Petrol- Diesel Price: ಮುಂದಿನ ವಾರ ತೈಲ ದರ ಪರಿಷ್ಕರಣೆ ಶುರು; ಲೀಟರ್ ಪೆಟ್ರೋಲ್ ರೂ. 175 ಆದರೂ ಅಚ್ಚರಿಯಿಲ್ಲ
ರಷ್ಯಾ- ಉಕ್ರೇನ್ ಮಧ್ಯದ ಬಿಕ್ಕಟ್ಟು ಹೀಗೆ ಮುಂದುವರಿದಲ್ಲಿ ಜಾಗತಿಕವಾಗಿ ಪೂರೈಕೆ ವ್ಯತ್ಯಯ ಏರ್ಪಟ್ಟು, ಭಾರತದಲ್ಲಿ ಪೆಟ್ರೋಲ್ ಲೀಟರ್‌ಗೆ 150 ರೂಪಾಯಿಯಿಂದ 175 ರೂಪಾಯಿ ಮಟ್ಟಬಹುದು. ಅದು ಹೇಗೆ ಎಂಬ ವಿವರ ಇಲ್ಲಿದೆ.
ರಷ್ಯಾ- ಉಕ್ರೇನ್ ಬಿಕ್ಕಟ್ಟು (Russia- Ukraine War) ಹೀಗೇ ತೀವ್ರವಾದಲ್ಲಿ ಭಾರತದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 150…175ರತ್ತ ಸಾಗಿದರೂ ಅಚ್ಚರಿ ಇಲ್ಲ. ಏಕೆಂದರೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಬ್ಯಾರೆಲ್‌ಗೆ 100 ಯುಎಸ್ಡಿ ದಾಟಿದ ಕಾರಣ ಲೀಟರ್‌ಗೆ ಸದ್ಯಕ್ಕೆ ಇರುವ 9 ರೂಪಾಯಿಯ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಮುಂದಿನ ವಾರ, ರಾಜ್ಯ ಚುನಾವಣೆಗಳು ಮುಗಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಪುನರಾರಂಭ ಆಗುವ ಸಾಧ್ಯತೆಯಿದೆ. ಉಕ್ರೇನ್‌ನಲ್ಲಿನ ಸಂಘರ್ಷ ಅಥವಾ ಪಾಶ್ಚಿಮಾತ್ಯ ದೇಶಗಳು ಪ್ರತೀಕಾರದ ನಿರ್ಬಂಧಗಳಿಂದ ಇಂಧನ ದೈತ್ಯ ದೇಶವಾದ ರಷ್ಯಾದಿಂದ ತೈಲ ಮತ್ತು ಅನಿಲ ಪೂರೈಕೆಗೆ ಅಡ್ಡಿ ಆಗಬಹುದು ಎಂಬ ಆತಂಕದಿಂದ 2014ರ ಮಧ್ಯದ ನಂತರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 110 ಯುಎಸ್ಡಿಗಿಂತ ಮೇಲೇರಿದೆ. ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಸೆಲ್ (PPAC) ಮಾಹಿತಿ ಪ್ರಕಾರ, ಮಾರ್ಚ್ 1 ರಂದು ಭಾರತವು ಖರೀದಿಸುವ ಕಚ್ಚಾ ತೈಲದ ಬುಟ್ಟಿಯು ಪ್ರತಿ ಬ್ಯಾರೆಲ್‌ಗೆ 102 ಯುಎಸ್ಡಿಗಿಂತ ಹೆಚ್ಚಿದ್ದು, 2014ರ ಆಗಸ್ಟ್ ನಂತರದಲ್ಲಿನ ಅತ್ಯಧಿಕ ಬೆಲೆ ಆಗಿದೆ.
