ಡೆಲ್, ಫಾಕ್ಸ್ಕಾನ್ ಸೇರಿದಂತೆ 27 ಕಂಪನಿಗಳಿಗೆ ಪಿಎಲ್ಐ ಸ್ಕೀಮ್ನಲ್ಲಿ ಹಾರ್ಡ್ವೇರ್ ಉತ್ಪಾದನೆಗೆ ಅನುಮತಿ
PLI Scheme for IT Hardware Manufacturing: ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯಾದ ಪಿಎಲ್ಐ ಸ್ಕೀಮ್ನ ಎರಡನೇ ಆವೃತ್ತಿಯಲ್ಲಿ ಐಟಿ ಹಾರ್ಡ್ವೇರ್ ಕ್ಷೇತ್ರದ 27 ಕಂಪನಿಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಈ ಐಟಿ ಹಾರ್ಡ್ವೇರ್ ಪಿಎಲ್ಐ ಸ್ಕೀಮ್ನಲ್ಲಿ ನಡೆಯುವ ಉತ್ಪಾದನೆಯಲ್ಲಿ 50,000 ನೇರ ಉದ್ಯೋಗ ಒಳಗೊಂಡಂತೆ ಒಟ್ಟು 2 ಲಕ್ಷ ಉದ್ಯೋಗಾವಕಾಶ ಇರುತ್ತದೆ. 3.5 ಲಕ್ಷ ಮೌಲ್ಯದ ಐಟಿ ಹಾರ್ಡ್ವೇರ್ ಉತ್ಪನ್ನಗಳು ಭಾರತದಲ್ಲಿ ತಯಾರಾಗಲಿವೆ.
ನವದೆಹಲಿ, ನವೆಂಬರ್ 19: ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯಾದ ಪಿಎಲ್ಐ ಸ್ಕೀಮ್ನ (PLI 2.0) ಎರಡನೇ ಆವೃತ್ತಿಯಲ್ಲಿ ಐಟಿ ಹಾರ್ಡ್ವೇರ್ ತಯಾರಿಕೆಗೆ (IT hardware manufacturing) 27 ಕಂಪನಿಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ (Union Minister Ashwini Vaishnaw) ಈ ವಿಚಾರವನ್ನು ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ‘ಲ್ಯಾಪ್ಟಾಪ್, ಪಿಸಿ, ಟ್ಯಾಬ್ಲೆಟ್ ಮತ್ತು ಸರ್ವರ್ಗಳ ಪಿಎಲ್ಐ ಸ್ಕೀಮ್ ಅಡಿಯಲ್ಲಿ ನರೇಂದ್ರ ಮೋದಿ ಅವರ ಮೇಡ್ ಇನ್ ಇಂಡಿಯಾ ಯೋಜನೆಗೆ 27 ಕಂಪನಿಗಳು ಕೈಜೋಡಿಸಿವೆ,’ ಎಂದು ಎ ವೈಷ್ಣವ್ ತಿಳಿಸಿದ್ದಾರೆ. ಈ 27 ಕಂಪನಿಗಳಲ್ಲಿ ಡೆಲ್, ಹೆಚ್ಪಿ, ಸಹಸ್ರ, ಫಾಕ್ಸ್ಕಾನ್ ಮೊದಲಾದವು ಸೇರಿವೆ.
‘ಇವತ್ತಿನ ಘೋಷಣೆಯು ಐಟಿ ಹಾರ್ಡ್ವೇರ್ ಕ್ಷೇತ್ರದಲ್ಲಿ ನಮ್ಮನ್ನು ಮುಖ್ಯ ಪಾತ್ರಧಾರಿಯನ್ನಾಗಿ ಮಾಡುತ್ತದೆ. ಲ್ಯಾಪ್ಟಾಪ್, ಸರ್ವರ್, ಟ್ಯಾಬ್ಲೆಟ್ ಮೊದಲಾದ ಐಟಿ ಹಾರ್ಡ್ವೇರ್ ಸಾಧನಗಳನ್ನು ಈ ಪಿಎಲ್ಐ ಸ್ಕೀಮ್ ಅಡಿಯಲ್ಲಿ ತಯಾರಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ನಾವು ದೊಡ್ಡ ಶಕ್ತಿಯಾಗಲಿದ್ದೇವೆ. ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ನಾವು ಈಗಾಗಲೇ 105 ಬಿಲಿಯನ್ ಡಾಲರ್ನಷ್ಟು ದೊಡ್ಡದಿದ್ದೇವೆ. ಮುಂದಿನ ಕೆಲ ವರ್ಷಗಳಲ್ಲಿ 300 ಬಿಲಿಯನ್ ಡಾಲರ್ ಗಾತ್ರದಷ್ಟು ಈ ಕ್ಷೇತ್ರ ಬಹಳ ಬೇಗ ಬೆಳವಣಿಗೆ ಆಗಲಿದೆ,’ ಎಂದು ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ.
