AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SMS Charges: ಮೊಬೈಲ್ ಫಂಡ್ ವರ್ಗಾವಣೆಗೆ ಎಸ್ಎಂಎಸ್ ಶುಲ್ಕ ಮನ್ನಾ ಮಾಡಿದ ಎಸ್​ಬಿಐ

ಹಣ ಕಳುಹಿಸಲು, ಹಣ ವಿನಂತಿಸಲು, ಖಾತೆಯಲ್ಲಿರುವ ಬಾಕಿ ಮೊತ್ತ ತಿಳಿಯಲು, ಮಿನಿ ಸ್ಟೇಟ್​ಮೆಂಟ್​ ಪಡೆಯಲು ಯುಎಸ್​ಎಸ್​ಡಿ ಸೇವೆ ಪಡೆಯಬಹುದು.

SMS Charges: ಮೊಬೈಲ್ ಫಂಡ್ ವರ್ಗಾವಣೆಗೆ ಎಸ್ಎಂಎಸ್ ಶುಲ್ಕ ಮನ್ನಾ ಮಾಡಿದ ಎಸ್​ಬಿಐ
ಭಾರತೀಯ ಸ್ಟೇಟ್ ಬ್ಯಾಂಕ್ (ಸಂಗ್ರಹ ಚಿತ್ರ)
TV9 Web
| Edited By: |

Updated on: Sep 18, 2022 | 9:29 AM

Share

ಬೆಂಗಳೂರು: ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ‘ಭಾರತೀಯ ಸ್ಟೇಟ್ ಬ್ಯಾಂಕ್’ (State Bank of India – SBI) ಮೊಬೈಲ್ ಮೂಲಕ ಹಣ ವರ್ಗಾವಣೆ ವಿಧಿಸುತ್ತಿದ್ದ ಎಸ್ಎಂಎಸ್ ಸಂದೇಶದ ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಬಳಕೆದಾರರು ಈಗ ಯುಎಸ್ಎಸ್​ಡಿ (Unstructured Supplementary Service Data – USSED) ಸೇವೆಗಳ ಮೂಲಕ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವಹಿವಾಟು ನಡೆಸಬಹುದು ಎಂದು ಎಸ್​ಬಿಐ ಮಾಹಿತಿ ನೀಡಿದೆ. ಈ ಕುರಿತು ತನ್ನ ಟ್ವಿಟರ್ ಹ್ಯಾಂಡಲ್​ನಲ್ಲಿ ಟ್ವೀಟ್ ಮಾಡಿರುವ ಎಸ್​ಬಿಐ, ‘ಮೊಬೈಲ್ ಮೂಲಕ ನಗದು ವರ್ಗಾವಣೆ-ವಹಿವಾಟು ಮೇಲಿನ ಎಸ್ಎಂಎಸ್ ಶುಲ್ಕಗಳನ್ನು ಈಗ ಮನ್ನಾ ಮಾಡಲಾಗಿದೆ. ಬಳಕೆದಾರರು ಈಗ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ವಹಿವಾಟು ನಡೆಸಬಹುದು’ ಎಂದು ಹೇಳಿದೆ.

ಬಳಕೆದಾರರು ಹಣ ಕಳುಹಿಸಲು, ಹಣ ವಿನಂತಿಸಲು, ಖಾತೆಯಲ್ಲಿರುವ ಬಾಕಿ ಮೊತ್ತ ತಿಳಿಯಲು, ಮಿನಿ ಸ್ಟೇಟ್​ಮೆಂಟ್​ ಪಡೆಯಲು ಹಾಗೂ ಯುಪಿಐ ಪಿನ್ ಬದಲಾವಣೆ ಸೇರಿದಂತೆ ಹಲವು ಸೇವೆಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪಡೆಯಬಹುದು ಎಂದು ಎಸ್​ಬಿಐ ಹೇಳಿದೆ.

