Petrol Diesel Price | ವಾಹನ ಸವಾರರಿಗೆ ಕೊಂಚ ರಿಲೀಫ್, ದೇಶದಲ್ಲಿ ಹೀಗಿದೆ ಪೆಟ್ರೋಲ್​, ಡೀಸೆಲ್​ ದರ!

Petrol Diesel Rate: ಫೆಬ್ರವರಿ ತಿಂಗಳ ಕೊನೆಯ ಶನಿವಾರ ಇಂಧನ ದರ ಬದಲಾವಣೆಯ ನಂತರ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ. ಸದ್ಯ, ಇಳಿಕೆಯತ್ತ ಸಾಗದಿದ್ದರೂ, ಸ್ಥಿರವಾಗಿಯಾದರೂ ದರ ಇದೆ ಎಂಬುದೇ ಗ್ರಾಹಕರ ನೆಮ್ಮದಿಗೆ ಕಾರಣ.

  • TV9 Web Team
  • Published On - 8:28 AM, 8 Mar 2021
Petrol Diesel Price | ವಾಹನ ಸವಾರರಿಗೆ ಕೊಂಚ ರಿಲೀಫ್, ದೇಶದಲ್ಲಿ ಹೀಗಿದೆ ಪೆಟ್ರೋಲ್​, ಡೀಸೆಲ್​ ದರ!
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದಲ್ಲಿ ಒಂದು ವಾರದಿಂದ ದರ ಬದಲಾವಣೆಗಳಿಲ್ಲ.‌ ಹಿಂದಿನ ತಿಂಗಳ ಅಂದರೆ ಫೆಬ್ರವರಿ ತಿಂಗಳ ಕೊನೆಯ ಶನಿವಾರ ದರ ಬದಲಾವಣೆಯ ನಂತರ ಇಂಧನ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರಿಗೆ 94.22 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದ ತಿಂಗಳ ಕೊನೆಯ ಶನಿವಾರ ಪೆಟ್ರೋಲ್ ದರ 23 ರಿಂದ 25 ಪೈಸೆಯಂತೆ ಹೆಚ್ಚಳವಾಗಿತ್ತು. ಡೀಸೆಲ್ ಬೆಲೆ 24 ರಿಂದ 26 ಪೈಸೆ ಪ್ರತಿ ಲೀಟರಿಗೆ ಏರಿಕೆಯಾಗಿತ್ತು.

ಒಡಿಶಾದ ಭುವನೇಶ್ವರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗಿದ್ದು. ಪ್ರತಿ ಲೀಟರ್ ಪೆಟ್ರೋಲ್ ದರ 92.19 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್ ದರ 89.07 ರೂಪಾಯಿ ಇತ್ತು. ಇಳಿಕೆ ಕಂಡ ನಂತರ ಪೆಟ್ರೋಲ್ ಬೆಲೆ ಇದೀಗ 91.90 ರೂಪಾಯಿ ಹಾಗೂ ಡೀಸೆಲ್ ದರ 88.79 ರೂಪಾಯಿಗೆ ತಲುಪಿದೆ. ಕೊಂಚ ಇಳಿಕೆಯತ್ತ ಇಂಧನ ದರ ಸಾಗಿರುವುದು ಭುವನೇಶ್ವರದ ಇಂಧನ ಗ್ರಾಹಕರಿಗೆ ಖುಷಿಯುಂಟು ಮಾಡಿದೆ.

ಮೆಟ್ರೋ ನಗರಗಳಾದ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 91.17 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 97.57 ರೂಪಾಯಿ ಆಗಿದೆ. ಕೋಲ್ಕತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್ 91.35 ರೂಪಾಯಿ, ಚೆನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 93.11 ರೂಪಾಯಿಗೆ ಮಾರಾಟವಾಗುತ್ತಿದೆ.

ಡೀಸೆಲ್ ದರ ದೆಹಲಿಯಲ್ಲಿ ಪ್ರತಿ ಲೀಟರ್‌ 81.47 ರೂಪಾಯಿ ತಲುಪಿದೆ. ಮುಂಬೈನಲ್ಲಿ ಪ್ರತಿ ಲೀಟರ್​ ಡೀಸೆಲ್​ ಬೆಲೆ 88.60 ರೂಪಾಯಿಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಡೀಸೆಲ್​ ಬೆಲೆ 84.35 ರೂಪಾಯಿ ಹಾಗೂ ಚೆನ್ನೈನಲ್ಲಿ ಪ್ರತಿ ಲೀಟರ್​ ಡೀಸೆಲ್ 86.455 ರೂಪಾಯಿ ತಲುಪಿದೆ.

ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್​ ದರ 
ಶ್ರೀಗಂಗನಗರದಲ್ಲಿ ಪೆಟ್ರೋಲ್​ ದರ ಶತಕ ಬಾರಿಸಿದ್ದು ಪ್ರತಿ ಲೀಟರಿಗೆ 101.84 ರೂಪಾಯಿ ಆಗಿದೆ. ಅನುಪ್ಪುರದಲ್ಲಿ ಪ್ರತಿ ಲೀಟರಿಗೆ 101.59 ರೂಪಾಯಿ ಇದೆ. ಹೈದರಾಬಾದ್​ನಲ್ಲಿ ದರ ಪ್ರತಿ ಲೀಟರಿಗೆ 94.79 ರೂಪಾಯಿ ಆಗಿದೆ. ಪಾಟ್ನಾದಲ್ಲಿ 93.48 ರೂಪಾಯಿ, ಜೈಪುರದಲ್ಲಿ 97.72 ರೂಪಾಯಿ ಲಕ್ನೋದಲ್ಲಿ 89.31 ರೂಪಾಯಿ ಹಾಗೂ ತಿರುವನಂತಪುರಂನಲ್ಲಿ 93.05 ರೂಪಾಯಿಗೆ ಮಾರಾಟವಾಗುತ್ತಿದೆ.

ದೇಶದ ವಿವಿಧ ನಗರದಲ್ಲಿ ಡೀಸೆಲ್​ ದರ 
ಶ್ರೀಗಂಗನಗರದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 93.77 ರೂಪಾಯಿ, ಅನುಪ್ಪುರದಲ್ಲಿ 91.97 ರೂಪಾಯಿಗೆ ಮಾರಾಟವಾಗುತ್ತಿದೆ. ಹೈದರಾಬಾದ್​ನಲ್ಲಿ ಪ್ರತಿ ಲೀಟರ್​ ದರ 88.86 ರೂಪಾಯಿ, ಪಾಟ್ನಾ 86.73 ರೂಪಾಯಿ, ಜೈಪುರದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 89.98 ರೂಪಾಯಿ, ಲಕ್ನೋದಲ್ಲಿ 81.53 ರೂಪಾಯಿ ಹಾಗೂ ತಿರುವನಂತಪುರಂನಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 87.53 ರೂಪಾಯಿಗೆ ಮಾರಾಟವಾಗುತ್ತಿದೆ.

ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಇಂಧನ ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ. 2.62 ಏರಿಕೆ ಕಂಡು 69.36 ಯುಎಸ್ ಡಾಲರ್ ಪ್ರತಿ ಬ್ಯಾರೆಲ್​ನಷ್ಟಿದೆ. ಭಾರತ ಸರ್ಕಾರ ಮೂಲ ಬೆಲೆಯ ಶೇ. 125 ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರೂಪಾಯಿ ನಷ್ಟಿದೆ.

ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಅದೆಷ್ಟೋ ಪ್ರತಿಭಟನೆಗಳು ನಡೆದರೂ, ಗ್ರಾಹಕರ ಹಿಡಿ ಶಾಪ ಬಿದ್ದರೂ ಇಂಧನ ದರ ಇಳಿಕೆಯತ್ತ ಮುಖ ಮಾಡುವಂತೆ ಕಾಣುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಒಂದು ವಾರದಿಂದ ದರ ಹೆಚ್ಚಳವಾಗದೇ ಸ್ಥಿರವಾಗಿರುವುದು ಗ್ರಾಹಕರಿಗೆ ನೆಮ್ಮದಿಯ ವಿಚಾರ.

ಇದನ್ನೂ ಓದಿ: Petrol Diesel Price | ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರಿಗೆ 94.22 ರೂಪಾಯಿ

ಇದನ್ನೂ ಓದಿ: Petrol Diesel Price | ಪೆಟ್ರೋಲ್ ದರ ನರ್ವಸ್ ನೈಂಟೀಸ್​​ನಲ್ಲಿ.. ಶತಕ ಗ್ಯಾರೆಂಟಿ ಎಂದು ಗ್ರಾಹಕರು ಕಂಗಾಲು!