AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI MPC: ಆರ್​ಬಿಐ ರೆಪೋ ದರ ಶೇ 4ರಲ್ಲಿ ಯಥಾ ಸ್ಥಿತಿ; ಬ್ಯಾಂಕ್ ಸಾಲದ ಮೇಲಿನ ಬಡ್ಡಿಯಲ್ಲಿ ಬದಲಾವಣೆಯಿಲ್ಲ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರೆಪೋ ಹಾಗೂ ರಿವರ್ಸ್ ರೆಪೋ ದರವನ್ನು ಯಥಾ ಸ್ಥಿತಿ ಉಳಿಸಿಕೊಳ್ಳಲಾಗಿದೆ. ಬ್ಯಾಂಕ್​ಗಳ ಸಾಲದ ಮೇಲಿನ ಬಡ್ಡಿ ದರದ ಈ ಬಗೆಗಿನ ಮಾಹಿತಿ ಇಲ್ಲಿದೆ.

RBI MPC: ಆರ್​ಬಿಐ ರೆಪೋ ದರ ಶೇ 4ರಲ್ಲಿ ಯಥಾ ಸ್ಥಿತಿ; ಬ್ಯಾಂಕ್ ಸಾಲದ ಮೇಲಿನ ಬಡ್ಡಿಯಲ್ಲಿ ಬದಲಾವಣೆಯಿಲ್ಲ
ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್
TV9 Web
| Edited By: |