ಏನಿದು ಯುಎಸ್​ಎಸ್​ಡಿ

ಯುಎಸ್​ಎಸ್​ಡಿ ವ್ಯವಸ್ಥೆಯನ್ನು ಸಾಮಾನ್ಯವಾಗಿ ಮೊಬೈಲ್ ಸೇವಾದಾತ ಕಂಪನಿಗಳು ಟಾಕ್​ಟೈಮ್ ಬ್ಯಾಲೆನ್ಸ್​ ಅಥವಾ ಖಾತೆಯ ಮಾಹಿತಿ ಪರಿಶೀಲಿಸುವ ಸೇವೆ ಒದಗಿಸಲು ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ಇದೇ ಸೇವೆಯನ್ನು ಮೊಬೈಲ್ ಬ್ಯಾಂಕಿಂಗ್ ವಹಿವಾಟುಗಳಿಗೂ ಬಳಸಲಾಗುತ್ತಿದೆ. ಈ ಸೇವೆಯು ಸ್ಮಾರ್ಟ್​​ಫೋನ್​ಗಳಲ್ಲಿ ಮಾತ್ರವೇ ಅಲ್ಲ, ಫೀಚರ್ ಫೋನ್​ಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಭಾರತದಲ್ಲಿ ಸುಮಾರು 100 ಕೋಟಿ ಮೊಬೈಲ್ ಫೋನ್​ಗಳು ಬಳಕೆಯಲ್ಲಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು 65 ಕೋಟಿ ಮೊಬೈಲ್​ಗಳು ಫೀಚರ್ ಫೋನ್​ಗಳಾಗಿವೆ. ಇಂಥ ಫೋನ್​ಗಳನ್ನು ಬಳಸುವವರಿಗೆ ಯುಎಸ್​ಎಸ್​ಡಿ ಹೆಚ್ಚಿನ ಅನುಕೂಲಗಳನ್ನು ಒದಗಿಸುತ್ತದೆ.

ಬೆಂಚ್​ಮಾರ್ಕ್ ದರ ಹೆಚ್ಚಳ

ಎಸ್​ಬಿಐ ತನ್ನ ಬೆಂಚ್​ ಮಾರ್ಕ್ ಪ್ರೈಮ್ ಲೆಂಡಿಂಗ್ (ಸಾಲ ನೀಡುವ ಗರಿಷ್ಠ ಬಡ್ಡಿ) ದರವನ್ನು 70 ಮೂಲಾಂಶಗಳಷ್ಟು ಹೆಚ್ಚಿಸಿದೆ. ಎಸ್​ಬಿಐ ವೆಬ್​ಸೈಟ್​ನಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಪರಿಷ್ಕೃತ ಬಡ್ಡಿದರವು ಸೆಪ್ಟೆಂಬರ್ 15ರಿಂದ ಜಾರಿಗೆ ಬರಲಿದ್ದು, ಶೇ 13.45ರ ಗರಿಷ್ಠ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಬ್ಯಾಂಕ್ ಸಾಲಸ ನೀಡುವ ಕನಿಷ್ಠ ಬಡ್ಡಿದರವನ್ನು ಶೇ 8.7ಕ್ಕೆ ಹೆಚ್ಚಿಸಿದೆ. ಈ ಬೆಳವಣಿಗೆಯಿಂದ ಸಾಲಗಾರರ ಇಎಂಐ ಮಾಸಿಕ ಕಂತಿನ ಪ್ರಮಾಣವೂ ಹೆಚ್ಚಾಗಲಿದೆ.

ಪ್ರತಿ ಮೂರು ತಿಂಗಳಿಗೆ ಒಮ್ಮೆ ಮಾರುಕಟ್ಟೆ ಪರಿಸ್ಥಿತಿ ಆಧರಿಸಿ ಬ್ಯಾಂಕ್​ಗಳು ಬಿಪಿಎಲ್ಆರ್ ಮತ್ತು ಮೂಲ ದರಗಳನ್ನೂ ಪರಿಷ್ಕರಿಸುತ್ತವೆ. ಎಸ್​ಬಿಐನ ಸಾಲದ ದರ ಪರಿಷ್ಕರಣೆಯನ್ನು ಮುಂದಿನ ದಿನಗಳಲ್ಲಿ ಇತರ ಬ್ಯಾಂಕುಗಳು ಅನುಸರಿಸುವ ಸಾಧ್ಯತೆಯಿದೆ.

Follow Us
TV9 Web
TV9 Web

TV9 Kannada

Read More
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್