AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚುವರಿ ಕ್ಯಾಷ್ ರಿಸರ್ವ್ ರೇಷಿಯೋ ಶೇ 10ಕ್ಕೆ ನಿಗದಿ ಮಾಡಿದ ಆರ್​ಬಿಐ; ಷೇರುಪೇಟೆ ಕಂಗಾಲಾಗಿದ್ಯಾಕೆ? ಸಿಆರ್​ಆರ್ ಏರಿಕೆಯ ಪರಿಣಾಮವೇನು?

Incremental CRR Fixed by RBI: ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ರೆಪೋ ದರ ಏರಿಕೆ ಬದಲು ಹೆಚ್ಚುವರಿ ಸಿಆರ್​ಆರ್ ಅನ್ನು ಘೋಷಿಸಿದ್ದಾರೆ. ಇದರಿಂದ ಬ್ಯಾಂಕುಗಳ ಲಾಭದ ಓಟಕ್ಕೆ ಹಿನ್ನಡೆ ಆಗುತ್ತದಾದರೂ ಹಣದುಬ್ಬರ ನಿಯಂತ್ರಣಕ್ಕೆ ಸಹಾಯಕವಾಗಬಹುದು.

ಹೆಚ್ಚುವರಿ ಕ್ಯಾಷ್ ರಿಸರ್ವ್ ರೇಷಿಯೋ ಶೇ 10ಕ್ಕೆ ನಿಗದಿ ಮಾಡಿದ ಆರ್​ಬಿಐ; ಷೇರುಪೇಟೆ ಕಂಗಾಲಾಗಿದ್ಯಾಕೆ? ಸಿಆರ್​ಆರ್ ಏರಿಕೆಯ ಪರಿಣಾಮವೇನು?
ಬ್ಯಾಂಕ್ ಕಚೇರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 10, 2023 | 12:12 PM

Share

ನವದೆಹಲಿ, ಆಗಸ್ಟ್ 10: ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಯತ್ನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ (Repo Rate) ಏರಿಕೆ ಮಾಡದೇ ಸಿಆರ್​ಆರ್ ದರದಲ್ಲಿ ವ್ಯತ್ಯಯ ತಂದಿದೆ. ಇಂಕ್ರಿಮೆಂಟಲ್ ಅಥವಾ ಹೆಚ್ಚುವರಿ ಕ್ಯಾಷ್ ರಿಸರ್ವ್ ರೇಷಿಯೋವನ್ನು (Additional Cash Reserve Ratio) ಶೇ 10ಕ್ಕೆ ಹೆಚ್ಚಿಸಿದೆ. ಆಗಸ್ಟ್ 12ರಿಂದ ಬ್ಯಾಂಕುಗಳು ಹೆಚ್ಚುವರಿ ಸಿಆರ್​ಆರ್​ ಅನ್ನು ಶೇ. 10ರಷ್ಟು ಇಡಬೇಕು ಎಂದು ತಿಳಿಸಲಾಗಿದೆ. ಬ್ಯಾಂಕುಗಳ ಒಟ್ಟಾರೆ ಠೇವಣಿಗಳಲ್ಲಿ (NDTL- Net Demand and Time Liabilities) ಗಮನಾರ್ಹ ಹೆಚ್ಚಳ ಕಂಡ ಹಿನ್ನೆಲೆಯಲ್ಲಿ ಆರ್​ಬಿಐ ಹೆಚ್ಚುವರಿ ಸಿಆರ್​ಆರ್ ಅನ್ನು ಹೆಚ್ಚಿಸಲು ನಿರ್ಧರಿಸಿದೆ. ಆದರೆ, ಸಿಆರ್​ಆರ್ ಅಥವಾ ಕ್ಯಾಷ್ ರಿಸರ್ವ್ ರೇಷಿಯೋ ಶೇ. 4.5ರ ದರದಲ್ಲೇ ಮುಂದುವರಿಯಲಿದೆ. ಹೆಚ್ಚುವರಿ ಸಿಆರ್​ಆರ್ ಅನ್ನು ತಾತ್ಕಾಲಿಕವಾಗಿ ನಿಗದಿ ಮಾಡಲಾಗಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕುವ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಏನಿದು ಸಿಆರ್​ಆರ್, ಅಥವಾ ಕ್ಯಾಷ್ ರಿಸರ್ವ್ ರೇಷಿಯೋ?

