Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​​ಬಿಐ ನಿಲುವಿನಲ್ಲಿ ಪರಿಷ್ಕರಣೆ; ನ್ಯೂಟ್ರಲ್​​ನಿಂದ Accommodativeಗೆ ಬದಲಾವಣೆ; ಜೂನ್​​ನಲ್ಲೂ ಬಡ್ಡಿ ದರ ಇಳಿಕೆಯಾಗುತ್ತಾ?

2025ರ ಏಪ್ರಿಲ್​​ನಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ಆರ್​​ಬಿಐ ತನ್ನ ನಿಲುವನ್ನು ನ್ಯೂಟ್ರಲ್​​ನಿಂದ ಅಕಾಮೊಡೇಟಿವ್​​​ಗೆ ಬದಲಾಯಿಸಿದೆ. ಎಂಪಿಸಿ ಸಭೆ ಬಳಿಕ ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಮಾಹಿತಿ ನೀಡಿದರು. ಮುಂದಿನ ಎಂಪಿಸಿ ಸಭೆಯಲ್ಲಿ ಆರ್​​ಬಿಐ ಒಂದು, ದರ ಇಳಿಕೆ ಮಾಡಬಹುದು, ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಬಹುದು.

ಆರ್​​ಬಿಐ ನಿಲುವಿನಲ್ಲಿ ಪರಿಷ್ಕರಣೆ; ನ್ಯೂಟ್ರಲ್​​ನಿಂದ Accommodativeಗೆ ಬದಲಾವಣೆ; ಜೂನ್​​ನಲ್ಲೂ ಬಡ್ಡಿ ದರ ಇಳಿಕೆಯಾಗುತ್ತಾ?
ರಿಸರ್ವ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 09, 2025 | 12:02 PM

ನವದೆಹಲಿ, ಏಪ್ರಿಲ್ 9: ಮಹತ್ವದ ನಿರ್ಧಾರದಲ್ಲಿ ರಿಸರ್ವ್ ಬ್ಯಾಂಕ್ ತನ್ನ ನಿಲುವನ್ನು ಬದಲಿಸಿದೆ. ನ್ಯೂಟ್ರಲ್ ಎಂದಿದ್ದ ನಿಲುವನ್ನು ಅದು ಉದಾರತೆ ಅಥವಾ ಅಕಾಮೊಡೇಟಿವ್​ಗೆ (Accommodative stance) ಬದಲಾಯಿಸಿದೆ. ಆರ್​​ಬಿಐನ ಮಾನಿಟರಿ ಪಾಲಿಸಿ ಸಭೆ ಬಳಿಕ ಗವರ್ನರ್ ಸಂಜಯ್ ಮಲ್ಹೋತ್ರಾ (RBI governor Sanjay Malhotra) ಅವರು ಈ ನಿರ್ಧಾರವನ್ನು ಪ್ರಕಟಿಸಿದರು. ಮುಂದಿನ ಎಂಪಿಸಿ ಸಭೆಯಲ್ಲಿ ರಿಪೋ ದರ ಏರಿಕೆ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು. ಆರ್​​ಬಿಐ ತನ್ನ ಪರಿಷ್ಕೃತ ನಿಲುವಿನಲ್ಲಿ ಎರಡು ಆಯ್ಕೆ ಮಾತ್ರ ಮುಂದಿಟ್ಟುಕೊಂಡಿರುತ್ತದೆ. ರಿಪೋ ದರದ ಯಥಾಸ್ಥಿತಿ ಕಾಯ್ದುಕೊಳ್ಳುವುದು ಮತ್ತು ದರ ಕಡಿತ ಮಾಡುವುದು. ಅನಿರೀಕ್ಷಿತ ಸಂದರ್ಭಗಳು ಎದುರಾಗದೇ ಇದ್ದಲ್ಲಿ ಈ ಎರಡು ಆಯ್ಕೆಗಳಲ್ಲಿ ಒಂದನ್ನು ಆರ್​​ಬಿಐ ತನ್ನ ಮುಂದಿನ ದರ ಪರಿಷ್ಕರಣೆಯಲ್ಲಿ ಪರಿಗಣಿಸಬಹುದು.

ಆರ್​​ಬಿಐ ಬಳಿ ವಿವಿಧ ನಿಲುವುಗಳು

  1. ಬಿಗಿ ನಿಲುವು (Tightening stance)
  2. ತಟಸ್ಥ (Neutral stance)
  3. ಉದಾರ (Accommodative stance)

ಇದನ್ನೂ ಓದಿ: ಬಡ್ಡಿದರ 25 ಅಂಕ ಇಳಿಸಿದ ಆರ್​​ಬಿಐ; ರಿಪೋ ದರ ಶೇ. 6ಕ್ಕೆ ಇಳಿಕೆ

ಇವೆಲ್ಲವೂ ಕೂಡ ಹಣದುಬ್ಬರದ ಏರಿಳಿತದ ಟ್ರೆಂಡ್​​ಗೆ ಅನುಗುಣವಾಗಿ ಆರ್​​ಬಿಐ ತೆಗೆದುಕೊಳ್ಳುವ ನಿಲುವುಗಳಾಗಿವೆ. ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿದ್ದರೆ, ಮತ್ತು ಅಂಕೆ ಇಲ್ಲದೇ ಏರಿಕೆ ಆಗುವಂತಿದ್ದರೆ ಆಗ ಆರ್​​ಬಿಐ ಬಿಗಿ ನಿಲುವು ತಳೆಯುತ್ತದೆ. ಅಂದರೆ, ರಿಪೋ ದರವನ್ನು ಅದು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿರುತ್ತದೆ.

