AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SEBI: ಬಿಬಿಎಂಪಿಯಂಥ ಸಂಸ್ಥೆಗಳಿಗೂ ಡೆಟ್ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಲು ಅವಕಾಶ: ಸೆಬಿ ಆಲೋಚನೆ; ಆದರೆ, ನಷ್ಟವಾದರೆ ಹೊಣೆ ಯಾರು?

QIB For Debt Securities: ಡೆಟ್ ಮಾರುಕಟ್ಟೆಯಲ್ಲಿ ಕ್ವಾಲಿಫೈಡ್ ಇನ್ಸ್​ಟಿಟ್ಯೂಷನ್ ಬಯರ್​ನ ವ್ಯಾಪ್ತಿಯನ್ನು ಹೆಚ್ಚಿಸಲು ಸಮಾಲೋಚನೆ ಪತ್ರಕ್ಕಾಗಿ ಸಲಹೆಗಳನ್ನು ಸೆಬಿ ಆಹ್ವಾನಿಸಿದೆ. ಹೆಚ್ಚು ವಿಸ್ತೃತ ವ್ಯಾಪ್ತಿಯ ಹೂಡಿಕೆದಾರರನ್ನು ಈ ಮಾರುಕಟ್ಟೆಗೆ ಸೆಳೆಯುವ ನಿಟ್ಟಿನಲ್ಲಿ ಇದು ಗಮನಾರ್ಹ ಎನಿಸಿದೆ.

SEBI: ಬಿಬಿಎಂಪಿಯಂಥ ಸಂಸ್ಥೆಗಳಿಗೂ ಡೆಟ್ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಲು ಅವಕಾಶ: ಸೆಬಿ ಆಲೋಚನೆ; ಆದರೆ, ನಷ್ಟವಾದರೆ ಹೊಣೆ ಯಾರು?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2023 | 12:02 PM

Share

ನವದೆಹಲಿ: ಬಿಬಿಎಂಪಿ ಇತ್ಯಾದಿ ನಗರ ಸ್ಥಳೀಯ ಸಂಸ್ಥೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಮುದ್ರಾ ಸಂಸ್ಥೆ (MUDRA) ಇವು ಅರ್ಹ ಸಾಂಸ್ಥಿಕ ಖರೀದಿದಾರರಾಗಿ (QIB- Qualified Institutional Buyer) ಡೆಟ್ ಸೆಕ್ಯೂರಿಟಿಗಳಲ್ಲಿ (Debt Securities) ಹೂಡಿಕೆ ಮಾಡಲು ಅವಕಾಶ ಕೊಡುವ ಆಲೋಚನೆಯಲ್ಲಿ ಸೆಬಿ ಇದೆ. ಭಾರತದ ಷೇರು ಮತ್ತು ವಿನಿಯಮ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI- Securities and Exchange Board Of India) ಇಂಥದ್ದೊಂದು ಪ್ರಸ್ತಾವವನ್ನು ಪರಿಶೀಲಿಸುತ್ತಿದೆ. ಡೆಟ್ ಮಾರುಕಟ್ಟೆಯಲ್ಲಿ ಕ್ವಾಲಿಫೈಡ್ ಇನ್ಸ್​ಟಿಟ್ಯೂಷನ್ ಬಯರ್​ನ ವಿವರಣೆಯ ವ್ಯಾಪ್ತಿಯನ್ನು ಹೆಚ್ಚಿಸಲು ಸಮಾಲೋಚನೆ ಪತ್ರಕ್ಕಾಗಿ ಸಲಹೆಗಳನ್ನು ಸೆಬಿ ಆಹ್ವಾನಿಸಿದೆ. ಹೆಚ್ಚು ವಿಸ್ತೃತ ವ್ಯಾಪ್ತಿಯ ಹೂಡಿಕೆದಾರರನ್ನು ಈ ಮಾರುಕಟ್ಟೆಗೆ ಸೆಳೆಯುವ ನಿಟ್ಟಿನಲ್ಲಿ ಇದು ಗಮನಾರ್ಹ ಎನಿಸಿದೆ.

ಡೆಟ್ ಸೆಕ್ಯೂರಿಟಿ ಎಂದರೆ ಏನು?

ಇವು ವಿವಿಧ ಬಾಂಡ್ ಅಥವಾ ಸಾಲಪತ್ರ, ಪ್ರಾಮಿಸರಿ ನೋಟ್, ಕನ್ವರ್ಟಿಬಲ್ ಡೆಟ್ ಇತ್ಯಾದಿ. ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ಈ ಸಾಲಪತ್ರಗಳನ್ನು ವಿತರಿಸುತ್ತವೆ. ಇವುಗಳನ್ನು ಖರೀದಿಸಿದರೆ ನಿಯಮಿತವಾಗಿ ಬಡ್ಡಿಗಳು ಬರುತ್ತವೆ. ಈ ಬಾಂಡ್​ನ ಮೊತ್ತಕ್ಕೆ ಆ ಕಂಪನಿಯೇ ಗ್ಯಾರಂಟಿ ಇರುತ್ತದೆ. ಎಷ್ಟು ಮೊತ್ತಕ್ಕೆ ಬಾಂಡ್ ನೀಡಲಾಗುತ್ತದೆ ಅಷ್ಟು ಮೊತ್ತವನ್ನು ಮರಳಿಸಲಾಗುತ್ತದೆ. ಅದರ ಮಧ್ಯೆ ಕಾಲಕಾಲಕ್ಕೆ ಬಡ್ಡಿಯನ್ನೂ ಪಾವತಿಸಲಾಗುತ್ತಿರುತ್ತದೆ.

