Crore in 5 Years: ಸ್ಟೆಪಪ್ ಮ್ಯಾಜಿಕ್ ತಿಳಿಯಿರಿ; ಕೇವಲ 5 ವರ್ಷದಲ್ಲಿ 1 ಕೋಟಿ ಗಳಿಸಲು ಎಷ್ಟು ಹೂಡಿಕೆ ಬೇಕು?

|

Updated on: Jan 25, 2024 | 1:11 PM

Stepup strategy for Huge Gains: ಕೋಟ್ಯಾಧೀಶ್ವರನಾಗಲು ಮೂರು ಅಂಶಗಳ ಸೂತ್ರ ಇದ್ದು ಗಳಿಕೆ, ಉಳಿಕೆ ಮತ್ತು ಹೂಡಿಕೆಯನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಿ. ನಿಮ್ಮ ಹಣದ ಅವಶ್ಯಕತೆಗಳೇನು ಎಂದು ಮೊದಲೆ ನಿರ್ಧರಿಸಿ ಅದರಂತೆ ಹೂಡಿಕೆ ಮಾಡುತ್ತಾ ಹೋಗಿ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಲು ಹೂಡಿಕೆಯಲ್ಲಿ ಸ್ಟೆಪಪ್ ತಂತ್ರವನ್ನು ಅನುಸರಿಸಿ.

Crore in 5 Years: ಸ್ಟೆಪಪ್ ಮ್ಯಾಜಿಕ್ ತಿಳಿಯಿರಿ; ಕೇವಲ 5 ವರ್ಷದಲ್ಲಿ 1 ಕೋಟಿ ಗಳಿಸಲು ಎಷ್ಟು ಹೂಡಿಕೆ ಬೇಕು?
ಹೂಡಿಕೆ
Follow us on

ಹಣ, ಆಸ್ತಿ ಯಾವತ್ತಿದ್ದರೂ ಅತ್ಯಗತ್ಯವಾದ ಸಂಪತ್ತು. ಇವತ್ತು ಸಂಪತ್ತು ಗಳಿಸಲು ಬೇಕಾದ ಮೂರಂಶಗಳ ಸೂತ್ರ (3 points money formula) ಎಂದರೆ ಅದು ಗಳಿಕೆ, ಉಳಿಕೆ ಮತ್ತು ಹೂಡಿಕೆ. ನಮ್ಮ ಹಣದ ಅಗತ್ಯಗಳನ್ನು ಮೂರು ಭಾಗಗಳಾಗಿ ಮಾಡಬಹುದು. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಅಗತ್ಯಗಳಿರುತ್ತವೆ. ಶಾಲೆಯ ಫೀಸು ಇತ್ಯಾದಿಯನ್ನು ಅಲ್ಪಾವಧಿ ಗುರಿಯಾಗಿ ನೋಡಬಹುದು. ಮನೆ, ಕಾರು ಇತ್ಯಾದಿ ಸಂಪಾದನೆಯನ್ನು ಮಧ್ಯಮಾವಧಿ ಅಗತ್ಯವೆಂದು ಪರಿಗಣಿಸಬಹುದು. ನಿವೃತ್ತಿ ಜೀವನದ ಭದ್ರತೆಗೆ ಕೂಡಿಹಾಕುವ ಹಣ ದೀರ್ಘಕಾಲೀನದ್ದು.

ಒಂದು ವೇಳೆ ನೀವು 5 ವರ್ಷದಲ್ಲಿ ಯಾವುದಾದರೂ ಕಾರ್ಯಕ್ಕಾಗಿ ಒಂದು ಕೋಟಿ ರೂ ಬೇಕಾಗಬಹುದು. ಸಾಲ ಮಾಡದೆಯೇ ಅಷ್ಟು ಹಣ ಐದು ವರ್ಷದಲ್ಲಿ ಹೇಗೆ ಸಂಪಾದಿಸಬಹುದು?

ಇದನ್ನೂ ಓದಿ: Investment: ದಿನಕ್ಕೆ ಕೇವಲ 170 ರೂ ಉಳಿಸಿ ಕೋಟ್ಯಾಧೀಶರಾಗುವುದು ಹೇಗೆ? ವ್ಯವಸ್ಥಿತವಾಗಿ ಹೂಡಿಕೆ ಮಾಡಿ

