State Bank Of India: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್ಆರ್ ದರ 10 ಬಿಪಿಎಸ್ ಹೆಚ್ಚಳ; ಜಾಸ್ತಿ ಆಗಲಿದೆ ಇಎಂಐ
ಮೇ 10ನೇ ತಾರೀಕಿನಿಂದ ಅನ್ವಯ ಆಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಎಂಸಿಎಲ್ಆರ್ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಇಎಂಐ ಹೆಚ್ಚು ಕಟ್ಟಬೇಕಾಗುತ್ತದೆ.
ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) 10 ಬೇಸಿಸ್ ಪಾಯಿಂಟ್ಸ್ (ಬಿಪಿಎಸ್) ಹೆಚ್ಚಳ ಮಾಡಿದೆ. ಎಲ್ಲ ಅವಧಿಗೂ ಅನ್ವಯ ಆಗುವಂತೆ ಮೇ 15ನೇ ತಾರೀಕಿನಿಂದ ಈ ದರ ಜಾರಿಗೆ ಬಂದಿದೆ. ಕಳೆದ ಎರಡು ತಿಂಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಇದು ಎರಡನೇ ಬೆಂಚ್ಮಾರ್ಕ್ ಸಾಲ ದರದ ಹೆಚ್ಚಳವಾಗಿದೆ. ಎಸ್ಬಿಐನ ಒಂದು ತಿಂಗಳಿಂದ ಮೂರು ತಿಂಗಳ ಅವಧಿಯ ಎಂಸಿಎಲ್ಆರ್ ಈಗ ಶೇ 6.85 ಆಗಿದ್ದು, ಈ ಹಿಂದೆ 6.75 ಇತ್ತು. ಇನ್ನು ಆರು ತಿಂಗಳ ಎಂಸಿಎಲ್ಆರ್ ಶೇ 7.15, ಒಂದು ವರ್ಷದ ಎಂಸಿಎಲ್ಆರ್ ಶೇ 7.20, ಎರಡು ವರ್ಷದ ಎಂಸಿಎಲ್ಆರ್ ಶೇ 7.40, ಮೂರು ವರ್ಷದ ಎಂಸಿಎಲ್ಆರ್ ಶೇ 7.50 ಆಗಿದೆ.
ಹಣಕಾಸು ನೀತಿ ಸಮಿತಿ (MPC) 40 ಬೇಸಿಸ್ ಪಾಯಿಂಟ್ಸ್ ರೆಪೋ ದರ ಹೆಚ್ಚಳ ಮಾಡಿರುವುದರಿಂದ ಶೇ 4.40 ತಲುಪಿದೆ. ಆ ನಂತರ ಎಸ್ಬಿಐ ಎಂಸಿಎಲ್ಆರ್ ದರ ಹೆಚ್ಚಿಸಿದೆ. ಈ ಹಿಂದೆ ಏಪ್ರಿಲ್ನಲ್ಲಿ ಎಸ್ಬಿಐ ಘೋಷಣೆ ಮಾಡಿದ್ದಂತೆ, ಆ ತಿಂಗಳ 15ನೇ ತಾರೀಕಿನಿಂದ 10 ಬೇಸಿಸ್ ಪಾಯಿಂಟ್ ಜಾಸ್ತಿ ಮಾಡಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಎಂಸಿಎಲ್ಆರ್ ಹೆಚ್ಚಳ ಮಾಡುವುದರಿಂದ ಗ್ರಾಹಕರ ಮೇಲೆ ಪರಿಣಾಮ ಏನು?
– ಬ್ಯಾಂಕ್ಗಳು ಸಾಲ ನೀಡುವುದಕ್ಕೆ ದರವನ್ನು ನಿರ್ಧರಿಸುವ ಎರಡು ಮುಖ್ಯ ಬೆಂಚ್ಮಾರ್ಕ್ ದರಗಳಲ್ಲಿ ಎಂಸಿಎಲ್ಆರ್ ಸಹ ಒಂದು.
– ಎಂಸಿಎಲ್ಆರ್ ಏರಿಕೆಯೊಂದಿಗೆ ಎಲ್ಲ ಬಗೆಯ ಸಾಲಗಳಲ್ಲಿ ಬಡ್ಡಿ ದರವು ಹೆಚ್ಚಳ ಆಗುವ ನಿರೀಕ್ಷೆ ಇದೆ.
– ಗೃಹ, ವಾಹನ ಮತ್ತು ವೈಯಕ್ತಿಕ ಸಾಲವನ್ನೂ ಒಳಗೊಂಡಂತೆ ಎಲ್ಲದರ ಇಎಂಐ ಮುಂಬರುವ ತಿಂಗಳಲ್ಲಿ ಏರಿಕೆ ಆಗಲಿದೆ.
– ಇದರ ಜತೆಗೆ ಕಾರ್ಪೊರೇಟ್ಗಳು ಬ್ಯಾಂಕ್ಗಳಿಂದ ಪಡೆಯುವ ಸಾಲದ ಮೇಲಿನ ಬಡ್ಡಿ ದರ ಸಹ ಏರಿಕೆ ಆಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SBI FD Interest Rates: ಎಸ್ಬಿಐ ಎಫ್ಡಿ ಬಡ್ಡಿ ದರ ಮೇ 10ರಿಂದ ಹೆಚ್ಚಳ; ಇಲ್ಲಿದೆ ದರದ ಮಾಹಿತಿ