Rural unemployment: ಗ್ರಾಮೀಣ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ 14.3ಕ್ಕೆ ತಲುಪಿ ಒಂದು ವಾರದಲ್ಲೇ ಡಬಲ್
ಕೊರೊನಾ ಎರಡನೇ ಅಲೆಯಲ್ಲಿ ಮೇ 16ಕ್ಕೆ ಕೊನೆಯಾದ ವಾರದಲ್ಲಿ ಗ್ರಾಮೀಣ ನಿರುದ್ಯೋಗ ಪ್ರಮಾಣ ದುಪ್ಪಟ್ಟಾಗಿ ಶೇ 14.3 ತಲುಪಿದೆ. ಆ ಮೂಲಕ 50 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಪ್ರಮಾಣ ಜಾಸ್ತಿ ಆಗಿದ್ದು ಮತ್ತು ಲಾಕ್ಡೌನ್ನಿಂದಾಗಿ ಆರ್ಥಿಕ ಚಟುವಟಿಕೆಗಳು ಸಹ ನಿಂತುಹೋಗಿವೆ. ಒಂದು ವಾರದಲ್ಲಿ ಗ್ರಾಮೀಣ ನಿರುದ್ಯೋಗದ ಪ್ರಮಾಣ ಹತ್ತಿರಹತ್ತಿರ ದುಪ್ಪಟ್ಟಾಗಿದೆ. ಕೃಷಿ ಚಟುವಟಿಕೆ ಮಂದವಾಗಿರುವುದರಿಂದ ಅದರಿಂದ ಸಹ ನಿರುದ್ಯೋಗ ಜಾಸ್ತಿ ಆಗಿದೆ. ಮೇ 16ಕ್ಕೆ ಕೊನೆಯಾದ ವಾರಕ್ಕೆ ಗ್ರಾಮೀಣ ನಿರುದ್ಯೋಗ ಪ್ರಮಾಣ ಶೇ 14.3ಕ್ಕೆ ಏರಿದೆ. ಅಂದಹಾಗೆ ಮೇ 9ರಲ್ಲಿ ಇದು ಶೇ 7.29 ಇತ್ತು ಎಂಬ ಅಂಶವನ್ನು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಲೆಕ್ಕವನ್ನು ತೆರೆದಿಟ್ಟಿದೆ. ಗ್ರಾಮೀಣ ನಿರುದ್ಯೋಗದ ಪ್ರಮಾಣ 50 ವಾರಗಳ ಗರಿಷ್ಠ ಮಟ್ಟದಲ್ಲಿದ್ದು, ಕಳೆದ ಬಾರಿ ಈ ಪ್ರಮಾಣ ಹೆಚ್ಚಿದ್ದದ್ದು ವರ್ಷದ ಹಿಂದೆ, ಜೂನ್ 7ಕ್ಕೆ ಕೊನೆಯಾದ ವಾರದಲ್ಲಿ.
ಇದೇ ರೀತಿ ನಗರ ಪ್ರದೇಶದ ನಿರುದ್ಯೋಗ ಶೇ 14.71ಕ್ಕೆ ಏರಿಕೆಯಾಗಿದೆ. ವಾರದ ಹಿಂದೆ ಇದ್ದುದಕ್ಕಿಂತ 3 ಪರ್ಸಂಟೇಜ್ ಪಾಯಿಂಟ್ ಈಗ ಜಾಸ್ತಿಯಾಗಿದೆ. ಇನ್ನು ರಾಷ್ಟ್ರೀಯ ನಿರುದ್ಯೋಗ ದರ ಶೇ 8.67ರಿಂದ ಶೇ 14.45ಕ್ಕೆ ನೆಗೆದಿದೆ. ಕೊರೊನಾ ಎರಡನೇ ಅಲೆಯ ಹೊಡೆತದಲ್ಲಿ ಉದ್ಯೋಗ ಬಿಕ್ಕಟ್ಟು ಪ್ರಮುಖವಾಗಿ ಗಮನ ಸೆಳೆಯುತ್ತಿದೆ. ಅರ್ಥಶಾಸ್ತ್ರಜ್ಞರು ಹೇಳುವಂತೆ, ಕೊರೊನಾ ಲಾಕ್ಡೌನ್ ಕಾರಣಕ್ಕೆ ನಗರ ಪ್ರದೇಶದಲ್ಲಿನ ಉದ್ಯೋಗಾವಕಾಶದ ಕೊರತೆ ಮತ್ತು ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಮಾಣದಿಂದ ಜನರು ಬಲವಂತವಾಗಿ ಹಳ್ಳಿಗಳಿಗೆ ತೆರಳಬೇಕಾಗಿದೆ. ಆದರೆ ಹಳ್ಳಿಗಳಲ್ಲಿ ಅಗತ್ಯ ಪ್ರಮಾಣದ ಆದಾಯದ ಅವಕಾಶಗಳಿಲ್ಲ. ಇದನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶದ ಲಾಕ್ಡೌನ್ಗಳ ಮತ್ತು ಕರ್ಫ್ಯೂಗಳು ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಜನರು ಉದ್ಯೋಗ ಇಲ್ಲದಂತಾಯಿತು. ಇದರ ಜತೆಗೆ ಮೇ ತಿಂಗಳಲ್ಲಿ ಕೃಷಿ ಚಟುವಟಿಕೆ ಮಂದವಾಗಿದ್ದರಿಂದ ನಿರುದ್ಯೋಗ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.
