SBI FD vs Post Office FD: ಎಸ್​ಬಿಐ ವರ್ಸಸ್ ಪೋಸ್ಟ್​ ಆಫೀಸ್​ ಎಫ್​ಡಿ ಬಡ್ಡಿ ದರದಲ್ಲಿ ಯಾವುದು ಉತ್ತಮ ಆಯ್ಕೆ

ಫಿಕ್ಸೆಡ್​ ಡೆಪಾಸಿಟ್ಸ್​ ಹೂಡಿಕೆಗೆ ಅತ್ಯುತ್ತಮ ಇನ್​ಸ್ಟ್ರುಮೆಂಟ್​. ಭಾರತದ ಮಧ್ಯಮ ವರ್ಗದ ಹೆಚ್ಚಿನ ಜನರು ಇದರಲ್ಲಿ ಹೂಡಿಕೆ ಮಾಡುವುದಕ್ಕೆ ಬಯಸುತ್ತಾರೆ. ಎಸ್​ಬಿಐ ವರ್ಸಸ್ ಪೋಸ್ಟ್​ ಆಫೀಸ್ ಇವೆರಡರ ಪೈಕಿ ಎಫ್​ಡಿ ಹೂಡಿಕೆಗೆ ಯಾವುದು ಉತ್ತಮ ಎಂಬ ಮಾಹಿತಿ ಇಲ್ಲಿದೆ.

SBI FD vs Post Office FD: ಎಸ್​ಬಿಐ ವರ್ಸಸ್ ಪೋಸ್ಟ್​ ಆಫೀಸ್​ ಎಫ್​ಡಿ ಬಡ್ಡಿ ದರದಲ್ಲಿ ಯಾವುದು ಉತ್ತಮ ಆಯ್ಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 28, 2022 | 11:26 AM

ಭಾರತದ ಮಧ್ಯಮ ವರ್ಗದವರ ಪಾಲಿಗೆ ಬಹಳ ಹಿಂದಿನಿಂದಲೂ ಫಿಕ್ಸೆಡ್ ಡೆಪಾಸಿಟ್ಸ್ (Fixed Deposits) ಮೊದಲ ಆಯ್ಕೆಯ ಹೂಡಿಕೆ ಆಗಿದೆ. ಏನೇ ಕಡಿಮೆ ರಿಟರ್ನ್ ಅಂತಾದರೂ ಇತರ ಹೂಡಿಕೆ ಆಯ್ಕೆಗಳಿಗೆ ಹೋಲಿಸಿದಲ್ಲಿ ಅಪಾಯ ಇಲ್ಲ ಎಂಬ ಕಾರಣದಿಂದಲೇ ಎಫ್​.ಡಿ. ಆದ್ಯತೆ ಆಗಿದೆ. ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ಅಲ್ಪಾವಧಿಗೋ ಅಥವಾ ದೀರ್ಘಾವಧಿಗೋ ಫಿಕ್ಸೆಡ್ ಡೆಪಾಸಿಟ್ಸ್ ಮಾಡಬಹುದು. ಬ್ಯಾಂಕ್​ಗಳನ್ನು ಹೊರತುಪಡಿಸಿ, ಪೋಸ್ಟ್​ ಆಫೀಸ್​ನಿಂದಲೂ (Post Office) ಎಫ್​ಡಿ ಯೋಜನೆಗಳನ್ನು ಒದಗಿಸಲಾಗುತ್ತದೆ. ಎಷ್ಟೋ ಪ್ರಮುಖ ಬ್ಯಾಂಕ್​ಗಳಿಗಿಂತ ಪೋಸ್ಟ್​​ ಆಫೀಸ್​ನ ಬಡ್ಡಿ ದರ ಉತ್ತಮವಾಗಿದೆ. ದರಗಳನ್ನು ತ್ರೈಮಾಸಿಕವಾಗಿ ಪರಿಷ್ಕರಣೆ ಮಾಡಲಾಗುತ್ತದೆ. ಮಾರುಕಟ್ಟೆ ಪರಿಸ್ಥಿತಿ ಹಾಗೂ ಸರ್ಕಾರದ ನೀತಿಗೆ ಅನುಗುಣವಾಗಿ ಇದು ಬದಲಾವಣೆ ಆಗುತ್ತದೆ.

ಅಪಾಯ ತೆಗೆದುಕೊಳ್ಳುವುದಕ್ಕೆ ಸಿದ್ಧರಿಲ್ಲ ಎನ್ನುವವರಿಗೆ ಎಫ್​ಡಿಯನ್ನು ಹೊರತುಪಡಿಸಿ ಇರುವ ಮತ್ತೊಂದು ಆಯ್ಕೆಯೆಂದರೆ, ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್​ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ಟರ್ಮ್ ಯೋಜನೆಗಳು. ಎಸ್​ಬಿಐನಿಂದ ಕನಿಷ್ಠ ಅವಧಿ 7 ದಿನದಿಂದ ಗರಿಷ್ಠ 10 ವರ್ಷದ ತನಕ ಎಫ್​ಡಿ ಯೋಜನೆ ಒದಗಿಸಲಾಗುತ್ತದೆ. ಅದು ಹೂಡಿಕೆ ಅಗತ್ಯದ ಮೇಲೆ ಆಧಾರವಾಗಿರುತ್ತದೆ. ಮೊದಲೇ ದೇಶದ ಅತಿ ದೊಡ್ಡ ಬ್ಯಾಂಕ್ ಎಂಬ ಅಗ್ಗಳಿಕೆ ಇರುವುದರಿಂದ ಗ್ರಾಹಕರಲ್ಲಿ ಈ ಬ್ಯಾಂಕ್​ ಬಗ್ಗೆ ಅಪರಿಮಿತವಾದ ವಿಶ್ವಾಸ ಇದೆ ಹಾಗೂ ಹಲವರಿಗೆ ಎಫ್​ಡಿ ಮಾಡುವುದಕ್ಕೆ ಎಸ್​ಬಿಐ ಮೊದಲ ಆಯ್ಕೆ ಆಗಿದೆ. ಪೋಸ್ಟ್ ಆಫೀಸ್ ಹಾಗೂ ಎಸ್​ಬಿಐ ಎರಡೂ ಎಫ್​ಡಿ ಮಾಡುವುದಕ್ಕೆ ಉತ್ತಮ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಡ್ಡಿ ದರವನ್ನು ಹೋಲಿಸಿ ನೋಡಿದಲ್ಲಿ ಯಾವುದು ಉತ್ತಮ ರಿಟರ್ನ್ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.