ಈಗಿರುವ ಕ್ಯೂಐಬಿಗಳು ಯಾವುವು?

ಮ್ಯೂಚುವಲ್ ಫಂಡ್, ವೆಂಚರ್ ಕ್ಯಾಪಿಟಲ್ ಫಂಡ್, ಫಾರೀನ್ ಪೋರ್ಟ್​ಫೋಲಿಯೋ ಇನ್ವೆಸ್ಟರ್, ಪಬ್ಲಿಕ್ ಫೈನಾನ್ಸ್ ಸಂಸ್ಥೆಗಳು, ಕಮರ್ಷಿಯಲ್ ಬ್ಯಾಂಕ್, ಇನ್ಷೂರೆನ್ಸ್ ಸಂಸ್ಥೆ, ಪ್ರಾವಿಡೆಂಟ್ ಫಂಡ್, ಪೆನ್ಷನ್ ಫಂಡ್ ಇತ್ಯಾದಿ ಸೇರುತ್ತವೆ.

ಇದನ್ನೂ ಓದಿAirtel: ನಿರೀಕ್ಷೆಮೀರಿದ ಲಾಭ ಗಳಿಸಿದ ಏರ್​ಟೆಲ್; ಈ ಪ್ಲಾನ್​ಗಳಿಗೆ ಶೇ. 15 ಡಿಸ್ಕೌಂಟ್; ಯಾವ್ಯಾವುದಕ್ಕೆ ಇದೆ ರಿಯಾಯಿತಿ?

ಈಗ ಹೆಚ್ಚಿನ ಕ್ಷೇತ್ರಗಳಲ್ಲಿರುವ ಸಂಸ್ಥೆಗಳನ್ನೂ ಕ್ಯೂಐಬಿ ವ್ಯಾಪ್ತಿಗೆ ತರಲು ಸೆಬಿ ಬಯಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳು, ಯೂನಿವರ್ಸಿಟಿಗಳು, ಮುದ್ರಾ ಇತ್ಯಾದಿ ರೀಫೈನಾನ್ಸಿಂಗ್ ಏಜೆನ್ಸಿಗಳು, ಬಹುರಾಜ್ಯ ಸಹಕಾರ ಬ್ಯಾಂಕ್​ಗಳು, ನಾನ್ಬ್ಯಾಂಕಿಂಗ್ ಫೈನಾನ್ ಕಂಪನಿಗಳು, ನಗರ ಸ್ಥಳೀಯ ಸಂಸ್ಥೆಗಳು ಇತ್ಯಾದಿ ಕ್ವಾಲಿಫೈಡ್ ಇನ್ಸ್​ಟಿಟ್ಯೂಟ್ ಬಯರ್ ಕೆಟಗರಿಗೆ ಸೇರಬಹುದು.

ಡೆಟ್ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಿ ನಷ್ಟವಾದರೆ ಅವುಗಳೇ ಹೊಣೆ

ನಗರ ಸ್ಥಳೀಯ ಸಂಸ್ಥೆ, ಯೂನಿವರ್ಸಿಟಿ ಇತ್ಯಾದಿಗಳಿಗೆ ಡೆಟ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಅವಕಾಶ ಕೊಟ್ಟಾಕ್ಷಣ ನಷ್ಟವಾದರೆ ಅದಕ್ಕೆ ಸೆಬಿ ಹೊಣೆ ಆಗುವುದಿಲ್ಲ. ಹೂಡಿಕೆ ಮಾಡುವ ಸಂಸ್ಥೆ ತನ್ನ ಹೂಡಿಕೆಗಳನ್ನು ನಿಭಾಯಿಸುವ ಪರಿಣಿತಿ ಹೊಂದಿರಬೇಕು. ಅಥವಾ ಹೊರಗಿನಿಂದ ತಜ್ಞರ ಸಹಾಯ ಪಡೆದು ಹೂಡಿಕೆ ನಿಭಾಯಿಸಬಹುದು. ಆದರೆ, ಹೂಡಿಕೆಯ ಹೊಣೆಗಾರಿಕೆ ಮಾತ್ರ ಸಂಸ್ಥೆಗೇ ಇರುತ್ತದೆ.

ಇದನ್ನೂ ಓದಿEducation Loan: ಕೋರ್ಸ್ ಫೀಸ್ ಮೊತ್ತವಷ್ಟೇ ಸಾಲ ಸಿಗುತ್ತಾ? ಎಜುಕೇಶನ್ ಲೋನ್ ಪಡೆಯುವ ಮುನ್ನ ಈ ವಿಚಾರಗಳು ತಿಳಿದಿರಲಿ

ಮ್ಯೂಚುವಲ್ ಫಂಡ್ ಇತ್ಯಾದಿಗಳಿಗೆ ಈ ಹೊಣೆಗಾರಿಕೆ ಇರುವುದಿಲ್ಲ. ಅವು ಜನರಿಂದ ಹೂಡಿಕೆ ಪಡೆದು ಆ ಹಣವನ್ನು ಈಕ್ವಿಟಿ ಷೇರು, ಡೆಟ್ ಸೆಕ್ಯೂರಿಟಿ ಇತ್ಯಾದಿ ಕಡೆ ಹೂಡಿಕೆ ಮಾಡಬಹುದು. ಅಲ್ಲಿ ನಷ್ಟವಾದರೆ ಅದು ಮ್ಯೂಚುವಲ್ ಫಂಡ್​ಗಳಲ್ಲಿ ಹಣ ಹೂಡಿಕೆ ಮಾಡಿದ ಸಾಮಾನ್ಯ ಜನರಿಗೆ ಆಗುವ ನಷ್ಟ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