AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗಿಗಳ ಮೇಲೆ ಗೂಢಚಾರಿಕೆ ಮಾಡಬೇಡಿ; ಮೂನ್​ಲೈಟಿಂಗ್ ಚರ್ಚೆಯ ನಡುವೆ ಮೈಕ್ರೋಸಾಫ್ಟ್​ ಸಿಇಓ ಸತ್ಯ ನಡೇಲಾ ಕಿವಿಮಾತು

ಬಾಸ್​ಗಳು ತಮ್ಮ ಉದ್ಯೋಗಿಗಳು ಉತ್ಪಾದಕರಲ್ಲ ಎಂದು ಭಾವಿಸುತ್ತಾರೆ. ಆದರೆ, ಉದ್ಯೋಗಿಗಳು ತಾವು ಸರಿಯಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದು ಭಾವಿಸುತ್ತಾರೆ. ಈ ಹೊಸ ಹೈಬ್ರಿಡ್ ಕೆಲಸದ ಜಗತ್ತಿನಲ್ಲಿ ಈ ವಿರೋಧಾಭಾಸವನ್ನು ಸರಿದೂಗಿಸುವ ಅವಶ್ಯಕತೆಯಿದೆ ಎಂದು ಸತ್ಯ ನಡೆಲ್ಲಾ ಹೇಳಿದ್ದಾರೆ.

ಉದ್ಯೋಗಿಗಳ ಮೇಲೆ ಗೂಢಚಾರಿಕೆ ಮಾಡಬೇಡಿ; ಮೂನ್​ಲೈಟಿಂಗ್ ಚರ್ಚೆಯ ನಡುವೆ ಮೈಕ್ರೋಸಾಫ್ಟ್​ ಸಿಇಓ ಸತ್ಯ ನಡೇಲಾ ಕಿವಿಮಾತು
ಸತ್ಯ ನಡೆಲ್ಲಾ
TV9 Web
| Updated By: ಸುಷ್ಮಾ ಚಕ್ರೆ|

Updated on: Sep 24, 2022 | 1:58 PM

Share

ನವದೆಹಲಿ: ಕೊವಿಡ್-19 ನಂತರದ ಜಗತ್ತಿನಲ್ಲಿ ‘ವರ್ಕ್ ಫ್ರಮ್ ಹೋಮ್’ (Work From Home) ಸಾಮಾನ್ಯ ಪ್ರವೃತ್ತಿಯಾಗಿದೆ. ಎಲ್ಲಾ ವಲಯಗಳ ಉದ್ಯೋಗಿಗಳು ಸಾಮಾನ್ಯವಾಗಿ ಕೆಲಸ ಮಾಡುವ ಸ್ಥಳ ಮತ್ತು ಸಮಯದ ಬಗ್ಗೆ ಹೊಂದಿಕೆ ಮಾಡಿಕೊಳ್ಳುವಂತೆ ಸಂಸ್ಥೆಗಳಿಗೆ ಬೇಡಿಕೆಯಿಡುತ್ತಿದ್ದಾರೆ. ಅದರಲ್ಲೂ ಐಟಿ ಕಂಪನಿಯಲ್ಲಿ ಉದ್ಯೋಗಿಗಳು ಆಫೀಸಿಗೆ ಬರುವುದನ್ನೇ ಕಡಿಮೆ ಮಾಡಿರುವುದರಿಂದ ಅವರನ್ನು ಆಫೀಸಿನತ್ತ ಸೆಳೆಯಲು ಸಾಕಷ್ಟು ಸೌಲಭ್ಯಗಳನ್ನು ಕೂಡ ಒದಗಿಸಲಾಗುತ್ತಿದೆ. ಹಾಗೇ, ಒಂದು ವಾರದಲ್ಲಿ 1 ಅಥವಾ 2 ದಿನ ಮಾತ್ರ ಆಫೀಸಿಗೆ ಬಂದು ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉಳಿದ ದಿನಗಳಲ್ಲಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬಹುದಾಗಿದೆ. ಆದರೆ, ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಿದ ನಂತರ ಐಟಿ ಕ್ಷೇತ್ರದಲ್ಲಿ ಮೂನ್​ಲೈಟಿಂಗ್ (Moonlighting) ಹೆಚ್ಚಾಗಿದೆ. ಒಂದು ಕಂಪನಿಯಲ್ಲಿದ್ದುಕೊಂಡೇ ಮತ್ತೊಂದು ಕಂಪನಿಗೆ ಕೆಲಸ ಮಾಡುವುದನ್ನು ಮೂನ್​ಲೈಟಿಂಗ್ ಎನ್ನಲಾಗುತ್ತದೆ. ಇದರ ವಿರುದ್ಧ ಸಿಡಿದೆದ್ದಿರುವ ವಿಪ್ರೋ (Wipro) ಮೂನ್​ಲೈಟಿಂಗ್ ಮಾಡುತ್ತಿದ್ದ ತನ್ನ 300 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.

