UPI And Net Banking: ಅಯ್ಯೋ..ಮಿಸ್​ ಆಗಿ ಬೇರೆಯವರ ಅಕೌಂಟ್​ಗೆ ಹಣ ಹಾಕಿದ್ರಾ? ಈ ರೀತಿ ಮಾಡಿ ಹಣ ವಾಪಸ್ ಪಡೆಯಿರಿ

| Updated By: Rakesh Nayak Manchi

Updated on: Sep 30, 2022 | 4:12 PM

UPI ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ತಪ್ಪಾದ ಹಣ ವರ್ಗಾವಣೆಯಾದರೆ ಎರಡು ದಿನಗಳಲ್ಲಿ ಹಣವನ್ನು ಮರು ಪಡೆಯಬಹುದು ಅಥವಾ ತಪ್ಪಾಗಿ ಬೇರೆಯವರಿಗೆ ಕಳುಹಿಸಿದ್ದರೆ ಅದನ್ನು ಸರಿಯಾದ ವ್ಯಕ್ತಿಗೆ ಕಳುಹಿಸಬಹುದು.

UPI And Net Banking: ಅಯ್ಯೋ..ಮಿಸ್​ ಆಗಿ ಬೇರೆಯವರ ಅಕೌಂಟ್​ಗೆ ಹಣ ಹಾಕಿದ್ರಾ? ಈ ರೀತಿ ಮಾಡಿ ಹಣ ವಾಪಸ್ ಪಡೆಯಿರಿ
ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ತಪ್ಪಾದ ವರ್ಗಾವಣೆಯಾದರೆ ಹಣ ಮರು ಪಡೆಯುವ ಹಂತಗಳು
Follow us on

ದೇಶದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ಆನ್‌ಲೈನ್ ವರ್ಗಾವಣೆಗಾಗಿ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಅನ್ನು ಉತ್ತೇಜಿಸುತ್ತಿದೆ. ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮಾಡುವಾಗ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾದರೆ ಏನು ಮಾಡಬೇಕು? ಆರ್‌ಬಿಐನ ಹೊಸ ಮಾರ್ಗಸೂಚಿಗಳ ಪ್ರಕಾರ, ತಪ್ಪಾಗಿ ಆದ ವರ್ಗಾವಣೆಯಾದ ಹಣವನ್ನು 48 ಗಂಟೆಗಳ ಒಳಗೆ ಮರುಪಾವತಿ ಮಾಡಬಹುದು. ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ (UPI And Net Banking) ಮಾಡಿದ ನಂತರ ಸ್ಮಾರ್ಟ್‌ಫೋನ್‌ನಲ್ಲಿ ಸ್ವೀಕರಿಸಿದ ಸಂದೇಶವನ್ನು ಎಂದಿಗೂ ಡಿಲಿಟ್ ಮಾಡಬೇಡಿ. ಈ ಸಂದೇಶವು PPBL ಸಂಖ್ಯೆಯನ್ನು ಒಳಗೊಂಡಿದೆ. ಹಣವನ್ನು ಮರುಪಾವತಿ ಮಾಡಲು ನಿಮಗೆ ಈ ಸಂಖ್ಯೆಯ ಅಗತ್ಯವಿರುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.

ಮಾರ್ಗಸೂಚಿಗಳ ಪ್ರಕಾರ, RBI RBI ಹೊರಡಿಸಿದ ಹೊಸ ಮಾರ್ಗಸೂಚಿಯು 48 ಗಂಟೆಗಳ ಒಳಗೆ ನಿಮ್ಮ ಹಣವನ್ನು ಮರುಪಾವತಿ ಮಾಡುವುದು ಬ್ಯಾಂಕಿನ ಜವಾಬ್ದಾರಿಯಾಗಿದೆ. ಹಣವನ್ನು ಮರಳಿ ಪಡೆಯಲು ಬ್ಯಾಂಕ್‌ಗಳು ಸಹಾಯ ಮಾಡದಿದ್ದರೆ, ಗ್ರಾಹಕರು bankingombudsman.rbi.org.in ನಲ್ಲಿ ದೂರು ಸಲ್ಲಿಸಬಹುದು. ತಪ್ಪಿಯೂ ಹಣ ತಪ್ಪು ಖಾತೆಗೆ ಹೋದರೆ, ಇದಕ್ಕಾಗಿ ಪತ್ರ ಬರೆದು ಬ್ಯಾಂಕ್‌ಗೆ ನೀಡಬೇಕಾಗುತ್ತದೆ. ಇದರಲ್ಲಿ ಖಾತೆ ಸಂಖ್ಯೆ, ಖಾತೆದಾರರ ಹೆಸರು, ಹಣ ಹೋಗಿರುವ ಖಾತೆ ಸಂಖ್ಯೆ ಬರೆಯಬೇಕು.
ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮಾಡುವಾಗ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

