮೇತ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಆರ್​ಡಿಯು ನಿಯಮಿತವಾಗಿ ಉಳಿತಾಯ ಮಾಡುವಂತೆ ಜನರನ್ನು ಪ್ರೇರೇಪಿಸುತ್ತದೆ. ಈ ಮಾದರಿಯ ಹೂಡಿಕೆ ಅಥವಾ ಠೇವಣಿ ಯೋಜನೆಯಲ್ಲಿ ಕನಿಷ್ಠ ಮೊತ್ತ ಬ್ಯಾಂಕ್​ನಿಂದ ಬ್ಯಾಂಕ್​ಗೆ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ಕನಿಷ್ಠ 1,000 ರೂ.ನಿಂದ ಹೂಡಿಕೆ ಮಾಡಬಹುದಾಗಿದೆ. ಆರ್​ಡಿ ಯೋಜನೆಯ ಇತರ ಪ್ರಮುಖ ಲಕ್ಷಣಗಳು ಇಲ್ಲಿವೆ.

  • ಕನಿಷ್ಠ ಆರು ತಿಂಗಳುಗಳಿಂದ ಗರಿಷ್ಠ 10 ವರ್ಷಗಳ ವರೆಗೆ ಠೇವಣಿ ಇಡಬಹುದಾಗಿದೆ.
  •  ಸ್ಥಿರ ಠೇವಣಿ (ಎಫ್​ಡಿ) ಮಾದರಿಯಲ್ಲೇ ಆರ್​ಡಿಗೂ ಬಡ್ಡಿ ದರ ನಿಗದಿಪಡಿಸಲಾಗುತ್ತದೆ.
  • ಅವಧಿಪೂರ್ವ ಹಿಂಪಡೆಯುವಿಕೆ ನಿರ್ಬಂಧಿಸಲಾಗಿದೆ. ಕೆಲವೊಂದು ಷರತ್ತುಗಳೊಂದಿಗೆ ಅವಧಿಪೂರ್ವ ಹಿಂಪಡೆಯುವ ಅವಕಾಶಗಳು ಇರುತ್ತವೆ. ಆದರೆ ಮೆಚ್ಯೂರಿಟಿ ವೇಳೆ ದೊರೆಯುವ ಎಲ್ಲ ಪ್ರಯೋಜನಗಳು ಇದರಿಂದ ದೊರೆಯಲಾರವು.

ಆರ್​ಡಿ ಠೇವಣಿ ಹೊಂದಲು ಅರ್ಹತೆಗಳೇನು?

  • ಯಾರು ಬೇಕಾದರೂ ಆರ್​ಡಿ ಖಾತೆ ತೆರೆಯಬಹುದು
  • 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಗುರುತಿನ ದೃಢೀಕರಣ ಒದಗಿಸಿದರೆ ಠೇವಣಿ ಖಾತೆ ತೆರೆಯಬಹುದು.

ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ?

ಇದನ್ನೂ ಓದಿ
Rs 2000 Currency Notes: ಚಲಾವಣೆಗೆ ಸಿಗುತ್ತಿಲ್ಲ 2,000 ರೂ. ನೋಟು! ಕಾರಣ ಇಲ್ಲಿದೆ ನೋಡಿ
ಎನ್​ಆರ್​ಐಗಳೂ ಆಧಾರ್ ಕಾರ್ಡ್ ಹೊಂದಬಹುದು; ಇಲ್ಲಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ವಿವರವಾದ ಮಾಹಿತಿ
ರಿಸೆಷನ್ ಪ್ರೂಫ್ ಜಾಬ್ ಇದೆಯೇ? ಆರ್ಥಿಕ ಹಿಂಜರಿತದ ವೇಳೆ ಉದ್ಯೋಗ ಉಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್
Online Financial Frauds: ಆನ್​ಲೈನ್ ಹಣಕಾಸು ವಂಚನೆಗಳಿಂದ ರಕ್ಷಣೆಗೆ ಈ ವಿಚಾರಗಳನ್ನು ಗಮನಿಸಿ…
  • ಯಾವ ಬ್ಯಾಂಕ್​ನಲ್ಲಿ ಆರ್​ಡಿ ಖಾತೆ ತೆರೆಯಲು ಉದ್ದೇಶಿಸಿದ್ದೀರೋ ಆ ಬ್ಯಾಂಕ್​ನ ಅರ್ಜಿ
  • ಪಾಸ್​ಪೋರ್ಟ್ ಸೈಜ್​ನ ಫೋಟೊ
  • ಗುರುತಿನ ದಾಖಲೆಗಳು ಮತ್ತು ವಿಳಾಸ ದೃಢೀಕರಣ ದಾಖಲೆಗಳು
  • ಬ್ಯಾಂಕ್ ಬಯಸಿದಲಿ ಕೆವೈಸಿ ದಾಖಲೆಗಳನ್ನೂ ನೀಡಬೇಕಾಗುತ್ತದೆ.

