Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸ್ಕ್ಯಾಮ್..! ಒಟಿಪಿ ಬರದೆಯೇ ಆಧಾರ್ ಬಳಸಿ ಹಣ ಎಗರಿಸುತ್ತಾರೆ; ಈಗಲೇ ಬಯೋಮೆಟ್ರಿಕ್ ಲಾಕ್ ಮಾಡಿ; ಇದು ಹೇಗೆ?

How To Disable Aadhaar AEPS: ಆಧಾರ್ ಶಕ್ತ ಪೇಮೆಂಟ್ ವ್ಯವಸ್ಥೆ (ಎಇಪಿಎಸ್) ಮೂಲಕ ಹಣ ಪಡೆಯುವಾಗ ಮೊಬೈಲ್ ನಂಬರ್​ಗೆ ಒಟಿಪಿ ಕೂಡ ಬಂದಿರುವುದಿಲ್ಲ. ಅಷ್ಟೇ ಅಲ್ಲ, ಹಣ ಕಡಿತಗೊಂಡ ಬಳಿಕವೂ ಎಸ್ಸೆಮ್ಮೆಸ್ ನೋಟಿಫಿಕೇಶನ್ ಬರುವುದಿಲ್ಲ. ಆಧಾರ್​ಗೆ ನೀಡಲಾಗಿದ್ದ ಫಿಂಗರ್ ಪ್ರಿಂಟನ್ನು ನಕಲು ಮಾಡಿ ದುರುಳರು ಎಇಪಿಎಸ್ ಮೂಲಕ ಹಣ ಲಪಟಾಯಿಸುತ್ತಿದ್ದಾರೆ. ಎಇಪಿಎಸ್ ಅನ್ನು ಚಾಲೂಗೊಳಿಸಿದ್ದರೆ ಮೊದಲು ಅದನ್ನು ಬಂದ್ ಮಾಡಿ. ಈ ಕ್ರಮ ಹೇಗೆ ಎಂಬ ವಿವರ ಮುಂದಿದೆ.

ಹೊಸ ಸ್ಕ್ಯಾಮ್..! ಒಟಿಪಿ ಬರದೆಯೇ ಆಧಾರ್ ಬಳಸಿ ಹಣ ಎಗರಿಸುತ್ತಾರೆ; ಈಗಲೇ ಬಯೋಮೆಟ್ರಿಕ್ ಲಾಕ್ ಮಾಡಿ; ಇದು ಹೇಗೆ?
ಆಧಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 18, 2023 | 11:39 AM

ಆಧಾರ್ ಕಾರ್ಡ್ ವಿಚಾರದಲ್ಲಿ ಯಾವುದಕ್ಕೆ ಹೆಚ್ಚು ಭಯಪಡಲಾಗುತ್ತಿತ್ತೋ ಅದೀಗ ದೊಡ್ಡ ಸ್ಕ್ಯಾಮ್ ಆಗಿ ಹೆಡೆ ಎತ್ತಿದೆ. ಆಧಾರ್​ನ ಬಯೋಮೆಟ್ರಿಕ್ (biometric data) ಬಳಸಿ ಜನರ ಬ್ಯಾಂಕ್ ಖಾತೆಗಳಿಗೆ ಕಳ್ಳರು ಕನ್ನ ಹಾಕಿರುವ ಘಟನೆಗಳು ಬಹಳಷ್ಟು ಬೆಳಕಿಗೆ ಬರುತ್ತಿವೆ. ತಮಗೆ ಅರಿವಿಲ್ಲದೇ ಅಕೌಂಟ್​ನಿಂದ ಹಣ ಮಾಯವಾಗುತ್ತಿರುವ ಬಗ್ಗೆ ಬಹಳ ಮಂದಿ ದೂರು ಕೊಟ್ಟಿದ್ದಾರೆ. ಆಧಾರ್ ಮೂಲಕ ಹಣ ಪಾವತಿ ಪಡೆಯುವ ವ್ಯವಸ್ಥೆಯನ್ನು ದುರುಪಯೋಗಿಸಿಕೊಂಡಿರುವುದು ತಿಳಿದುಬಂದಿದೆ. ಆತಂಕದ ಸಂಗತಿ ಎಂದರೆ, ಈ ರೀತಿ ಆಧಾರ್ ಶಕ್ತ ಪೇಮೆಂಟ್ ವ್ಯವಸ್ಥೆ (AePS- Aadhaar Enabled Payment System) ಮೂಲಕ ಹಣ ಪಡೆಯುವಾಗ ಮೊಬೈಲ್ ನಂಬರ್​ಗೆ ಒಟಿಪಿ ಕೂಡ ಬಂದಿರುವುದಿಲ್ಲ. ಅಷ್ಟೇ ಅಲ್ಲ, ಹಣ ಕಡಿತಗೊಂಡ ಬಳಿಕವೂ ಎಸ್ಸೆಮ್ಮೆಸ್ ನೋಟಿಫಿಕೇಶನ್ ಬರುವುದಿಲ್ಲ. ಆಧಾರ್​ಗೆ ನೀಡಲಾಗಿದ್ದ ಫಿಂಗರ್ ಪ್ರಿಂಟನ್ನು ನಕಲು ಮಾಡಿ ದುರುಳರು ಎಇಪಿಎಸ್ ಮೂಲಕ ಹಣ ಲಪಟಾಯಿಸುತ್ತಿದ್ದಾರೆ.