ಮೂನ್​ಲೈಟಿಂಗ್ ಇದೀಗ ಐಟಿ-ಬಿಟಿ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಈ ಭಾವನೆಯನ್ನು ‘ಉತ್ಪಾದಕತಾ ಭ್ರಮೆ’ ಎಂದು ಕರೆದಿದ್ದಾರೆ. ಮೈಕ್ರೋಸಾಫ್ಟ್ ಸಮೀಕ್ಷೆಯ ಪ್ರಕಾರ, ಶೇ. 80ಕ್ಕಿಂತ ಹೆಚ್ಚು ಮ್ಯಾನೇಜರ್​​ಗಳು ಮನೆಯಿಂದ ಕೆಲಸ ಮಾಡುವಾಗ ತಮ್ಮ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರಾ? ಇಲ್ಲವಾ? ಎಂಬ ಬಗ್ಗೆ ತಿಳಿಯಲು ಹೆಚ್ಚು ಎಚ್ಚರ ವಹಿಸುತ್ತಾರೆ. ಅವರು ತಮ್ಮ ಉದ್ಯೋಗಿಗಳ ಉತ್ಪಾದಕತೆ ಸಾಕಾಗುತ್ತಿಲ್ಲ ಎಂದೇ ಹೇಳುತ್ತಾರೆ.

ಇದನ್ನೂ ಓದಿ: ಬೆಂಗಳೂರು ಕ್ಯಾಂಪಸ್​ಗೆ ಜಾಗ ಕೊಟ್ಟು, ಪ್ಲಾನ್​ಗೆ ಅನುಮೋದನೆ ನೀಡಿದ್ದು ಬಿಬಿಎಂಪಿ; ಒತ್ತುವರಿ ಆರೋಪದ ಬಗ್ಗೆ ವಿಪ್ರೋ ಪ್ರತಿಕ್ರಿಯೆ

ಆದರೆ, ಶೇ. 87ರಷ್ಟು ಉದ್ಯೋಗಿಗಳಿಗೆ ತಮ್ಮ ಕಂಪನಿಯವರು ತಮ್ಮನ್ನು ಹೇಗೆ ಮತ್ತು ಏಕೆ ಟ್ರ್ಯಾಕ್ ಮಾಡುತ್ತಿದ್ದಾರೆ ಎಂಬುದರ ಕುರಿತು ಮಾಹಿತಿ ಇರುವುದಿಲ್ಲ. ಅಲ್ಲದೆ, ಅವರು ತಾವು ಸಾಕಷ್ಟು ಕೆಲಸ ಮಾಡುತ್ತಿದ್ದೇವೆ ಎಂದೇ ಹೇಳುತ್ತಾರೆ. ತಮ್ಮ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ ಎಂಬುದು ಗೊತ್ತಾದಾಗ ಅದು ಅವರ ಉತ್ಪಾದಕತೆಯ ಮೇಲೂ ಪರಿಣಾಮ ಬೀಡಬಹುದು. ಇದು ಅವರಿಗೆ ಕಂಪನಿಯ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸಬಹುದು. ಹೀಗಾಗಿ, ಉದ್ಯೋಗಿಗಳ ಮೇಲೆ ಗೂಢಚಾರಿಕೆ ಮಾಡಬೇಡಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಹೇಳಿದ್ದಾರೆ. ಅಲ್ಲದೆ, ಇದಕ್ಕೆ ಉತ್ಪಾದಕತಾ ಭ್ರಮೆ ಎಂದು ಅವರು ಹೊಸ ಹೆಸರಿಟ್ಟಿದ್ದಾರೆ.

