ಮೆಡಿಕಲ್ ಇನ್ಷೂರೆನ್ಸ್ನಲ್ಲಿರುವಂತೆ ಕ್ಯಾಷ್ಲೆಸ್ ಕ್ಲೈಮ್ ವ್ಯವಸ್ಥೆ (Cashless Claim Settlement) ಮೋಟಾರ್ ಇನ್ಷೂರೆನ್ಸ್ನಲ್ಲಿಯೂ ಇರುವುದು ಹೆಚ್ಚಿನ ಮಂದಿಗೆ ತಿಳಿದಿಲ್ಲದೇ ಇರಬಹುದು. ಕ್ಯಾಷ್ಲೆಸ್ ಜೊತೆಗೆ ಮಾಮೂಲಿಯ ವಿಧದ ರೀಯಿಂಬುರ್ಸ್ಮೆಂಟ್ ಸೆಟಲ್ಮೆಂಟ್ (Reimbursement) ವ್ಯವಸ್ಥೆಯೂ ಇದೆ. ಹಾನಿಯಾದ ನಿಮ್ಮ ವಾಹನಕ್ಕೆ ಕ್ಯಾಷ್ಲೆಸ್ ಸೆಟಲ್ಮೆಂಟ್ ಮೂಲಕ ಜೇಬಿಂದ ಖರ್ಚಿಲ್ಲದೇ ದುರಸ್ತಿ ಮಾಡಿಸಿಕೊಳ್ಳಬಹುದು. ಕೆಲವೊಮ್ಮೆ ದುರಸ್ತಿ ವೆಚ್ಚದ ಸ್ವಲ್ಪ ಭಾಗವನ್ನು ಕೈಯಿಂದ ಕೊಡಬೇಕಾಗಬಹುದು. ಅದೆಲ್ಲವೂ ನೀವು ಹೊಂದಿರುವ ಮೋಟಾರ್ ಇನ್ಷೂರೆನ್ಸ್ ಮೇಲೆ ಅವಲಂಬಿತವಾಗಿರುತ್ತದೆ.
ಅಪಘಾತವೋ ಅಥವಾ ಮತ್ಯಾವುದಾದರೂ ಕಾರಣಕ್ಕೆ ನಿಮ್ಮ ಕಾರಿಗೆ ಹಾನಿಯಾಗಿದ್ದಲ್ಲಿ ಮೊದಲು ಈ ಘಟನೆ ಬಗ್ಗೆ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ನೀಡಿ. ಕಂಪನಿಯ ಆ್ಯಪ್ ಅಥವಾ ಟಾಲ್ ಫ್ರೀ ನಂಬರ್ ಮೂಲಕ ವಿವರ ನೀಡಬಹುದು. ಬಳಿಕ ಇನ್ಷೂರೆನ್ಸ್ ಕಂಪನಿ ನಿಗದಿಪಡಿಸಿದ ಸಮೀಪದ ಗ್ಯಾರೇಜ್ಗೆ ಕಾರನ್ನು ಸಾಗಿಸಬೇಕು. ಅದರ ರಿಪೇರಿ ಖರ್ಚನ್ನು ವಿಮಾ ಸಂಸ್ಥೆಯೇ ಭರಿಸುತ್ತದೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ಕಾರು ಕೆಟ್ಟು ಹೋದಾಗ ಏನು ಮಾಡಬೇಕು (ವೆಬ್ ಸ್ಟೋರಿ)
ಕೆಲವೊಮ್ಮೆ ಇನ್ಷೂರೆನ್ಸ್ ಕಂಪನಿಯೇ ನಿಮ್ಮ ವಾಹನ ಸಾಗಿಸಲು ವ್ಯವಸ್ಥೆ ಮಾಡಬಹುದು. ದುರಸ್ತಿಯ ಪೂರ್ಣ ವೆಚ್ಚ, ವಾಹನ ಸಾಗಣೆ ವೆಚ್ಚ ಎಲ್ಲವನ್ನೂ ಇನ್ಷೂರೆನ್ಸ್ ಕಂಪನಿಯೇ ಭರಿಸಬಹುದು. ನೀವು ಇನ್ಷೂರೆನ್ಸ್ ಮಾಡಿಸುವಾಗ ಯಾವೆಲ್ಲಾ ಸೌಲಭ್ಯ ಇದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ. ಕೆಲ ಪಾಲಿಸಿಗಳಲ್ಲಿ ವಾಹನ ಸಾಗಣೆ ವೆಚ್ಚವು ಲೆಕ್ಕಕ್ಕೆ ಇರುವುದಿಲ್ಲ. ಶೂನ್ಯ ಸವಕಳಿ ಪಾಲಿಸಿ ಅಥವಾ ಝೀರೋ ಡಿಪ್ರಿಶಿಯೇಶನ್ ಅಂಶವನ್ನು ಇನ್ಷೂರೆನ್ಸ್ ಒಳಗೊಂಡಿದ್ದರೆ ನಿಮ್ಮ ಕಾರಿನ ದುರಸ್ತಿಗೆ ನಿಮಗಾಗುವ ವೆಚ್ಚ ಶೂನ್ಯದ್ದಾಗಿರುತ್ತದೆ.