ಈ ಸಮಸ್ಯೆಗೆ ಏನು ಮಾಡಬೇಕು?

ಈ ರೀತಿ ಎಇಪಿಎಸ್ ಸಿಸ್ಟಂ ಅನ್ನು ದುರುಪಯೋಗಿಸಿಕೊಂಡಿರುವುದು ಕೆಲವೇ ಮಂದಿಗೆ ಸೀಮಿತವಾಗಿಲ್ಲ. ಸಾವಿರಾರು ಮಂದಿಗೆ ಈ ಅನುಭವವಾಗಿದೆ. ಒಮ್ಮೆಗೆ ಸಾವಿರಾರು ರೂಗಳಷ್ಟು ಹಣವನ್ನು ಅಪರಾಧಿಗಳು ಎಗರಿಸುತ್ತಿದ್ದಾರೆ. ಇದಕ್ಕೆ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂನಲ್ಲಿರುವ ಕೆಲ ತಾಂತ್ರಿಕ ದೋಷ ಕಾರಣ. ಸದ್ಯಕ್ಕೆ ನೀವು ಆಧಾರ್​ನ ಬಯೋಮೆಟ್ರಿಕ್ ಡಾಟಾವನ್ನು ಲಾಕ್ ಮಾಡುವುದು ಉತ್ತಮ ಉಪಾಯ. ಎಇಪಿಎಸ್ ಅನ್ನು ಚಾಲೂಗೊಳಿಸಿದ್ದರೆ ಮೊದಲು ಅದನ್ನು ಬಂದ್ ಮಾಡಿ. ಈ ಕ್ರಮ ಹೇಗೆ ಎಂಬ ವಿವರ ಮುಂದಿದೆ.

ಇದನ್ನೂ ಓದಿ: Deepavali Bonus: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್; ಹಬ್ಬಕ್ಕೆ ಮುಂಚೆ 7,000 ರೂವರೆಗೆ ಬೋನಸ್ ಪ್ರಕಟ

ಎಇಪಿಎಸ್ ಎಂದರೇನು?

ಯುಐಡಿಎಐ ಮತ್ತು ಆರ್​ಬಿಐ ನಿರ್ದೇಶನಪಡಿಸಿದ ಮಾರ್ಗಸೂಚಿಗಳಿಗೆ ಅನುಸಾರವಾಗಿ ರಾಷ್ಟ್ರೀಯ ಪಾವತಿ ನಿಗಮವು (ಎನ್​ಪಿಸಿಐ) ಇತ್ತೀಚೆಗಷ್ಟೇ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ ಅನ್ನು ರೂಪಿಸಿ ಚಾಲನೆಗೊಳಿಸಿತ್ತು. ಇದರಲ್ಲಿ ಎಟಿಎಂ ಅಥವಾ ಯುಪಿಐ ಇಲ್ಲದೇ ಆಧಾರ್ ಕಾರ್ಡ್ ಮೂಲಕ ಹಣ ವಹಿವಾಟು ನಡೆಸಬಹುದು. ಎಇಪಿಎಸ್ ಬಳಸಿ ದಿನಕ್ಕೆ 50,000 ರೂವರೆಗೆ ಹಣ ಹಿಂಪಡೆಯಬಹುದು. ಬ್ಯಾಂಕ್ ಹೆಸರು, ಆಧಾರ್ ನಂಬರ್ ಮತ್ತು ಬಯೋಮೆಟ್ರಿಕ್ ದೃಢೀಕರಣ, ಈ ಮೂರು ಇದ್ದರೆ ಸಾಕು ಆಧಾರ್ ಮೂಲಕ ಹಣ ವರ್ಗಾವಣೆ ಮಾಡಬಹುದು.

ಕಳ್ಳರಿಗೆ ಎಲ್ಲಿ ಸಿಗುತ್ತೆ ಮಾಹಿತಿ?