ಬಾಸ್​ಗಳು ತಮ್ಮ ಉದ್ಯೋಗಿಗಳು ಉತ್ಪಾದಕರಲ್ಲ ಎಂದು ಭಾವಿಸುತ್ತಾರೆ. ಆದರೆ, ಉದ್ಯೋಗಿಗಳು ತಾವು ಸರಿಯಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದು ಭಾವಿಸುತ್ತಾರೆ. ಈ ಹೊಸ ಹೈಬ್ರಿಡ್ ಕೆಲಸದ ಜಗತ್ತಿನಲ್ಲಿ ಈ ವಿರೋಧಾಭಾಸವನ್ನು ಸರಿದೂಗಿಸುವ ಅವಶ್ಯಕತೆಯಿದೆ ಎಂದು ಸತ್ಯ ನಡೆಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: Moonlighting: 300 ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೋ

ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾಗಿರುವ ವಿಪ್ರೊ ಮೂನ್​ಲೈಟಿಂಗ್​​ನಲ್ಲಿ ತೊಡಗಿದ್ದ ತನ್ನ 300 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಒಂದು ಕಂಪನಿಯಲ್ಲಿ ಕೆಲಸ ಮಾಡುವಾಗಲೇ ಆ ಕೆಲಸದ ಅವಧಿಯ ನಂತರ ಮತ್ತೊಂದು ಕಂಪನಿಗೆ ಕಂಪನಿಗೆ ಕೆಲಸ ಮಾಡುವುದನ್ನು ಮೂನ್​ಲೈಟಿಂಗ್​ ಎಂದು ಕರೆಯಲಾಗುತ್ತದೆ. ವಿಪ್ರೊ ಚೇರ್‌ಮನ್ ರಿಷದ್ ಪ್ರೇಮ್​ ಜಿ, ನಮ್ಮ ಕಂಪನಿಯ ನೌಕರರಾಗಿದ್ದುಕೊಂಡು ಪ್ರತಿಸ್ಪರ್ಧಿ ಕಂಪನಿಗೂ ಕೆಲಸ ಮಾಡುವವರಿಗೆ ನಮ್ಮ ಕಂಪನಿಯಲ್ಲಿ ಯಾವುದೇ ಜಾಗವಿಲ್ಲ ಎಂದು ಖಡಕ್ ನಿಲುವು ತಳೆದಿದ್ದರು. ವಿಪ್ರೊಗೆ ಹಾಗೂ ಅದೇ ಸಮಯದಲ್ಲಿ ನಮ್ಮ ಪ್ರತಿಸ್ಪರ್ಧಿ ಕಂಪನಿಯೊಂದಿಗೆ ನೇರವಾಗಿ ಕೆಲಸ ಮಾಡುವ 300 ಜನರನ್ನು ಕಳೆದ ಕೆಲವು ತಿಂಗಳುಗಳಲ್ಲಿ ನಾವು ಕಂಡುಹಿಡಿದಿದ್ದೇವೆ. ಆ 300 ಜನ ಉದ್ಯೋಗಿಗಳನ್ನು ಸೇವಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ವಜಾಗೊಳಿಸಲಾಗಿದೆ ಎಂದು ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