ಹಣ ಹೂಡಿಕೆ ಮಾಡಲು ಹಲವು ಮಾರ್ಗಗಳಿವೆ. ಬ್ಯಾಂಕುಗಳ ಠೇವಣಿ ಸ್ಕೀಮ್ಗಳಿವೆ. ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಿವೆ. ಮ್ಯುಚುವಲ್ ಫಂಡ್ಗಳಿವೆ. ಈಕ್ವಿಟಿ ಅಥವಾ ಷೇರುಗಳಲ್ಲಿ ನೇರವಾಗಿಯೂ ಹೂಡಿಕೆ ಮಾಡಬಹುದು. ಗೋಲ್ಡ್ ಬಾಂಡ್ ಇತ್ಯಾದಿ ಸ್ಕೀಮ್ಗಳಿವೆ. ಕಾರ್ಪೊರೇಟ್ ಬಾಂಡ್ಗಳಿವೆ. ಹೀಗೆ ನಾನಾ ಆಯ್ಕೆಗಳಿವೆ. ಷೇರು ಅಥವಾ ಮ್ಯುಚುವಲ್ ಫಂಡ್ಗಳಲ್ಲಿ ಹೂಡಿಕೆ (Investment) ಮಾಡುವುದು ಹೆಚ್ಚು ರಿಸ್ಕಿಯಾದರೂ ಹೆಚ್ಚಿನ ಪ್ರಮಾಣದ ರಿಟರ್ನ್ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ರಿಟರ್ನ್ ಹೆಚ್ಚು ಬರುತ್ತದೆ ಎಂದು ಎಲ್ಲಾ ಸೇವಿಂಗ್ ಹಣವನ್ನು ಷೇರುಗಳ ಮೇಲೆ ಹೂಡಿಕೆ ಮಾಡುವುದು ಮೂರ್ಖತನ ಆದೀತು ಎಂಬುದು ತಜ್ಞರ ಅನಿಸಿಕೆ.
ಹಾಗಿದ್ದರೆ, ಎಲ್ಲಿ ಹೂಡಿಕೆ ಮಾಡಬೇಕು? ಷೇರುಗಳಲ್ಲಿ ಎಷ್ಟು ಹೂಡಿಕೆ ಮಾಡಿದರೆ ರಿಸ್ಕ್ ಕಡಿಮೆ? ಈ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ಕೊಡುವುದು ಕಷ್ಟ. ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ತಜ್ಞರು 100 ಮೈನಸ್ ವಯಸ್ಸು ನಿಯಮ ಅಥವಾ ಹಂಡ್ರೆಡ್ ಮೈನಸ್ ಏಜ್ ರೂಲ್ ಅನ್ನು ಮುಂದಿಡುತ್ತಾರೆ.
ಇದನ್ನೂ ಓದಿ: SIP Magic: ದಿನಕ್ಕೆ 200 ರೂನಂತೆ ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?
ಇದು ವಯಸ್ಸಿಗೆ ತಕ್ಕಂತೆ ಮಾಡಬಹುದಾದ ಹೂಡಿಕೆ ಕ್ರಮವಾಗಿದೆ. ವಯಸ್ಸು ಕಡಿಮೆ ಇದ್ದಾಗ ಹೆಚ್ಚು ರಿಸ್ಕ್ ತೆಗೆದುಕೊಳ್ಳಬಹುದು. ನಷ್ಟವಾದಾಗ ರಿಕವರ್ ಮಾಡಿಕೊಳ್ಳಲು ಕಾಲಾವಕಾಶ ಇರುತ್ತದೆ. ಆದರೆ, ಹೆಚ್ಚು ವಯಸ್ಸಾದಂತೆಲ್ಲಾ ರಿಸ್ಕ್ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಏನು ಮಾಡಬೇಕೆಂದು ಗೊಂದಲ ಸ್ಥಿತಿಯಲ್ಲಿದ್ದರೆ ನೂರು ಮೈನಸ್ ವಯಸ್ಸು ನಿಯಮ ಸಹಾಯಕ್ಕೆ ಬರಬಹುದು.
ಉದಾಹರಣೆಗೆ, ನಿಮ್ಮ ವಯಸ್ಸು 40 ವರ್ಷ ಇದೆ ಎಂದಿಟ್ಟುಕೊಳ್ಳಿ. ಆಗ ನೂರು ಮೈನಸ್ ವಯಸ್ಸು ಎಂದರೆ 100 – 40 = 60. ನಿಮ್ಮ ಪೋರ್ಟ್ಫೋಲಿಯೋ ಅಥವಾ ಒಟ್ಟು ಹೂಡಿಕೆಯಲ್ಲಿ ಶೇ. 60ರಷ್ಟು ಮೊತ್ತವು ಈಕ್ವಿಟಿಗಳಲ್ಲಿ ವಿನಿಯೋಗವಾಗಬಹುದು. ಉಳಿದ ಶೇ. 40ರಷ್ಟು ಹಣವನ್ನು ಎಫ್ಡಿ ಇತ್ಯಾದಿ ನಿಶ್ಚಿತ ಆದಾಯದ ಸಾಧನಗಳಲ್ಲಿ ತೊಡಗಿಸಬಹುದು.
ಇನ್ನು, ನಿಮ್ಮ ವಯಸ್ಸು 50 ವರ್ಷ ಆಗಿದ್ದಲ್ಲಿ ಶೇ. 50ರಷ್ಟು ಹಣವನ್ನು ಈಕ್ವಿಟಿಗಳಲ್ಲಿ, ಉಳಿದ ಹಣವನ್ನು ಡೆಟ್ಗಳಲ್ಲಿ ಹಾಕಬಹುದು.
ಇದನ್ನೂ ಓದಿ: ಸೂತ್ರ 72; ನಿಮ್ಮ ಹಣ ಡಬಲ್ ಅಗುವುದು ಯಾವಾಗ? ಎಷ್ಟು ಬಡ್ಡಿದರ ಅಗತ್ಯ? ಎಲ್ಲಕ್ಕೂ ಕೆಲಸ ಮಾಡುತ್ತೆ ಈ ಫಾರ್ಮುಲಾ
ವಯಸ್ಸು ಇನ್ನೂ 25 ವರ್ಷ ಮಾತ್ರವೇ ಆಗಿದ್ದಲ್ಲಿ ಮುಕ್ಕಾಲು ಪಾಲು ಉಳಿತಾಯ ಹಣವನ್ನು ಈಕ್ವಿಟಿಗಳಲ್ಲಿ ತೊಡಗಿಸಬಹುದು. ಈಕ್ವಿಟಿ ಎಂದರೆ ನೇರ ಷೇರುಗಳಲ್ಲಿ ಬೇಕಾದರೆ ಇನ್ವೆಸ್ಟ್ ಮಾಡಬಹುದು. ಅಥವಾ ಈಕ್ವಿಟಿ ಮ್ಯುಚುವಲ್ ಫಂಡ್ಗಳಾದರೂ ಆಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