ಎಸ್​ಬಿಐನ ಈ ಫಂಡ್ ಭರ್ಜರಿ ಲಾಭ; ತಿಂಗಳಿಗೆ 10,000 ರೂ ಹೂಡಿಕೆ; 3 ವರ್ಷದಲ್ಲಿ 5 ಲಕ್ಷ ರೂ ಸಂಪತ್ತು

|

Updated on: Sep 11, 2024 | 6:19 PM

SIP in SBI balanced advantage fund: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯೂಚುವಲ್ ಫಂಡ್ ಸಂಸ್ಥೆ ನಿರ್ವಹಿಸುವ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಮೂರು ವರ್ಷದಲ್ಲಿ ಸಖತ್ ಜನಪ್ರಿಯತೆ ಪಡೆದಿದೆ. ಶೇ. 18.56 ಸಿಎಜಿಆರ್​ನಲ್ಲಿ ಈ ಫಂಡ್ ಲಾಭ ತಂದಿದೆ. 2021ರ ಆಗಸ್ಟ್ 31ರಂದು ಆರಂಭವಾದ ಈ ಫಂಡ್​ನಲ್ಲಿ 10,000 ರೂ ಎಸ್​ಐಪಿ ಆರಂಭಿಸಿದ್ದರೆ ಇವತ್ತು ಆ ಹೂಡಿಕೆ 4.8 ಲಕ್ಷ ರೂ ಆಗಿರುತ್ತಿತ್ತು.

ಎಸ್​ಬಿಐನ ಈ ಫಂಡ್ ಭರ್ಜರಿ ಲಾಭ; ತಿಂಗಳಿಗೆ 10,000 ರೂ ಹೂಡಿಕೆ; 3 ವರ್ಷದಲ್ಲಿ 5 ಲಕ್ಷ ರೂ ಸಂಪತ್ತು
ಮ್ಯೂಚುವಲ್ ಫಂಡ್
Follow us on

ಎಸ್​ಐಪಿ ಮೂಲಕ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವುದು ಜನಪ್ರಿಯ ಆಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಹಲವು ಮ್ಯುಚುವಲ್ ಫಂಡ್​ಗಳು ಉತ್ತಮ ರಿಟರ್ನ್ಸ್ ನೀಡಿವೆ. ಎಸ್​ಬಿಐ ಮ್ಯೂಚುವಲ್ ಫಂಡ್ ಸಂಸ್ಥೆ ಪ್ರಕಟಿಸಿರುವ ಫ್ಯಾಕ್ಟ್​ಶೀಟ್ ಮಾಹಿತಿ ಪ್ರಕಾರ ಅದರ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ (SBI Balanced Advantage Fund) ಕಳೆದ ಮೂರು ವರ್ಷದಲ್ಲಿ ಶೇ. 18.56ರ ಸಿಎಜಿಆರ್​ನಲ್ಲಿ ಹೂಡಿಕೆಯ ಮೌಲ್ಯ ಹೆಚ್ಚಿಸಿದೆ. ಈ ಮಟ್ಟದ ಸಿಎಜಿಆರ್ ಉತ್ತಮ ದರ ಎನಿಸುತ್ತದೆ.

ಮೂರು ವರ್ಷಗಳ ಹಿಂದೆ ನೀವು ಈ ಮ್ಯೂಚುವಲ್ ಫಂಡ್​ನಲ್ಲಿ 10,000 ರೂಗಳ ಎಸ್​ಐಪಿ ಆರಂಭಿಸಿದ್ದರೆ ಇವತ್ತು ನಿಮ್ಮ ಹೂಡಿಕೆ 4.80 ಲಕ್ಷ ರೂ ಆಗಿರುತ್ತಿತ್ತು. ನಿಮ್ಮ 3.60 ಲಕ್ಷ ರೂ ಹೂಡಿಕೆಗೆ ಕೇವಲ ಮೂರು ವರ್ಷದಲ್ಲಿ ಒಂದೂಕಾಲು ಲಕ್ಷ ರೂ ಲಾಭ ಸಿಗುವುದು ಸಣ್ಣ ವಿಷಯವಲ್ಲ. ಇಷ್ಟೇ ಮೊತ್ತದ ಹಣವನ್ನು ನೀವು ಬ್ಯಾಂಕ್ ಆರ್​ಡಿ ಸ್ಕೀಮ್​ಗೆ ಹಾಕಿದ್ದರೆ 4 ಲಕ್ಷ ರೂ ಸಿಗುತ್ತಿತ್ತು.

ಎಸ್​ಬಿಐನ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಆರಂಭವಾಗಿದ್ದೇ ಮೂರು ವರ್ಷದ ಹಿಂದೆ. 2021ರ ಆಗಸ್ಟ್ 31ರಂದು ಈ ಫಂಡ್ ಶುರುವಾಗಿದೆ. ಮೂರು ವರ್ಷದಲ್ಲಿ ಈ ಫಂಡ್ ನಿರ್ವಹಿಸುತ್ತಿರುವ ಒಟ್ಟು ನಿಧಿ 32,440 ಕೋಟಿ ರೂ ಎಂದು ತಿಳಿದುಬಂದಿದೆ. ಅಲ್ಪ ಅವಧಿಯಲ್ಲಿ ಇಷ್ಟು ಪ್ರಮಾಣದ ಹೂಡಿಕೆಯನ್ನು ಆಕರ್ಷಿಸಿರುವುದು ಸಾಮಾನ್ಯವಲ್ಲ.

ಇದನ್ನೂ ಓದಿ: ಎಸ್​ಐಪಿಯತ್ತ ಜನ ಮುಗಿಬೀಳಲು ಏನು ಕಾರಣ? ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಹೊಂದುವ ಮುನ್ನ ನೀವು ತಿಳಿಯಬೇಕಾದ್ದೇನು?

ಎಸ್​ಬಿಐ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಈಕ್ವಿಟಿ ಮತ್ತು ಡೆಟ್ ವಿಭಾಗಗಳಲ್ಲಿ ಹೂಡಿಕೆ ಮಾಡುತ್ತದೆ. ಶೇ. 39.01ರಷ್ಟು ಫಂಡ್ ಕ್ಯಾಷ್ ಸೆಕ್ಟರ್​ನಲ್ಲಿ ಹಂಚಿಕೆ ಆಗುತ್ತದೆ. ಈಕ್ವಿಟಿಯಲ್ಲಿ ಶೇ. 30.37 ಮತ್ತು ಡೆಟ್​ನಲ್ಲಿ ಶೇ. 27.07 ಫಂಡ್ ಹೂಡಿಕೆ ಆಗುತ್ತದೆ. ಶೇ. 3.54ರಷ್ಟು ಹೂಡಿಕೆ ರಿಯಲ್ ಎಸ್ಟೇಟ್​ಗೆ ಹಾಕುತ್ತದೆ. ಈ ಮೂಲಕ ಮ್ಯೂಚುವಲ್ ಫಂಡ್ ಸಮತೋಲನದ ಹೂಡಿಕೆ ಮಾಡುತ್ತದೆ. ತೀರಾ ರಿಸ್ಕಿ ಎನಿಸುವ ಹೂಡಿಕೆ ಅದರದ್ದಲ್ಲ. ಹೀಗಾಗಿ, ದಿನೇ ದಿನೇ ಈ ಮ್ಯುಚುವಲ್ ಫಂಡ್ ಹೆಚ್ಚು ಜನರ ವಿಶ್ವಾಸ ಗಳಿಸುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