Updated on:Jun 04, 2021 | 11:49 AM

Share

ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾದಿಂದ ರೆಪೋ ದರ ಶೇ 4ರಷ್ಟು ಮತ್ತು ರಿವರ್ಸ್ ರೆಪೋ ದರ ಶೇ 3.35ರಲ್ಲೇ ಮುಂದುವರಿಸುವುದಕ್ಕೆ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ (ಜೂನ್ 4, 2021) ಘೋಷಣೆ ಮಾಡಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಣಕಾಸು ನೀತಿ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದ್ದು, ಬ್ಯಾಂಕ್​ ದರ ಶೇ 4.25ರಲ್ಲೇ ಇರಲಿದೆ ಎಂದು ಹೇಳಿದ್ದಾರೆ. ಕೊರೊನಾ ಬಿಕ್ಕಟ್ಟು, ಪಿಎಂಐ ದತ್ತಾಂಶ, ಕೊರೊನಾ ಸಂದರ್ಭದಲ್ಲಿ ಕೆಲಸದ ವಾತಾವರಣಕ್ಕೆ ಹೊಂದಾಣಿ ಮತ್ತು ಸಾಮಾನ್ಯ ಮುಂಗಾರಿನ ನಿರೀಕ್ಷೆ ಹಾಗೂ ವಾಸ್ತವ ಜಿಡಿಪಿ 2021-22ರಲ್ಲಿ ಶೇ 9.5ರಷ್ಟು ಆಗುವ ನಿರೀಕ್ಷೆ ಇದೆ ಹಾಗೂ ಸಿಪಿಐ ಹಣದುಬ್ಬರ ಶೇ 5.1ರಷ್ಟು ಆಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್- 19 ಪರಿಣಾಮದಿಂದ ಹೊರಬರುವ ತನಕ ಅಕಾಮಡೇಟಿವ್ ಸ್ಟ್ಯಾನ್ಸ್ (ಇಳಿಕೆಗೆ ಅವಕಾಶ ಇರುವಂತೆ) ಜತೆಗೆ ಮುಂದುವರಿಯುವುದಕ್ಕೆ ಆರ್​ಬಿಐ ಹಣಕಾಸು ನೀತಿ ಸಮಿತಿ (MPC) ನಿರ್ಧಾರ ಮಾಡಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರ ಮತ್ತು ಬ್ಯಾಂಕ್ ದರ ಬದಲಾಗದೆ ಶೇ 4.25ರಲ್ಲೇ ಮುಂದುವರಿದಿದೆ. ಎಲ್ಲರಿಗೂ ಸಮಾನವಾಗಿ ನಗದು ಹಂಚಿಕೆ ಆಗಬೇಕು ಎಂಬುದು ರಿಸರ್ವ್ ಬ್ಯಾಂಕ್ ಗಮನ. ಪ್ರೋ ಆ್ಯಕ್ಟಿವ್ ಮತ್ತು ಪ್ರೀ- ಎಂಪ್ಟಿವ್ ಧೋರಣೆಯು ಆರ್ಥಿಕತೆಯು ಮರಳಿ ಬೆಳವಣಿಗೆಯತ್ತ ಸಾಗುವುದಕ್ಕೆ ಅತಿ ಮುಖ್ಯವಾದ್ದು. ರೂ. 36,545 ಕೋಟಿ ನಗದು ಕೈಗಾರಿಕೆಗಳಿಗೆ ಪೂರೈಸಲಾಗಿದೆ. ಸರ್ಕಾರದ ಸೆಕ್ಯೂರಿಟೀಸ್ 1.0 ಅಡಿಯಲ್ಲಿ (G- Sec) ರೂ. 40,000 ಕೋಟಿ ಮೌಲ್ಯದ ಖರೀದಿ ನಡೆಸಲಾಗುವುದು. G-SAP 2.0 1.2 ಲಕ್ಷ ಕೋಟಿ ಮೌಲ್ಯದ್ದನ್ನು FY22 ಎರಡನೇ ತ್ರೈಮಾಸಿಕದಲ್ಲಿ ಮಾರುಕಟ್ಟೆ ಬೆಂಬಲಕ್ಕೆ ಮಾಡಲಾಗುವುದು. ಆರ್​ಬಿಐ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸಕ್ರಿಯವಾಗಿದೆ. ಹಣಕಾಸು ಮಾರುಕಟ್ಟೆ ಗಟ್ಟಿಯಾಗುವುದು ಕೊರೊನಾ ವಿರುದ್ಧ ಹೋರಾಟಕ್ಕೆ ಮುಖ್ಯ ಎಂದು ಅವರು ಹೇಳಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ವಾಣಿಜ್ಯ ಬ್ಯಾಂಕ್​ಗಳಿಗೆ ನೀಡುವ ಸಾಲಕ್ಕೆ ರೆಪೋ ದರ ಎನ್ನಲಾಗುತ್ತದೆ. ಇನ್ನು ವಾಣಿಜ್ಯ ಬ್ಯಾಂಕ್​ಗಳಿಂದ ರಿಸರ್ವ್​ ಬ್ಯಾಂಕ್​ನಲ್ಲಿ ಇಡುವ ಹಣಕ್ಕೆ ದೊರೆಯುವ ದರಕ್ಕೆ ರಿವರ್ಸ್ ರೆಪೋ ದರ ಎನ್ನಲಾಗುತ್ತದೆ. ಇವೆರಡರಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಆ ಕಾರಣಕ್ಕೆ ಬ್ಯಾಂಕ್​ಗಳ ವಾಹನ ಸಾಲ, ಗೃಹ ಸಾಲದ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಲಾಕ್​ಡೌನ್ ಸಂದರ್ಭದಲ್ಲಿ ಸಾಲದ ಮೇಲಿನ ಬಡ್ಡಿ ದರದಲ್ಲಿ ಕಡಿಮೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಯಥಾ ಸ್ಥಿತಿ ಉಳಿಸಿಕೊಳ್ಳಲಾಗಿದೆ. 2021-22ರಲ್ಲಿ ಜಿಡಿಪಿ ದರ ಶೇ 9.5ರಷ್ಟು ಆಗಬಹುದು ಎಂಬ ಅಂದಾಜಿದ್ದು, 2022ರಲ್ಲಿ ಚಿಲ್ಲರೆ ಹಣದುಬ್ಬರ ದ ಶೇ 5.1ರಷ್ಟು ಆಗುವ ಅಂದಾಜಿದೆ.

ಇದನ್ನೂ ಓದಿ: ಕೋವಿಡ್- 19ರ ಎರಡನೇ ಅಲೆ ಎಷ್ಟು ಬೇಗ ತಡೆಯುತ್ತೇವೋ ಅದರ ಮೇಲೆ ಆಧಾರವಾಗಿದೆ ಭಾರತದ ಬೆಳವಣಿಗೆ: ಆರ್​ಬಿಐ

(RBI repo rate and reverse repo rate unchanged in 2021 June, announced by RBI gocernor Shakthikant Das)

Published On - 11:36 am, Fri, 4 June 21

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