ಬೇಡಿಕೆ ಸಮಸ್ಯೆ ಎದುರಾಗಿದೆ, ಪೂರೈಕೆ ಜಾಲದ ಅಡತಡೆಗಳಿವೆ ನಗರ ಪ್ರದೇಶದ ಮನೆಗಳು ಮತ್ತು ಗ್ರಾಮೀಣ ಪ್ರದೇಶದ ಸಣ್ಣ- ಪುಟ್ಟ ಹಳ್ಳಿಗಳಲ್ಲೂ ಈ ಬಾರಿ ಕೊರೊನಾ ಸೋಂಕು ವ್ಯಾಪಿಸಿದೆ. ಭಾರತದ ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶದ ಅಸಂಘಟಿತ ಉತ್ಪಾದನೆ ಚಟುವಟಿಕೆ ದೊಡ್ಡ ಮಟ್ಟದಲ್ಲಿ ನಿಂತುಹೋಗಿದೆ. ಇದರಿಂದಾಗಿ ಭಾರತದಾದ್ಯಂತ ಸಂಘಟಿತ ಮತ್ತು ಸಂಘಟಿತ ಎರಡೂ ವಲಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ಜೆಎನ್ಯು ನಿವೃತ್ತ ಪ್ರೊಫೆಸರ್ ಮತ್ತು ಕಾರ್ಮಿಕ ಆರ್ಥಿಕ ತಜ್ಞರಾದ ಸಂತೋಷ್ ಮೆಹ್ರೋತ್ರ ಹೇಳಿದ್ದಾರೆ. “ಎಂಎಸ್ಎಂಇಗಳು (ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು) ತುಂಬ ಕೆಟ್ಟ ಸ್ಥಿತಿಯಲ್ಲಿವೆ. ಅದರ ಜತೆಗೆ ಅಸಂಘಟಿತ ಉದ್ಯೋಗ ಮಾರುಕಟ್ಟೆ ಮತ್ತು ಭಾರತದ ಗ್ರಾಮೀಣ ಭಾಗದ ಸ್ವಉದ್ಯೋಗ ಸಹ ಸಮಸ್ಯೆಯಲ್ಲಿವೆ. ಒಂದು ವೇಳೆ ಭಾರತದ ಗ್ರಾಮೀಣ ಭಾಗದಲ್ಲಿ ಕೊರೊನಾ ಹತೋಟಿಗೆ ತರದಿದ್ದಲ್ಲಿ ಮುಂದಿನ ಕೆಲವು ವಾರಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಬೇಡಿಕೆ ಸಮಸ್ಯೆ ಎದುರಾಗಿದೆ, ಪೂರೈಕೆ ಜಾಲದ ಅಡತಡೆಗಳಿವೆ, ಆದಾಯ ನಷ್ಟವಾಗಿದೆ- ಇದು ಯಾವುದೇ ಆರ್ಥಿಕತೆ ಮತ್ತು ಕಾರ್ಮಿಕ ಮಾರುಕಟ್ಟೆಗೆ ಗಂಭೀರ ಸನ್ನಿವೇಶ,” ಎಂದು ಅವರು ಹೇಳಿದ್ದಾರೆ.
