SBI: ವಾಟ್ಸಾಪ್ನಲ್ಲಿ ನಿಮ್ಮ ಎಸ್ಬಿಐ ಬ್ಯಾಂಕ್ ಸ್ಟೇಟ್ಮೆಂಟ್ ಪಡೆಯುವುದು ಹೇಗೆ? ಇಲ್ಲಿದೆ ಸಿಂಪಲ್ ವಿಧಾನ
Whatsapp Banking Of SBI: ಈಗ ಬಹುತೇಕ ಎಲ್ಲಾ ಬ್ಯಾಂಕುಗಳೂ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯ ನೀಡುತ್ತವೆ. ಎಸ್ಬಿಐನ ವಾಟ್ಸಾಪ್ ಬ್ಯಾಂಕಿಂಗ್ಗೆ ನೊಂದಾಯಿಸುವುದು ಬಹಳ ಸುಲಭ. ಒಂದು ಎಸ್ಸೆಮ್ಮೆಸ್ ಮೂಲಕ ನೀವು ಈ ಕಾರ್ಯ ಮಾಡಬಹುದು.
ಭಾರತದಲ್ಲಿ ವಾಟ್ಸಾಪ್ ಬಹುತೇಕ ಪ್ರತಿಯೊಬ್ಬ ಸ್ಮಾರ್ಟ್ಫೋನ್ ಬಳಕೆದಾರನ ಬಳಿಯೂ ಇದೆ. ಒಂದು ಅಂದಾಜು ಪ್ರಕಾರ ಭಾರತದಲ್ಲಿ 48ಕೋಟಿಗೂ ಹೆಚ್ಚು ಮಂದಿ ವಾಟ್ಸಾಪ್ ಬಳಸುತ್ತಾರೆ. ಹೀಗಾಗಿ, ವಾಟ್ಸಾಪ್ ಮೂಲಕ ಮಾಹಿತಿ ಸಂವಹನಕ್ಕೆ ಹಲವು ವ್ಯವಹಾರಗಳು ಪ್ರಯತ್ನಿಸುತ್ತವೆ. ಈ ವಿಚಾರದಲ್ಲಿ ಬ್ಯಾಂಕುಗಳೂ ಹಿಂದೆಬಿದ್ದಿಲ್ಲ. ಬಹುತೇಕ ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಸಂವಹನದ ಬಾಗಿಲು ತೆರೆದಿವೆ. ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಗ್ರಾಹಕರು ಅಕೌಂಟ್ ಬ್ಯಾಲನ್ಸ್ ಪರಿಶೀಲಿಸುವುದು, ಅಕೌಂಟ್ ಸ್ಟೇಟ್ಮೆಂಟ್ (Account Statement) ಪಡೆಯುವುದು ಸೇರಿದಂತೆ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಭಾರತದ ನಂಬರ್ ಒನ್ ಪಿಎಸ್ಯು ಬ್ಯಾಂಕ್ (Government Bank) ಎನಿಸಿದ ಎಸ್ಬಿಐ ಕೂಡ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ನೀಡುತ್ತದೆ.
ಎಸ್ಸೆಮ್ಮೆಸ್ ಮೂಲಕ ಎಸ್ಬಿಐನ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯ ಪಡೆಯಿರಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಮ್ಮ ಖಾತೆಗೆ ಜೋಡಿಸಲಾದ ಮೊಬೈಲ್ ನಂಬರ್ನಿಂದ ಒಂದು ಮೆಸೇಜ್ ಕಳುಹಿಸುವ ಮೂಲಕ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದು. 7208933148 ನಂಬರ್ ಅನ್ನು ನಿಮ್ಮ ಮೊಬೈಲ್ಗೆ ಸೇವ್ ಮಾಡಿಕೊಳ್ಳಿ. ಬಳಿಕ, WAREG <ಅಕೌಂಟ್ ನಂಬರ್> ಹೀಗೆ ಟೈಪ್ ಮಾಡಿ ಆ ಸಂಖ್ಯೆಗೆ ಎಸ್ಸೆಮ್ಮೆಸ್ ಕಳುಹಿಸಿ. ಉದಾಹರಣೆಗೆ, ನಿಮ್ಮ ಅಕೌಂಟ್ ನಂಬರ್ 1234567890 ಎಂದಿದ್ದರೆ ನೀವು WAREG 1234567890 ಎಂದು ಮೆಸೇಜ್ ಟೈಪಿಸಿ 7208933148 ನಂಬರ್ಗೆ ಸೆಂಡ್ ಮಾಡಿ.
