Repo Rate: ಆರ್‌ಬಿಐ ಸತತ ಐದನೇ ಬಾರಿ ರೆಪೊ ದರ ಏರಿಕೆ ಮಾಡುವ ನಿರೀಕ್ಷೆ
ಕಳೆದ ವಾರವಷ್ಟೇ ನಾಲ್ಕನೇ ಬಾರಿ ಬಡ್ಡಿದರಗಳನ್ನು ಹೆಚ್ಚಿಸಿದ್ದ ಆರ್‌ಬಿಐ ಇದೀಗ ಮತ್ತೆ ಬಾರಿ ಏರಿಕೆ ಮಾಡುವ ಸಾಧ್ಯತೆ ಇದೆ. ಬ್ಯಾಂಕ್ಗಳು ಕೂಡ ಈ ನಿರೀಕ್ಷೆಯಲ್ಲಿವೆ.
ಕಳೆದ ವಾರವಷ್ಟೇ ಬಡ್ಡಿದರಗಳನ್ನು ಹೆಚ್ಚಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India-RBI) ಇದೀಗ ಡಿಸೆಂಬರ್ ತಿಂಗಳಲ್ಲಿ ರೆಪೊ ದರ (Repo Rate)ವನ್ನು ಮತ್ತೆ ಹೆಚ್ಚಿಸುವ ಸಾಧ್ಯತೆಯಿದೆ. ಒಂದೊಮ್ಮೆ ಬಡ್ಡಿ ದರವನ್ನು ಏರಿಸಿದರೆ ಇದು ಐದನೇ ಬಾರಿ ಹೆಚ್ಚಿಸಿದಂತಾಗುತ್ತದೆ. ಕಳೆದ ವಾರ ನಾಲ್ಕನೇ ಬಾರಿ ಬಡ್ಡಿ ದರ ಏರಿಸಿತ್ತು. ಹಣದುಬ್ಬರ ನಿಯಂತ್ರಣಕ್ಕೆ ಆರ್‌ಬಿಐ ಕೈಗೊಳ್ಳುತ್ತಿರುವ ಬಡ್ಡಿ ಏರಿಕೆಯ ಕ್ರಮದಿಂದ ಸಾಲಗಾರರು ಬ್ಯಾಂಕ್‌ಗೆ ಪಾವತಿಸಬೇಕಾದ ಇಎಂಐ ಮತ್ತಷ್ಟು ಹೆಚ್ಚಾಗಲಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಜಾಗತಿಕ ವಿತ್ತೀಯ ಬಿಗಿತದ ಮತ್ತೊಂದು ‘ಚಂಡಮಾರುತ‘ದ ಮಧ್ಯದಲ್ಲಿದ್ದೇವೆ ಎಂದು ಹೇಳಿದ್ದರು. ಆದಾಗ್ಯೂ ಭಾರತದಲ್ಲಿ ಮತ್ತಷ್ಟು ದರ ಹೆಚ್ಚಳವು ಮಗುವಿನ ಹಂತಗಳಲ್ಲಿದ್ದು, ಕಡಿಮೆ ಆಕ್ರಮಣಕಾರಿಯಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಭಾರತದಲ್ಲಿ ಹಣದುಬ್ಬರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ (ಸೆ 30) ರೆಪೊ ದರಗಳನ್ನು 50 ಮೂಲಾಂಶಗಳಷ್ಟು (ಶೇ 0.5) ಹೆಚ್ಚಿಸಿತ್ತು. ಪ್ರಸ್ತುತ ದೇಶದಲ್ಲಿ ರೆಪೊ ದರದ ಪ್ರಮಾಣವು ಶೇ 5.90ಕ್ಕೆ ಮುಟ್ಟಿದೆ. ಆರ್ಬಿಐನ ಈ ಕ್ರಮದಿಂದ ಬ್ಯಾಂಕ್ಗಳು ಸಾಲದ ಮೇಲಿನ ಇಎಂಐ ಏರಿಸಿದರೆ ಗ್ರಾಹಕರು ಅಥವಾ ಸಾಲಗಾರರಿಗೆ ಹೆಚ್ಚಿನ ಹೊರೆ ಬೀಳಲಿದೆ. ರೆಪೊ ದರ ಎಂದರೆ ಆರ್‌ಬಿಐ ವಾಣಿಜ್ಯ ಬ್ಯಾಂಕ್‌ಗೆ ಸಾಲ ನೀಡುವ ಬಡ್ಡಿ ದರವಾಗಿದೆ.
