RBI: ವಂಚಕ ಲೋನ್ ಆ್ಯಪ್​ಗಳ ಉಪಟಳ ನಿಗ್ರಹಕ್ಕೆ ಸರ್ಕಾರ ತರುತ್ತಿದೆ ಡಿಜಿಟಾ ಅಸ್ತ್ರ

|

Updated on: Apr 01, 2024 | 4:32 PM

RBI digita to prevent illegal loan lending apps: ಸಾಲ ನೀಡುತ್ತೇವೆಂದು ವಿವಿಧ ರೀತಿಯಲ್ಲಿ ದೌರ್ಜನ್ಯ ಮತ್ತು ವಂಚನೆ ಎಸಗುವ ಡಿಜಿಟಲ್ ಲೋನ್ ಆ್ಯಪ್​ಗಳಿಂದ ಸಾರ್ವಜನಿಕರು ದೂರವಾಗಲು ಆರ್​ಬಿಐ ಹೊಸ ಯೋಜನೆ ಹಾಕಿದೆ. ಲೋನ್ ಆ್ಯಪ್​ಗಳನ್ನು ವೆರಿಫೈ ಮಾಡುವ ಮತ್ತು ತನಿಖೆ ನಡೆಸುವ ಡಿಜಿಟಾ ಏಜೆನ್ಸಿಯನ್ನು ಆರ್​ಬಿಐ ಆರಂಭಿಸುವ ಸಾಧ್ಯತೆ ಇದೆ. ಡಿಜಿಟಾದಿಂದ ಮಾನ್ಯತೆ ಪಡೆಯದ ಲೋನ್ ಆ್ಯಪ್​ಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.

RBI: ವಂಚಕ ಲೋನ್ ಆ್ಯಪ್​ಗಳ ಉಪಟಳ ನಿಗ್ರಹಕ್ಕೆ ಸರ್ಕಾರ ತರುತ್ತಿದೆ ಡಿಜಿಟಾ ಅಸ್ತ್ರ
ಲೋನ್ ಆ್ಯಪ್
Follow us on

ನವದೆಹಲಿ, ಏಪ್ರಿಲ್ 1: ದಾಖಲೆ ಇಲ್ಲದೇ ಸಾಲ ನೀಡುತ್ತೇವೆಂದು ನಂಬಿಸಿ ವಂಚಿಸುವ ಮತ್ತು ಸಾಲ ನೀಡಿ ಮನಬಂದಂತೆ ಬಡ್ಡಿ ಪಡೆಯುವ ಲೋನ್ ಆ್ಯಪ್​ಗಳ ಬಗ್ಗೆ ಸಾಕಷ್ಟು ವರದಿಗಳು ಬರುತ್ತಲೇ ಇವೆ. ತುರ್ತು ಅಗತ್ಯಕ್ಕೆಂದೋ, ಅಥವಾ ಬಡ್ಡಿ ಇಲ್ಲದೇ ಸಾಲ ಸಿಗುತ್ತದೆ ಎಂಬ ಆಸೆಯಿಂದಲೋ ಬಹಳಷ್ಟು ಜನರು ಇಂಥ ವಂಚಕ ಆ್ಯಪ್​ಗಳ (illegal loan apps) ಬಲೆಗೆ ಬೀಳುತ್ತಾರೆ. ಈ ಹಿನ್ನೆಲೆಯಲ್ಲಿ ಆರ್​ಬಿಐ ಅಕ್ರಮ ಲೋನ್ ಆ್ಯಪ್​ಗಳಿಗೆ ಕಡಿವಾಣ ಹಾಕಲು ವಿಶೇಷ ಸಂಸ್ಥೆಯೊಂದನ್ನು ಸ್ಥಾಪಿಸುತ್ತಿದೆ. ವರದಿ ಪ್ರಕಾರ ಡಿಜಿಟಲ್ ಇಂಡಿಯಾ ಟ್ರಸ್ಟ್ ಏಜೆನ್ಸಿ (DIGITA- ಡಿಜಿಟಾ) ಅನ್ನು ಆರ್​ಬಿಐ ಸದ್ಯದಲ್ಲೇ ಅಖಾಡಕ್ಕೆ ಇಳಿಸುವ ಯೋಜನೆಯಲ್ಲಿದೆ.