ಸಾವಿರಾರು ಎಂಎಸ್ಎಂಇಗಳು ಮುಚ್ಚಿವೆ ಇನ್ನು SME ಚೇಂಬರ್ ಆಫ್ ಇಂಡಿಯಾದ ಅಧ್ಯಕ್ಷ ಚಂದ್ರಕಾಂತ್ ಸಾಲುಂಕೆ ಮೆಹ್ರೋತ್ರಾ ಅವರ ಮಾತನ್ನು ಒಪ್ಪಿಕೊಂಡು, ಕೊರೊನಾ ಎರಡನೇ ಅಲೆಯಲ್ಲಿ ಸಾವಿರಾರು ಎಂಎಸ್ಎಂಇಗಳು ಮುಚ್ಚಿವೆ. ಬೇಡಿಕೆ ಸಮಸ್ಯೆಯಾಗಿದೆ. ಯಾರಿಗೆ ಪೂರಯಸುತ್ತೀವೋ ಆರ್ಡರ್ ತೆಗೆದುಕೊಳ್ಳುತ್ತಿಲ್ಲ. ಅದರರ್ಥ ಏನೆಂದರೆ ಉತ್ಪನ್ನಗಳು ಹಾಗೇ ತಡೆಯಾಗಿದೆ, ಜತೆಗೆ ಪಾವತಿ ಕೂಡ ನಿಂತಿದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿ, ಉದ್ಯಮದ ಮೇಲೆ ಪ್ರಭಾವ ಬೀರಿದೆ. ಎಂಎಸ್ಎಂಇ ಪುನಶ್ಚೇತನವಾದರೆ ಉದ್ಯೋಗ ವಲಯ ಕೂಡ ಚೇತರಿಕೆ ಕಾಣುತ್ತದೆ. ಆದರೆ ಇವೆಲ್ಲಕ್ಕೂ ಕೆಲ ತಿಂಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ. ಕೈಗಾರಿಕೆ ಪ್ರದೇಶಗಳಾದ ಪುಣೆ, ಮುಂಬೈ, ಔರಂಗಾಬಾದ್, ಗುಜರಾತ್, ಕರ್ನಾಟಕ ಮತ್ತಿತರ ಕಡೆಗಳಿಂದ ಬಹಳ ಮಂದಿ ತಂತಮ್ಮ ಊರುಗಳಿಗೆ ತೆರಳಿದ್ದಾರೆ. ಅವರಿಗೆ ಕೂಡ ಬಿಕ್ಕಟ್ಟಾಗಿದೆ ಎಂದು ಅವರು ಹೇಳಿದ್ದಾರೆ.
ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್ನ ಅರ್ಥಶಾಸ್ತ್ರ ಪ್ರೊಫೆಸರ್ ಅರುಪ್ ಮಿತ್ರ ಮಾತನಾಡಿ, ಹೆಚ್ಚು ನಿರುದ್ಯೋಗ ದರ, ಹೆಚ್ಚಿನ ಅರೆ ನಿರುದ್ಯೋಗ, ಕಡಿಮೆ ಉತ್ಪಾದಕತೆ ಮತ್ತು ಆದಾಯ ಸಾಮರ್ಥ್ಯ ಕಡಿಮೆಯಾಗಿದೆ ಇವೆಲ್ಲವೂ ಭಾರತದಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಆಗಿದೆ.
ಇದನ್ನೂ ಓದಿ: Unemployment in India | ಕೊರೊನಾ ಭೀಕರತೆಗೆ ಮತ್ತೆ 70 ಲಕ್ಷ ಜನರಿಗೆ ಉದ್ಯೋಗ ನಷ್ಟ; ನಿರುದ್ಯೋಗ ದರ 4 ತಿಂಗಳ ಗರಿಷ್ಠ
ಇದನ್ನೂ ಓದಿ: ESIC ಸದಸ್ಯರ ನಿರುದ್ಯೋಗ ಭತ್ಯೆ, ಮತ್ತಿತರ ಸವಲತ್ತಿನ ಬಗ್ಗೆ ನಿಮಗೆ ಮಾಹಿತಿ ಇದೆಯಾ?
(Rural unemployment rate double in one week ended May 16, at 14.3%, due to corona virus second wave)