ಆನ್​ಲೈನ್​ನಲ್ಲಿ ಆರ್​ಡಿ ಖಾತೆ ತೆರೆಯುವುದು ಹೇಗೆ?

  • ನೆಟ್​ ಬ್ಯಾಂಕಿಂಗ್​ಗೆ ಲಾಗಿನ್ ಆಗಿ
  • ಆರ್​ಡಿ ಖಾತೆ ತೆರೆಯುವುದಕ್ಕೆ ಸಂಬಂಧಿಸಿದ ಆಯ್ಕೆಯನ್ನು ಕ್ಲಿಕ್ ಮಾಡಿ
  • ಅವಧಿ ಮತ್ತು ಕಂತಿನ ಮೊತ್ತದ ವಿವರಗಳನ್ನು ಭರ್ತಿ ಮಾಡಿ
  • ಬಳಿಕ ನಿಮ್ಮ ಉಳಿತಾಯ ಖಾತೆಯನ್ನು ಆರ್​ಡಿ ಖಾತೆ ಜತೆ ಲಿಂಕ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಿ

ಆಫ್​​ಲೈನ್​ನಲ್ಲಿ ಆರ್​ಡಿ ಖಾತೆ ತೆರೆಯುವುದು ಹೇಗೆ?

  • ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
  • ಆರ್​ಡಿ ಖಾತೆ ತೆರೆಯುವುದಕ್ಕೆ ಸಂಬಂಧಿಸಿದ ಅರ್ಜಿಯನ್ನು ಭರ್ತಿ ಮಾಡಿ
  • ಕಂತಿನ ಹಣವನ್ನು ಪಾವತಿ ಮಾಡಲು ಚೆಕ್ ನೀಡುವ ಮೂಲಕ ದೃಢೀಕರಿಸಿ
  • ಅಗತ್ಯವಿದ್ದಲ್ಲಿ ಕೆವೈಸಿ ವಿವರ, ದಾಖಲೆಗಳನ್ನು ಸಲ್ಲಿಸಿ

ಅವಧಿಪೂರ್ವ ಹಿಂಪಡೆಯಲು ಇದೆಯೇ?

  • ಬ್ಯಾಂಕ್​ಗಳು ಆರ್​​ಡಿಯ ಅವಧಿಪೂರ್ವ ಹಿಂಪಡೆಯುವಿಕೆಗೆ ಬಡ್ಡಿಯ ಶೇಕಡಾ 1.00ರ ವರೆಗೆ ಶುಲ್ಕ ವಿಧಿಸುತ್ತವೆ
  • ಬಡ್ಡಿ ದರ ಬ್ಯಾಂಕ್​ನಿಂದ ಬ್ಯಾಂಕ್​ಗೆ ವ್ಯತ್ಯಾಸ ಇರಬಹುದು
  • ಅವಧಿಗೂ ಮುನ್ನ ಹಿಂಪಡೆಯುವಾಗ ಠೇವಣಿ ಇಡುವ ಸಂದರ್ಭದಲ್ಲಿ ಭರವಸೆ ನೀಡಿದ್ದ ಪ್ರಮಾಣದಲ್ಲಿ ಬಡ್ಡಿ ದೊರೆಯಲಾರದು. ಬಡ್ಡಿ ದರವನ್ನು ಬ್ಯಾಂಕ್​ಗಳು ಶೇಕಡಾ 1ರಿಂದ 2ರಷ್ಟು ಕಡಿತ ಮಾಡುವ ಸಾಧ್ಯತೆ ಇದೆ
  • ಆರ್​ಡಿಗೆ ಕನಿಷ್ಠ ಲಾಕ್​ ಇನ್ ಅವಧಿ ಮೂರು ತಿಂಗಳುಗಳಾಗಿವೆ. ಈ ಅವಧಿಗೂ ಮೊದಲೇ ಹಿಂಪಡೆಯುವುದಾದರೆ ಬಡ್ಡಿ ದೊರೆಯಲಾರದು. ಠೇವಣಿ ಇಟ್ಟ ಮೊತ್ತ ಮಾತ್ರ ವಾಪಸ್ ದೊರೆಯಬಹುದು.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