RBI MPC Meet: ವರಲಕ್ಷ್ಮೀ ಹಬ್ಬದಂದೇ ಆರ್​ಬಿಐ ಗವರ್ನರ್ ಸುದ್ದಿಗೋಷ್ಠಿ: ಅಡುಗೆಮನೆ ಬಜೆಟ್​ ಮೇಲೇನು ಪರಿಣಾಮ

Reserve Bank of India: ಹಣದುಬ್ಬರವನ್ನು ನಿಯಂತ್ರಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗದಂತೆ ತಡೆಯುವುದು, ಹಣದ ಹರಿವು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಹಣಕಾಸು ನೀತಿಯ ಮೂಲಕ ಆರ್​ಬಿಐ ಘೋಷಿಸುತ್ತದೆ.

RBI MPC Meet: ವರಲಕ್ಷ್ಮೀ ಹಬ್ಬದಂದೇ ಆರ್​ಬಿಐ ಗವರ್ನರ್ ಸುದ್ದಿಗೋಷ್ಠಿ: ಅಡುಗೆಮನೆ ಬಜೆಟ್​ ಮೇಲೇನು ಪರಿಣಾಮ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 05, 2022 | 8:15 AM

ಮುಂಬೈ: ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಭಾರತೀಯ ರಿಸರ್ವ್​ ಬ್ಯಾಂಕ್​ನ ‘ಹಣಕಾಸು ನೀತಿ ಸಮಿತಿ’ (Monetary Policy Committee – MPC) ಸಭೆಯು ಇಂದು ಮುಕ್ತಾಯವಾಗಲಿದೆ. ಆಗಸ್ಟ್​ 3ರಿಂದ ಆರಂಭವಾಗಿರುವ ಸಭೆಯ ನಿರ್ಣಯಗಳನ್ನು ಭಾರತೀಯ ರಿಸರ್ವ್​ ಬ್ಯಾಂಕ್​ನ (Reserve Bank of India – RBI) ಗವರ್ನರ್ ಶಕ್ತಿಕಾಂತ್ ದಾಸ್ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಲಿದ್ದಾರೆ. ಹಲವು ವರ್ಷಗಳ ಗರಿಷ್ಠ ಮಟ್ಟ ತಲುಪಿರುವ ಹಣದುಬ್ಬರ ನಿಯಂತ್ರಣ ಮತ್ತು ಬಡ್ಡಿದರ ನಿರ್ವಹಣೆಯ ಬಗ್ಗೆ ಆರ್​ಬಿಐ ತೆಗೆದುಕೊಳ್ಳಲಿರುವ ನಿರ್ಧಾರದ ಬಗ್ಗೆ ದೇಶದ ಜನರು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಆಹಾರ ಧಾನ್ಯಗಳು, ತರಕಾರಿ, ಖಾದ್ಯ ತೈಲ, ಇಂಧನ ಸೇರಿದಂತೆ ಅತ್ಯಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಅಡುಗೆಮನೆ ಬಜೆಟ್ ಏರುಪೇರಾಗಿದ್ದು, ಆರ್​ಬಿಐ ತೆಗೆದುಕೊಳ್ಳುವ ನಿರ್ಣಯದಿಂದ ಇದರು ಸರಿಯಾದೀತಾ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಕಳೆದ ಮೇ ತಿಂಗಳಲ್ಲಿ ಆರ್​ಬಿಐ ಅನಿರೀಕ್ಷಿತ ಎಂಬಂತೆ ರೆಪೊ ದರಗಳನ್ನು 40 ಮೂಲಾಂಶಗಳಷ್ಟು (40-basis-point) ಹೆಚ್ಚಿಸಿತ್ತು. ಜೂನ್​ ತಿಂಗಳಲ್ಲಿ ಮತ್ತೆ 50 ಮೂಲಾಂಶಗಳ ಏರಿಕೆ ಕಂಡಿತ್ತು. ಇದರೊಂದಿಗೆ ಬಡ್ಡಿದರ ಹೆಚ್ಚಳದ ಪ್ರಕ್ರಿಯೆ ಆರಂಭಿಸಿದ್ದ ಆರ್​ಬಿಐ ಈವರೆಗೆ 90 ಮೂಲಾಂಶಗಳಷ್ಟು ಬಡ್ಡಿದರ ಹೆಚ್ಚಿಸಿದೆ. ಅಮೆರಿಕದಲ್ಲಿ ಇದೇ ಅವಧಿಯಲ್ಲಿ 225 ಮೂಲಾಂಶಗಳಷ್ಟು ಬಡ್ಡಿದರ ಹೆಚ್ಚಳವಾಗಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಗಮನಿಸಿದರೆ ಇಂದು (ಆಗಸ್ಟ್ 5) ಸಹ ಆರ್​ಬಿಐ ಮತ್ತೊಮ್ಮೆ ಬಡ್ಡಿದರ ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಪ್ರಸ್ತುತ ಪಾಲಿಸಿ ರೆಪೊದರಗಳು ಶೇ 4.90 ಇದೆ. ಬ್ಯಾಂಕ್ ರೆಪೊದರಗಳು ಶೇ 5.15, ಆರ್​ಬಿಐ ಬ್ಯಾಂಕ್​ಗಳ ಹಣವನ್ನು ಇರಿಸಿಕೊಳ್ಳುವ ಸ್ಟಾಂಡಿಂಗ್ ಡೆಪಾಸಿಟ್ ದರ ಶೇ 4.65 ಇದೆ.

