ಪಿಎಂ ಸೋಲಾರ್: ಕಡಿಮೆ ಅಳವಡಿಕೆ ರಾಜ್ಯಗಳಲ್ಲಿ ಕರ್ನಾಟಕ; ಮನೆ ಮೇಲಿನ ಸೌರಯೋಜನೆ ಬಗ್ಗೆ ಮಾಹಿತಿ
Rooftop solar scheme from Central government: ಪಿಎಂ ಸೂರ್ಯಘರ್ ಯೋಜನೆ ಅಡಿ ಮನೆಗಳ ಮೇಲೆ ಸೋಲಾರ್ ಅಳವಡಿಕೆ ಮಾಡಬಹುದು. ಕರ್ನಾಟಕ, ಆಂಧ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಸೋಲಾರ್ ಸ್ಕೀಮ್ಗೆ ನೀರಸ ಪ್ರತಿಕ್ರಿಯೆ ಇದೆ ಎನ್ನಲಾಗಿದೆ. ಒಂದು ಮನೆಗೆ ತಿಂಗಳಿಗೆ 300 ಯುನಿಟ್ಗಳವರೆಗೆ ವಿದ್ಯುತ್ ನೀಡಬಲ್ಲ ಈ ಸ್ಕೀಮ್ನಲ್ಲಿ ನೊಂದಾಯಿಸುವುದು ಹೇಗೆ ಇತ್ಯಾದಿ ವಿವರ ಇಲ್ಲಿದೆ.

ನವದೆಹಲಿ, ಜೂನ್ 23: ದೇಶದಲ್ಲಿ ಇಂಧನ ಸ್ವಾವಲಂಬನೆ ಸ್ಥಾಪಿಸುವ ಗುರಿ ಇರುವ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಥವಾ ಪಿಎ ಸೋಲಾರ್ ಸ್ಕೀಮ್ (PM Surya Ghar rooftop solar scheme) ಅನೇಕ ರಾಜ್ಯಗಳಲ್ಲಿ ಉತ್ತಮ ಸ್ಪಂದನೆ ಪಡೆದಿದೆ. ಆದರೆ, ಕರ್ನಾಟಕ, ಆಂಧ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಸ್ಕೀಮ್ಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಫಲಕ ಸ್ಥಾಪಿಸಿ ವಿದ್ಯುತ್ ಉತ್ಪಾದಿಸುವ ಈ ಯೋಜನೆ ಪಡೆಯಲು ಈ ಮೂರು ರಾಜ್ಯಗಳಲ್ಲಿ ಶೇ. 5ಕ್ಕಿಂತ ಕಡಿಮೆ ಅರ್ಜಿಗಳು ಸಲ್ಲಿಕೆ ಆಗಿವೆ ಎಂದು ಅಧಿಕೃತ ದತ್ತಾಂಶವನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ದೇಶಾದ್ಯಂತ 11.4 ಲಕ್ಷ ಮನೆಗಳ ಮೇಲೆ ಸೋಲಾರ್ ಇನ್ಸ್ಟಾಲೇಶನ್ ಆಗಿದೆ. ಕನ್ವರ್ಷನ್ ರೇಟ್ 24.4ರಷ್ಟಿದೆ. ಅಂದರೆ, ಸಲ್ಲಿಸಲಾದ ಅರ್ಜಿಗಳಲ್ಲಿ ಶೇ. 24.4ರಷ್ಟು ಸೋಲಾರ್ ಸ್ಥಾಪನೆಯಾಗಿದೆ. ಗುಜರಾತ್ನಲ್ಲಿ ಕ್ವನರ್ಷನ್ ರೇಟ್ ಶೇ. 75ಕ್ಕೂ ಹೆಚ್ಚಿದೆ. ಕರ್ನಾಟಕ, ಆಂಧ್ರ, ಪಶ್ಚಿಮ ಬಂಗಾಳ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ, ಈ ಆರು ರಾಜ್ಯಗಳಲ್ಲಿ ಕನ್ವರ್ಷನ್ ರೇಟ್ ತೀರಾ ಕಡಿಮೆ ಇದೆ ಎಂದು ದತ್ತಾಂಶಗಳು ಹೇಳುತ್ತಿವೆ.