ಕ್ಯಾಷ್ ರಿಸರ್ವ್ ರೇಷಿಯೋ ಎಂಬುದು ಬ್ಯಾಂಕುಗಳು ಹೊಂದಿರುವ ಹಣದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ನಗದು ಹಣ ಇಟ್ಟಿರಬೇಕು. ಈಗ ಸಿಆರ್​ಆರ್ ಶೇ. 4.5ರಷ್ಟಿದೆ ಎಂದರೆ ಒಂದು ಬ್ಯಾಂಕ್ ಬಳಿ 1 ಲಕ್ಷಕೋಟಿ ರೂನಷ್ಟು ಗ್ರಾಹಕರ ಠೇವಣಿ ಮೊತ್ತ ಬಂದಿದ್ದರೆ ಕ್ಯಾಷ್ ರೂಪದಲ್ಲಿ ಶೇ. 4.5ರಷ್ಟನ್ನು ಹಣ ಇಟ್ಟಿರಬೇಕು. ಅಂದರೆ 1 ಲಕ್ಷ ಕೋಟಿ ರೂನಲ್ಲಿ 4,500 ಕೋಟಿ ರೂನಷ್ಟು ಹಣವು ಕ್ಯಾಷ್ ರೂಪದಲ್ಲಿ ಇರಬೇಕು.

ಇದನ್ನೂ ಓದಿ: ರೆಪೋ ದರದಲ್ಲಿ ಬದಲಾವಣೆ ಇಲ್ಲ; ಯಥಾಸ್ಥಿತಿ ಮುಂದುವರಿಸಲು ಆರ್​ಬಿಐ ನಿರ್ಧಾರ

ಗ್ರಾಹಕರಿಂದ ಠೇವಣಿಯಾಗಿ ಬರುವ ಹಣವನ್ನು ಬ್ಯಾಂಕುಗಳು ಸಾಲ ನೀಡಿ ಅದರಿಂದ ಲಾಭ ಮಾಡುತ್ತವೆ. ಅದೇ ಬ್ಯಾಂಕುಗಳಿಗೆ ಪ್ರಮುಖ ಆದಾಯಮೂಲ. ಆದರೆ, ಸಿಆರ್​ಆರ್​ನಲ್ಲಿರುವ ನಗದು ಹಣದಿಂದ ಬ್ಯಾಂಕುಗಳಿಗೆ ಏನೂ ಲಾಭ ಇರುವುದಿಲ್ಲ. ಇದು ಒಂದು ರೀತಿಯಲ್ಲಿ ನಮ್ಮ ಮನೆಗಳಲ್ಲಿ ಕ್ಯಾಷ್ ಇಟ್ಟುಕೊಂಡಂತೆ.

ಹೆಚ್ಚುವರಿ ಸಿಆರ್​ಆರ್​ನಿಂದ ಹಣದುಬ್ಬರ ನಿಯಂತ್ರಿಸಬಹುದಾ?

