AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರವಸ್ತುಗಳ ಬೆಲೆ ಇಳಿಕೆಯ ಎಫೆಕ್ಟ್; ರೀಟೇಲ್ ಹಣದುಬ್ಬರ ಆಗಸ್ಟ್​ನಲ್ಲಿ ಶೇ. 6.83ಕ್ಕೆ ಇಳಿಕೆ

Retail Inflation in August 2023: ಭಾರತದಲ್ಲಿ ಹಣದುಬ್ಬರ ಕಡಿಮೆ ಆಗಿದೆ. ಆಗಸ್ಟ್​ನಲ್ಲಿ ಇನ್​ಫ್ಲೇಶನ್ ಶೇ. 6.83ಕ್ಕೆ ಇಳಿದಿದೆ. ಜುಲೈನಲ್ಲಿ ಶೇ. 7.44ರಷ್ಟಿತ್ತು. ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಕಡಿಮೆ ಆಗಲು ಆಹಾರವಸ್ತುಗಳ ಬೆಲೆ ಇಳಿಕೆ ಪ್ರಮುಖವಾಗಿ ಕಾರಣವಾಗಿದೆ. ರಾಯ್ಟರ್ಸ್ ಸಂಸ್ಥೆ ನಡೆಸಿದ ಆರ್ಥಿಕ ತಜ್ಞರ ಸಮೀಕ್ಷೆಯಲ್ಲೂ ಬಹುತೇಕ ಹಣದುಬ್ಬರ ಶೇ. 7ರ ಆಸುಪಾಸಿನಲ್ಲಿ ಇರಬಹುದು ಎಂದು ಅಂದಾಜು ಮಾಡಲಾಗಿತ್ತು.

ಆಹಾರವಸ್ತುಗಳ ಬೆಲೆ ಇಳಿಕೆಯ ಎಫೆಕ್ಟ್; ರೀಟೇಲ್ ಹಣದುಬ್ಬರ ಆಗಸ್ಟ್​ನಲ್ಲಿ ಶೇ. 6.83ಕ್ಕೆ ಇಳಿಕೆ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 13, 2023 | 10:37 AM

Share

ನವದೆಹಲಿ, ಸೆಪ್ಟೆಂಬರ್ 13: ನಿರೀಕ್ಷೆಯಂತೆ ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಸಾಕಷ್ಟು ಕಡಿಮೆ ಆಗಿದೆ. ಆದರೆ ಆರ್​ಬಿಐನ ತಾಳಿಕೆಯ ಮಿತಿಗಿಂತ ಹೊರಗೇ ಇದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO- National Statistics Office) ನಿನ್ನೆ (ಸೆ. 12) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಆಗಸ್ಟ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ (Retail Inflation) ಶೇ. 6.83ಕ್ಕೆ ಇಳಿದಿದೆ. ಜುಲೈ ತಿಂಗಳಲ್ಲಿ ಹಣದುಬ್ಬರ ಶೇ. 7.44ರಷ್ಟಿತ್ತು. ಹೆಚ್ಚೂಕಡಿಮೆ 61 ಮೂಲಾಂಕಗಳಷ್ಟು ಪ್ರಮಾಣದಲ್ಲಿ ಹಣದುಬ್ಬರ ಕಡಿಮೆ ಆಗಿದೆ. ಹಿಂದಿನ ವರ್ಷ, ಅಂದರೆ 2022ರ ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ. 7ರಷ್ಟಿತ್ತು. ಅದಕ್ಕೆ ಹೋಲಿಸಿದರೂ ಹಣದುಬ್ಬರ ಕಡಿಮೆ ಆಗಿದೆ.

ಕಳೆದ ವಾರ ರಾಯ್ಟರ್ಸ್ ನಡೆಸಿದ 40ಕ್ಕೂ ಹೆಚ್ಚು ಆರ್ಥಿಕ ತಜ್ಞರ ಸಮೀಕ್ಷೆ ಪ್ರಕಾರ ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ. 7ರ ಆಸುಪಾಸಿನಲ್ಲಿ ಇರಬಹುದು ಎಂದು ಎಣಿಸಲಾಗಿತ್ತು. ಆ ಅಂದಾಜು ಬಹುತೇಕ ನಿಜವಾಗಿದೆ.