ಏನಿದು ಪಿಎಂ ಸೂರ್ಯಘರ್ ಯೋಜನೆ?
ಪಿಎಂ ಸೂರ್ಯಘರ್ ಯೋಜನೆಯು ಮನೆಗಳ ಮೇಲ್ಛಾವಣಿ ಮೇಲೆ ಸೌರಫಲಕಗಳನ್ನು ಸ್ಥಾಪಿಸಿ ಅದರಿಂದ ವಿದ್ಯುತ್ ಉತ್ಪಾದಿಸುವುದಾಗಿದೆ. 300 ಯುನಿಟ್ಗಳವರೆಗೆ ವಿದ್ಯುತ್ ಉತ್ಪಾದಿಸಲು ಅವಕಾಶ ಇರುತ್ತದೆ. ಈ ಸ್ಕೀಮ್ನಲ್ಲಿ ಸೋಲಾರ್ ಸ್ಥಾಪನೆಗೆ ಸರ್ಕಾರವು ಶೇ. 60ರಷ್ಟು ಸಬ್ಸಿಡಿ ನೀಡುತ್ತದೆ.
ಬಹಳಷ್ಟು ಕಡೆ ಜನರಿಂದ ಸ್ಕೀಮ್ಗೆ ಉತ್ತಮ ಸ್ಪಂದನೆ ಸಿಗುತ್ತಿದೆಯಾದರೂ ಬೇರೆ ಬೇರೆ ಕಾರಣಕ್ಕೆ ಕ್ವನ್ವರ್ಷನ್ ರೇಟ್ ಕಡಿಮೆ ಇದೆ.
ಇದನ್ನೂ ಓದಿ: ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’; ಚಾಲಕರಿಗೆ ಡಬಲ್ ಧಮಾಕ; ಆದಾಯದಲ್ಲಿ ಸಿಂಹಪಾಲು ಜೊತೆಗೆ ಷೇರುಪಾಲು
ಪಿಎಂ ಸೂರ್ಯಘರ್ ಯೋಜನೆಗೆ ಅರ್ಹತೆಗಳೇನು?
- ನಿವಾಸ ಕಟ್ಟಡವಾಗಿರಬೇಕು
- ಸಮತಟ್ಟಾದ ಮೇಲ್ಛಾವಣಿ ಇರಬೇಕು
- ನಿಮ್ಮ ಹೆಸರಲ್ಲಿ ಎಲೆಕ್ಟ್ರಿಸಿಟಿ ಕನೆಕ್ಷನ್ ಇರಬೇಕು
ಪಿಎಂ ಸೂರ್ಯಘರ್ ಯೋಜನೆಗೆ ನೊಂದಾಯಿಸುವ ಕ್ರಮ
- ಪಿಎಂ ಸೂರ್ಯಘರ್ ಯೋಜನೆಯ ವೆಬ್ಸೈಟ್ಗೆ ಹೋಗಿ: pmsuryaghar.gov.in/
- ಅಪ್ಲೈ ಫಾರ್ ರೂಫ್ಟಾಪ್ ಸೋಲಾರ್ ಎಂಬುದನ್ನು ಕ್ಲಿಕ್ ಮಾಡಿ.
- ಡಿಸ್ಕಾಮ್, ನಿಮ್ಮ ಕನ್ಸೂಮರ್ ನಂಬರ್ ಇತ್ಯಾದಿ ವಿವರವನ್ನು ಭರ್ತಿ ಮಾಡಿ ನಿಮ್ಮ ಅಕೌಂಟ್ ತೆರೆಯಬಹುದು.
