ನವದೆಹಲಿ, ಮಾರ್ಚ್ 12: ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜಿಲಿ ಯೋಜನೆ ಅಡಿ ದೇಶಾದ್ಯಂತ ಸ್ಥಾಪನೆಯಾಗಿರುವ ಮೇಲ್ಛಾವಣಿ ಸೌರಘಟಕಗಳ ಸಂಖ್ಯೆ 10 ಲಕ್ಷ ಗಡಿ ದಾಟಿದೆ. ವಿಶ್ವದ ಅತಿದೊಡ್ಡ ರೂಫ್ಟಾಪ್ ಸೋಲಾರ್ ಯೋಜನೆಯಾದ ಪಿಎಂ ಸೂರ್ಯಘರ್ (PM Surya Ghar Muft Bijli Yojana) 2024ರ ಫೆಬ್ರುವರಿ 13ರಂದು ಆರಂಭವಾಗಿತ್ತು. ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2025ರ ಮಾರ್ಚ್ 10ರವರೆಗೆ ಇನ್ಸ್ಟಾಲ್ ಆಗಿರುವ ಘಟಕಗಳ ಸಂಖ್ಯೆ 10.09 ಲಕ್ಷ. ಹೊಸ ಮತ್ತು ನವೀಕೃತ ಇಂಧನ ಖಾತೆ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ತಮ್ಮ ಎಕ್ಸ್ ಪೋಸ್ಟ್ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
‘ಸೌರಶಕ್ತಿಯಲ್ಲಿ ಭಾರತ ಐತಿಹಾಸಿಕ ಮೈಲಿಗಲ್ಲು ಮುಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಪಿಎಂ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆಯು 10 ಲಕ್ಷ ಮನೆಗಳಿಗೆ ಸೌರಶಕ್ತಿ ಸಿಗುವಂತೆ ಮಾಡಿದೆ. ಇದರೊಂದಿಗೆ ಸುಸ್ಥಿರತೆ, ಸ್ವಾವಲಂಬನೆಯ ಹೊಸ ಯುಗ ಆರಂಭವಾಗುತ್ತಿದೆ’ ಎಂದು ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
India Achieves a Historic Milestone in Solar Energy! ☀️
Under the visionary leadership of Hon’ble PM Shri @narendramodi ji, the @PMSuryaGhar Muft Bijli Yojana has empowered 10 lakh homes with solar energy, driving a new era of sustainability, affordability, and self-reliance.… pic.twitter.com/ON5Z679zDM
— Pralhad Joshi (@JoshiPralhad) March 11, 2025
ಇದನ್ನೂ ಓದಿ: ಸುಲಭ ಸಾಲದ ಆಸೆಗೆ ಬಿದ್ದು ನಕಲಿ ಲೋನ್ ಆ್ಯಪ್ ಜಾಲಕ್ಕೆ ಬೀಳದಿರಿ; ಈ ಅಂಶಗಳು ತಿಳಿದಿರಲಿ
ಪ್ರಹ್ಲಾದ್ ಜೋಷಿ ಅವರ ಹೊಸ ಮತ್ತು ನವೀಕರಣ ಇಂಧನ ಸಚಿವಾಲಯ ಆರಂಭಿಸಿದ ಪಿಎಂ ಸೂರ್ಯಘರ್ ಯೋಜನೆ ಒಂದು ಕೋಟಿ ಮನೆಗಳಿಗೆ ಸೌರಶಕ್ತಿ ಒದಗಿಸುವ ಗುರಿ ಹೊಂದಿದೆ. 47.3 ಲಕ್ಷ ಅರ್ಜಿಗಳ ಸಲ್ಲಿಕೆಯಾಗಿದೆ. ಈ ಪೈಕಿ 10 ಲಕ್ಷ ಘಟಕಗಳ ಸ್ಥಾಪನೆಯಾಗಿದೆ. ಇದರಲ್ಲಿ 6.13 ಲಕ್ಷ ಫಲಾನುಭವಿಗಳಿಗೆ ಒಟ್ಟು 4,770 ಕೋಟಿ ರೂ ಸಬ್ಸಿಡಿ ನೀಡಲಾಗಿದೆ. ಈ ಸ್ಕೀಮ್ಗೆ ಒಟ್ಟು 75,021 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.
ಪಿಎಂ ಸೂರ್ಯಘರ್ ಯೋಜನೆಯು ಮನೆಗಳ ಮೇಲ್ಛಾವಣಿ ಮೇಲೆ ಸೌರ ಘಟಕಗಳನ್ನು ಸ್ಥಾಪಿಸಲು ಸಹಾಯ ಮಾಡುವ ಸ್ಕೀಮ್ ಆಗಿದೆ. ಇದರಲ್ಲಿ ಸೌರ ಫಲಕ ಸ್ಥಾಪನೆಗೆ ಆಗುವ ವೆಚ್ಚದಲ್ಲಿ ಶೇ. 40ರಷ್ಟು ಮೊತ್ತವನ್ನು ಸರ್ಕಾರವೇ ಸಬ್ಸಿಡಿಯಾಗಿ ನೀಡುತ್ತದೆ. ಎರಡು ಲಕ್ಷ ರೂವರೆಗೆ ಕೇವಲ 6.75 ಪ್ರತಿಶತದಷ್ಟು ವಾರ್ಷಿಕ ಬಡ್ಡಿಯಲ್ಲಿ ಸಾಲಸೌಲಭ್ಯ ಸಿಗುತ್ತದೆ.
ಇದನ್ನೂ ಓದಿ: ಏರ್ಪೋರ್ಟ್ನಲ್ಲಿ ಅಗ್ಗದ ಬೆಲೆ ಚಹಾ; ಉಡಾನ್ ಯಾತ್ರಿ ಕೆಫೆ ಸಖತ್ ಸಕ್ಸಸ್; ಅಹ್ಮದಾಬಾದ್ ಏರ್ಪೋರ್ಟ್ನಲ್ಲೂ ಕೆಫೆ ಆರಂಭ
ಸರ್ಕಾರ ನೀಡಿರುವ ಹೇಳಿಕೆ ಪ್ರಕಾರ, ನೀವು 3 ಕಿ.ವ್ಯಾ. ರೂಫ್ಟಾಪ್ ಸೋಲಾರ್ ಸಿಸ್ಟಂ ಅನ್ನು ಹಾಕಿಸಿಕೊಂಡರೆ ಸಬ್ಸಿಡಿ ಕಳೆದು ನಿಮ್ಮ ಕೈಯಿಂದ ಆಗುವ ಖರ್ಚು ಕೇವಲ 15,000 ರೂ ಮಾತ್ರವೇ. ಇದರಿಂದ ಉಳಿತಾಯವಾಗುವ ವಿದ್ಯುತ್ ವೆಚ್ಚ 25 ವರ್ಷದಲ್ಲಿ 15 ಲಕ್ಷ ರೂ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