Petrol Diesel Price: ಪೆಟ್ರೋಲ್​, ಡೀಸೆಲ್​ ದರ ಸ್ಥಿರ! ಪೆಟ್ರೋಲ್​ ಒಂದು ವರ್ಷದಲ್ಲಿ 21ರೂಪಾಯಿ ಹೆಚ್ಚಳ

Petrol Diesel Rate in Bangalore: ಕಳೆದ ಫೆಬ್ರವರಿ ತಿಂಗಳಿನಲ್ಲಿ ಇಂಧನ ದರ ಏರಿಕೆಯ ನಂತರದಲ್ಲಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಸತತ 13 ದಿನಗಳ ಕಾಲ ಇಂಧನ ದರ ಸ್ಥಿರತೆ ಕಾಪಾಡಿಕೊಂಡಿದೆ. ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಪೆಟ್ರೋಲ್​ 21 ರೂಪಾಯಿಯಷ್ಟು ಏರಿಕೆ ಕಂಡಿದೆ.

Petrol Diesel Price: ಪೆಟ್ರೋಲ್​, ಡೀಸೆಲ್​ ದರ ಸ್ಥಿರ! ಪೆಟ್ರೋಲ್​ ಒಂದು ವರ್ಷದಲ್ಲಿ 21ರೂಪಾಯಿ ಹೆಚ್ಚಳ
ಸಾಂದರ್ಭಿಕ ಚಿತ್ರ


ಬೆಂಗಳೂರು: ಮಾರ್ಚ್​ ತಿಂಗಳ ಪ್ರಾರಂಭದಿಂದ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಮುಂಬೈನಲ್ಲಿ ಪೆಟ್ರೋಲ್​ ದರ 100 ರೂಪಾಯಿ ತಲುಪುವ ಹಂತದಲ್ಲಿದೆ. ಬೆಂಗಳೂರಿನಲ್ಲಿ ಪೆಟ್ರೋಲ್​ ದರ 94.22 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೂ ಡೀಸೆಲ್ ದರ 86.37 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್​ 21 ರೂಪಾಯಿಯಷ್ಟು ಏರಿಕೆ ಕಂಡಿದೆ. ಕಳೆದ ತಿಂಗಳು ಅಂದರೆ ಫೆಬ್ರವರಿ 27ರಂದು ದರ ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 24 ಪೈಸೆ ಮತ್ತು ಡೀಸೆಲ್​ ಪ್ರತಿ ಲೀಟರಿಗೆ 15 ಪೈಸೆ ಹೆಚ್ಚಳದ ನಂತರದಲ್ಲಿ ಇಂಧನ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ.

ಎರಡು ರಾಜ್ಯಗಳಲ್ಲಿ ಪೆಟ್ರೋಲ್​ 100 ಗಡಿ ದಾಟಿದೆ. ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ದರ ಗರಿಷ್ಠ ಮಟ್ಟ ತಲುಪಿರುವುದನ್ನು ಕಾಣಬಹುದು. ರಾಜಸ್ಥಾನದ ಶ್ರೀಗಂಗನಗರದಲ್ಲಿ ಪೆಟ್ರೋಲ್​ 101.84 ರೂಪಾಯಿ ಹಾಗೂ ಡೀಸೆಲ್​ ದರ ಪ್ರತಿ ಲೀಟರಿಗೆ 93.77 ರೂಪಾಯಿ ಆಗಿದೆ. ಹಾಗೆಯೇ ಮಧ್ಯಪ್ರದೇಶದ ಅನುಪ್ಪೂರಿನಲ್ಲಿ ಪೆಟ್ರೋಲ್​ ಪ್ರತಿ ಲೀಟರಿಗೆ 101.59 ರೂಪಾಯಿ ಹಾಗೂ ಡೀಸೆಲ್​ ಪ್ರತಿ ಲೀಟರಿಗೆ 91.97 ರೂಪಾಯಿಗೆ ಮಾರಾಟವಾಗುತ್ತಿದೆ.

ಕಳೆದ 13 ದಿನಗಳಿಂದ ಪೆಟ್ರೋಲ್​, ಡೀಸೆಲ್​ ದರ ಸ್ಥಿರ
ದೆಹಲಿಯಲ್ಲಿ ಪೆಟ್ರೋಲ್​ ದರಪ್ರತಿ ಲೀಟರಿಗೆ 91.17 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 97.47 ರೂಪಾಯಿ ಆಗಿದೆ. ಇನ್ನು, ಕೊಲ್ಕತ್ತದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 91.35 ರೂಪಾಯಿಗೆ ಮಾರಾಟವಾಗುತ್ತಿದ್ದು, ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 13 ದಿನಗಳಿಂದ 93.11 ರೂಪಾಯಿ ಆಗಿದೆ.

ಭಾರತದ ವಿವಿಧ ನಗರಗಳಾದ ಭೂಪಾಲ್​ನಲ್ಲಿ ಪೆಟ್ರೋಲ್​ 99.21 ರೂಪಾಯಿ ಇದ್ದು ಇನ್ನೇನು ಶತಕದ ಹಾದಿಯಲ್ಲಿದೆ. ಹಾಗೂ ಡೀಸೆಲ್​ 89.76 ರೂಪಾಯಿಗೆ ಮಾರಾಟವಾಗುತ್ತಿದೆ. ರಾಂಚಿಯಲ್ಲಿ ಪೆಟ್ರೋಲ್​ 88.54 ರೂಪಾಯಿ ಹಾಗೂ ಡೀಸೆಲ್​ 86.37 ರೂಪಾಯಿಗೆ ಮಾರಾಟವಾಗುತ್ತಿದೆ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್​ ದರ 93.48 ರೂಪಾಯಿ ಹಾಗೂ ಡೀಸೆಲ್​ 86.73 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 89.31 ರೂಪಾಯಿ ಹಾಗೂ ಡೀಸೆಲ್​ 81.85 ರೂಪಾಯಿಗೆ ಮಾರಾಟವಾಗುತ್ತಿದೆ.

2021ರಲ್ಲಿ ಇಂಧನ ದರ ಏರಿಕೆ
ಫೆಬ್ರವರಿಯಲ್ಲಿ ತಿಂಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರವನ್ನು 16 ಬಾರಿ ಏರಿಸಲಾಗಿದೆ. ಫೆಬ್ರವರಿ 1ರಂದು ದೆಹಲಿಯಲ್ಲಿ ಪೆಟ್ರೋಲ್​ ದರ ಲೀಟರಿಗೆ 86.30 ರೂಪಾಯಿ ಇದ್ದು, ಅಂದಿನಿಂದ 4.87 ರೂಪಾಯಿ ಏರಿಕೆ ಕಂಡಿದೆ. ಕಳೆದ ಜನವರಿ ತಿಂಗಳಿನಲ್ಲಿ ಇಂಧನ ದರ ಏರಿಕೆ ಕಂಡಿತ್ತು. ಜನವರಿ 1ರಂದು ಪೆಟ್ರೋಲ್​ ದರ 83.71 ರೂಪಾಯಿ ಇದ್ದು, ಇಂದು ಪ್ರತಿ ಲೀಟರಿಗೆ 91.17 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆಯೇ ಡೀಸೆಲ್​ ದರ ಜನವರಿ 1ರಂದು ಪ್ರತಿ ಲೀಟರಿಗೆ 73.87 ರೂಪಾಯಿಗೆ ಮಾರಾಟವಾಗುತ್ತಿತ್ತು. ಇದೀಗ ದರ 81.47 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.

ಪೆಟ್ರೋಲ್​ 1 ವರ್ಷದಲ್ಲಿ 21ರೂಪಾಯಿ ಏರಿಕೆ
ಹಿಂದಿನ ವರ್ಷದ ದರವನ್ನು ಗಮನಿಸಿದಾಗ 2020 ಮಾರ್ಚ್​ರಂದು ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 70.14 ರೂಪಾಯಿಗೆ ಮಾರಾಟವಾಗುತ್ತಿತ್ತು. ಅದೇ ಈ ವರ್ಷದಲ್ಲಿ ಅಂದರೆ 2021 ಮಾರ್ಚ್​ 12ರವರೆಗೆ 21.03 ರೂಪಾಯಿ ಏರಿಕೆ ಕಂಡಿದೆ. ಹಾಗೂ ಡೀಸೆಲ್​ 2020 ಮಾರ್ಚ್​ 12ರಂದು ಪ್ರತಿ ಲೀಟರಿಗೆ 62.89 ರೂಪಾಯಿಗೆ ಮಾರಾಟವಾಗಿತ್ತು. ಇಂದಿನ ವರ್ಷ ಅಂದರೆ 2021 ಮಾರ್ಚ್​ 12ಕ್ಕೆ ದರ ಹೋಲಿಸಿದರೆ 18.58 ರೂಪಾಯಿ ಏರಿಕೆ ಕಂಡಿದೆ.

ಇದನ್ನೂ ಓದಿ: Petrol Diesel Price | ಆರು ದಿನಗಳ ಕಾಲ ಸ್ಥಿರತೆ ಕಾಪಾಡಿಕೊಂಡ ಪೆಟ್ರೋಲ್​ ದರ; ಜಿಎಸ್​ಟಿ ವ್ಯಾಪ್ತಿಗೆ ತಂದರೆ ಇಂಧನ ದರ ಇಳಿಕೆ!

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್​ ಬೆಲೆ