ಇದನ್ನೂ ಓದಿ
Image
ಜಿಡಿಪಿ ಶೇ. 6.5, ಹಣದುಬ್ಬರ ಶೇ. 4: ಆರ್​​ಬಿಐ ಅಂದಾಜು
Image
ಬಡ್ಡಿದರ ಶೇ. 6ಕ್ಕೆ ಇಳಿಸಿದ ಆರ್​​ಬಿಐ
Image
ಯುಎಎನ್ ಆ್ಯಕ್ಟಿವೇಶನ್​​ಗೆ ಫೇಸ್ ಅಥೆಂಟಿಕೇಶನ್ ಫೀಚರ್
Image
ಶೇ. 37 ಸಣ್ಣ ಉದ್ದಿಮೆಗಳು ಸಾಮರ್ಥ್ಯ ಹೆಚ್ಚಳಕ್ಕೆ ಮುಂದು: ಸಿಡ್ಬಿ ವರದಿ

ನ್ಯೂಟ್ರಲ್ ಸ್ಟಾನ್ಸ್ ಅಥವಾ ತಟಸ್ಥ ನಿಲುವಿನಲ್ಲಿ ಆರ್​​ಬಿಐ ತನ್ನ ಆಯ್ಕೆಯನ್ನು ಮುಕ್ತವಾಗಿಟ್ಟುಕೊಳ್ಳುತ್ತದೆ. ಸಂದರ್ಭ ಬಯಸಿದರೆ ದರ ಕಡಿತ ಮಾಡಬಹುದು. ಅಥವಾ ದರ ಏರಿಕೆಯನ್ನೂ ಮಾಡಬಹುದು. ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಆರ್​​ಬಿಐ ನಿಲುವು ನ್ಯೂಟ್ರಲ್ ಆಗಿತ್ತು.

ಇನ್ನು, ಅಕಾಮೊಡೇಟಿವ್ ಸ್ಟಾನ್ಸ್​​ನಲ್ಲಿ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವ ಅಂಶವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಬಹುತೇಕ ರಿಪೋ ದರ ಕಡಿತಕ್ಕೆ ಪ್ರಾಧಾನ್ಯತೆ ಕೊಡಲಾಗುತ್ತದೆ. ಮುಂದಿನ ಎಂಪಿಸಿ ಸಭೆಯಲ್ಲಿ ರಿಪೋ ದರ ಇಳಿಕೆ ಆಗಬಹುದು ಅಥವಾ ಯಥಾಸ್ಥಿತಿ ಮುಂದುವರಿಯಬಹುದು. ರಿಪೋ ದರ ಹೆಚ್ಚಳ ಸಾಧ್ಯತೆ ಬಹುತೇಕ ಇರುವುದಿಲ್ಲ. ತೀರಾ ವೈರುದ್ಧ್ಯ ಸಂದರ್ಭ ಎದುರಾದರೆ ಮಾತ್ರ ಆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ: 2025-26ರಲ್ಲಿ ಜಿಡಿಪಿ ದರ ಶೇ. 6.5; ಹಣದುಬ್ಬರ ಶೇ 4: ಆರ್​​ಬಿಐ ಅಂದಾಜು

ರಿಪೋ ದರದಲ್ಲಿ ಇಳಿಕೆ

ಕಳೆದ ಬಾರಿಯಂತೆ ಈ ಬಾರಿಯ ಎಂಪಿಸಿ ಸಭೆಯಲ್ಲೂ ರಿಪೋ ದರವನ್ನು 25 ಮೂಲಾಂಕಗಳಷ್ಟು ಕಡಿತ ಮಾಡಲು ನಿರ್ಧರಿಸಲಾಯಿತು. ಶೇ. 6.25ರಷ್ಟಿದ್ದ ರಿಪೋ ದರ ಈಗ ಶೇ. 6ಕ್ಕೆ ಇಳಿದಿದೆ.

ಇನ್ನು, 2025-26ರ ವರ್ಷಕ್ಕೆ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು. ಹಣದುಬ್ಬರ ದರ ಶೇ. 4ಕ್ಕೆ ಸೀಮಿತಗೊಳ್ಳಬಹುದು ಎಂದೂ ಆರ್​​ಬಿಐ ಅಂದಾಜು ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