PPF Vs NPS: ಪಿಪಿಎಫ್​ ವರ್ಸಸ್ ಎನ್​ಪಿಎಸ್​ ಇವೆರಡರಲ್ಲಿ ಯಾವ ಹೂಡಿಕೆ ಉತ್ತಮ?

| Updated By: Srinivas Mata

Updated on: Feb 08, 2022 | 2:44 PM

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್​) ಅಥವಾ ಎನ್​ಪಿಎಸ್​ ಇವೆರಡರಲ್ಲಿ ಹೂಡಿಕೆಗೆ ಯಾವುದು ಉತ್ತಮ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ತೆರಿಗೆ ಅನುಕೂಲ, ಬಡ್ಡಿ ದರ ಇತರ ಹೋಲಿಕೆಗಳು ನಿಮ್ಮೆದುರು ಇಡಲಾಗಿದೆ.

PPF Vs NPS: ಪಿಪಿಎಫ್​ ವರ್ಸಸ್ ಎನ್​ಪಿಎಸ್​ ಇವೆರಡರಲ್ಲಿ ಯಾವ ಹೂಡಿಕೆ ಉತ್ತಮ?
ಸಾಂದರ್ಭಿಕ ಚಿತ್ರ
Follow us on

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund) ಅಥವಾ ಪಿಪಿಎಫ್ ಸೀಮಿತ ಅಪಾಯ-ಮುಕ್ತ ಹೂಡಿಕೆ ಸಾಧನವಾಗಿದ್ದು, ಇದು ಹೆಚ್ಚಿನ ಸರಾಸರಿ ಹಣದುಬ್ಬರ ದರವನ್ನು ನೀಡುತ್ತದೆ ಏಕೆಂದರೆ ಪಿಪಿಎಫ್ ಬಡ್ಡಿದರವು ವಾರ್ಷಿಕವಾಗಿ ಶೇ 7.10ರಷ್ಟಿದೆ. ಪಿಪಿಎಫ್​ ಸಂಪೂರ್ಣವಾಗಿ ಸಾಲದ ಇನ್​ಸ್ಟ್ರುಮೆಂಟ್​ ಆಗಿದ್ದರೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಎನ್​ಪಿಎಸ್​ ಯೋಜನೆಯು ಈಕ್ವಿಟಿ ಮತ್ತು ಸಾಲ ಎರಡರ ಮಿಶ್ರಣವಾಗಿದೆ. ಹೂಡಿಕೆದಾರರು ಒಬ್ಬರ ಹೂಡಿಕೆಯ ಮೇಲೆ ಶೇ 75ರಷ್ಟು ಈಕ್ವಿಟಿ ಹೂಡಿಕೆಯನ್ನು ಆಯ್ಕೆ ಮಾಡಬಹುದು. ತೆರಿಗೆ ಮತ್ತು ಹೂಡಿಕೆ ತಜ್ಞರ ಪ್ರಕಾರ, ಹೂಡಿಕೆದಾರರು ಯಾವುದೇ ಅಪಾಯವನ್ನು ತೆಗೆದುಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲದಿದ್ದರೆ, ಪಿಪಿಎಫ್ ಖಾತೆಯನ್ನು ತೆರೆಯುವುದು ಉತ್ತಮ ಆಯ್ಕೆಯಾಗಿದೆ. ಆದರೆ ಸ್ವಲ್ಪ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಾಗಿರುವ ಹೂಡಿಕೆದಾರರಿಗೆ ಎನ್‌ಪಿಎಸ್ ಖಾತೆಯು ಸೂಕ್ತವಾದ ಆಯ್ಕೆಯಾಗಿದೆ.

ಪಿಪಿಎಫ್​ ವರ್ಸಸ್ ಎನ್​ಪಿಎಸ್​ ಕುರಿತು ತಜ್ಞರು ಮಾತನಾಡುತ್ತಾ, “ಹೂಡಿಕೆದಾರರಿಗೆ ಶೂನ್ಯ ಅಪಾಯದ ಬಗ್ಗೆ ಒಲವಿದ್ದರೆ ಅಂತಹ ಹೂಡಿಕೆದಾರರಿಗೆ ಪಿಪಿಎಫ್​ ಸೂಕ್ತವಾಗಿದೆ. ಏಕೆಂದರೆ ಅದು ಶೇ 100ರಷ್ಟು ಅಪಾಯ ಮುಕ್ತವಾಗಿದೆ ಮತ್ತು ಪಿಪಿಎಫ್​ ರಿಟರ್ನ್ ಬಗ್ಗೆ ಖಾತ್ರಿಯಾಗಿ ನಂಬಬಹುದು. ಆದರೆ ಎನ್​ಪಿಎಸ್​ ಯೋಜನೆಯು ಈಕ್ವಿಟಿ ಮತ್ತು ಸಾಲದ ಹೂಡಿಕೆ ಇವೆರಡರ ಮಿಶ್ರಣವಾಗಿದೆ. ಆದ್ದರಿಂದ ಸ್ವಲ್ಪ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧವಿರುವ ಹೂಡಿಕೆದಾರರು ಎನ್​ಪಿಎಸ್​ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಏಕೆಂದರೆ ಇದು ಪಿಪಿಎಫ್​ಗೆ ಹೋಲಿಸಿದರೆ ಹೆಚ್ಚು ಯೀಲ್ಡ್ (ಇಳುವರಿ) ನೀಡುತ್ತದೆ.”