ಕೊಟಕ್ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್‌ನ ಹಿರಿಯ ಅರ್ಥಶಾಸ್ತ್ರಜ್ಞ ಸುವೊದೀಪ್ ರಕ್ಷಿತ್, “ನಾವು ಡಿಸೆಂಬರ್‌ನಲ್ಲಿ ಮತ್ತೊಂದು 35 ಆಧಾರಿತ ಅಂಶಗಳ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದೇವೆ” ಎಂದಿದ್ದಾರೆ. ಆಗಸ್ಟ್‌ನಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 7 ಕ್ಕೆ ಏರಿತು. ಸಿಪಿಐ ಆಧಾರಿತ ಹಣದುಬ್ಬರಕ್ಕೆ ಆರ್‌ಬಿಐ ಗುರಿ ಶೇ 2-6, ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ ಕೇಂದ್ರೀಯ ಬ್ಯಾಂಕ್ ಶುಕ್ರವಾರ ತನ್ನ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 6.7 ಕ್ಕೆ ಉಳಿಸಿಕೊಂಡಿದೆ.
ದರಗಳ ಒತ್ತಡಗಳ ಸಾಮಾನ್ಯೀಕರಣವನ್ನು ನಿಗ್ರಹಿಸಲು ದರ ಏರಿಕೆಗಳು ಕಡಿಮೆ ವೇಗದಲ್ಲಿ ಮುಂದುವರಿಯುವ ಸಾಧ್ಯತೆಯಿದೆ ಮತ್ತು ಬೆಳವಣಿಗೆ ಹಣದುಬ್ಬರ ಡೈನಾಮಿಕ್ಸ್, ಯುಎಸ್ ಫೆಡರಲ್ ದರ ಏರಿಕೆಗಳು ಮತ್ತು ಭೌಗೋಳಿಕ ರಾಜಕೀಯ ಅಪಾಯ ಅಂಶಗಳ ಸಂಗಮದ ಮೇಲೆ ಅವಲಂಬಿತವಾಗಿರುತ್ತದೆ ಎಂದು ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ನ ಸಹಾಯಕ ಉಪಾಧ್ಯಕ್ಷ (ಆರ್ಥಿಕ ನೀತಿ ಮತ್ತು ಸಂಶೋಧನೆ) ಪ್ರೇರಣಾ ಸಿಂಘ್ವಿ ಹೇಳುತ್ತಾರೆ.
ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಬ್ನ ಪ್ರಧಾನ ಅರ್ಥಶಾಸ್ತ್ರಜ್ಞ ಸುನಿಲ್ ಕುಮಾರ್ ಸಿನ್ಹಾ, “ಆರ್ಬಿಐಐ ಗವರ್ನರ್ ತಮ್ಮ ಹೇಳಿಕೆಯಲ್ಲಿ ಪ್ರಸ್ತುತ ದರ ಏರಿಕೆಯ ಚಕ್ರದಲ್ಲಿ ಯಾವುದೇ ಗರಿಷ್ಠ ಅಥವಾ ಟರ್ಮಿನಲ್ ನೀತಿ ದರವನ್ನು ತಳ್ಳಿಹಾಕಿದ್ದರೂ ಚಾಲ್ತಿಯಲ್ಲಿರುವ ಸ್ಥೂಲ ಆರ್ಥಿಕ ಪರಿಸ್ಥಿತಿಗಳಲ್ಲಿ ಇದು ಸುಮಾರು 6.25 – 6.50 ಪ್ರತಿಶತ ಎಂದು ಇಂಡ್-ರಾ ನಂಬುತ್ತದೆ” ಎಂದರು. ಇಂಡಿಯಾ ರೇಟಿಂಗ್ಸ್ ಚಿಲ್ಲರೆ ಹಣದುಬ್ಬರವು 2023ರ 2ನೇ ತ್ರೈಮಾಸಿಕದಲ್ಲಿ ಶೇಕಡಾ 6.8, 3ನೇ ತ್ರೈಮಾಸಿಕದಲ್ಲಿ ಶೇಕಡಾ 6.3, 4ನೇ ತ್ರೈಮಾಸಿಕದಲ್ಲಿ ಶೇಕಡಾ 6.5 ಮತ್ತು ಹಣಕಾಸು ವರ್ಷ 2023 ರಲ್ಲಿ ಸರಾಸರಿ ಶೇಕಡಾ 6.5ಕ್ಕೆ ಬರುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Mon, 3 October 22