AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಐಪಿಯತ್ತ ಜನ ಮುಗಿಬೀಳಲು ಏನು ಕಾರಣ? ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಹೊಂದುವ ಮುನ್ನ ನೀವು ತಿಳಿಯಬೇಕಾದ್ದೇನು?

Know about SIP: ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಅಥವಾ ಎಸ್​ಐಪಿ ಈಗ ಹೆಚ್ಚು ಟ್ರೆಂಡಿಂಗ್​ನಲ್ಲಿ ಇದೆ. ಜುಲೈನ ಒಂದೇ ತಿಂಗಳಲ್ಲಿ ಒಟ್ಟಾರೆ ಎಸ್​ಐಪಿ ಮೂಲಕ ಆಗಿರುವ ಹೂಡಿಕೆ ಒತ್ತ 23,000 ಕೋಟಿ ರೂಗೂ ಹೆಚ್ಚು. ಮಾರುಕಟ್ಟೆ ಏರಿಳಿತದ ನಡುವೆ ನಿಯಮಿತ ಹೂಡಿಕೆಗೆ ಅನುವು ಮಾಡಿಕೊಡುವ ಈ ಎಸ್​ಐಪಿ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಯುವುದು ಅವಶ್ಯಕ.

ಎಸ್​ಐಪಿಯತ್ತ ಜನ ಮುಗಿಬೀಳಲು ಏನು ಕಾರಣ? ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಹೊಂದುವ ಮುನ್ನ ನೀವು ತಿಳಿಯಬೇಕಾದ್ದೇನು?
ಮ್ಯೂಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 05, 2024 | 3:26 PM

Share

ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಎಂಬುದು ನೀವು ವ್ಯವಸ್ಥಿತವಾಗಿ ಹೂಡಿಕೆ ಮಾಡುವ ಒಂದು ಕ್ರಮ. ನೀವು ಉಳಿಸಿದ ಹಣವನ್ನು ನಿಯಮಿತವಾಗಿ ಹೂಡಿಕೆ ಮಾಡಲು ನೆರವಾಗುತ್ತದೆ. ಬ್ಯಾಂಕ್​ನಲ್ಲಿ ಆರ್​ಡಿಗಳಲ್ಲಿ ಪ್ರತೀ ತಿಂಗಳು ಹಣ ಕಟ್ಟುವಂತೆ, ಅಥವಾ ಚೀಟಿಯಲ್ಲಿ ತಿಂಗಳಿಗೆ ಹಣ ಕಟ್ಟುವಂತೆ ನೀವು ಎಸ್​ಐಪಿಯಲ್ಲಿ ನಿಯಮಿತವಾಗಿ ಹಣ ಹೂಡಿಕೆ ಮಾಡಬಹುದು. ಎಸ್​ಐಪಿ ಎಂಬುದು ಈಗ ಮ್ಯೂಚುವಲ್ ಫಂಡ್​ಗೆ ಹೆಚ್ಚು ಜೋಡಿತವಾಗಿದೆ. ಷೇರುಗಳಲ್ಲೂ ನೇರವಾಗಿ ನೀವು ಎಸ್​ಐಪಿ ಮಾಡಲು ಅವಕಾಶ ಇದೆ. ಡಿಜಿಟಲ್ ಗೋಲ್ಡ್ ಸೇರಿದಂತೆ ಯಾವುದೇ ಹೂಡಿಕೆಯಲ್ಲೂ ನೀವು ಎಸ್​ಐಪಿ ಪ್ಲಾನ್ ಮೂಲಕ ಮುಂದಡಿ ಇಡಬಹುದು.

ಈಗ ಎಸ್​ಐಪಿ ಎಂದರೆ ಹೆಚ್ಚಾಗಿ ಮ್ಯೂಚುವಲ್ ಫಂಡ್ ಎಸ್​ಐಪಿ ಎಂದೇ ಪರಿಭಾವಿಸಬಹುದು. ಯಾರಾದರೂ ಈಗ ಎಸ್​ಐಪಿಯಲ್ಲಿ ಹೂಡಿಕೆ ಮಾಡುತ್ತೇನೆ ಎಂದರೆ ಅದು ಮ್ಯೂಚುವಲ್ ಫಂಡ್ ಆಗಿರುತ್ತದೆ. ಭಾರತದಲ್ಲಿ ಎಸ್​ಐಪಿ ಮೂಲಕ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಜುಲೈ ತಿಂಗಳೊಂದರಲ್ಲೇ 23,331 ಕೋಟಿ ರೂ ಮೊತ್ತದ ಹಣವು ಎಸ್​ಐಪಿ ಮೂಲಕ ಹೂಡಿಕೆ ಆಗಿದೆ.

ಎಸ್​ಐಪಿಯಿಂದ ಅನುಕೂಲಗಳೇನು?