27 companies have joined PM @narendramodi Ji’s ‘Make in India’ program under PLI scheme for manufacturing laptops, PCs, tablets and servers. pic.twitter.com/yuUw0PwIWc
— Ashwini Vaishnaw (@AshwiniVaishnaw) November 18, 2023
ಐಟಿ ಹಾರ್ಡ್ವೇರ್ ಉತ್ಪಾದನೆಯ ಪಿಎಲ್ಐ ಸ್ಕೀಮ್ನಲ್ಲಿ ಅನುಮೋದನೆ ಪಡೆದ ಕಂಪನಿಗಳಿವು
- ಡೆಲ್ ಇಂಟರ್ನ್ಯಾಷನಲ್ ಸರ್ವಿಸಸ್ ಇಂಡಿಯಾ ಪ್ರೈ ಲಿ
- ರೈಸಿಂಗ್ ಸ್ಟಾರ್ಸ್ ಹೈಟೆಕ್ ಪ್ರೈ ಲಿ (ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್)
- ಎಚ್ಪಿ ಇಂಡಿಯಾ ಸೇಲ್ಸ್ ಪ್ರೈ ಲಿ
- ಫ್ಲೆಕ್ಸ್ಟ್ರಾನಿಕ್ಸ್ ಟೆಕ್ನಾಲಜೀಸ್ ಪ್ರೈ ಲಿ
- ಪ್ಯಾಡ್ಜೆಟ್ ಎಲೆಕ್ಟ್ರಾನಿಕ್ಸ್
- ಸೋಜೋ ಮ್ಯಾನುಫ್ಯಾಕ್ಚರಿಂಗ್ ಸರ್ವಿಸಸ್
- ವಿವಿಡಿಎನ್ ಟೆಕ್ನಾಲಜೀಸ್
- ಗೂಡ್ವರ್ತ್ ಎಲೆಕ್ಟ್ರಾನಿಕ್ಸ್
- ನಿಯೋಲಿಂಕ್ ಟೆಲಿಕಮ್ಯೂನಿಕೇಶನ್ಸ್ ಪ್ರೈ ಲಿ
- ಸೈಮ್ರಾ ಎಸ್ಜಿಎಸ್ ಟೆಕ್ನಾಲಜಿ ಲಿ
- ಭಗವತಿ ಪ್ರಾಡಕ್ಟ್ಸ್
- ನೆಟ್ವೆಬ್ ಟೆಕ್ನಾಲಜೀಸ್
- ಜೀನಸ್ ಎಲೆಕ್ಟ್ರೋಟೆಕ್ ಲಿ
- ಸಹಸ್ರ ಎಲೆಕ್ಟ್ರಾನಿಕ್ ಸಲ್ಯೂಶನ್ಸ್
- ಹ್ಯಾಂಗ್ಸಿನೆ ಟೆಕ್ನೋಸಾಫ್ಟ್
- RIOT ಲ್ಯಾಬ್ಜ್
- ಸ್ಮೈಲ್ ಎಲೆಕ್ಟ್ರಾನಿಕ್ಸ್ ಲಿ
- ಎಗಾ ನೆಟ್ವರ್ಕ್ಸ್ ಪ್ರೈ ಲಿ
- ಪ್ಲುಮೇಜ್ ಸಲ್ಯೂಶನ್ಸ್ ಪ್ರೈ
- ಎಚ್ಎಲ್ಬಿಎಸ್ ಟೆಕ್ ಪ್ರೈ ಲಿ
- ಪ್ಯಾನೇಚ್ ಡಿಜಿಲೈಫ್
- ಆರ್ಡಿಪಿ ವರ್ಕ್ಸ್ಟೇಶನ್ಸ್ ಪ್ರೈ
- ಕೇಯ್ನೆಸ್ ಎಲೆಕ್ಟ್ರಾನಿಕ್ಸ್
- ಐಎನ್ಪಿ ಟೆಕ್ನಾಲಜೀಸ್
- ಆಪ್ಟಿಯೆಮಸ್ ಟೆಲಿಕಮ್ಯೂನಿಕೇಶನ್
- ಐಟಿಐ ಲಿ
- ಸ್ಯಾನ್ಕ್ರಾಫ್ಟ್ ಇಂಡಸ್ಟ್ರೀಸ್
ಇದನ್ನೂ ಓದಿ: ಭಾರತ ಈ ವಿಶ್ವದ ಹೊಸ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಲಿದೆ: ಫಾಕ್ಸ್ಕಾನ್ ವಿಶ್ವಾಸ
ಈ ಐಟಿ ಹಾರ್ಡ್ವೇರ್ ಪಿಎಲ್ಐ ಸ್ಕೀಮ್ನಲ್ಲಿ ನಡೆಯುವ ಉತ್ಪಾದನೆಯಲ್ಲಿ 50,000 ನೇರ ಉದ್ಯೋಗ (direct employment) ಒಳಗೊಂಡಂತೆ ಒಟ್ಟು 2 ಲಕ್ಷ ಉದ್ಯೋಗಾವಕಾಶ ಇರುತ್ತದೆ. 3.5 ಲಕ್ಷ ಮೌಲ್ಯದ ಐಟಿ ಹಾರ್ಡ್ವೇರ್ ಉತ್ಪನ್ನಗಳು ಭಾರತದಲ್ಲಿ ತಯಾರಾಗಲಿವೆ. ಭಾರತದ ಆರ್ಥಿಕತೆಗೆ ಈ ಕಂಪನಿಗಳಿಂದ 3,000 ಕೋಟಿ ರೂನಷ್ಟು ಬಂಡವಾಳ ಬರಲಿದೆ ಎಂದು ಅಂದಾಜು ಮಾಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