ಇವತ್ತಿನ ಹೂಡಿಕೆ ಆಯ್ಕೆಗಳೆಂದರೆ ಬ್ಯಾಂಕ್ ಡೆಪಾಸಿಟ್, ಗೋಲ್ಡ್ ಬಾಂಡ್, ಈಕ್ವಿಟಿ, ಮ್ಯೂಚುವಲ್ ಫಂಡ್ ಎಸ್​ಐಪಿ, ರಿಯಲ್ ಎಸ್ಟೇಟ್. ಇದರಲ್ಲಿ ಬ್ಯಾಂಕ್ ಡೆಪಾಸಿಟ್ ಮತ್ತು ಗೋಲ್ಡ್ ಬಾಂಡ್ ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆ. ಬ್ಯಾಂಕ್ ಡೆಪಾಸಿಟ್​ನಲ್ಲಿ ಸಿಗುವ ವಾರ್ಷಿಕ ಬಡ್ಡಿ ಕೇವಲ ಶೇ. 8ರ ಆಸುಪಾಸಿನ ದರ ಮಾತ್ರವೇ. ಮ್ಯುಚುವಲ್ ಫಂಡ್​ನಲ್ಲಿ ಎಸ್​ಐಪಿ ಮೂಲಕ ಹೂಡಿಕೆ ಮಾಡುವುದು ಉತ್ತಮ ಮಾರ್ಗ. ಶೇ 12ರಷ್ಟು ವಾರ್ಷಿಕ ದರದಲ್ಲಿ ರಿಟರ್ನ್ ನಿರೀಕ್ಷಿಸಬಹುದು.

ಹೂಡಿಕೆಯ ಹಂತ ಹಂತದ ಹೆಚ್ಚಳ ಅಥವಾ ಸ್ಟೆಪಪ್ ಇನ್ವೆಸ್ಟ್​ಮೆಂಟ್

ಹೂಡಿಕೆಯನ್ನು ವೇಗವಾಗಿ ಹೆಚ್ಚಿಸುವ ಒಂದು ಮಾರ್ಗವೆಂದರೆ ಅದು ಸ್ಟೆಪಪ್ ಇನ್ವೆಸ್ಟ್​​ಮೆಂಟ್. ಅಂದರೆ ನಿಮ್ಮ ಆದಾಯ ಹೆಚ್ಚಳಕ್ಕೆ ಅನುಗುಣವಾಗಿ ನಿಮ್ಮ ಹೂಡಿಕೆಯನ್ನೂ ಹೆಚ್ಚಿಸಬೇಕು. ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ….

ನೀವು ಐದು ವರ್ಷದ ಹೂಡಿಕೆ ಮಾಡಬೇಕೆಂದಿರುತ್ತೀರಿ. ತಿಂಗಳಿಗೆ 80,000 ರೂ ಕಟ್ಟಿಕೊಂಡು ಹೋಗುತ್ತೀರಿ. ಐದು ವರ್ಷ ಹೀಗೆ ಎಸ್​ಐಪಿ ಕಟ್ಟುತ್ತೀರಿ. ಅದು ವಾರ್ಷಿಕವಾಗಿ ಶೇ. 12ರಷ್ಟು ಬೆಳೆಯುತ್ತದೆ ಎಂದು ಭಾವಿಸಿ. ಆಗ ಐದು ವರ್ಷದ ಬಳಿಕ ನಿಮಗೆ ಸಿಗುವ ರಿಟರ್ನ್ 66 ಲಕ್ಷ ರೂ ಆಗುತ್ತದೆ.

ಇದನ್ನೂ ಓದಿ: Investment Ideas: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್

ಅದೇ ನೀವು ಸ್ಟೆಪಪ್ ತಂತ್ರ ಅನುಸರಿಸಿ ನೋಡಿ. ವರ್ಷಕ್ಕೆ ಶೇ. 20ರಷ್ಟು ಹೂಡಿಕೆ ಹೆಚ್ಚಿಸುತ್ತಾ ಹೋಗಿ. ಈ ವರ್ಷ 80,000 ರೂ ಹೂಡಿಕೆ ಮಾಡುತ್ತೀರಿ. ಮುಂದಿನ ವರ್ಷ ಶೇ. 20, ಅಂದರೆ 16,000 ರೂ ಹೆಚ್ಚುವರಿ ಹೂಡಿಕೆ ಮಾಡುತ್ತೀರಿ. ಒಟ್ಟು 96,000 ರೂ ಹೂಡಿಕೆ ಮಾಡುತ್ತೀರಿ. ಮೂರನೇ ವರ್ಷ ಇದರ ಹೂಡಿಕೆ ಮತ್ತಷ್ಟು ಹೆಚ್ಚಾಗುತ್ತದೆ.

ಈ ರೀತಿಯಾಗಿ ನೀವು 80,000 ರೂನಿಂದ ಆರಂಭಿಸಿದ ಹೂಡಿಕೆ ಐದು ವರ್ಷದಲ್ಲಿ ಒಂದು ಕೋಟಿ ಸಂಪತ್ತನ್ನು ನಿಮಗೆ ಕ್ರೋಢೀಕರಿಸುತ್ತದೆ. ಇದೇ ರೀತಿ ನೀವು ಇನ್ನೂ ಐದು ವರ್ಷ ಮುಂದುವರಿಸಿ ನೋಡಿ. ನಿಮ್ಮ ಸಂಪತ್ತು 4.28 ಕೋಟಿ ರೂ ಆಗುತ್ತದೆ. ನೀವು ಹೂಡಿಕೆ ಕಾಲಾವಧಿ ಹೆಚ್ಚಿಸಿದಷ್ಟೂ ಸಂಪತ್ತು ವೃದ್ಧಿಸುವ ವೇಗವೂ ಹೆಚ್ಚುತ್ತಾ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