Steel Price: ಉಕ್ಕಿನ ಬೆಲೆಯಲ್ಲಿ ಶೇ 10ರಿಂದ 15ರಷ್ಟು ಇಳಿಕೆ ಸಾಧ್ಯತೆ; ಮನೆ ಕಟ್ಟುವವರು ಸೇರಿ ಹಲವರಿಗೆ ಅನುಕೂಲ
ಕೇಂದ್ರ ಸರ್ಕಾರದ ಇತ್ತೀಚಿನ ಕ್ರಮದ ಹಿನ್ನೆಲೆಯಲ್ಲಿ ಉಕ್ಕಿನ ಬೆಲೆಯಲ್ಲಿ ಶೇ 10ರಿಂದ ಶೇ 15ರಷ್ಟು ಇಳಿಕೆ ಆಗುವ ನಿರೀಕ್ಷೆ ಇದೆ. ಆ ಬಗ್ಗೆ ವಿವರ ಇಲ್ಲಿದೆ.
ಉಕ್ಕಿನ ಉತ್ಪನ್ನಗಳು (steel price) ಸತತವಾಗಿ ದೇಶೀ ಮಾರುಕಟ್ಟೆಯಲ್ಲಿ ಏರಿಕೆ ಕಾಣುತ್ತಿದ್ದು, ಅದೀಗ ಶೇ 10ರಿಂದ 15ರಷ್ಟು ಇಳಿಕೆ ಆಗುವ ಸಾಧ್ಯತೆ ಇದೆ. ಸರ್ಕಾರದಿಂದ ತೆಗೆದುಕೊಂಡ ಕ್ರಮಗಳ ಹಿನ್ನೆಲೆಯಲ್ಲಿ ಈ ಬೆಲೆ ಇಳಿಕೆ ಆಗುವ ನಿರೀಕ್ಷೆ ಇದೆ ಎಂದು ಎಂಜಿನಿಯರಿಂದ ಎಕ್ಸ್ಪೋರ್ಟ್ ಪ್ರಮೋಷನ್ ಕೌನ್ಸಿಲ್ (EEPC) ಸೋಮವಾರ ಹೇಳಿದೆ. ರಫ್ತು ಮಾಡುವ ಕೆಲವು ಉಕ್ಕಿನ ಉತ್ಪನ್ನಗಳ ಮೇಲಿನ ರಫ್ತು ಸುಂಕ ಹಾಕುವ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿರುವ ಇಇಪಿಸಿ ಅಧ್ಯಕ್ಷ ಮಹೇಶ್ ದೇಸಾಯಿ, ಸರಕು ಉತ್ಪಾದಕರು ಮತ್ತು ರಫ್ತುದಾರರಿಗೆ ಇದರಿಂದ ಅನುಕೂಲ ಆಗಲಿದೆ. ಜಾಗತಿಕ ಮಾರುಕಟ್ಟೆ ಹೆಚ್ಚು ಸ್ಪರ್ಧಾತ್ಮಕ ಆಗಲಿದೆ. ರಫ್ತುದಾರರು ಅಂದಾಜು ಮಾಡುವಂತೆ ಪ್ರಾಥಮಿಕ ಉತ್ಪಾದಕರಿಗೆ ಪ್ರಾಥಮಿಕ ಉಕ್ಕು ಉತ್ಪನ್ನ ಬೆಲೆಯಲ್ಲಿ ಶೇ 10ರಷ್ಟು ಕಡಿಮೆ ಆಗುತ್ತದೆ ಮತ್ತು ಸೆಕೆಂಡರಿ ಉಕ್ಕು ಉತ್ಪಾದಕರು ಶೇ 15ರಷ್ಟು ಇಳಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ ಎಂಬುದನ್ನು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಂದಹಾಗೆ, ಶನಿವಾರದಂದು ಸರ್ಕಾರವು ಕೆಲವು ಕಚ್ಚಾ ವಸ್ತುಗಳ ಸೀಮಾ ಸುಂಕದ ಮನ್ನಾ ಬಗ್ಗೆ ಘೋಷಣೆ ಮಾಡಿದೆ. ಅದರಲ್ಲಿ ಉಕ್ಕಿನ ಕೈಗಾರಿಕೆಯಲ್ಲಿ ಬಳಸುವಂಥ ಕೋಕಿಂಗ್ ಕೋಲ್, ಫೆರೊನಿಕ್ಕಲ್ ಮತ್ತಿತರವು ಸೇರಿವೆ. ಇನ್ನು ಕಬ್ಬಿಣದ ಅದಿರಿನ ಮೇಲಿನ ಸುಂಕವನ್ನು ಸಹ ಶೇ 50ರಷ್ಟು ಹೆಚ್ಚಿಸಲಾಗಿದೆ ಮತ್ತು ಕೆಲವು ಉಕ್ಕಿನ ಇಂಟ್ಮೀಡಿಯರೀಸ್ ಶೇ 15ರಷ್ಟು ಹೆಚ್ಚಿಸಲಾಗಿದೆ.”ಉಕ್ಕಿಗಾಗಿ ಕಚ್ಚಾ ಸಾಮಗ್ರಿಗಳ ಮೇಲಿನ ಆಮದು ಸುಂಕವನ್ನು ತೆಗೆದುಹಾಕುವ ಸರ್ಕಾರದ ನಿರ್ಧಾರವು ದೇಶೀಯ ಉಕ್ಕಿನ ಉದ್ಯಮಕ್ಕೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಆದ್ದರಿಂದ ಬೆಲೆಗಳನ್ನು ಕಡಿಮೆ ಮಾಡುತ್ತದೆ …(ಮತ್ತು) ಕಬ್ಬಿಣದ ಅದಿರು ಹಾಗೂ ಉಕ್ಕಿನ ಮಧ್ಯವರ್ತಿಗಳ ಮೇಲೆ ರಫ್ತು ಸುಂಕವನ್ನು ಹೆಚ್ಚಿಸುವುದು/ಹೇರುವುದು ದೇಶೀಯವಾಗಿ ಪ್ರಮುಖ ಉದ್ಯಮದ ಒಳಹರಿವಿನ ಲಭ್ಯತೆ ಹೆಚ್ಚಿಸುತ್ತದೆ,” ದೇಸಾಯಿ ಹೇಳಿದ್ದಾರೆ.