  • ನೀವು ಮ್ಯೂಚುವಲ್ ಫಂಡ್​ನಲ್ಲಿ ನಿಯಮಿತವಾಗಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನೀವು ಹಣ ಉಳಿಸಲು ಶುರು ಮಾಡುತ್ತೀರಿ.
  • ಮಾರುಕಟ್ಟೆಯ ಎಲ್ಲಾ ಏರಿಳಿತಗಳಲ್ಲಿ ನಿಮ್ಮ ಹೂಡಿಕೆ ಇರುತ್ತದೆ. ಇದರಿಂದ ಪಕ್ಕಾ ಸರಾಸರಿಯಾದ ಆದಾಯ ನಿಮಗೆ ಸಿಗುತ್ತದೆ.
  • ನೀವು ನಿಯಮಿತವಾಗಿ ಮತ್ತು ದೀರ್ಘಾವಧಿಗೆ ಹೂಡಿಕೆ ಮಾಡುವುದರಿಂದ ಹಣ ಬಹಳ ಚಮತ್ಕಾರ ಎನಿಸುವ ರೀತಿಯಲ್ಲಿ ಬೆಳೆಯುತ್ತದೆ. ಇದಕ್ಕೆ ಗಣಿತದಲ್ಲಿ ಕಾಂಪೌಂಡಿಂಗ್ ಎಫೆಕ್ಟ್ ಎನ್ನುತ್ತಾರೆ. ಬಡ್ಡಿಗೆ ಚಕ್ರಬಡ್ಡಿ ಸೇರುವ ರೀತಿಯಲ್ಲಿ ಹಣ ಬೆಳೆಯುತ್ತಾ ಹೋಗುತ್ತದೆ.
  • ನೀವು 500 ರೂನಷ್ಟು ಸಣ್ಣ ಮೊತ್ತದಿಂದ ಎಸ್​ಐಪಿ ಹೂಡಿಕೆ ಆರಂಭಿಸಬಹುದು. ಈಗ ಕನಿಷ್ಠ ಹೂಡಿಕೆ 250 ರೂಗೂ ಇದೆ.
  • ನೀವು ಸುಲಭವಾಗಿ ಎಸ್​ಐಪಿಯಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕ್ ಮ್ಯಾಂಡೇಟ್ ಕೊಟ್ಟುಬಿಟ್ಟರೆ ನಿಗದಿತ ದಿನಾಂಕಕ್ಕೆ ತನ್ನಂತಾನೆ ಹಣ ಕಡಿತ ಆಗುತ್ತದೆ. ಇಲ್ಲವಾದರೆ ಮ್ಯಾನುಯಲ್ ಆಗಿಯೂ ನೀವು ಎಸ್​ಐಪಿಗೆ ಹಣ ಹಾಕಬಹುದು.

ಇದನ್ನೂ ಓದಿ: ಇವತ್ತಿನ ಒಂದು ಕೋಟಿ ರೂ ಹಣದ ನಿಜ ಮೌಲ್ಯ 30 ವರ್ಷದ ಬಳಿಕ ಎಷ್ಟಾಗಬಹುದು? ಭವಿಷ್ಯದ ಭದ್ರತೆಗೆ ಇದು ಬಹಳ ಮುಖ್ಯ

ಎಸ್​ಐಪಿಯಿಂದ ಲಾಭದ ಜೊತೆ ಇರುವ ರಿಸ್ಕ್​ಗಳ್ಯಾವುವು ನೋಡಿ

  • ಷೇರು ಮಾರುಕಟ್ಟೆಯಲ್ಲಿ ಏರಿಳಿತ ಹೆಚ್ಚಿರುತ್ತದೆ. ಹೀಗಾಗಿ, ಕಿರು ಅವಧಿಗೆ ಹೂಡಿಕೆ ಮಾಡುವುದು ರಿಸ್ಕ್ ಎನಿಸುತ್ತದೆ. ಎಸ್​ಐಪಿಯಲ್ಲೂ ನೀವು ಕಿರು ಅವಧಿಯಲ್ಲಿ ನಷ್ಟವೆಂದು ತೋರುವ ಸಾಧ್ಯತೆ ಹೆಚ್ಚಿರುತ್ತದೆ. ಇದು ನಿಮಗೆ ತಿಳಿದಿರಬೇಕು.
  • ನಿಮ್ಮ ಮ್ಯೂಚುವಲ್ ಫಂಡ್ ಸಂಸ್ಥೆ ಯಾವ ಕ್ಷೇತ್ರದ ಸ್ಟಾಕ್​ಗಳ ಮೇಲೆ ಹಣ ಹಾಕಿರುತ್ತದೆ ಎಂಬುದರ ಮೇಲೆ ನಿಮ್ಮ ರಿಟರ್ನ್ಸ್ ಅವಲಂಬಿತವಾಗಿರುತ್ತದೆ.
  • ಮ್ಯೂಚುವಲ್ ಫಂಡ್​ಗಳು ವಿವಿಧ ಶುಲ್ಕಗಳನ್ನು ವಿಧಿಸುತ್ತದೆ. ಫಂಡ್ ನಿರ್ವಹಣೆ ಶುಲ್ಕವೂ ಇದರಲ್ಲಿರುತ್ತದೆ. ಇಂಡೆಕ್ಸ್ ಫಂಡ್​ಗಳಲ್ಲಿ ಇದರ ಶುಲ್ಕ ಕಡಿಮೆ ಇರುತ್ತದೆ. ಬೇರೆ ಆ್ಯಕ್ಟಿವ್ ಫಂಡ್​ಗಳಲ್ಲಿ ಇದು ಶೇ. 1ಕ್ಕಿಂತ ಕಡಿಮೆ ಇದೆಯಾ ಎಂದು ಖಚಿತಪಡಿಸಿಕೊಳ್ಳಿ. ಹಾಗೆಯೇ ಒಂದು ವರ್ಷದೊಳಗೆ ನೀವು ಹಣ ಹಿಂಪಡೆದರೆ ಎಕ್ಸಿಟ್ ಫೀ ಕಟ್ಟಬೇಕಾಗುತ್ತದೆ. ಇದು ನಿಮ್ಮ ಒಟ್ಟಾರೆ ಹೂಡಿಕೆ ಶೇ. 1ರಷ್ಟು ಹಣವಾಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