ಆಗಲೇ ತಿಳಿಸಿದಂತೆ, ಗ್ರಾಹಕರಿಂದ ಬರುವ ಠೇವಣಿಗಳನ್ನು ಬ್ಯಾಂಕುಗಳು ಸಾಲವಾಗಿ ಕೊಟ್ಟು ಆದಾಯ ಮಾಡಿಕೊಳ್ಳುತ್ತವೆ. ಇದರಿಂದ ಆರ್ಥಿಕತೆಗೆ ಹೆಚ್ಚು ಹಣದ ಓಡಾಟವಾಗುತ್ತದೆ. ಹಣದ ಹರಿವು ಹೆಚ್ಚಾದಾಗ ಹಣದುಬ್ಬರ ಆಗುತ್ತದೆ. ಹೆಚ್ಚಿನ ಮಟ್ಟದಲ್ಲಿ ಸಿಆರ್​ಆರ್ ಇದ್ದಾಗ ಬ್ಯಾಂಕುಗಳ ಬಳಿ ಸಾಲ ಕೊಡಲು ಹೆಚ್ಚು ಹಣ ಇರುವುದಿಲ್ಲ. ಇದರಿಂದ ಆರ್ಥಿಕತೆಗೆ ಹಣದ ಹರಿವು ಕಡಿಮೆ ಆಗುತ್ತದೆ. ಅ ಮೂಲಕ ಹಣದುಬ್ಬರ ನಿಯಂತ್ರಣಕ್ಕೆ ಬರಬಹುದು ಎಂಬುದು ಆರ್​ಬಿಐನ ಆಲೋಚನೆ.

ಇದನ್ನೂ ಓದಿ: ಕಡಿಮೆ ಆಗುತ್ತಾ ಬ್ಯಾಂಕ್ ಸಾಲದ ಬಡ್ಡಿದರ? ಆರ್​ಬಿಐ ಎಂಪಿಸಿ ಸಭೆಯ ನಿರ್ಧಾರದಿಂದ ಸಾಲದ ಇಎಂಐ ಮೇಲೇನು ಪರಿಣಾಮ?

ರೈಟ್ ರಿಸರ್ಚ್ ಎಂಬ ಹಣಕಾಸು ಸಲಹಾ ಸಂಸ್ಥೆಯ ಸ್ಥಾಪಕ ಸೋನಮ್ ಶ್ರೀವಾಸ್ತವ ಅವರು ಶೇ. 10ರ ಹೆಚ್ಚುವರಿ ಸಿಆರ್​ಆರ್ ನಿಗದಿ ಮಾಡಿದ ಆರ್​ಬಿಐನ ಕ್ರಮವನ್ನು ಸ್ವಾಗತಿಸಿದ್ದಾರೆ. ಬ್ಯಾಂಕಿಂಗ್ ವಲಯದಲ್ಲಿರುವ ಹೆಚ್ಚುವರಿ ಹಣದ ಹರಿವನ್ನು ನಿಯಂತ್ರಿಸಲು ಇದು ಸರಿಯಾದ ಕ್ರಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಷೇರು ಮಾರುಕಟ್ಟೆ ಕಂಗಾಲಾಗಿದ್ಯಾಕೆ?

ಆರ್​ಬಿಐ ಎಂಪಿಸಿ ಸಭೆಯಿಂದ ಸಿಆರ್​ಆರ್ ಏರಿಸುವ ನಿರ್ಧಾರ ಹೊರಬಂದ ಬಳಿಕ ಷೇರುಮಾರುಕಟ್ಟೆಯಲ್ಲಿ ತುಸು ಕುಸಿತ ಉಂಟಾಗಿದೆ. ಅದರಲ್ಲೂ ಬ್ಯಾಂಕಿಂಗ್ ಸೆಕ್ಟರ್​ನ ಸೂಚ್ಯಂಕಗಳು ಕಡಿಮೆ ಆಗಿವೆ. ಹೆಚ್ಚುವರಿ ಸಿಆರ್​ಆರ್​ನಿಂದ ಬ್ಯಾಂಕುಗಳ ಲಾಭಕ್ಕೆ ಕೊಕ್ಕೆ ಬೀಳುವುದರಿಂದ ಹೂಡಿಕೆದಾರರನ್ನು ಅಧೈರ್ಯಗೊಳಿಸಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