ಯುಪಿಐ ಮಾಡುವಾಗ ನೀವು ಹಣವನ್ನು ಕಳುಹಿಸುತ್ತಿರುವ ವ್ಯಕ್ತಿಯ ಹೆಸರು ಮತ್ತು ಖಾತೆ ಸಂಖ್ಯೆ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಕ್ಯೂಆರ್ ಕೋಡ್ ಮೂಲಕ ಅಂಗಡಿಯವರಿಗೆ ಅವರ ಹೆಸರನ್ನು ಕೇಳುವ ಮೂಲಕ ಎರಡನ್ನೂ ಸಂಯೋಜಿಸಿ, ನೀವು ಕಳುಹಿಸಲು ಇಚ್ಚಿಸುತ್ತಿರುವ ಖಾತೆಯ ಸಂಖ್ಯೆಯು ಸರಿಯಾಗಿದೆಯೇ ಎಂಬುದನ್ನು ಖಚಿತಪಸಿಕೊಳ್ಳಿ. ನೆಟ್ ಬ್ಯಾಂಕಿಂಗ್ ಮಾಡುವಾಗ ಆತುರಪಡಬೇಡಿ. ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮಾಡಿದ ನಂತರ ನೀವು ಸ್ವೀಕರಿಸುವ ಸಂದೇಶವನ್ನು ಭದ್ರವಾಗಿರಿಸಿ.

ಹಣ ವಾಪಸ್ ಪಡೆಯುವ ಹಂತಗಳು

  • ತಪ್ಪಾಗಿ ತಪ್ಪು ಖಾತೆಗೆ ಹಣವನ್ನು ವರ್ಗಾಯಿಸಿದ ನಂತರ ಮೊದಲನೆಯದಾಗಿ ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ಮತ್ತು ಎಲ್ಲಾ ಮಾಹಿತಿಯೊಂದಿಗೆ PPBL ಸಂಖ್ಯೆಯನ್ನು ನಮೂದಿಸಿ
  • ಇದಾದ ನಂತರ ಬ್ಯಾಂಕ್​ಗೆ ಹೋಗಿ ಅಲ್ಲಿ ನಿಮ್ಮ ದೂರನ್ನು ದಾಖಲಿಸಿಕೊಳ್ಳಿ
  • ಶಾಖಾ ವ್ಯವಸ್ಥಾಪಕರಿಗೆ ಪತ್ರ ಬರೆಯಿರಿ
  • ಈ ಪತ್ರದಲ್ಲಿ ಹಣ ಹೋಗಿರುವ ಖಾತೆ ಸಂಖ್ಯೆಯನ್ನು ಬರೆಯಿರಿ ಮತ್ತು ನೀವು ಹಣವನ್ನು ಕಳುಹಿಸಲು ಬಯಸುವ ಖಾತೆಯ ಸಂಖ್ಯೆಯನ್ನು ಸಹ ನೀಡಿ
  • ವಹಿವಾಟಿನ ಉಲ್ಲೇಖ ಸಂಖ್ಯೆ, ವಹಿವಾಟಿನ ದಿನಾಂಕ, ಮೊತ್ತ ಮತ್ತು IFSC ಕೋಡ್ ಅನ್ನು ಬರೆಯುವುದು ಬಹಳ ಮುಖ್ಯ

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Fri, 30 September 22