ಬಳಕೆಯಲ್ಲಿ ಇಲ್ಲದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸುವ ಕ್ರಮ

Inactive and dormant account activation: ಎರಡು ವರ್ಷದವರೆಗೆ ಯಾವುದೇ ಹಣ ವಿತ್​ಡ್ರಾ ಆಗದೇ ಉಳಿಯುವ ಬ್ಯಾಂಕ್ ಖಾತೆಗಳನ್ನು ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಣ ಮಾಡಲಾಗುತ್ತದೆ. 10 ವರ್ಷ ಹೀಗೆ ಸ್ಥಗಿತಗೊಂಡಿರುವ ಖಾತೆಗಳ ಹಣವನ್ನು ಅನ್​ಕ್ಲೇಮ್ಡ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಡಾರ್ಮೆಂಟ್ ಆಗಿರುವ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸುವ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ...

ಬಳಕೆಯಲ್ಲಿ ಇಲ್ಲದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸುವ ಕ್ರಮ
ಹಣ
Follow us
|

Updated on: Oct 02, 2024 | 11:22 AM

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಸಾಮಾನ್ಯ. ಕೆಲವೊಮ್ಮೆ ಕೆಲ ಖಾತೆಗಳನ್ನು ನಿರ್ವಹಿಸದೇ ವರ್ಷಗಟ್ಟಲೆ ಬಿಟ್ಟಿರಬಹುದು. ನಿರ್ದಿಷ್ಟ ಅವಧಿಯವರೆಗೆ ಒಂದು ಬ್ಯಾಂಕ್ ಖಾತೆಯನ್ನು ಬಳಸದೇ ಬಿಟ್ಟರೆ ಅದು ಇನಾಪರೇಟಿವ್ ಅಥವಾ ಡಾರ್ಮಂಟ್ ಅಕೌಂಟ್ ಆಗುತ್ತದೆ. ಅಂದರೆ ನಿಷ್ಕ್ರಿಯ ಖಾತೆಯಾಗಿರುತ್ತದೆ. ಆ ಖಾತೆಯಲ್ಲಿ ಹಣ ಇದ್ದರೆ ಅದನ್ನು ಹಿಂಪಡೆಯಲು ಆಗುವುದಿಲ್ಲ. ಒಂದು ರೀತಿಯಲ್ಲಿ ಖಾತೆಯನ್ನು ಮುಟ್ಟುಗೋಲು ಹಾಕಿದ ಸ್ಥಿತಿ ಅದು. ಆರ್​ಬಿಐ ನಿಯಮಗಳ ಪ್ರಕಾರ ಎರಡು ವರ್ಷಗಳವರೆಗೆ ಯಾವುದೇ ವಹಿವಾಟು ಆಗದ ಖಾತೆಗಳನ್ನು ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಿಸಲಾಗುತ್ತದೆ.

ಅದೇ 10 ವರ್ಷ ಕಾಲ ನಿರ್ವಹಣೆ ಆಗದೇ ಉಳಿದ ಖಾತೆಯಲ್ಲಿನ ಹಣವನ್ನು ಅನ್​ಕ್ಲೇಮ್ಡ್ ಡೆಪಾಸಿಟ್ಸ್ ಎಂದೂ ವರ್ಗೀಕರಿಸಲಾಗುತ್ತದೆ. ನೀವು ಎಫ್​ಡಿ ಇಟ್ಟು ಪೂರ್ಣವಾಗಿ ಮರೆತು ಹೋಗಿದ್ದೀರಿ ಎಂದಿಟ್ಟುಕೊಳ್ಳಿ. ಆ ಠೇವಣಿ ಮೆಚ್ಯೂರ್ ಆಗಿ 10 ವರ್ಷವಾದರೂ ನೀವು ಹಿಂಪಡೆಯದೇ ಹೋದರೆ ಅದೂ ಕೂಡ ಅನ್​ಕ್ಲೇಮ್ಡ್ ಡೆಪಾಸಿಟ್ ಎಂದು ವರ್ಗೀಕೃತವಾಗುತ್ತದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರ ಗಮನಕ್ಕೆ; ಸೆಬಿ ತರುತ್ತಿದೆ ನಾಮಿನಿ, ಕೆವೈಸಿ ನಿಯಮ ಬದಲಾವಣೆ

ಇನಾಪರೇಟಿವ್ ಅಕೌಂಟ್​ ಅನ್ನು ಸಕ್ರಿಯಗೊಳಿಸುವ ಕ್ರಮಗಳು

ಗ್ರಾಹಕರು ತಮ್ಮ ಇನಾಪರೇಟಿವ್ ಬ್ಯಾಂಕ್ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬೇಕಾದರೆ ಬ್ಯಾಂಕ್ ಕಚೇರಿಗೆ ಹೋಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಅದಕ್ಕೆ ಮುನ್ನ ಕಚೇರಿಯಲ್ಲಿ ಅಕೌಂಟ್ ಆ್ಯಕ್ಟಿವೇಶನ್​ಗೆ ಅರ್ಜಿ ಮೂಲಕ ಮನವಿ ಸಲ್ಲಿಸಬೇಕು. ಬಳಿಕ ಕೆವೈಸಿ ದಾಖಲೆ ಸಲ್ಲಿಸಬೇಕು. ನಿಮ್ಮ ಅರ್ಜಿ ಸಲ್ಲಿಕೆಯಾಗಿ ಮೂರು ಕಾರ್ಯದಿನಗಳಲ್ಲಿ ಅಕೌಂಟ್ ಸಕ್ರಿಯಗೊಳ್ಳುವ ಸಾಧ್ಯತೆ ಇದೆ. ಆಕ್ಟಿವೇಟ್ ಆದಾಗ ನಿಮಗೆ ಎಸ್ಸೆಮ್ಮೆಸ್ ಅಥವಾ ಇಮೇಲ್ ಮೂಲಕ ಅಲರ್ಟ್ ಮೆಸೇಜ್ ತಲುಪುತ್ತದೆ.

ಇದನ್ನೂ ಓದಿ: ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ ಸುಕನ್ಯಾ ಸಮೃದ್ಧಿ ಅಕೌಂಟ್ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಣೆ; ಇಲ್ಲಿದೆ ಪಟ್ಟಿ

ಇನಾಪರೇಟಿವ್ ಅಕೌಂಟ್​ನ ಹಣಕ್ಕೆ ಬಡ್ಡಿ ಸಿಗುತ್ತಾ?

ಒಂದು ಖಾತೆ ನಿರ್ವಹಣೆ ಆಗದೆ ಇನಾಪರೇಟಿವ್ ಆಗಿದ್ದರೂ ಕೂಡ ಕನಿಷ್ಠ ಬಡ್ಡಿ ಸಂದಾಯವಾಗುತ್ತಾ ಹೋಗುತ್ತದೆ. ಸೇವಿಂಗ್ಸ್ ಅಕೌಂಟ್​ನ ಬಡ್ಡಿ ಸಿಗುತ್ತದೆ. ನಿಶ್ಚಿತ ಠೇವಣಿಗೂ ಕೂಡ ಮೆಚ್ಯೂರ್ ಆದ ನಂತರದ ಅವಧಿಗೆ ಆ ಹಣಕ್ಕೆ ಸೇವಿಂಗ್ಸ್ ಅಕೌಂಟ್​ನ ಬಡ್ಡಿ ಮಾತ್ರ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?