Toll system: ಜರ್ಮನಿ ಮಾದರಿಯಲ್ಲಿ ಟೋಲ್ ವ್ಯವಸ್ಥೆ ಭಾರತದಲ್ಲಿ ಜಾರಿಗೆ ತರಲು ಸಿದ್ಧತೆ; ಏನಿದು ಹೊಸ ಚಿಂತನೆ?

| Updated By: Srinivas Mata

Updated on: Jun 11, 2022 | 9:31 PM

ಜರ್ಮನಿ ರೀತಿಯಲ್ಲಿ ಭಾರತದಲ್ಲಿ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಏನಿದು ವ್ಯವಸ್ಥೆ ಎಂಬುದರ ವಿವರ ಇಲ್ಲಿದೆ.

Toll system: ಜರ್ಮನಿ ಮಾದರಿಯಲ್ಲಿ ಟೋಲ್ ವ್ಯವಸ್ಥೆ ಭಾರತದಲ್ಲಿ ಜಾರಿಗೆ ತರಲು ಸಿದ್ಧತೆ; ಏನಿದು ಹೊಸ ಚಿಂತನೆ?
ಸಾಂದರ್ಭಿಕ ಚಿತ್ರ
Follow us on

ಏಪ್ರಿಲ್ 1ರಿಂದ ಟೋಲ್ (Toll) ತೆರಿಗೆ ಹೆಚ್ಚಳದ ಹೊರೆ ಎದುರಿಸುತ್ತಿರುವ ಚಾಲಕರಿಗೆ ಶೀಘ್ರದಲ್ಲೇ ದುಬಾರಿ ಟೋಲ್​ಗಳಿಂದ ಮುಕ್ತಿ ಪಡೆಯುವ ಭರವಸೆ ಹೆಚ್ಚಿದೆ. ಫಾಸ್​ಟ್ಯಾಗ್ (FASTag) ವ್ಯವಸ್ಥೆ ರದ್ದುಪಡಿಸಿ, ಟೋಲ್ ಸಂಗ್ರಹಕ್ಕೆ ಹೊಸ ವ್ಯವಸ್ಥೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಎಷ್ಟು ಕಿಲೋಮೀಟರ್‌ಗಳಷ್ಟು ಓಡುತ್ತದೆಯೋ ಅದಕ್ಕೆ ಮಾತ್ರ ಟೋಲ್ ಅನ್ನು ಪಾವತಿಸಬೇಕಾಗುತ್ತದೆ. ಜರ್ಮನಿ, ರಷ್ಯಾದಂತಹ ಯುರೋಪಿಯನ್ ರಾಷ್ಟ್ರಗಳಲ್ಲಿ ಈ ವ್ಯವಸ್ಥೆ ಮೂಲಕ ಟೋಲ್ ಸಂಗ್ರಹಿಸಲಾಗುತ್ತಿದೆ. ಈ ದೇಶಗಳಲ್ಲಿ ಈ ವ್ಯವಸ್ಥೆ ಯಶಸ್ವಿ ಆಗಿರುವುದರಿಂದ ಭಾರತದಲ್ಲೂ ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.

ವಾಹನಗಳಲ್ಲಿ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆ

ಸದ್ಯಕ್ಕೆ, ಒಂದು ಟೋಲ್‌ನಿಂದ ಇನ್ನೊಂದು ಟೋಲ್‌ಗೆ ಇರುವ ಅಂತರದ ಸಂಪೂರ್ಣ ಮೊತ್ತವನ್ನು ವಾಹನಗಳಿಂದ ಸಂಗ್ರಹಿಸಲಾಗುತ್ತದೆ. ಅಲ್ಲಿಗೆ ಹೋಗದಿದ್ದರೂ ಮತ್ತು ಪ್ರಯಾಣವು ಮಧ್ಯದಲ್ಲಿ ಎಲ್ಲೋ ಮುಗಿದಿದ್ದರೂ ಟೋಲ್ ಅನ್ನು ಸಂಪೂರ್ಣವಾಗಿ ಪಾವತಿಸಬೇಕಾಗುತ್ತದೆ. ಇದೀಗ ಕೇಂದ್ರ ಸರ್ಕಾರವು ಉಪಗ್ರಹ ಸಂಚಾರ ವ್ಯವಸ್ಥೆಯಿಂದ ಟೋಲ್ ತೆರಿಗೆ ಸಂಗ್ರಹಿಸಲು ಹೊರಟಿದೆ. ಇದರ ಪ್ರಾಯೋಗಿಕ ಯೋಜನೆ ನಡೆಯುತ್ತಿದೆ. ಈ ವ್ಯವಸ್ಥೆಯಡಿ ಹೆದ್ದಾರಿಯಲ್ಲಿ ವಾಹನ ಸಂಚರಿಸುವ ಕಿಲೋಮೀಟರ್​ಗೆ ಅನುಗುಣವಾಗಿ ಟೋಲ್ ಪಾವತಿಸಬೇಕಾಗುತ್ತದೆ.