ಭಾರತದಲ್ಲಿ ಹಣದುಬ್ಬರ ಪ್ರಮಾಣವು ಶೇ 6ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿಯೇ ಇರುತ್ತದೆ. ಈ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ, ಅಂದರೆ ಜನವರಿ 2023ರ ನಂತರ ಇದು ಶೇ 6ಕ್ಕಿಂತ ಕಡಿಮೆಯಾಗಬಹುದು ಎಂದು ಆರ್​ಬಿಐ ಅಂದಾಜಿಸಿದೆ. ಮುಂಗಾರು ಮಳೆ ದೇಶಾದ್ಯಂತ ಸಮರ್ಪಕವಾಗಿ ಸುರಿದು, ಆಹಾರ ಧಾನ್ಯಗಳು ಉತ್ಪಾದನೆ ಹಾಗೂ ತರಕಾರಿ ಬೆಲೆ ಸ್ಥಿರತೆ ಕಂಡರೆ ಹಣದುಬ್ಬರ ನಿಯಂತ್ರಣಕ್ಕೆ ಬರಬಹುದು ಎನ್ನುವ ನಿರೀಕ್ಷೆ ಅರ್ಥಶಾಸ್ತ್ರಜ್ಞರದು.

ಹಣದುಬ್ಬರಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮ ತೆಗೆದುಕೊಳ್ಳುವುದರ ಜೊತೆಗೆ, ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ, ರೂಪಾಯಿ ಮೌಲ್ಯ ಕುಸಿತ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ಆರ್​ಬಿಐ ಇಂದು ಘೋಷಿಸಲಿದೆ.

ಹಣಕಾಸು ನೀತಿ ಸಮಿತಿ ಸಭೆ: ಏಕಿಷ್ಟು ಪ್ರಾಮುಖ್ಯತೆ

ಭಾರತದ ಎಲ್ಲ ಸರ್ಕಾರಿ, ಖಾಸಗಿ, ಸಹಕಾರಿ ಬ್ಯಾಂಕ್​ಗಳು ಮತ್ತು ಸರ್ಕಾರೇತರ ಹಣಕಾಸು ಸಂಸ್ಥೆಗಳ ಕಾರ್ಯನಿರ್ವಹಣೆಗೆ ರಿಸರ್ವ್​ ಬ್ಯಾಂಕ್ ನೀತಿ ನಿಯಮಗಳನ್ನು ರೂಪಿಸುತ್ತದೆ. ಹಣಕಾಸು ನೀತಿ ರೂಪಿಸುವ ಈ ಪ್ರಕ್ರಿಯೆಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ಹಣಕಾಸು ನೀತಿ ಸಮಿತಿ (Monetary Policy Committee – MPC) ಮೇಲೆ ಇರುತ್ತದೆ. ಈ ಸಮಿತಿಯಲ್ಲಿ ಆರು ಸದಸ್ಯರು ಇರುತ್ತಾರೆ. ಮೂವರು ರಿಸರ್ವ್ ಬ್ಯಾಂಕ್​ ಸೇರಿದವರಾಗಿದ್ದರೆ, ಉಳಿದ ಮೂವರನ್ನು ಸರ್ಕಾರ ನೇಮಿಸಿರುತ್ತದೆ. ಸಮಿತಿಯ ಅಂತಿಮ ನಿರ್ಧಾರದ ಮುಖ್ಯಾಂಶಗಳನ್ನು ರಿಸರ್ವ್​ ಬ್ಯಾಂಕ್ ಗವರ್ನರ್ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸುತ್ತಾರೆ. ವಿಸ್ತೃತ ಮಾಹಿತಿ ಆರ್​ಬಿಐ ವೆಬ್​ಸೈಟ್​ನಲ್ಲಿ ಪ್ರಕಟವಾಗುತ್ತದೆ.

ಹಣದುಬ್ಬರವನ್ನು ನಿಯಂತ್ರಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗದಂತೆ ತಡೆಯುವುದು, ಹಣದ ಹರಿವು, ನಗದು ಮೀಸಲು ಅನುಪಾತ, ಲಿಕ್ವಿಡಿಟಿ, ಸರ್ಕಾರಿ ಬಾಂಡ್​, ವಿದೇಶಿ ಮೀಸಲು ನಿಧಿ, ರೂಪಾಯಿ ಮೌಲ್ಯ ಕಾಪಾಡುವುದು, ಅತ್ಯಗತ್ಯ ಸಂದರ್ಭದಲ್ಲಿ ಷೇರುಪೇಟೆ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ, ಬ್ಯಾಂಕ್ ನಿಯಮಾವಳಿ ರೂಪಿಸುವುದು ಈ ಸಮಿತಿಯ ಜವಾಬ್ದಾರಿಯಾಗಿರುತ್ತದೆ.

Published On - 8:15 am, Fri, 5 August 22

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