ಇದನ್ನೂ ಓದಿ: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆ ಸೂಪರ್ ಹಿಟ್ ಎನಿಸಿರುವುದು ಯಾಕೆ? ಐತಿಹಾಸಿಕ ಎನಿಸಿದ ನಿರ್ಧಾರಗಳ್ಯಾವುವು?

ಗ್ರಾಹಕ ಬೆಲೆ ಅನುಸೂಚಿ ಆಧಾರದ ಮೇಲೆ ಈ ಹಣದುಬ್ಬರದ ಲೆಕ್ಕಾಚಾರ ಮಾಡಲಾಗುತ್ತದೆ. ಜನಸಾಮಾನ್ಯರು ಸಾಮಾನ್ಯವಾಗಿ ಖರೀದಿಸುವ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಹಣದುಬ್ಬರವನ್ನು ಗಣಿಸಲಾಗುತ್ತದೆ. ತರಕಾರಿ, ಬೇಳೆಕಾಳು ಇತ್ಯಾದಿ ಆಹಾರವಸ್ತುಗಳು, ಪೆಟ್ರೋಲ್, ಎಲೆಕ್ಟ್ರಾನಿಕ್ಸ್ ಇತ್ಯಾದಿ ವಸ್ತುಗಳ ಬೆಲೆಗಳು ಗಣನೆಗೆ ಬರುತ್ತವೆ.

ಜುಲೈನಲ್ಲಿ ಶೇ. 11.51ರಷ್ಟಿದ್ದ ಆಹಾರ ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 9.94ಕ್ಕೆ ಇಳಿದಿದೆ. ಜುಲೈಗೆ ಹೋಲಿಸಿದರೆ ಆಗಸ್ಟ್​ನಲ್ಲಿ ಅಹಾರವಸ್ತುಗಳ ಬೆಲೆ ತುಸು ಇಳಿಕೆಯಾಗಿದೆ. ಆದರೂ ಕೂಡ ಬೆಲೆ ಜನಸಾಮಾನ್ಯರ ಕೈಸುಡುವಷ್ಟೇ ಇತ್ತು. ಹೀಗಾಗಿ, ತೀರಾ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ ಇಳಿಕೆಯಾಗಿಲ್ಲ.

ಇದನ್ನೂ ಓದಿ: ಸೂಪರ್ ಹಿಟ್ ಆಗಿರುವ ನ್ಯಾಷನಲ್ ಪೆನ್ಷನ್ ಸ್ಕೀಮ್ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರವಾ? ಬೇರೆಯವರೂ ಈ ಯೋಜನೆ ಹೇಗೆ ಪಡೆಯುವುದು?

ಸೆಪ್ಟೆಂಬರ್ ತಿಂಗಳಲ್ಲಿ ಆಹಾರವಸ್ತುಗಳ ಬೆಲೆ ಇನ್ನಷ್ಟು ಇಳಿದಿದೆ. ಆದರೆ ಹಬ್ಬದ ಸೀಸನ್ ಶುರುವಾಗುತ್ತಿರುವುದರಿಂದ ಹಣ್ಣು, ಹೂ, ತರಕಾರಿ ಇತ್ಯಾದಿ ಬೆಲೆಗಳು ಹೆಚ್ಚಾಗಬಹುದು. ಪರಿಣಾಮವಾಗಿ ಹಣದುಬ್ಬರ ಸೆಪ್ಟೆಂಬರ್​ನಲ್ಲಿ ಹೆಚ್ಚಿನ ಮಟ್ಟದಲ್ಲಿ ಇಳಿಯುತ್ತದೆಂದು ನಿರೀಕ್ಷಿಸಲು ಅಸಾಧ್ಯವಾಗಬಹುದು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2023-24ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 5.4ರಷ್ಟು ಇರಬಹುದು ಎಂದು ಅಂದಾಜು ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?