Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ವರ್ಷದಿಂದ ವಹಿವಾಟು ಕಾಣದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳೆಷ್ಟು? ಜನ್ ಧನ್ ಖಾತೆಗಳೆಷ್ಟು? ಇಲ್ಲಿದೆ ಡೀಟೇಲ್ಸ್

PM Jan Dhan Accounts: ಪಿಎಂ ಜನ್ ಧನ್ ಯೋಜನೆ ಅಡಿ ಭಾರತದಲ್ಲಿ ಕಳೆದ 9 ವರ್ಷಗಳಿಂದ 50 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಪೈಕಿ ಶೇ. 20ರಷ್ಟು ಖಾತೆಗಳು ಡಾರ್ಮಂಟ್ ಸ್ಥಿತಿಯಲ್ಲಿವೆ. ಅಂದರೆ ಕಳೆದ 2 ವರ್ಷದಿಂದ ಯಾವುದೇ ವಹಿವಾಟು ಆ ಖಾತೆಯಿಂದ ಆಗಿಲ್ಲ. ಜನ್ ಧನ್ ಖಾತೆ ಹೊರತುಪಡಿಸಿದರೆ ಬೇರೆ ಬ್ಯಾಂಕ್ ಖಾತೆಗಳಲ್ಲೂ ಶೇ. 20ರಷ್ಟವು ನಿಷ್ಕ್ರಿಯ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಎರಡು ವರ್ಷದಿಂದ ವಹಿವಾಟು ಕಾಣದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳೆಷ್ಟು? ಜನ್ ಧನ್ ಖಾತೆಗಳೆಷ್ಟು? ಇಲ್ಲಿದೆ ಡೀಟೇಲ್ಸ್
ಬ್ಯಾಂಕ್ ಖಾತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 29, 2023 | 6:18 PM

ನವದೆಹಲಿ, ಆಗಸ್ಟ್ 29: ಕೇಂದ್ರ ಸರ್ಕಾರ 2014ರಲ್ಲಿ ಜಾರಿಗೆ ತಂದ ಪಿಎಂ ಜನ್ ಧನ್ ಯೋಜನೆಯಲ್ಲಿ ಬಹಳ ಹೆಚ್ಚಿನ ಖಾತೆಗಳು ನಿಷ್ಕ್ರಿಯ ಸ್ಥಿತಿಯಲ್ಲಿವೆ. ಸರ್ಕಾರದಿಂದ ಬಿಡುಗಡೆ ಆಗಿರುವ ಮಾಹಿತಿ ಪ್ರಕಾರ ಪಿಎಂ ಜನ್ ಧನ್ ಯೋಜನೆಯಲ್ಲಿ (PM Jan Dhan Yojana) ಆರಂಭವಾಗಿರುವ ಬ್ಯಾಂಕ್ ಖಾತೆಗಳ ಪೈಕಿ ಶೇ. 18ರಿಂದ 20ರಷ್ಟು ಖಾತೆಗಳು ಡಾರ್ಮಂಟ್ ಸ್ಥಿತಿಯಲ್ಲಿವೆ. ಅಂದರೆ, ಎರಡು ವರ್ಷದಿಂದ ಈ ಖಾತೆಗಳ ಮೂಲಕ ಯಾವುದೇ ವಹಿವಾಟು ನಡೆದಿಲ್ಲ. ಒಟ್ಟಾರೆ 50 ಕೋಟಿಗೂ ಹೆಚ್ಚು ಜನ್ ಧನ್ ಖಾತೆಗಳಿದ್ದು, ಈ ಪೈಕಿ ಸುಮಾರು 10 ಕೋಟಿ ಖಾತೆಗಳು ಇನಾಪರೇಟಿವ್ ಆಗಿವೆ ಎನ್ನಲಾಗಿದೆ.

ಇದು ನಿಜಕ್ಕೂ ದೊಡ್ಡ ಸಂಖ್ಯೆಯೇ ಆದರೂ ಸರ್ಕಾರ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅದಕ್ಕೆ ಕಾರಣವೂ ಇದೆ. ಜನ್ ಧನ್ ಖಾತೆಗಳಷ್ಟೇ ಅಲ್ಲದೇ ಇತರ ಬ್ಯಾಂಕ್ ಖಾತೆಗಳಲ್ಲೂ ಇಷ್ಟೇ ಪ್ರಮಾಣದಲ್ಲಿ ನಿಷ್ಕ್ರಿಯ ಖಾತೆಗಳಿರುವುದು ಕಂಡುಬಂದಿದೆ. ಜನ್ ಧನ್ ಖಾತೆ ಸೇರಿ ಭಾರತದಲ್ಲಿ ಒಟ್ಟು 225 ಕೋಟಿ ಬ್ಯಾಂಕ್ ಖಾತೆಗಳಿವೆ. ಇದರಲ್ಲಿ ಸುಮಾರು 44ರಿಂದ 46 ಕೋಟಿಗಳಷ್ಟು ಖಾತೆಗಳು ಡಾರ್ಮಂಟ್ ಸ್ಥಿತಿಯಲ್ಲಿವೆ. ಜನ್ ಧನ್ ಖಾತೆಗಳನ್ನು ಹೊರತುಪಡಿಸಿದರೆ ಸುಮಾರು 35 ಕೋಟಿಯಷ್ಟು ಸಾಮಾನ್ಯ ಖಾತೆಗಳೂ ನಿಷ್ಕ್ರಿಯವಾಗಿರುವುದು ಕಂಡುಬಂದಿದೆ. ಅಂದರೆ, ಶೇ. 20ರಷ್ಟು ಸಾಮಾನ್ಯ ಬ್ಯಾಂಕ್ ಖಾತೆಗಳು ಡಾರ್ಮಂಟ್ ಆಗಿವೆ.

ಇದನ್ನೂ ಓದಿ: ಉಗಾಂಡ ದೇಶದಲ್ಲಿ ಐಪಿಒ ದಾಖಲೆ ಬರೆಯಹೊರಟಿರುವ ಏರ್​ಟೆಲ್; ಅತಿದೊಡ್ಡ ಷೇರುಮಾರಾಟಕ್ಕೆ ಮುಂದು

ಜನ್ ಧನ್ ಖಾತೆಗಳ ಸರಾಸರಿ ಬ್ಯಾಲನ್ಸ್ ಹೆಚ್ಚಾಗಿದೆ

ಭಾರತದಲ್ಲಿ ಜನ್ ಧನ್ ಖಾತೆ ಸಂಖ್ಯೆ ಸತತವಾಗಿ ಹೆಚ್ಚುತ್ತಿದೆ. ಒಂದು ವರ್ಷದಲ್ಲಿ 3 ಕೋಟಿ ಬ್ಯಾಂಕ್ ಖಾತೆಗಳು ಜನ್ ಧನ್ ಯೋಜನೆ ಅಡಿ ತೆರೆಯಲ್ಪಡುತ್ತಿವೆ. ಇನ್ನು, ಜನ್ ಧನ್ ಖಾತೆಯಲ್ಲಿ ಜಮೆಯಾಗಿರುವ ಒಟ್ಟು ಮೊತ್ತ 2 ಲಕ್ಷಕೋಟಿ ರೂ ಗಡಿ ದಾಟಿರುವ ಕುತೂಹಲಕಾರಿ ಮಾಹಿತಿ ಸಿಕ್ಕಿದೆ.

ಇನ್ನು, 2015ರ ಮಾರ್ಚ್ ತಿಂಗಳಲ್ಲಿ ಜನ್ ಧನ್ ಖಾತೆಗಳಲ್ಲಿನ ಸರಾಸರಿ ಹಣ 1,065 ರೂ ಇತ್ತು. ಎಂಟು ವರ್ಷದ ಬಳಿಕ 2023ರ ಆಗಸ್ಟ್ ತಿಂಗಳಲ್ಲಿ ಸರಾಸರಿ ಬ್ಯಾಲನ್ಸ್ 4,063 ರೂ ಎಂದು ಹೇಳಲಾಗಿದೆ.

ಇನ್ನು, ಶೂನ್ಯ ಬ್ಯಾಲನ್ಸ್ ಇರುವ ಖಾತೆಗಳ ಪ್ರಮಾಣ 2015ರ ಮಾರ್ಚ್​ನಲ್ಲಿ ಶೇ. 58ರಷ್ಟು ಇದ್ದದ್ದು ಇದೀಗ ಶೇ. 8ಕ್ಕೆ ಬಂದು ಇಳಿದಿದೆ. ಪಿಎಂ ಜನ್ ಧನ್ ಯೋಜನೆಯ 9ನೇ ವಾರ್ಷಿಕೋತ್ಸವ ಸಂದರ್ಭ ಇದಾಗಿದೆ. ಬ್ಯಾಂಕುಗಳು ತಮ್ಮಲ್ಲಿ ನಿಷ್ಕ್ರಿಯವಾಗಿರುವ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