ಆಗ ವಾಟ್ಸಾಪ್ ಬ್ಯಾಂಕಿಂಗ್ಗೆ ನಿಮ್ಮ ಮೊಬೈಲ್ ನಂಬರ್ ನೊಂದಾವಣಿ ಅದಂತಾಗುತ್ತದೆ. ಅದಕ್ಕೆ ದೃಢೀಕರಣದ ಮೆಸೇಜ್ ಕೂಡ ವಾಟ್ಸಾಪ್ಗೆ ಬರುತ್ತದೆ. ಬ್ಯಾಂಕ್ ವತಿಯಿಂದ ಯಾವ ವ್ಯಕ್ತಿಯೂ ವಾಟ್ಸಾಪ್ನಲ್ಲಿ ನಿಮ್ಮೊಂದಿಗೆ ಸಂವಹನ ನಡೆಸುವದಿಲ್ಲ. ಅದನ್ನು ಚ್ಯಾಟ್ ಬೋಟ್ಗಳು ಮಾಡುತ್ತವೆ. ಅಂದರೆ ಎಐ ತಂತ್ರಜ್ಞಾನದ ಸಹಾಯದಿಂದ ಚ್ಯಾಟ್ಬೋಟ್ಗಳ ಮೂಲಕ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಲಭ್ಯ ಇರುತ್ತವೆ.
ಎಸ್ಬಿಐನ ವಾಟ್ಸಾಪ್ ಬ್ಯಾಂಕಿಂಗ್ನಲ್ಲಿ ಏನೇನು ಸೇವೆಗಳು ಲಭ್ಯ ಇರುತ್ತವೆ?
- ಅಕೌಂಟ್ ಬ್ಯಾಲೆನ್ಸ್ ನೋಡುವುದು
- ಮಿನಿ ಸ್ಟೇಟ್ಮೆಂಟ್ ಪಡೆಯುವುದು
- ಪೆನ್ಷನ್ ಸ್ಲಿಪ್
- ವಿವಿಧ ಸಾಲಗಳ ಬಗ್ಗೆ ಮಾಹಿತಿ
- ವಿವಿಧ ಠೇವಣಿ ಸ್ಕೀಮ್ಗಳ ಮಾಹಿತಿ
- ಎನ್ಆರ್ಐ ಅಕೌಂಟ್ ಬಗ್ಗೆ ಮಾಹಿತಿ
- ಇನ್ಸ್ಟಾ ಖಾತೆಗಳನ್ನು ತೆರೆಯುವ ಬಗ್ಗೆ ಮಾಹಿತಿ
- ದೂರು ದಾಖಲಿಸಲು ಅಥವಾ ನೆರವು ಪಡೆಯಲು ಹೆಲ್ಪ್ಲೈನ್
- ಪ್ರೀ ಅಪ್ರೂವ್ಡ್ ಸಾಲಗಳ ಬಗ್ಗೆ ವಿಚಾರಣೆ
- ಡಿಜಿಟಲ್ ಬ್ಯಾಂಕಿಂಗ್ ಮಾಹಿತಿ
- ಬ್ಯಾಂಕಿಂಗ್ ಫಾರ್ಮ್ಗಳನ್ನು ಡೌನ್ಲೋಡ್ ಮಾಡಬಹುದು.
- ಬ್ಯಾಂಕ್ ರಜಾದಿನಗಳ ಪಟ್ಟಿ
- ಡೆಬಿಟ್ ಕಾರ್ಡ್ ಬಳಕೆ ಬಗ್ಗೆ ಮಾಹಿತಿ
- ಕಳುವಾದ ಕಾರ್ಡ್ ಬಗ್ಗೆ ಮಾಹಿತಿ
- ಸಮೀಪದ ಎಟಿಎಂ ಬಗ್ಗೆ ಮಾಹಿತಿ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