- ಈಗ ಲಾಗಿನ್ ಆಗಿರಿ
- ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
- ವಿದ್ಯುತ್ ಬಿಲ್, ಪ್ರಾಪರ್ಟಿ ಟ್ಯಾಕ್ಸ್ ರಸೀದಿ ಇತ್ಯಾದಿ ಮಾಲಕತ್ವದ ದಾಖಲೆ ಒದಗಿಸಿ.
- ನಂತರ, ಡಿಸ್ಕಾಂ ಅನುಮೋದನೆಗೆ ಸಲ್ಲಿಸಿ.
ಈಗ ನಿಮ್ಮ ಅರ್ಜಿ ಸಲ್ಲಿಕೆಯಾಗಿರುತ್ತದೆ. ಸ್ಥಳೀಯ ವಿದ್ಯುತ್ ಮಂಡಳಿಯು ನಿಮ್ಮ ಅರ್ಜಿಯನ್ನು ಪರಿಶೀಲಿಸಿ, ಎಲ್ಲವೂ ಸರಿ ಇದೆ ಎಂತಾದಲ್ಲಿ ಅನುಮೋದನೆ ನೀಡುತ್ತದೆ. ನಿಮಗೆ ಎಸ್ಸೆಮ್ಮೆಸ್ ಅಥವಾ ಇಮೇಲ್ ಮೂಲಕ ಅಲರ್ಟ್ ಬರುತ್ತದೆ.
ಇದಾದ ಬಳಿಕ ನಿಮ್ಮ ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಕೆ ಮಾಡುವ ಕಾರ್ಯ ಇರುತ್ತದೆ. ಅದಕ್ಕಾಗಿ ಪೋರ್ಟಲ್ನಲ್ಲಿ ನಿಗದಿ ಮಾಡಲಾದ ವೆಂಡರ್ಗಳ ಪೈಕಿ ಒಬ್ಬರನ್ನು ಸಂಪರ್ಕಿಸಿ ಸೋಲಾರ್ ಇನ್ಸ್ಟಲೇಶನ್ ಮಾಡಿಸಬೇಕು.
ಅವರು ಬಂದು ಮನೆಯ ಮೇಲೆ ಸೋಲಾರ್ ಫಲಕಗಳನ್ನು ಹಾಕುತ್ತಾರೆ. ಇನ್ವರ್ಟರ್ ಮತ್ತು ಬ್ಯಾಟರಿ ಬೇಕಿದ್ದರೆ ಹಾಕಿಸಬಹುದು. ನಂತರ ನೆಟ್ ಮೀಟರ್ ಅಳವಡಿಸುತ್ತಾರೆ.
ಇದನ್ನೂ ಓದಿ: ಅಂತಿಂಥ ದೇಶಳೊಂದಿಗೆ ಇಲ್ಲ ಮುಖ್ಯ ವ್ಯಾಪಾರ ಒಪ್ಪಂದ; ಭಾರತದ ನೀತಿಯಲ್ಲಿ ಹೊಸ ದೃಷ್ಟಿಕೋನ
ಸೋಲಾರ್ ಇನ್ಸ್ಟಲೇಶನ್ ಬಳಿಕ ಅದರ ಫೋಟೋವನ್ನು ಸೆರೆಹಿಡಿದು ಅಪ್ಲೋಡ್ ಮಾಡಬೇಕು. ವೆಂಡರ್ ಕೊಟ್ಟ ಇನ್ವಾಯ್ಸ್ ಮತ್ತಿತರ ವಿವರವನ್ನೂ ಸಲ್ಲಿಸಬೇಕು.
ಕೊನೆಯದಾಗಿ ಡಿಸ್ಕಾಂನವರು ಬಂದು ಪರಿಶೀಲನೆ ಮಾಡಿ ಅನುಮೋದನೆ ಕೊಡುತ್ತಾರೆ. ಅನುಮೋದನೆ ಆಯಿತೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಸಂದಾಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