ಡಿಜಿಟಾ ಒಂದು ರೀತಿಯಲ್ಲಿ ಲೋನ್ ಆ್ಯಪ್​ಗಳ ಕಣ್ಗಾವಲಿಗೆ ಸೃಷ್ಟಿಯಾಗಿರುವ ಏಜೆನ್ಸಿಯಾಗಿರುತ್ತದೆ. ಆನ್ಲೈನ್​ನಲ್ಲಿ ಸಾಲ ನೀಡವ ಆ್ಯಪ್​ಗಳ ವೆರಿಫಿಕೇಶನ್ ಕಾರ್ಯವನ್ನು ಇದು ಮಾಡುತ್ತದೆ. ಹಾಗೆಯೇ ಈ ರೀತಿ ವೆರಿಫೈ ಆಗಿರುವ ಆ್ಯಪ್​ಗಳ ರಿಜಿಸ್ಟರ್ ಮೈಂಟೇನ್ ಮಾಡುತ್ತದೆ. ಎಲ್ಲಾ ಡಿಜಿಟಲ್ ಲೋನ್ ಆ್ಯಪ್​ಗಳು ಡಿಜಿಟಾದಿಂದ ವೆರಿಫೈ ಆಗಬೇಕು. ಇಲ್ಲದಿದ್ದರೆ ಅಂಥ ಲೋನ್ ಆ್ಯಪ್ ಅನ್ನು ಅನಧಿಕೃತವೆಂದು ಪರಿಗಣಿಸಲಾಗತ್ತದೆ. ಈ ಮೂಲಕ ಅಕ್ರಮ ಲೋನ್ ಆ್ಯಪ್ ಮತ್ತು ವಂಚಕ ಲೋನ್ ಆ್ಯಪ್​ಗಳಿಗೆ ಕಡಿವಾಣ ಹಾಕಬಹುದು ಎಂಬುದು ಆರ್​ಬಿಐನ ಲೆಕ್ಕಾಚಾರ.

ಇದನ್ನೂ ಓದಿ: ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ

ಡಿಜಿಟಾ ಏಜೆನ್ಸಿಯದ್ದು ಲೋನ್ ಆ್ಯಪ್​ಗಳ ಅಧಿಕೃತತೆ ಪರಿಶೀಲಿಸುವುದು ಮಾತ್ರವಲ್ಲ, ಇವುಗಳ ತನಿಖೆಯನ್ನೂ ನಡೆಸುವ ಹೊಣೆ ಹೊಂದಿರುತ್ತದೆ. ಡಿಜಿಟಾ ರಚನೆ ಆದ ಬಳಿಕ ಜನಸಾಮಾನ್ಯರು ವೆರಿಫೈ ಆಗದ ಲೋನ್ ಆ್ಯಪ್​ಗಳನ್ನು ಗುರುತಿಸಿ, ಅವುಗಳಿಂದ ದೂರ ಉಳಿಯಬಹುದು.

ವರದಿ ಪ್ರಕಾರ, ಆರ್​ಬಿಐ 442 ಡಿಜಿಟಲ್ ಲೋನ್ ಆ್ಯಪ್​ಗಳ ಪಟ್ಟಿಯನ್ನು ಐಟಿ ಸಚಿವಾಲಯಕ್ಕೆ ಕೊಟ್ಟಿದೆ. ಗೂಗಲ್​ನಲ್ಲಿ ಇರಲು ಇವು ವಿಶ್ವಾಸಾರ್ಹವಾಗಿವೆಯಾ ಎಂಬುದನ್ನು ಪರಿಶೀಲಿಸುವಂತೆ ಕೋರಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಭಾರತೀಯ ರಿಸರ್ವ್ ಬ್ಯಾಂಕ್ 90 ವರ್ಷ ಸಂಸ್ಮರಣಾರ್ಥ 90 ರೂ ವಿಶೇಷ ನಾಣ್ಯ ಬಿಡುಗಡೆ

ಇತ್ತೀಚೆಗೆ ಗೂಗಲ್ ಸಂಸ್ಥೆ ತನ್ನ ಆ್ಯಪ್ ಸ್ಟೋರ್​ನಿಂದ 2022ರ ಸೆಪ್ಟಂಬರ್​ನಿಂದ 12 ತಿಂಗಳ ಅವಧಿಯಲ್ಲಿ 2,200 ಲೋನ್ ಆ್ಯಪ್​ಗಳನ್ನು ತೆಗೆದುಹಾಕಿತ್ತು. ಹಾಗೆಯೇ, ಆರ್​ಬಿಐ ನಿಯಂತ್ರಿತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಜೊತೆ ಸಹಭಾಗಿತ್ವ ಇರುವ ಆ್ಯಪ್​ಗಳಿಗೆ ಮಾತ್ರ ಗೂಗಲ್ ಪ್ಲೇಸ್ಟೋರ್​ನಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