ಕಳೆದ ವರ್ಷದ ನವೆಂಬರ್ ಆರಂಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಣೆಯನ್ನು ನಿಲ್ಲಿಸುವ ಸಮಯದಲ್ಲಿ ಭಾರತೀಯ ಬ್ಯಾಸ್ಕೆಟ್ ಕಚ್ಚಾ ತೈಲದ ಪ್ರತಿ ಬ್ಯಾರೆಲ್ ಬೆಲೆ ಸರಾಸರಿ 81.5 ಯುಎಸ್ಡಿಗೆ ಗೆ ಇದು ಹೋಲಿಸುತ್ತದೆ. “ಮುಂದಿನ ವಾರದಲ್ಲಿ ರಾಜ್ಯ ಚುನಾವಣೆಗಳು ನಡೆಯುವುದರಿಂದ ದೈನಂದಿನ ಇಂಧನ ಬೆಲೆ ಏರಿಕೆಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಪುನರಾರಂಭಗೊಳ್ಳುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ,” ಎಂಬುದಾಗಿ ಜೆಪಿ ಮೋರ್ಗನ್ ವರದಿಯಲ್ಲಿ ತಿಳಿಸಲಾಗಿದೆ. ಉತ್ತರಪ್ರದೇಶ ವಿಧಾನಸಭೆಗೆ ಏಳನೇ ಮತ್ತು ಅಂತಿಮ ಹಂತದ ಮತದಾನ ಮಾರ್ಚ್ 7ರಂದು ಮತ್ತು ಮತಗಳ ಎಣಿಕೆ ಮಾರ್ಚ್ 10ರಂದು ನಡೆಯಲಿದೆ. ಸರ್ಕಾರಿ ಸ್ವಾಮ್ಯದ ಇಂಧನ ರೀಟೇಲ್ ವ್ಯಾಪಾರಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ಗೆ (HPCL) ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 5.70 ರೂಪಾಯಿ ನಷ್ಟವಾಗುತ್ತಿದೆ. ಇದು ಅವರ ಸಾಮಾನ್ಯ ಮಾರ್ಜಿನ್ ಪ್ರತಿ ಲೀಟರ್‌ಗೆ ರೂ. 2.50 ಅನ್ನು ಗಣನೆಗೆ ತೆಗೆದುಕೊಳ್ಳದೆ.
ತೈಲ ಮಾರುಕಟ್ಟೆ ಕಂಪೆನಿಗಳು ಸಾಮಾನ್ಯ ಮಾರ್ಕೆಟಿಂಗ್ ಮಾರ್ಜಿನ್‌ಗಳಿಗೆ ಮರಳಲು ರೀಟೇಲ್ ಬೆಲೆಗಳು ಲೀಟರ್‌ಗೆ ರೂ. 9 ಅಥವಾ ಶೇಕಡಾ 10ರಷ್ಟು ಹೆಚ್ಚಾಗಬೇಕು ಎಂದು ಬ್ರೋಕರೇಜ್ ಹೇಳಿದೆ. “ಸಣ್ಣ ಅಬಕಾರಿ ಸುಂಕ ಕಡಿತ (ಪ್ರತಿ ಲೀಟರ್‌ಗೆ ರೂ. 1-3) ಮತ್ತು ರೀಟೇಲ್ ಬೆಲೆ ಏರಿಕೆ (ಲೀಟರ್‌ಗೆ ರೂ 5-8) ಸಂಯೋಜನೆಯು ಪ್ರತಿ ಬ್ಯಾರೆಲ್ ತೈಲಕ್ಕೆ USD 100ರ ಪಾಸ್-ಥ್ರೂ ಅನ್ನು ಪ್ರತಿಬಿಂಬಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂಬುದಾಗಿ ಅದು ಹೇಳಿದೆ. ರಷ್ಯಾವು ಯುರೋಪಿನ ನೈಸರ್ಗಿಕ ಅನಿಲದ ಮೂರನೇ ಒಂದು ಭಾಗವನ್ನು ಮತ್ತು ಜಾಗತಿಕ ತೈಲ ಉತ್ಪಾದನೆಯ ಸುಮಾರು ಶೇ 10ರಷ್ಟನ್ನು ಹೊಂದಿದೆ. ಯುರೋಪ್‌ಗೆ ರಷ್ಯಾದ ಅನಿಲ ಸರಬರಾಜಿನ ಮೂರನೇ ಒಂದು ಭಾಗವು ಸಾಮಾನ್ಯವಾಗಿ ಉಕ್ರೇನ್ ದಾಟುವ ಪೈಪ್‌ಲೈನ್‌ಗಳ ಮೂಲಕ ಹೋಗುತ್ತದೆ. ಆದರೆ ಭಾರತಕ್ಕೆ, ರಷ್ಯಾದ ಸರಬರಾಜುಗಳು ಬಹಳ ಕಡಿಮೆ ಶೇಕಡಾವಾರು ಪ್ರಮಾಣವನ್ನು ಹೊಂದಿವೆ.
