ಟ್ರೈನ್ ಆಪರೇಶನ್; ಖಾಸಗಿಗೆ ವಹಿಸುವ ಪ್ರಯೋಗ ಯಶಸ್ವಿ; ತೇಜಸ್ ಎಕ್ಸ್ಪ್ರೆಸ್ ರೈಲಿಂದ 3 ಕೋಟಿ ರೂಗೂ ಅಧಿಕ ಲಾಭ
Indian railways update: ಭಾರತೀಯ ರೈಲ್ವೆಸ್ ದೇಶದ ವಿವಿಧೆಡೆ 50 ನಿಲ್ದಾಣಗಳನ್ನು ವಿಶ್ವದರ್ಜೆಗೆ ಉನ್ನತೀಕರಿಸುವ ಯೋಜನೆ ಹಮ್ಮಿಕೊಂಡಿದೆ. ಹಾಗೆಯೇ, 150 ಟ್ರೈನುಗಳನ್ನು ಖಾಸಗಿ ಆಪರೇಟರ್ಗಳಿಗೆ ವಹಿಸುವ ಯೋಜನೆಯೂ ಇದೆ. ಇದರ ಭಾಗವಾಗಿ ಐಆರ್ಸಿಟಿಸಿ ಸಂಸ್ಥೆ ತೇಜಸ್ ಎಕ್ಸ್ಪ್ರೆಸ್ ಟ್ರೈನ್ ಆಪರೇಟ್ ಮಾಡುತ್ತಿದೆ. ಅಕ್ಟೋಬರ್ 2ರಿಂದ 28ರವರೆಗೆ ಇದು ಮೂರು ಕೋಟಿಗೂ ಅಧಿಕ ಆದಾಯ ಕಂಡಿದ್ದು, 70 ಲಕ್ಷ ರೂ ಲಾಭ ಮಾಡಿದೆ.

ನವದೆಹಲಿ, ಏಪ್ರಿಲ್ 18: ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೇಸ್ (Indian Railways) ದೇಶದ ಆರ್ಥಿಕ ವ್ಯವಸ್ಥೆಯ ಪ್ರಧಾನ ಭಾಗ ಎನಿಸಿದೆ. ನಿತ್ಯವೂ ಕೋಟ್ಯಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಹಾಗೆಯೇ ಭಾರೀ ಮೊತ್ತದ ಸರಕುಗಳೂ ಕೂಡ ಈ ಗೂಡ್ಸ್ ಟ್ರೈನುಗಳಲ್ಲಿ ಸಾಗಣೆ ಆಗುತ್ತವೆ. ಹೀಗೆ ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಭಾಗವಾಗಿರುವ ರೈಲ್ವೇಸ್ ಈಗ ಸ್ವಲ್ಪಸ್ವಲ್ಪವಾಗಿ ಖಾಸಗೀಕರಣಕ್ಕೆ ತೆರೆದುಕೊಳ್ಳುತ್ತಿದೆ. ರೈಲ್ವೆಯಿಂದ ಖಾಸಗಿಯಾಗಿ ಟ್ರೈನ್ ಚಾಲನೆಯಾಗುತ್ತಿದೆ. ಐಆರ್ಸಿಟಿಸಿಯಿಂದ ರನ್ ಆಗುವ ತೇಜಸ್ ಎಕ್ಸ್ಪ್ರೆಸ್ ರೈಲು ಒಂದು ತಿಂಗಳಲ್ಲಿ 3.70 ಕೋಟಿ ರೂ ಮೊತ್ತದಷ್ಟು ಟಿಕೆಟ್ಗಳನ್ನು ಮಾರಿದೆ. 70 ಲಕ್ಷ ರೂ ಲಾಭ ಮಾಡಿದೆ ಎಂದು ವರದಿಯಾಗಿದೆ.
ಯಾವುದಿದು ತೇಜಸ್ ಎಕ್ಸ್ಪ್ರೆಸ್ ರೈಲು?
ರೈಲ್ವೆ ಸಚಿವಾಲಯದ ಅಡಿ ಬರುವ ಭಾರತೀಯ ರೈಲ್ವೇಸ್ ಸಂಸ್ಥೆ ವಿಶ್ವದರ್ಜೆಯ 50 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಹೊರಟಿದೆ. ತನ್ನ ರೈಲು ಜಾಲದಲ್ಲಿ ಖಾಸಗಿ ಪ್ಯಾಸೆಂಜರ್ ಟ್ರೈನ್ ಆಪರೇಟರ್ಗಳು 150 ಟ್ರೈನುಗಳನ್ನು ಚಾಲಿಸಲು ಅನುಮತಿಸುತ್ತಿದೆ. ಇದರಲ್ಲಿ ಒಂದು ಟ್ರೈನು ಲಕ್ನೋ ದೆಹಲಿ ಮಾರ್ಗದಲ್ಲಿ ಹೋಗುವ ತೇಜಸ್ ಎಕ್ಸ್ಪ್ರೆಸ್.