ಪಿಪಿಎಫ್​ ವರ್ಸಸ್ ಎನ್​ಪಿಎಸ್​: ಆದಾಯ ತೆರಿಗೆ ಪ್ರಯೋಜನಗಳು
ಪಿಪಿಎಫ್ ಮತ್ತು ಎನ್‌ಪಿಎಸ್ ಎರಡೂ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ರೂ. 1.50 ಲಕ್ಷದವರೆಗಿನ ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿ ನೀಡುತ್ತದೆ. ಆದರೆ ಎನ್​ಪಿಎಸ್​ನಲ್ಲಿ ಸೆಕ್ಷನ್ 80ಸಿಸಿಡಿ ಅಡಿಯಲ್ಲಿ ಹೆಚ್ಚುವರಿ ಆದಾಯ ತೆರಿಗೆ ರಿಯಾಯಿತಿ ಲಭ್ಯವಿದೆ. ಸೆಕ್ಷನ್ 80ಸಿಸಿಡಿ ಅಡಿಯಲ್ಲಿ ತೆರಿಗೆದಾರರು ಒಂದೇ ಹಣಕಾಸು ವರ್ಷದಲ್ಲಿ ಒಬ್ಬರ ಎನ್​ಪಿಎಸ್​ ಖಾತೆಯಲ್ಲಿ ಹೂಡಿಕೆ ಮಾಡಿದ ರೂ. 50,000 ವರೆಗೆ ತೆರಿಗೆ ಪ್ರಯೋಜನ ಪಡೆಯಬಹುದು. ಆದ್ದರಿಂದ ಹೂಡಿಕೆದಾರರು ಸ್ವಲ್ಪ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿದ್ದರೆ ಪಿಪಿಎಫ್​ಗಿಂತ ಮುಂಚಿತವಾಗಿ ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡಬೇಕು. ಏಕೆಂದರೆ ಅದು ಸೆಕ್ಷನ್ 80ಸಿ ಅಡಿಯಲ್ಲಿ ರೂ. 1.50 ಲಕ್ಷವನ್ನು ಹೊರತುಪಡಿಸಿ ರೂ. 50,000 ಹೂಡಿಕೆ ಮೇಲೆ ಹೆಚ್ಚುವರಿ ಆದಾಯ ತೆರಿಗೆ ಪ್ರಯೋಜನ ಪಡೆಯಬಹುದು.

ಪಿಪಿಎಫ್ ವರ್ಸಸ್ ಎನ್​ಪಿಎಸ್​​ ಬಡ್ಡಿ ದರ
ಪಿಪಿಎಫ್​ ಮತ್ತು ಎನ್​ಪಿಎಸ್​ನಲ್ಲಿ ನಿರೀಕ್ಷಿತ ಆದಾಯದ ಕುರಿತು ತಜ್ಞರು ಮಾತನಾಡಿ, “ಪಿಪಿಎಫ್‌ನಲ್ಲಿ ಬಡ್ಡಿದರವನ್ನು ತ್ರೈಮಾಸಿಕ ಆಧಾರದ ಮೇಲೆ ಘೋಷಿಸಲಾಗುತ್ತದೆ ಮತ್ತು ವಾರ್ಷಿಕ ಆಧಾರದ ಮೇಲೆ ಸಂಯೋಜಿತಗೊಳಿಸಲಾಗುತ್ತದೆ. ಆದ್ದರಿಂದ ಪಿಪಿಎಫ್ ಬಡ್ಡಿದರವು ತ್ರೈಮಾಸಿಕ ಆಧಾರದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಆದರೆ ಎನ್‌ಪಿಎಸ್ ಖಾತೆಯಲ್ಲಿ ಹೂಡಿಕೆದಾರರು ಆಯ್ಕೆಯನ್ನು ಹೊಂದಿರುತ್ತಾರೆ. ಈಕ್ವಿಟಿಯನ್ನು ಹೆಚ್ಚಿನ ಭಾಗ ಆರಿಸಿಕೊಳ್ಳುವುದಕ್ಕೆ ಆಯ್ಕೆ ಇದೆ. ಎನ್​ಪಿಎಸ್​ ಶೇ 75ರಷ್ಟು ಈಕ್ವಿಟಿಯಲ್ಲಿ ಹೂಡಿಕೆಯನ್ನು ಆಯ್ಕೆ ಮಾಡಬಹುದು. ಆದ್ದರಿಂದ ಪಿಪಿಎಫ್​ನಲ್ಲಿ ಒಬ್ಬರ ಹೂಡಿಕೆಯು ಶೇಕಡಾ 100ರಷ್ಟು ಡೆಟ್ ಹೂಡಿಕೆಯಾಗಿದೆ.