ಮೋಟಾರ್ ಇನ್ಷೂರೆನ್ಸ್ ನೀಡುವ ಕಂಪನಿ ವಿವಿಧ ಗ್ಯಾರೇಜ್ಗಳೊಂದಿಗೆ ಟಯಪ್ ಹೊಂದಿರುತ್ತದೆ. ಆ ಗ್ಯಾರೇಜ್ಗೆ ಕಾರು ಕೊಂಡೊಯ್ದರೆ ಸುಲಭವಾಗಿ ಕ್ಯಾಷ್ಲೆಸ್ ಸೆಟಲ್ಮೆಂಟ್ ಆಗುತ್ತದೆ. ಇನ್ಷೂರೆನ್ಸ್ ಕಂಪನಿ ನೇಮಿಸಿದ ಸರ್ವೇಯರ್ವೊಬ್ಬರು ಗ್ಯಾರೇಜ್ಗೆ ಬಂದು ವಾಹನವನ್ನು ಪರಿಶೀಲಿಸಿ ಹೋಗುತ್ತಾರೆ. ಆ ಬಳಿಕ ಗ್ಯಾರೇಜ್ನವರು ದುರಸ್ತಿ ಮಾಡುತ್ತಾರೆ. ರಿಪೇರಿ ಆದ ಬಳಿಕ ಸರ್ವೇಯರ್ ಮತ್ತೊಮ್ಮೆ ಬಂದು ಮರುಪರಿಶೀಲನೆ ನಡೆಸುತ್ತಾರೆ. ಅಂತಿಮ ಬಿಲ್ ಅನ್ನು ಸೆಟಲ್ ಮಾಡಲಾಗುತ್ತದೆ.
ಇದನ್ನೂ ಓದಿ: Multibagger: 10,000 ರೂ ಹೂಡಿಕೆ, 10 ವರ್ಷದಲ್ಲಿ 4 ಲಕ್ಷ ರೂ ಆದಾಯ; ಮಲ್ಟಿಬ್ಯಾಗರ್ ಆದ ಸೊನಾಟ ಸಾಫ್ಟ್ವೇರ್
ಒಂದು ವೇಳೆ ಇನ್ಷೂರೆನ್ಸ್ ಕಂಪನಿ ನಿಗದಿಪಡಿಸಿದ ಗ್ಯಾರೇಜ್ನಲ್ಲಿ ವಾಹನ ದುರಸ್ತಿ ಬೇಡವೆನಿಸಿದರೆ ಬೇರೆ ಗ್ಯಾರೇಜ್ನಲ್ಲೂ ಮಾಡಿಸಬಹುದು. ಆಗ ಅದು ಕ್ಯಾಷ್ಲೆಸ್ ಸೆಟಲ್ಮೆಂಟ್ ಸಾಧ್ಯವಾಗುವುದಿಲ್ಲ. ಹಾನಿಯಾದ ಕಾರಿನ ಭಾಗಗಳ ಫೋಟೋ ತೆಗೆದು ಆ್ಯಪ್ಗೆ ಹಾಕಬೇಕು. ಆ ಬಳಿಕ ಇನ್ಷೂರೆನ್ಸ್ ಕಂಪನಿ ನಿಮ್ಮ ಕ್ಲೈಮ್ ಅನ್ನು ಕೂಡಲೇ ಸೆಟಲ್ ಮಾಡುತ್ತದೆ. ಬಳಿಕ ನೀವು ನಿಮ್ಮಿಷ್ಟದ ಗ್ಯಾರೇಜ್ಗೆ ತೆಗೆದುಕೊಂಡು ಹೋಗಿ ರಿಪೇರಿ ಮಾಡಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