ಟೋಲ್ ಸಂಗ್ರಹ ಹೀಗೇ ಇರುತ್ತದೆ

ಜರ್ಮನಿಯಲ್ಲಿನ ಬಹುತೇಕ ಎಲ್ಲ ವಾಹನಗಳು (ಶೇ 98.8ರಷ್ಟು) ಉಪಗ್ರಹ ಸಂಚಾರ ವ್ಯವಸ್ಥೆಯನ್ನು ಇನ್​ಸ್ಟಾಲ್ ಮಾಡಿಕೊಂಡಿವೆ. ವಾಹನವು ಟೋಲ್ ರಸ್ತೆಗೆ ಪ್ರವೇಶಿಸಿದ ತಕ್ಷಣ ತೆರಿಗೆ ಲೆಕ್ಕಾಚಾರ ಪ್ರಾರಂಭವಾಗುತ್ತದೆ. ವಾಹನವು ಹೆದ್ದಾರಿಯಿಂದ ಟೋಲ್ ಇಲ್ಲದ ರಸ್ತೆಗೆ ಚಲಿಸಿದ ತಕ್ಷಣ ಆ ಕಿಲೋಮೀಟರ್‌ನ ಟೋಲ್ ಅನ್ನು ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಟೋಲ್ ಕಡಿತಗೊಳಿಸುವ ವ್ಯವಸ್ಥೆಯು ಫಾಸ್​ಟ್ಯಾಗ್‌ನಂತೆಯೇ ಇರುತ್ತದೆ. ಸದ್ಯಕ್ಕೆ, ಭಾರತದಲ್ಲಿ ಶೇ 97ರಷ್ಟು ವಾಹನಗಳಿಗೆ ಫಾಸ್​ಟ್ಯಾಗ್‌ನಿಂದ ಟೋಲ್ ವಿಧಿಸಲಾಗುತ್ತಿದೆ.

ಹೊಸ ವ್ಯವಸ್ಥೆ ಜಾರಿಗೆ ತರುವ ಮುನ್ನ ಸಾರಿಗೆ ನೀತಿಯಲ್ಲೂ ಬದಲಾವಣೆ ತರಬೇಕಿದೆ. ಇದಕ್ಕೆ ಬೇಕಾದ ಅಂಶಗಳನ್ನು ತಜ್ಞರು ಸಿದ್ಧಪಡಿಸುತ್ತಿದ್ದಾರೆ. ಪ್ರಾಯೋಗಿಕ ಯೋಜನೆಯಲ್ಲಿ ದೇಶಾದ್ಯಂತ 1.37 ಲಕ್ಷ ವಾಹನಗಳನ್ನು ಒಳಪಡಿಸಲಾಗಿದೆ. ರಷ್ಯಾ ಮತ್ತು ದಕ್ಷಿಣ ಕೊರಿಯಾದ ತಜ್ಞರು ಅಧ್ಯಯನ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಮುಂದಿನ ಕೆಲವು ವಾರಗಳಲ್ಲಿ ಈ ವರದಿ ಬಿಡುಗಡೆಯಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 5 ದಿನದಲ್ಲಿ 75 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಮೂಲಕ ಗಿನ್ನೆಸ್ ದಾಖಲೆ; ಏನಿದರ ವಿಶೇಷತೆ?

Published On - 9:31 pm, Sat, 11 June 22