ಮೊಬೈಲ್ ಸಿಮ್ ಪಡೆಯಲೋ, ರೇಷನ್ ಪಡೆಯಲೋ ಇನ್ನೂ ಹಲವು ಕಾರ್ಯಗಳಿಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣ ನೀಡುತ್ತೇವೆ. ಕಳ್ಳರು ಇಂಥ ಸ್ಥಳಗಳನ್ನು ಟಾರ್ಗೆಟ್ ಮಾಡಿ ಬಯೋಮೆಟ್ರಿಕ್ ವಿವರ ಪಡೆಯುತ್ತಾರೆ. ಹಾಗೆಯೇ, ಜೆರಾಕ್ಸ್ ಇತ್ಯಾದಿ ಕಡೆ ನಾವು ನೀಡುವ ಆಧಾರ್ ಕಾಪಿಗಳಲ್ಲಿರುವ ಆಧಾರ್ ನಂಬರ್, ಹೆಸರು ಇತ್ಯಾದಿ ವಿವರಗಳನ್ನೂ ಕದಿಯುತ್ತಾರೆ. ಬಯೋಮೆಟ್ರಿಕ್ ದತ್ತಾಂಶದಿಂದ ಫಿಂಗರ್ ಪ್ರಿಂಟ್ ಅನ್ನು ನಕಲು ಮಾಡಿ ಎಇಪಿಎಸ್ ಮೂಲಕ ಹಣ ಲಪಟಾಯಿಸುತ್ತಾರೆ.

ಎಇಪಿಎಸ್ ಡಿಸೇಬಲ್ ಮಾಡುವುದು ಹೇಗೆ?

  • ಯುಐಡಿಎಐ ವೆಬ್​ಸೈಟ್​ನ ಈ ಮೈಕ್ರೋಸೈಟ್​ಗೆ ಹೋಗಿ: tathya.uidai.gov.in/login
  • ಇಲ್ಲಿ ನಿಮ್ಮ ಆಧಾರ್ ನಂಬರ್ ಹಾಗು ಒಟಿಪಿ ಹಾಕಿ ಲಾಗಿನ್ ಆಗಿರಿ.
  • ಇಲ್ಲಿ ನೀವು ಬಯೋಮೆಟ್ರಿಕ್ ಡಾಟಾವನ್ನು ಲಾಕ್ ಮಾಡುವ ಅವಕಾಶ ಇದೆ.

ಇದನ್ನೂ ಓದಿ: Blue Aadhaar Card: ನೀಲಿ ಆಧಾರ್ ಕಾರ್ಡ್ ಯಾಕೆ? ಇದನ್ನು ಯಾರು ಮತ್ತು ಹೇಗೆ ಮಾಡಿಸಬಹುದು? ಇಲ್ಲಿದೆ ಡೀಟೇಲ್ಸ್

ಎಂ ಆಧಾರ್ ಆ್ಯಪ್ ಮೂಲಕ ಬಯೋಮೆಟ್ರಿಕ್ ಲಾಕ್ ಮಾಡಿ

  • ನಿಮ್ಮ ಮೊಬೈಲ್​ಗೆ mAadhaar ಆ್ಯಪ್ ಅನ್ನು ಇನ್ಸ್​ಟಾಲ್ ಮಾಡಿಕೊಂಡು ಲಾಗಿನ್ ಆಗಿ
  • ಅಲ್ಲಿ ನಿಮ್ಮ ಪ್ರೊಫೈಲ್​ಗೆ ಮೇಲ್ಗಡೆಯ ಬಲಮೂಲೆಯಲ್ಲಿರುವ ಮೆನು ಆಪ್ಷನ್ ಒತ್ತಿರಿ.
  • ಬಯೋಮೆಟ್ರಿಕ್ ಸೆಟಿಂಗ್ಸ್ ಕ್ಲಿಕ್ ಮಾಡಿ
  • ಎನೇಬಲ್ ಬಯೋಮೆಟ್ರಿಕ್ ಲಾಕ್ ಎಂಬ ಆಯ್ಕೆ ಟಿಕ್ ಮಾಡಿ
  • ಈಗ ಆಧಾರ್ ಜೊತೆ ನೊಂದಾಯಿತವಾಗಿರುವ ಮೊಬೈಲ್​ಗೆ ಬಂದಿರುವ ಒಟಿಪಿ ನಮೂದಿಸಿ. ಈಗ ಬಯೋಮೆಟ್ರಿಕ್ ವಿವರ ಕೂಡಲೇ ಲಾಕ್ ಆಗುತ್ತದೆ.

ನೀವು ಬಯೋಮೆಟ್ರಿಕ್ ಅನ್ನು ಮತ್ತೊಮ್ಮೆ ಅನ್​ಲಾಕ್ ಮಾಡಲೂ ಅವಕಾಶ ಇರುತ್ತದೆ. ಇದೇ ಮೊಬೈಲ್ ಆ್ಯಪ್​ನಲ್ಲಾದರೂ ಮಾಡಬಹುದು, ಅಥವಾ ಡೆಸ್ಕ್​ಟಾಪ್​ನಲ್ಲಾದರೂ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