“ಆದರೆ ಒಬ್ಬರ ಎನ್​ಪಿಎಸ್​ ಹೂಡಿಕೆಯು ಸಾಲ ಮತ್ತು ಈಕ್ವಿಟಿಯ ಮಿಶ್ರಣವಾಗಿದೆ. ಹೂಡಿಕೆದಾರರು ಶೇ 60ರಷ್ಟು ಈಕ್ವಿಟಿ ಆರಿಸಿದರೆ, ಶೇಕಡಾ 40ರಷ್ಟು ಡೆಟ್​ಗೆ ಸಂಬಂಧಿಸಿರುತ್ತದೆ. ಆ ಸಂದರ್ಭದಲ್ಲಿ ಈಕ್ವಿಟಿ ಹೂಡಿಕೆಯು ದೀರ್ಘಾವಧಿಯಲ್ಲಿ ಕನಿಷ್ಠ ಶೇ 12ರ ರಿಟರ್ನ್ ವಾರ್ಷಿಕವಾಗಿ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಡೆಟ್​ ಇನ್​ಸ್ಟ್ರುಮೆಂಟ್ ದೀರ್ಘಾವಧಿಯಲ್ಲಿ ಶೇ 8ರಷ್ಟು ರಿಟರ್ನ್ ನೀಡುತ್ತದೆ. ಆದ್ದರಿಂದ ನಿವ್ವಳ ಎನ್​ಪಿಎಸ್​ ಬಡ್ಡಿದರ ನಿರೀಕ್ಷೆ 40:60ರ ಅನುಪಾತವು ಶೇ 10.40ರಷ್ಟಾಗಿದೆ (ಈಕ್ವಿಟಿಯಲ್ಲಿ ಶೇ 7.20 ಮತ್ತು ಸಾಲದ್ದು ಶೇ 3.20). ಹೀಗಾಗಿ ಪಿಪಿಎಫ್​ ಖಾತೆಗೆ ಹೋಲಿಸಿದರೆ ನಿವೃತ್ತಿ ನಿಧಿಯು ದೀರ್ಘಾವಧಿಯಲ್ಲಿ ಎನ್​ಪಿಎಸ್​ನಲ್ಲಿ ಶೇ 3.30ರಷ್ಟು ವೇಗವಾಗಿ ಬೆಳೆಯುತ್ತದೆ.”

ಪಿಪಿಎಫ್​ ವರ್ಸಸ್ ಎನ್​ಪಿಎಸ್​ನಲ್ಲಿ ಯಾವುದು ಉತ್ತಮ?
ಅಪಾಯ ಬೇಡ ಎಂದುಕೊಳ್ಳುವ ಹೂಡಿಕೆದಾರರಿಗೆ ಪಿಪಿಎಫ್​ ಸೂಕ್ತವಾಗಿದೆ. ಆದರೆ ಹೂಡಿಕೆದಾರರು ಸ್ವಲ್ಪ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿದ್ದರೆ ಎನ್​ಪಿಎಸ್​ ಉತ್ತಮವಾಗಿದೆ. ಏಕೆಂದರೆ ಅದು ಸುಮಾರು ಶೇ 3ರಿಂದ ಶೇ 3.30ರಷ್ಟು ಹೆಚ್ಚಿನ ಲಾಭವನ್ನು ನೀಡುತ್ತದೆ. ಇದರ ಹೊರತಾಗಿ, ಎನ್​ಪಿಎಸ್​ ಖಾತೆದಾರರು ಒಂದೇ ಹಣಕಾಸು ವರ್ಷದಲ್ಲಿ ರೂ. 2 ಲಕ್ಷದವರೆಗಿನ ಹೂಡಿಕೆಯ ಮೇಲೆ ಆದಾಯ ತೆರಿಗೆ ಪ್ರಯೋಜನವನ್ನು ಪಡೆಯಬಹುದು ಆದರೆ ಪಿಪಿಎಫ್​ನಲ್ಲಿನ ಈ ಪ್ರಯೋಜನವು ಒಂದು ಆರ್ಥಿಕ ವರ್ಷದಲ್ಲಿ ರೂ. 1.50 ಲಕ್ಷಕ್ಕೆ ಸೀಮಿತವಾಗಿರುತ್ತದೆ.

ಆದರೆ, ಇದು ಹೂಡಿಕೆ ಇನ್​ಸ್ಟ್ರುಮೆಂಟ್ ದೀರ್ಘಾವಧಿಯಲ್ಲಿ ಲಾಭವಲ್ಲ ಎಂದು ನಿರ್ಧರಿಸುತ್ತದೆ. ಏಕೆಂದರೆ ಎರಡೂ ಸರಾಸರಿ ಹಣದುಬ್ಬರ ದರವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ದೀರ್ಘಾವಧಿಯಲ್ಲಿ ಇದು ಶೇಕಡಾ 5ರಿಂದ 6ರಷ್ಟಿದೆ.

ಇದನ್ನೂ ಓದಿ: How To Activate PPF: ನಿಷ್ಕ್ರಿಯ ಪಿಪಿಎಫ್​ ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?