ಭಾರತವು 2021ರಲ್ಲಿ ರಷ್ಯಾದಿಂದ ದಿನಕ್ಕೆ 43,400 ಬ್ಯಾರೆಲ್‌ಗಳ ತೈಲವನ್ನು ಆಮದು ಮಾಡಿಕೊಂಡಿದ್ದರೆ (ಅದರ ಒಟ್ಟಾರೆ ಆಮದಿನ ಶೇಕಡಾ 1), 2021ರಲ್ಲಿ 1.8 ಮಿಲಿಯನ್ ಟನ್‌ಗಳಲ್ಲಿ ರಷ್ಯಾದಿಂದ ಕಲ್ಲಿದ್ದಲು ಆಮದು ಎಲ್ಲ ಕಲ್ಲಿದ್ದಲು ಆಮದುಗಳ ಶೇಕಡಾ 1.3 ರಷ್ಟಿದೆ. ಭಾರತವು ರಷ್ಯಾದ ಗಾಜ್‌ಪ್ರೊಮ್‌ನಿಂದ ವರ್ಷಕ್ಕೆ 2.5 ಮಿಲಿಯನ್ ಟನ್‌ಗಳಷ್ಟು ಎಲ್‌ಎನ್‌ಜಿಯನ್ನು ಖರೀದಿಸುತ್ತದೆ. ಆದರೆ ಭಾರತಕ್ಕೆ ರಷ್ಯಾದ ಸರಬರಾಜುಗಳು ಬಹಳ ಕಡಿಮೆ ಶೇಕಡಾವಾರು ಪ್ರಮಾಣವನ್ನು ಹೊಂದಿವೆ. ಸದ್ಯಕ್ಕೆ ಪೂರೈಕೆಗಳು ಭಾರತಕ್ಕೆ ಸ್ವಲ್ಪ ಚಿಂತೆ ಎನಿಸಿದರೂ ಬೆಲೆಗಳು ಕಳವಳಕ್ಕೆ ಕಾರಣವಾಗಿವೆ. ದೇಶೀಯ ಇಂಧನ ಬೆಲೆಗಳು – ಭಾರತವು ತನ್ನ ತೈಲ ಅಗತ್ಯಗಳಲ್ಲಿ ಶೇ 85ರಷ್ಟನ್ನು ಆಮದು ಮಾಡಿಕೊಳ್ಳುವುದರಿಂದ ಅಂತರರಾಷ್ಟ್ರೀಯ ತೈಲ ಬೆಲೆಗಳೊಂದಿಗೆ ನೇರವಾಗಿ ಸಂಬಂಧ ಹೊಂದಿದೆ – ಸತತ 118 ದಿನಗಳವರೆಗೆ ದಾಖಲೆಯ ಪರಿಷ್ಕರಣೆ ಮಾಡಿಲ್ಲ.
ದೈನಂದಿನ ಆಧಾರದ ಮೇಲೆ ಪೆಟ್ರೋಲ್- ಡೀಸೆಲ್ ದರಗಳನ್ನು ಪರಿಷ್ಕರಿಸಲಾಗುವುದು. ಆದರೆ ಉತ್ತರಪ್ರದೇಶ, ಪಂಜಾಬ್ ಮತ್ತು ಇತರ ಮೂರು ರಾಜ್ಯಗಳಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಚುನಾವಣಾ ಪ್ರಚಾರ ಪ್ರಾರಂಭವಾದ ಮೇಲೆ ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ದರಗಳನ್ನು ಸ್ಥಗಿತಗೊಳಿಸಿದವು. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 95.41 ರೂಪಾಯಿ ಮತ್ತು ಡೀಸೆಲ್ ಬೆಲೆ 86.67 ರೂಪಾಯಿ ಇದ್ದು, ರಾಜ್ಯ ಸರ್ಕಾರದಿಂದ ಅಬಕಾರಿ ಸುಂಕ ಕಡಿತ ಮತ್ತು ವ್ಯಾಟ್ ದರದಲ್ಲಿ ಕಡಿತದ ನಂತರ ಈ ಬೆಲೆಗೆ ಬಂದು ನಿಂತಿದೆ.
