Petrol Price: ರಾಜಸ್ಥಾನದಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ.. ಸಿಲಿಕಾನ್ ಸಿಟಿಯೂ ಶತಕದ ಹಾದಿಯತ್ತ!

Petrol Diesel Rate: ಕಳೆದ ಕೆಲವು ದಿನಗಳಿಂದ ಸತತವಾಗಿ ಇಂಧನದ ಬೆಲೆ ಏರಿಕೆಯತ್ತ ಸಾಗುತ್ತಲೇ ಇದೆ. ಇದೀಗ ಇಂದು (ಗುರವಾರ) ರಾಜಸ್ಥಾನದಲ್ಲಿ ಪೆಟ್ರೋಲ್ ದರ ಶತಕ ಬಾರಿಸಿ ಗರಿಷ್ಠ ಮಟ್ಟ ತಲುಪಿದೆ. ಇದೇ ರೀತಿ ದರ ಹೆಚ್ಚಳವಾಗುತ್ತಿದ್ದರೆ ಬೆಂಗಳೂರಿನಲ್ಲೂ ಸಹ ಶತಕ ಬಾರಿಸುವ ಯಾವುದೇ ಸಂದೇಹವಿಲ್ಲ.

  • TV9 Web Team
  • Published On - 9:39 AM, 18 Feb 2021
Petrol Price: ರಾಜಸ್ಥಾನದಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ.. ಸಿಲಿಕಾನ್ ಸಿಟಿಯೂ ಶತಕದ ಹಾದಿಯತ್ತ!
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸತತವಾಗಿ ಇಂಧನದ ಬೆಲೆ ಏರಿಕೆಯತ್ತ ಸಾಗುತ್ತಲೇ ಇದೆ. ಇದೀಗ ಇಂದು (ಗುರವಾರ) ರಾಜಸ್ಥಾನದ ಶ್ರೀಗಂಗನಗರದಲ್ಲಿ ಪೆಟ್ರೋಲ್ ದರ ಶತಕ ಬಾರಿಸಿದ್ದು, ಪ್ರತಿ ಲೀ. ಪೆಟ್ರೋಲ್​ ಬೆಲೆ 25 ಪೈಸೆ ಹೆಚ್ಚಳದೊಂದಿಗೆ ದರ ₹100.13 ಆಗಿದೆ. ಡೀಸೆಲ್ ದರ ₹ 92.13 ಆಗಿದ್ದು, ಡೀಸೆಲ್ ಕೂಡಾ ಶತಕ ಭಾರಿಸುವ ಹಾದಿಯಲ್ಲಿ ಸಾಗುತ್ತಿದೆ.

ಕಳೆದ ತಿಂಗಳು ರಾಜ್ಯ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಇಂಧನಗಳಲ್ಲಿ ಶೇ.2ರಷ್ಟು ಕಡಿತಗೊಳಿಸಿದ್ದರೂ ಕೂಡಾ ರಾಜಸ್ಥಾನ ಅತಿ ಹೆಚ್ಚು ವ್ಯಾಟ್​ ದರವನ್ನು ಹೊಂದಿದೆ. ಉತ್ತರ ರಾಜಸ್ಥಾನದಲ್ಲಿರುವ ಶ್ರೀಗಂಗನಗರಕ್ಕೆ ಜೋದ್​ಪುರ್ ಮತ್ತು ಜೈಪುರ ಡಿಪೋಗಳಿಂದ ಇಂಧನವನ್ನು ಪೂರೈಸಲಾಗುತ್ತಿದ್ದು, ಇಂದು ರಾಜಸ್ಥಾನ ಪೆಟ್ರೋಲ್​ ದರದಲ್ಲಿ ಶತಕ ಭಾರಿಸಿ ಗರಿಷ್ಠ ಮಟ್ಟ ತಲುಪಿದೆ.

ಇದನ್ನೂ ಓದಿ: Petrol Price Today: ಸತತ 9ನೇ ದಿನ ಪೆಟ್ರೋಲ್ ದರ ಏರಿಕೆ.. 25 ಪೈಸೆ ಹೆಚ್ಚಳ!

ಭಾರತದಲ್ಲಿ ಗುರವಾರವೂ ಕೂಡಾ ಇಂಧನದ ದರ ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 34 ಪೈಸೆ ಹೆಚ್ಚಳವಾಗಿದೆ. ಇದೀಗ ಪ್ರತಿ ಲೀ.ಗೆ ₹89.88 ಹಾಗೂ ಡೀಸೆಲ್ ದರದಲ್ಲಿ 32 ಪೈಸೆ ಹೆಚ್ಚಳವಾಗಿದ್ದು ಇದೀಗ ₹80.27 ಆಗಿದೆ. ಬೆಂಗಳೂರಿನಲ್ಲೂ ಕೂಡಾ ಅದೆಷ್ಟೋ ಪ್ರತಿಭಟನೆ, ಧರಣಿ ನಡೆದಿದ್ದರೂ ಕೂಡಾ ಯಾವುದಕ್ಕೂ ಕ್ಯಾರೇ ಅನ್ನದೇ ದರ ಏರಿಕೆಯತ್ತ ಓಡುತ್ತಿದೆ. ಇದೀಗ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ ₹92.54 ಹಾಗೂ ಡೀಸೆಲ್ ₹85.07 ಇದೆ.