ಇದನ್ನೂ ಓದಿ: ಇಲಾನ್ ಮಸ್ಕ್ ಮತ್ತು ನರೇಂದ್ರ ಮೋದಿ ಫೋನ್ ಕರೆ; ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡೂ ದೇಶಗಳ ಸಹಭಾಗಿತ್ವ ಹೆಚ್ಚಿಸಲು ಮಾತುಕತೆ
ಐಆರ್ಸಿಟಿಸಿ ಸಂಸ್ಥೆ ಆಪರೇಟ್ ಮಾಡುವ ಈ ಟ್ರೈನು ಅಕ್ಟೋಬರ್ 5ರಂದು ಮೊದಲಿಟ್ಟಿತು. ಅಕ್ಟೋಬರ್ 5ರಿಂದ ಅಕ್ಟೋಬರ್ 28ರವರೆಗೆ ಈ ಲಕ್ನೋ ದೆಹಲಿ ತೇಜಸ್ ಎಕ್ಸ್ಪ್ರೆಸ್ ಟ್ರೈನ್ ಆಪರೇಟ್ ಮಾಡಲು ಐಆರ್ಸಿಟಿಸಿಗೆ ಆದ ವೆಚ್ಚ ಸುಮಾರು ಮೂರು ಕೋಟಿ ರೂ.
ಅಂದರೆ, ಅ. 8ರಿಂದ 28ರ ನಡುವೆ ವಾರದಲ್ಲಿ ಆರು ದಿನ ಇದರ ಸೇವೆ ಎಂದು ಪರಿಗಣಿಸಿದರೆ ಒಟ್ಟು 21 ದಿನ ಈ ಎಕ್ಸ್ಪ್ರೆಸ್ ರೈಲು ಓಡಿದೆ. ಒಟ್ಟು ಮೂರು ಕೋಟಿ ರೂ ವೆಚ್ಚ ಎಂದರೆ ದಿನಕ್ಕೆ 14 ಲಕ್ಷ ರೂ ವೆಚ್ಚವಾದಂತಾಗಿದೆ. ಇದಕ್ಕೆ ಬದಲಾಗಿ, ಐಆರ್ಸಿಟಿಸಿ ಸಂಸ್ಥೆ ದಿನಕ್ಕೆ 17.50 ಲಕ್ಷ ರೂ ಆದಾಯ ಕಂಡಿದೆ.
ಐಆರ್ಸಿಟಿಸಿ ಖಾಸಗಿ ಸಂಸ್ಥೆಯಾ?
ಐಆರ್ಸಿಟಿಸಿ ಸಂಸ್ಥೆಯೂ ಭಾರತೀಯ ರೈಲ್ವೇಸ್ನ ಅಂಗವೇ ಆಗಿದೆ. ಆದರೆ, ರೈಲು ಟಿಕೆಟ್ ಬುಕಿಂಗ್ ಇತ್ಯಾದಿ ಸೇವೆ ನೀಡುತ್ತದೆ. ಟ್ರೈನುಗಳನ್ನು ಸಾಂಪ್ರದಾಯಿಕವಾಗಿ ರೈಲ್ವೇಸ್ ಸಂಸ್ಥೆಯೇ ನಿರ್ವಹಿಸುತ್ತದೆ. ಈಗ ತಾನಲ್ಲದೇ ಇತರರನ್ನೂ ಈ ಕಾರ್ಯಾಚರಣೆಗೆ ಬಳಸಿ, ರೈಲ್ವೇಸ್ ಮೇಲಿನ ಹೊರೆಯನ್ನು ತಗ್ಗಿಸುವ ಉದ್ದೇಶ ಇದೆ.
ಇದನ್ನೂ ಓದಿ: ಆಸ್ಟ್ರೇಲಿಯಾದ ಅಬ್ಬಾಟ್ ಪೋರ್ಟ್ನಲ್ಲಿನ NQXT ಟರ್ಮಿನಲ್ ಖರೀದಿಸಿದ ಅದಾನಿ ಕಂಪನಿ
ಕಳೆದ ತಿಂಗಳು ಸರ್ಕಾರವು ಖಾಸಗಿ ಟ್ರೈನ್ ನಿರ್ವಹಣೆ ಹಾಗೂ ನಿಲ್ದಾಣ ಮರು ನವೀಕರಣ ಯೋಜನೆಗಳ ಸಂಬಂಧ ವಿಶೇಷ ಕಾರ್ಯಪಡೆ ರಚಿಸಿದೆ. ಆದರೆ, ಈ ತಂಡದ ಮೊದಲ ಸಭೆ ಇನ್ನಷ್ಟೇ ನಡೆಯಬೇಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