ಪೋಸ್ಟ್​ ಆಫೀಸ್ ಬಡ್ಡಿ ದರ: ಫೋಸ್ಟ್​ ಆಫೀಸ್ ಬಡ್ಡಿ ದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಏಪ್ರಿಲ್ 1, 2020ರಿಂದ ಅದು ಬದಲಾವಣೆ ಆಗದೆ ಹಾಗೇ ಉಳಿದುಕೊಂಡಿದ್ದು, ಒಂದು ವರ್ಷದ ಎಫ್​ಡಿ ದರ ಶೇ 5.5ರಿಂದ ಶುರುವಾಗುತ್ತದೆ. ಪೋಸ್ಟ್ ಆಫೀಸ್​ ಎಫ್​ಡಿ ಬಡ್ಡಿ ದರ ಶೇ 6.7ರ ತನಕ ದೊರೆಯುತ್ತದೆ.

– ಇಂಡಿಯಾ ಪೋಸ್ಟ್ ಎಫ್​ಡಿ ದರ 1 ವರ್ಷಕ್ಕೆ: ಶೇ 5.5

– ಇಂಡಿಯಾ ಪೋಸ್ಟ್ ಎಫ್​ಡಿ ದರ 2 ವರ್ಷಕ್ಕೆ: ಶೇ 5.5

– ಇಂಡಿಯಾ ಪೋಸ್ಟ್ ಎಫ್​ಡಿ ದರ 3 ವರ್ಷಕ್ಕೆ: ಶೇ 5.5

– ಇಂಡಿಯಾ ಪೋಸ್ಟ್ ಎಫ್​ಡಿ ದರ 5 ವರ್ಷಕ್ಕೆ: ಶೇ 6.7

ಎಸ್​ಬಿಐ ಎಫ್​ಡಿ ದರ: ಪೋಸ್ಟ್​ ಆಫೀಸ್​ಗೆ ಹೋಲಿಸಿದಲ್ಲಿ ಎಸ್​ಬಿಐ ಎಫ್​ಡಿ ದರ ಆರಾಮದಾಯಕ ಅವಧಿಯನ್ನು ಹೊಂದಿದೆ. ಇಂಡಿಯಾ ಪೋಸ್ಟ್​ನಲ್ಲಿ ಕನಿಷ್ಠ ಅವಧಿಯೇ 1 ವರ್ಷ. ಅದೇ ಎಸ್​ಬಿಐನಲ್ಲಿ ಕನಿಷ್ಠ ಅವಧಿ 7 ದಿನ. ಬ್ಯಾಂಕ್​ನಿಂದ ಒದಗಿಸುವ ಬಡ್ಡಿ ದರವು 7 ದಿನದಿಂದ 10 ವರ್ಷ ಅವಧಿಯ ಮೇಲೆ ಬದಲಾವಣೆ ಆಗುತ್ತದೆ.

ಎಸ್​ಬಿಐ ಬಡ್ಡಿ ದರ 2 ಕೋಟಿಗಿಂತ ಕಡಿಮೆ ಮೊತ್ತಕ್ಕೆ ಹೀಗಿದೆ:

7 ದಿನದಿಂದ 45 ದಿನಕ್ಕೆ: ಶೇ 2.9

46 ದಿನದಿಂದ 179 ದಿನಕ್ಕೆ: ಶೇ 3.9

180 ದಿನದಿಂದ 210 ದಿನಕ್ಕೆ: ಶೇ 4.4

211 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿಗೆ: ಶೇ 4.4

ಎಫ್​ಡಿ ಹೂಡಿಕೆ 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ 5

ಎರಡು ವರ್ಷಕ್ಕಿಂತ ಮೇಲಿನ ಅವಧಿಗೆ 3 ವರ್ಷಕ್ಕಿಂತ ಕಡಿಮೆ ಅವಧಿಗೆ 5.1

ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ 5.3

5 ವರ್ಷದಿಂದ 10 ವರ್ಷದ ಅವಧಿಗೆ ಶೇ 5.4

ಇದನ್ನೂ ಓದಿ: ಆರ್​ಬಿಐ ವಿತ್ತೀಯ ನೀತಿ ಪ್ರಕಟ; ನಿಮ್ಮ ಹೋಂ ಲೋನ್, ಕಾರ್ ಲೋನ್, ಬ್ಯಾಂಕ್ ಎಫ್​ಡಿಗಳ ಇಎಂಐ ಮೇಲಾಗುವ ಪರಿಣಾಮಗಳೇನು?

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್