ಆಟೋ ಇಂಧನ ಬೆಲೆಗಳಲ್ಲಿನ ಕಡಿತವು ಸರಕು ಸಾಗಣೆ ವೆಚ್ಚವನ್ನು ಸರಾಗಗೊಳಿಸುತ್ತದೆ, ಇದು ಕೆಲವು ಸಮಯದಿಂದ ವಲಯವನ್ನು ಹಾನಿಗೊಳಿಸುತ್ತಿದೆ ಎಂದು ಅವರು ಹೇಳಿದ್ದಾರೆ. “ಎಲ್ಲ ಕ್ರಮಗಳು ಒಟ್ಟಾಗಿ ಉದ್ಯಮವು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಆದರೆ ಲಿಕ್ವಿಡಿಟಿ ಸುಧಾರಿಸುತ್ತದೆ. ನಾವು ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ ಮತ್ತು ಸಮಯೋಚಿತ ಪ್ರತಿಕ್ರಿಯೆಯನ್ನು ಪ್ರಶಂಸಿಸುತ್ತೇವೆ,” ಎಂದು ದೇಸಾಯಿ ಹೇಳಿದ್ದಾರೆ. ಆಲ್ ಇಂಡಿಯಾ ಇಂಡಕ್ಷನ್ ಫರ್ನೇಸಸ್ ಅಸೋಸಿಯೇಷನ್ (ಎಐಐಎಫ್‌ಎ) ಪ್ರಧಾನ ಕಾರ್ಯದರ್ಶಿ ಕಮಲ್ ಅಗರ್ವಾಲ್, ಟಿಎಂಟಿಯ ಬೆಲೆಗಳು ಈಗಾಗಲೇ ಕಡಿಮೆಯಾಗಲು ಪ್ರಾರಂಭಿಸಿವೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಸೋಮವಾರ ಟಿಎಂಟಿ ಬಾರ್‌ಗಳ ಬೆಲೆ ಟನ್‌ಗೆ 57,000 ರೂಪಾಯಿಗೆ ಹೋಲಿಸಿದರೆ ಟನ್‌ಗೆ 52,000 ರೂಪಾಯಿಗೆ ವಹಿವಾಟು ನಡೆಸುತ್ತಿದ್ದು, ಟನ್‌ಗೆ ರೂ.5,000 ಕುಸಿತ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.
ಅದೇ ರೀತಿ, ಇನ್ಗಾಟ್ಸ್ ಮತ್ತು ಬಿಲ್ಲೆಟ್‌ಗಳ ಬೆಲೆಗಳು ಸಹ ಟನ್‌ಗೆ 5,000 ರೂಪಾಯಿ ಇಳಿಕೆಯಾಗಿ, ಕ್ರಮವಾಗಿ 50,000 ರೂ. ಮತ್ತು 51,000 ರೂ. ಆಗಿದೆ. “ನಾವು ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದು ದೇಶದ ದ್ವಿತೀಯ ಉತ್ಪಾದಕರಿಗೆ ದೊಡ್ಡ ಸಮಾಧಾನ ತಂದಿದೆ,” ಎಂದು ಅಗರ್ವಾಲ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆಯಿಂದ ಕೇಂದ್ರ ಸರ್ಕಾರಕ್ಕೆ 45 ಸಾವಿರ ಕೋಟಿ ರೂಪಾಯಿ ಹೊರೆ
Published On - 4:49 pm, Mon, 23 May 22