RBI Ombudsman: ಆರ್​ಬಿಐನಿಂದ ಹೊಸ ಒಂಬುಡ್ಸ್​ಮನ್ ಯೋಜನೆ ಶುರು; ದೂರನ್ನು ಹೀಗೆ ದಾಖಲಿಸಿ

ರಿಸರ್ಬ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೊಸ ಒಂಬಡ್ಸ್​ಮನ್ ಯೋಜನೆ ಶುರು ಮಾಡಲಾಗಿದೆ. ಇದರ ಅಡಿಯಲ್ಲಿ ದೂರು ದಾಖಲಿಸುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ವಿವರಣೆ ಇಲ್ಲಿದೆ.

RBI Ombudsman: ಆರ್​ಬಿಐನಿಂದ ಹೊಸ ಒಂಬುಡ್ಸ್​ಮನ್ ಯೋಜನೆ ಶುರು; ದೂರನ್ನು ಹೀಗೆ ದಾಖಲಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Nov 23, 2021 | 12:02 AM

ಬ್ಯಾಂಕ್‌ಗಳು, ಪೇಮೆಂಟ್ ಸೇವಾ ಆಪರೇಟರ್​ಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪೆನಿಗಳಂತಹ (NFFCs) ನಿಯಂತ್ರಿತ ಸಂಸ್ಥೆಗಳ ವಿರುದ್ಧ ಗ್ರಾಹಕರ ದೂರುಗಳಿಗೆ ತನ್ನ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಬಲಪಡಿಸುವ ಪ್ರಯತ್ನದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಯೋಜನೆ ಪ್ರಾರಂಭಿಸಿದೆ. ‘ಒನ್ ನೇಷನ್-ಒನ್ ಒಂಬುಡ್ಸ್‌ಮನ್’ ಗ್ರಾಹಕರಿಗೆ ದೂರುಗಳನ್ನು ಸಲ್ಲಿಸಲು, ಟ್ರ್ಯಾಕಿಂಗ್ ಮಾಡಲು ಮತ್ತು ಪ್ರತಿಕ್ರಿಯೆಯನ್ನು ಸ್ವೀಕರಿಸಲು ಸಂಪರ್ಕದ ಒನ್​ ಪಾಯಿಂಟ್ ನೀಡುತ್ತದೆ. ಗ್ರಾಹಕರು ದೂರು ಸಲ್ಲಿಸುವ ಪ್ರಕ್ರಿಯೆಯಲ್ಲಿ ಅನಗತ್ಯ ತಡೆಗಳನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ ಮತ್ತು ಸುಲಭವಾಗಿ ಪರಿಹಾರಗಳನ್ನು ಪಡೆಯುತ್ತಾರೆ. ವರದಿ ಮಾಡಲು ಬಯಸುವ ದೂರನ್ನು ಸಹ ಹೊಂದಿದ್ದರೆ, ಹೊಸ ಒಂಬುಡ್ಸ್‌ಮನ್ ಯೋಜನೆಯ ಅಡಿಯಲ್ಲಿ ಅದನ್ನು ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ.

ಒಂಬುಡ್ಸ್‌ಮನ್ ಯೋಜನೆಯಡಿ ದೂರನ್ನು ಸಲ್ಲಿಸಲು ಹಲವು ಮಾರ್ಗಗಳಿವೆ. ವೆಬ್‌ಸೈಟ್ https://cms.rbi.org.inಗೆ ಭೇಟಿ ನೀಡುವ ಮೂಲಕ ದೂರನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಆಯ್ಕೆ ಮಾಡಬಹುದು ಅಥವಾ CRPC@rbi.org.in ಇಮೇಲ್ ಮೂಲಕ ದೂರು ನೀಡಲು ಆಯ್ಕೆ ಮಾಡಬಹುದು. ದೂರನ್ನು ದಾಖಲಿಸಲು ಟೋಲ್ ಫ್ರೀ ಸಂಖ್ಯೆ 14448 ಅನ್ನು ಸಹ ಬಳಸಬಹುದು. ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಮತ್ತು ಅದನ್ನು ಚಂಡೀಗಢದಲ್ಲಿರುವ ಆರ್‌ಬಿಐನ ‘ಕೇಂದ್ರೀಕೃತ ರಸೀದಿ ಮತ್ತು ಸಂಸ್ಕರಣಾ ಕೇಂದ್ರ’ಕ್ಕೆ ಮೇಲ್ ಮಾಡುವ ಮೂಲಕ ದೂರನ್ನು ಭೌತಿಕವಾಗಿ (Physical) ಕಳುಹಿಸಬಹುದು.

ದೂರನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಈ ಸರಳ ಹಂತಗಳನ್ನು ಅನುಸರಿಸಬೇಕಾಗುತ್ತದೆ -cms.rbi.org.inಗೆ ಲಾಗ್ ಇನ್ ಮಾಡಿ ಮತ್ತು ಮುಖಪುಟದಲ್ಲಿ ಲಭ್ಯವಿರುವ ‘ಫೈಲ್ ಎ ಕಂಪ್ಲೇಂಟ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಮುಂದೆ, ಮೊಬೈಲ್ ಸಂಖ್ಯೆಯನ್ನು ಮೊಬೈಲ್‌ನೊಂದಿಗೆ ವ್ಯಾಲಿಡೇಟ್ ಮಾಡುವ ಮೊದಲು ಕ್ಯಾಪ್ಚಾವನ್ನು ಪರಿಶೀಲಿಸಬೇಕು.

-ಅಗತ್ಯವಿರುವ ವಯಕ್ತಿಕ ವಿವರಗಳನ್ನು ನಮೂದಿಸಬೇಕು ಮತ್ತು ದೂರನ್ನು ನೋಂದಾಯಿಸಲು ಬಯಸುವ ಘಟಕವನ್ನು ಆಯ್ಕೆ ಮಾಡಬೇಕು.

– ನಿಯಂತ್ರಿತ ಘಟಕದೊಂದಿಗೆ ಸಲ್ಲಿಸಿರುವ ದೂರಿನ ವಿವರಗಳನ್ನು ನೀಡಬೇಕು ಮತ್ತು ದೂರಿನ ಪ್ರತಿಯನ್ನು ಲಗತ್ತಿಸಬೇಕು.

– ದೂರು ಸಲ್ಲಿಸಲು ಕಾರ್ಡ್ ಸಂಖ್ಯೆ, ಸಾಲ ಅಥವಾ ಠೇವಣಿ ಖಾತೆ ವಿವರಗಳನ್ನು ನೀಡಬೇಕು.

– ಲೋನ್ ಮತ್ತು ಮುಂಗಡಗಳು ಅಥವಾ ಮೊಬೈಲ್ ಬ್ಯಾಂಕಿಂಗ್‌ಗಾಗಿ ಲಭ್ಯವಿರುವ ಡ್ರಾಪ್-ಡೌನ್ ಮೆನುವಿನಿಂದ ದೂರು ವರ್ಗವನ್ನು ಆಯ್ಕೆ ಮಾಡಬೇಕು.

– ಈಗ ಲಭ್ಯವಿರುವ ಆಯ್ಕೆಗಳಿಂದ ದೂರಿನ ಸಬ್​ ಕೆಟಗರಿಯನ್ನು ಆಯ್ಕೆ ಮಾಡಬೇಕು.

– ದೂರಿನ ವಿವರಗಳನ್ನು ಒದಗಿಸಬೇಕು ಮತ್ತು ವಿವಾದದ ಮೊತ್ತ ಹಾಗೂ ಕೋರಿದ ಪರಿಹಾರದ ವಿವರಗಳನ್ನು ನೀಡಬೇಕು.

– ದೂರನ್ನು ಅಂತಿಮವಾಗಿ ಸಲ್ಲಿಸುವ ಮೊದಲು ಪರಿಶೀಲಿಸಬೇಕು. ಭವಿಷ್ಯದ ಬಳಕೆ ಮತ್ತು ದಾಖಲೆಗಾಗಿ ನಕಲನ್ನು ಸೇವ್​ ಮಾಡಬೇಕು.

ಪ್ರೀಪೇಯ್ಡ್ ಇನ್​ಸ್ಟ್ರುಮೆಂಟ್​ಗೆ ಸಂಬಂಧಿಸಿದ ವಂಚನೆ ಮತ್ತು ಪಾವತಿಯ ವೈಫಲ್ಯದ  ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಒಂಬುಡ್ಸ್‌ಮನ್ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯು ಗ್ರಾಹಕರಿಗೆ ಪರಿಹಾರ ಕಾರ್ಯವಿಧಾನವನ್ನು ಸರಳ ಮತ್ತು ಪಾರದರ್ಶಕವಾಗಿಸಲು ಶ್ರಮಿಸುತ್ತದೆ.

ಇದನ್ನೂ ಓದಿ: IMPS Transaction Limit: ಐಎಂಪಿಎಸ್​ ಮಿತಿಯನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಿದ ಆರ್​ಬಿಐ

Published On - 8:34 am, Sat, 20 November 21

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು