Petrol Price Today: ಏಪ್ರಿಲ್​ 8ರಂದು ವಿವಿಧ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಹೀಗಿದೆ!

Petrol Diesel Price Today in Bengaluru: ಏಪ್ರಿಲ್ 8ನೇ ತಾರೀಕಿನಂದು ಪೆಟ್ರೋಲ್​, ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ವಿವಿಧ ನಗರದಲ್ಲಿ ಇಂಧನ ದರ ಎಷ್ಟಿದೆ ಎಂಬುದರ ವಿವರ ಇಲ್ಲಿದೆ.

  • TV9 Web Team
  • Published On - 9:14 AM, 8 Apr 2021
Petrol Price Today: ಏಪ್ರಿಲ್​ 8ರಂದು ವಿವಿಧ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಹೀಗಿದೆ!
ಪಿಟಿಐ ಚಿತ್ರ

ಬೆಂಗಳೂರು: ಏಪ್ರಿಲ್ ತಿಂಗಳ ಪ್ರಾರಂಭದಿಂದ ಇಂದಿನವರೆಗೆ ಪೆಟ್ರೋಲ್​, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಸತತವಾಗಿ 9ನೇ ದಿನವೂ ಇಂಧನ ದರ ಬದಲಾಗಿಲ್ಲ. ಕಚ್ಚಾ ತೈಲ ಅಂತಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್​ಗೆ 63 ಡಾಲರ್​ಗೆ ಕುಸಿದಿದೆ. ಇದರಿಂದ ದೇಶದಲ್ಲಿ ಪೆಟ್ರೋಲ್​, ಡೀಸೆಲ್​ ದರ ಇಳಿಯಬಹುದು ಎಂಬ ನಿರೀಕ್ಷೆಯಿದೆ. ಇದಕ್ಕೂ ಮೊದಲು ಮಾರ್ಚ್​ ತಿಂಗಳಿನಲ್ಲಿ ಪೆಟ್ರೋಲ್​ಮತ್ತು ಡೀಸೆಲ್​ ದರವನ್ನು ಮೂರು ಬಾರಿ ಕಡಿತಗೊಳಿಸಲಾಗಿತ್ತು. ತದನಂತರ ಇಂಧನ ದರ ಇಳಿಯಲೇ ಇಲ್ಲ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.59 ರೂಪಾಯಿ ಹಾಗೂ ಪ್ರತಿಲೀಟರ್​ ಡೀಸೆಲ್​ ದರ 85.75 ರೂಪಾಯಿ ಇದೆ. 

ಮಾರ್ಚ್​ ತಿಂಗಳಿನಲ್ಲಿ 61 ಪೈಸೆಯಷ್ಟು ಪೆಟ್ರೋಲ್​ ದರ ಕುಸಿತ
ಮಾರ್ಚ್​ ತಿಂಗಳ 30ನೇ ತಾರೀಕಿನಂದು ಕೊನೆಯದಾಗಿ ಪೆಟ್ರೋಲ್​, ಡೀಸೆಲ್​ ಬೆಲೆ ಬದಲಾಗಿತ್ತು. ಆಗ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 22 ಕುಸಿತ ಕಂಡಿತು. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರ 23 ಪೈಸೆ ಇಳಿಕೆಯಾಗಿತ್ತು. ಮಾರ್ಚ್​ನಲ್ಲಿ ಮೂರು ಸಲ ಇಂಧನ ದರ ಕುಸಿತ ಕಂಡಿದ್ದು, ಪೆಟ್ರೋಲ್​ನಲ್ಲಿ ಒಟ್ಟೂ 61 ಪೈಸೆ ಹಾಗೂ ಡೀಸೆಲ್​ ಒಟ್ಟೂ 60 ಪೈಸೆ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ ಕಂಡಿರುವುದರಿಂದ ಪೆಟ್ರೋಲ್​, ಡೀಸೆಲ್​ ದರ ಇಳಿಕೆ ಕಂಡಿತ್ತು.

ಕಚ್ಚಾ ತೈಲ ದರ ಬ್ಯಾರೆಲ್​ಗೆ 71 ಡಾಲರ್​ನಿಂದ 63 ಡಾಲರ್​ಗೆ ಕುಸಿದಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ 16 ಬಾರಿ ಏರಿಕೆ ಕಂಡಿದೆ. ದರ ಏರಿಕೆಯಿಂದಾಗಿ ಇಂಧನ ಗರಿಷ್ಠ ಮಟ್ಟ ತಲುಪಿದೆ. ಕೆಲವು ನಗರಗಳಲ್ಲಿ ಇಂಧನ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು ಶತಕ ಬಾರಿಸಿದೆ.

9 ದಿನಗಳಿಂದಲೂ ಪೆಟ್ರೋಲ್​, ಡೀಸೆಲ್​ ದರ ಸ್ಥಿರ
ದೆಹಲಿಯಲ್ಲಿ ಸತತ 9 ದಿನಗಳವರೆಗೆ ಪ್ರತಿ ಲೀಟರ್​ ಪೆಟ್ರೋಲ್​ ದರ 90.65 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಅನ್ನು ಗ್ರಾಹಕರು 96.98 ರೂಪಾಯಿ ಕೊಟ್ಟು ಕೊಳ್ಳುತ್ತಿದ್ದಾರೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 90.77 ರೂಪಾಯಿ ಹಾಗೂ ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.58 ರೂಪಾಯಿ ಇದೆ.

ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್​-ಡೀಸೆಲ್​ ದರ
ಇಲ್ಲಿಯವರೆಗೆ ಮಾರ್ಚ್​ ತಿಂಗಳಿನಲ್ಲಿ ಒಟ್ಟು ಮೂರು ಬಾರಿ ಪೆಟ್ರೋಲ್​, ಡೀಸೆಲ್ ದರ ಏರಿಕೆಯಾಗಿದೆ. ಆದರೆ ಅದಕ್ಕೂ ಮೊದಲು ಫೆಬ್ರವರಿ ತಿಂಗಳಿನಲ್ಲಿ ಪೆಟ್ರೋಲ್ ದರವನ್ನು 16 ಬಾರಿ ಹೆಚ್ಚಿಸಲಾಗಿದೆ. ಜೊತೆಗೆ ಕಳೆದ ಜನವರಿ ತಿಂಗಳಿನಲ್ಲಿ ಇಂಧನ ದರವನ್ನು 10 ಬಾರಿ ಹೆಚ್ಚಿಸಲಾಗಿತ್ತು. ಒಟ್ಟು ಇಲ್ಲಿಯವರೆಗೆ ಪೆಟ್ರೋಲ್​, ಡೀಸೆಲ್​ ದರವನ್ನು 26 ದಿನ ಹೆಚ್ಚಿಸಲಾಗಿದೆ.

ವಿವಿಧ ನಗರದ ಪೆಟ್ರೋಲ್​ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ

https://tv9kannada.com/business/diesel-price-today.html

(Petrol Price Today in Delhi Mumbai Chennai and Bangalore Diesel price on 8th April 2021)