ಈ ತೆರಿಗೆ ಕಡಿತದ ಮೊದಲು ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 110.04 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತ್ತು ಮತ್ತು ಡೀಸೆಲ್ ರೂ. 98.42ಕ್ಕೆ ಬಂದಿತು. ಈ ದರಗಳು ಅಕ್ಟೋಬರ್ 26, 2021ರಂದು ಬ್ರೆಂಟ್ ಪ್ರತಿ ಬ್ಯಾರೆಲ್‌ಗೆ 86.40 ಯುಎಸ್ಡಿ ಗರಿಷ್ಠ ಏರಿಕೆಗೆ ಅನುಗುಣವಾಗಿದೆ. ಬ್ರೆಂಟ್ ನವೆಂಬರ್ 5, 2021ರಂದು 82.74 ಯುಎಸ್ಡಿ ಆಗಿತ್ತು. ಅದು ಕುಸಿಯಲು ಪ್ರಾರಂಭಿಸುವ ಮೊದಲು ಮತ್ತು ಡಿಸೆಂಬರ್‌ನಲ್ಲಿ ಬ್ಯಾರೆಲ್‌ಗೆ 68.87 ಯುಎಸ್ಡಿ ಅನ್ನು ಮುಟ್ಟಿತು. ಜೆಪಿ ಮೋರ್ಗನ್ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ವೇಳೆಗೆ ತೈಲವು ಬ್ಯಾರೆಲ್‌ಗೆ 86 ಯುಎಸ್ಡಿಗೆ ಇಳಿಯುವುದನ್ನು ಕಂಡರೂ ರಷ್ಯಾದ ಇಂಧನ ರಫ್ತುಗಳು ಸ್ಥಗಿತಗೊಳ್ಳುವ ಸನ್ನಿವೇಶದಲ್ಲಿ ಇದು 150 ಯುಎಸ್ಡಿ ಅನ್ನು ಮುಟ್ಟಬಹುದು.
“ಸಂಕ್ಷಿಪ್ತವಾಗಿ ಹೇಳುವುದಾದರೆ, ರಷ್ಯಾದ ತೈಲ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಸಂದರ್ಭದಲ್ಲಿ (ಇದು ಇರಾನ್ ರಫ್ತುಗಳ ಪುನರಾರಂಭ ಮತ್ತು ಕಾರ್ಯತಂತ್ರದ ತೈಲ ನಿಕ್ಷೇಪಗಳ ಬಳಕೆಯಿಂದ ಭಾಗಶಃ ಸರಿದೂಗಿಸಲ್ಪಟ್ಟಿದೆ), ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 150 ಯುಎಸ್ಡಿಗೆ ಏರುತ್ತದೆ ಎಂದು ಊಹಿಸಲಾಗಿದೆ.” ಆದರೂ ನಿರ್ಬಂಧಗಳಿಂದ ಇಂಧನಕ್ಕೆ ವಿನಾಯಿತಿ ನೀಡಿ ಇತರ ವಲಯಗಳಲ್ಲಿ ತೀವ್ರಗೊಂಡವು. ನಮ್ಮ ಬೇಸ್‌ಲೈನ್ ದೃಷ್ಟಿಕೋನವೆಂದರೆ 2Q22 (ಏಪ್ರಿಲ್-ಜೂನ್) ನಲ್ಲಿ ಕಚ್ಚಾ ಬೆಲೆಗಳು ಸರಾಸರಿ 110 ಯುಎಸ್ಡಿಗೆ ಏರುತ್ತದೆ ಮತ್ತು ಮಧ್ಯಂತರದಲ್ಲಿ ಬೆಲೆಗಳು 120 ಯುಎಸ್ಡಿಗೆ ಏರಿಕೆಯಾಗುತ್ತವೆ. ಏಕೆಂದರೆ ತೈಲ ಪೂರೈಕೆ ಮೊಟಕುಗೊಳಿಸುವಂಥ ರಷ್ಯಾದ ಪ್ರತೀಕಾರದ ಕ್ರಮದಿಂದಾಗಿ ಹೀಗಾಗಬಹುದು,” ಎಂದು ಅದು ಹೇಳಿದೆ.
ಇದನ್ನೂ ಓದಿ: Oil Price: ಜಾಗತಿಕ ತೈಲ ಬೆಲೆ 8 ವರ್ಷಗಳ ಗರಿಷ್ಠ ಮಟ್ಟಕ್ಕೆ; ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಗೆ ಸಿದ್ಧರಾಗಿ ಮಹಾಜನರೇ